A dinakar desai poem- ದೇವಗೆಂದು ಗುಡಿಯನೊಂದು ಕಟ್ಟುತಿರುವೆಯಾ ?

ಹರಿಗೆ ಎಂದು ಗುಡಿಯನೊಂದಕಟ್ಟುತಿರುವೆಯಾ ?ಹರಿಯ ಒಲುಮೆ ಪಡೆದು ಪುಣ್ಯಗಳಿಸುತಿರುವೆಯಾ ? ಹುಚ್ಚ, ನೀನು ಹಳ್ಳಿಗೋಡು;ದೀನ ಜನರ ಪಾಡ ನೋಡು;ಇರಲು ಗುಡಿಸಲು ಇಲ್ಲವಲ್ಲ !ಹೊಟ್ಟೆ ತುಂಬಾ ಅನ್ನವಿಲ್ಲ ! ಹರಿಗೆ ಎಂದು ಗುಡಿಯನೊಂದುಕಟ್ಟುತಿರುವೆಯಾ ?ಹರಿಯ ವಿಶ್ವರೂಪವನ್ನುಮರೆತು ಬಿಟ್ಟೆಯಾ ?ಜಗಕೆ ಗೋಡೆ ಹಾಕಿ ಗುಡಿಯಕಟ್ಟ ಬಲ್ಲೆಯಾ ? ದೀನಗೊಂದು ಗೂಡು ಸಾಕು;ದೇವಗೊಂದು ವಿಶ್ವ ಬೇಕು;ಮಣ್ಣ ಹುಲ್ಲ ಸಣ್ಣ ಗೂಡು_ಬಡವಗದುವೇ ಸಿರಿಯ ಬೀಡು. ಹರಿಗೆ ಎಂದು ಗುಡಿಯನೊಂದಕಟ್ಟುತಿರುವೆಯಾ?ದೀನಗಿಂತ ದೇವಬಡವನೆಂದು ಬಗೆದೆಯಾ? ದಿನಕರ ದೇಸಾಯಿ