ಗ್ರಾಮೀಣ ಮಹಿಳೆಯರಿಗೆ ಇಂಗ್ಲೀಷ್ ಕಲಿಸುವ ಶಿಕ್ಷಕಿ ಸಂಶಿಯಾಗೆ ರಾಜ್ಯ ಉತ್ತಮ ಶಿಕ್ಷಕಿ ಪ್ರಶಸ್ತಿ

ಸಿದ್ದಾಪುರ. ತಾಲೂಕಿನ ಅಣಲೇಬೈಲ್ ಗ್ರಾಪಂ ವ್ಯಾಪ್ತಿಯ ಹೂಡ್ಲಮನೆ ಹಿ.ಪ್ರಾ.ಶಾಲೆಯ ಶಿಕ್ಷಕಿ ಸಂಶಿಯಾರಿಗೆ ಈ ವರ್ಷದ ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಲಭ್ಯವಾಗಿದೆ. ಕಳೆದ 12 ವರ್ಷಗಳಿಂದ ಹೂಡ್ಲಮನೆ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಅವರು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಯನ್ನೂ, ನಲಿ-ಕಲಿ, ಕಲಿಕೋತ್ಸವ ಮುಂತಾದ ಶೈಕ್ಷಣಿಕವಾದ ಯೋಜನೆಗಳಲ್ಲಿ ಹಾಗೂ ಇಂಗ್ಲೀಷ್ ಸಂಪನ್ಮೂಲ ವ್ಯಕ್ತಿಯಾಗಿ ಉತ್ತಮ ಕಾರ್ಯನಿರ್ವಹಿಸಿದ್ದಕ್ಕೆ ವಿಭಾಗಮಟ್ಟದಲ್ಲೂ ಪುರಸ್ಕಾರ ಪಡೆದಿದ್ದರು. ಶಾಲೆಯಲ್ಲಿನ ಗ್ರಾಮೋತ್ಸವ, ಗ್ರಂಥಾಲಯ ಅಭಿವೃದ್ಧಿ ಮುಂತಾದವುಗಳಲ್ಲಿ ಉಳಿದ ಶಿಕ್ಷಕರ ಜೊತೆ ಹೆಚ್ಚಿನ ಶ್ರಮ ವಹಿಸಿದ್ದಾರೆ. … Continue reading ಗ್ರಾಮೀಣ ಮಹಿಳೆಯರಿಗೆ ಇಂಗ್ಲೀಷ್ ಕಲಿಸುವ ಶಿಕ್ಷಕಿ ಸಂಶಿಯಾಗೆ ರಾಜ್ಯ ಉತ್ತಮ ಶಿಕ್ಷಕಿ ಪ್ರಶಸ್ತಿ