green india mahendra interview- ಮಹೇಂದ್ರರ ಜೀವವೈವಿಧ್ಯದ ಮಾತು

ಮಹೇಂದ್ರಕುಮಾರ ಬಿ.ಪಿ. ಬೆಂಗಳೂರು ಗ್ರಾಮೀಣ ಜಿಲ್ಲೆಯವರು. ಸಸ್ಯಶಾಸ್ತ್ರ ಸ್ನಾತಕೋತ್ತರ ಪದವಿಯ ನಂತರ ಕೆಲವು ಕಾಲ ಉದ್ಯೋಗಿಯಾಗಿ ದುಡಿದು ಕಾಡು ಹುಡುಕಿ ಹೊರಟವರು. ಉತ್ತರಕನ್ನಡ ಜಿಲ್ಲೆಯ ಮೂಲೆ ಜೊಯಡಾ, ದಾಂಡೇಲಿ ಸೇರಿದ ಉತ್ತರ ಕನ್ನಡ ಜಿಲ್ಲೆಯ ಕೆಲವೆಡೆ ಬುಡಕಟ್ಟುಗಳ ಬಗ್ಗೆ ದುಡಿದು ಅಪಾರ ಻ಅನುಭವ ಗಳಿಸಿದವರು. ಕುಣಬಿ, ಹಾಲಕ್ಕಿ ಒಕ್ಕಲಿಗರು, ಸಿದ್ಧಿ, ಗೌಳಿಗಳ ಪರವಾಗಿ ಕೆಲಸಮಾಡಿ ಈಗ ಜೊಯಡಾ, ದಾಂಡೇಲಿಯವರಾಗಿ ಸ್ಥಿರಗೊಂಡಿದ್ದಾರೆ. ಅವರೊಂದಿಗಿನ ಮಾತುಕತೆಯ ಮೂಖಾಮುಖಿಯೇ ಮಹೇಂದ್ರರ ಜೀವವೈವಿಧ್ಯದ ಮಾತು