poem- ಬದುಕು….. by-prathvi patil

ಚಂದನೆಯ ಚಿತ್ರಗಳ ಸ್ವಚ್ಛಂದ ಭಾವಗಳಮನವ ಮಿಡಿಯುವ ಸಂಬಂಧಗಳ ತುಡಿತಕ್ಕೆಬದುಕೆನ್ನಬಹುದೆ?ಬದುಕೆನ್ನಬಹುದೆ? ಬೆನ್ನಿಗೆ ಕಟ್ಟಿದ ಹಾರುವಾ ಪುಗ್ಗಿಕಾಲಂಚಿಗೆ ಜಾರಿದಾ ಭಾರದ ಸರಪಳಿಇವೆರಡಕ್ಕೂ ಚಿತ್ತವನಿತ್ತ ಮುಗುಳುನಗೆಯನ್ನುಬದುಕೆನ್ನಬಹುದೆ?ಬದುಕೆನ್ನಬಹುದೆ? ಬದುಕಿನ ಭಾರವನು ಹೊತ್ತ ನೊಗವನ್ನುನೊಗದ ಮೇಲಿರುವ ಪುಟ್ಟ ಮಗುವನ್ನು,ಆ ಮಗುವ ನಗುವ ನೆನೆದು-ನೆನೆವ ಮನದ ಭಾವಕ್ಕೆಬದುಕೆನ್ನಬಹುದೆ? ಬದುಕೆನ್ನಬಹುದೆ? ಬಿಸಿಲಿಗೆ ಉರಿವ ದೇಹಕ್ಕೆಉರಿವ ಧಗೆಗೆ ಮೈ ಬೆವರೇಬಂದು ತಂಪಾಗಿಸುವ ಚಂದಕ್ಕೆಮರುಕ್ಷಣದ ತಂಗಾಳಿಗೆಬದುಕೆನ್ನಬಹುದೆ?ಬದುಕೆನ್ನಬಹುದೆ? ಹೆಚ್ಚು ಹುಚ್ಚುಗಳ ಹೆಚ್ಚೆಚ್ಚು ಹೊತ್ತುಹುಚ್ಚು ಹೆಚ್ಚುಗಳ ಕಿಚ್ಚಾಗಿ ಹಂಚಿಹುಚ್ಚು ಕಿಚ್ಚಿನಿಂದ ಹುಟ್ಟುವಸ್ವಚ್ಛಂದ ಭಾವಕ್ಕೆಬದುಕೆನ್ನಬಹುದೆ?ಬದುಕೆನ್ನಬಹುದೆ? ಬೆಚ್ಚನೆಯ ಹಾಸಿಗೆಯಮೆತ್ತನೆಯ ದಿಂಬುಗಳಕನಸಿರದ ನಿದ್ರೆಗಳಬದುಕೆನ್ನಬಹುದೆ?ಬದುಕೆನ್ನಬಹುದೆ? ನೋವು-ನಲಿವುಗಳ ಸರಿ-ತಪ್ಪುಗಳಬೇಕು-ಬೇಡಗಳ ದೂರಕ್ಕೆ … Continue reading poem- ಬದುಕು….. by-prathvi patil