ಈ ರಾತ್ರಿ…. ವೆಂ. ಗೌಡ ರ ಕವಿತೆ

ಈ ರಾತ್ರಿ ಸರಿರಾತ್ರಿ; ಸುಮ್ಮನಿಲ್ಲ ಯಾವುದೂಅವಿರತ ಅವರಿವರ ಸದ್ದುಗದ್ದಲವೂ ಸುಳ್ಳೇಕೆ ಹೇಳಲಿನೀರವವೆಂಬುದು ಈ ಜಗತ್ತಿನಲ್ಲಿ ಸುಳ್ಳು ಸಣ್ಣಗೆ ಕಂಪಿಸಿದಂತಿದೆ ಆಕಾಶನಕ್ಷತ್ರಗಳ ತಳಮಳ ತಾಕಿತಣ್ಣಗೆ ತುಯ್ದಾಡುತ್ತ ದೀಪ ಅಲ್ಲೊಂದು ಇಲ್ಲೊಂದುಜಗತ್ತಿನ ಸಂಕಟಗಳೆಲ್ಲ ಸೂರಿನಡಿ ಮಾತಿಗೆ ಕೂತಂತೆ ಅಲ್ಲಲ್ಲಿ ಅದೆಂಥದೋ ಅಬ್ಬರಬೊಬ್ಬೆಯಿಡುತ್ತಿವೆ ನಾಯಿಗಳುಕೇಳಿಸುತ್ತಿದೆ ಯಾರೋ ಚೀರಿದಂತೆಬೊಗಳುವ ನಾಯಿ ಕಚ್ಚದೆಂಬುದು ಮಿಥ್ಯವೆ? ಎಣಿಸಬೇಕೆನ್ನಿಸುತ್ತಿದೆ ಫಳಫಳ ನಕ್ಷತ್ರಗಳಒಳಗಿನ ಸುಳ್ಳುಗಳ ಉರಿವ ಉಲ್ಕೆಗಳ ಬೆತ್ತಲ ಎಣಿಸಗೊಡದೆ ತಡೆಯುವುದುಸೋಗುಗಳ ಮಾಟ ಮೈಯಾಗಿ ಆಡುವ ಆಟ ಬೆಳಗಾಗುವುದರ ಸುಳಿವೇ ಇಲ್ಲನೋವನ್ನೇ ಒಡೆದಿಡುತ್ತಿರುವ ಈ ರಾತ್ರಿಬಹುಶಃ ಕೊನೆಯಾಗುವುದೇ ಇಲ್ಲ … Continue reading ಈ ರಾತ್ರಿ…. ವೆಂ. ಗೌಡ ರ ಕವಿತೆ