ಪೊಲೀಸ್ ಇಸ್ಮಾಯಿಲ್ ಕ್ಯಾನ್ಸರ್ ನಿಂದ ಸಾವು

ಬೋನ್ ಕ್ಯಾನ್ಸರ್ ಪೀಡಿತರಾಗಿದ್ದ ಶಿರಸಿ ಉಪವಿಭಾಗದ ಪೊಲೀಸ್ ಪೇದೆ ಸಿದ್ಧಾಪುರ ಹಲಗೇರಿಯ ಇಸ್ಮಾಯಿಲ್ ಇಂದು ಮೃತರಾದರು. ಕಳೆದ ಒಂದು ವರ್ಷಕ್ಕೂ ಹೆಚ್ಚು ಅವಧಿಯಿಂದ ಎಲುವು ಕ್ಯಾನ್ಸರ್ ನಿಂದ ಬಳಲುತಿದ್ದ ಇವರು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದಿದ್ದರು. 35 ವರ್ಷದ ಇಸ್ಮಾಯಿಲ್ 30 ವರ್ಷದ ಪತ್ನಿ ಇಬ್ಬರು ಮಕ್ಕಳೊಂದಿಗೆ ಅಪಾರ ಬಂಧು-ಬಳಗ ಅಗಲಿದ್ದಾರೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಹಲಗೇರಿಯಲ್ಲಿ ಇಂದು ಅವರ ಅಂತ್ಯ ಸ್ಂಸ್ಕಾರ ನೆರವೇರಿಸಲಾಯಿತು. ಶಿರಸಿಯಲ್ಲಿ ಕೋರ್ಟ್ ಭದ್ರತೆ ಸೇವೆ ಸಲ್ಲಿಸುತಿದ್ದ ಇಸ್ಮಾಯಿಲ್ ಎಲ್ಲರ ಪ್ರೀತಿಪಾತ್ರರಾಗಿದ್ದರು.