ಕೃಷ್ಣೇಗೌಡನಆನೆ

ಮಂಚೀಕೇರಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಆಧುನಿಕ ರಂಗಪರಂಪರೆಯನ್ನ ಹುಟ್ಟುಹಾಕಿದ ನೆಲಗಳಲ್ಲೊಂದು. ಹಿಂದಿನಿಂದಲೂ ನಾಟಕಗಳನ್ನ ಆಡುತ್ತಿದ್ದ ಮಂಚೀಕೇರಿಯ ಹವ್ಯಾಸಿಗಳು ಇಂಥದೊಂದು ಹೊರಳುವಿಕೆಯ ಕಾಲದಲ್ಲಿ ಪ್ರಭಾವಿತರಾದದ್ದು ಹೆಗ್ಗೋಡು ರಂಗ ಮಾದರಿಯಿಂದ. ಮತ್ತು ಆ ಕಾರಣಕ್ಕಾಗಿಯೇ ಹಲವಾರು ಪ್ರತಿಭಾವಂತ ನಿರ್ದೇಶಕರು ಮಂಚೀಕೇರಿಗೆ ಬಂದು ನಾಟಕವಾಡಿಸಿದರು.ಸ್ಥಳೀಯ ಸಿದ್ದಿ ಸಮುದಾಯವನ್ನು ಕೂಡ ರಂಗಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವದರ ಮೂಲಕ ವಿಸ್ತೃತವಾದ ಸಮುದಾಯ ರಂಗಭೂಮಿಯೊಂದನ್ನು ಕಟ್ಟುವ ಪ್ರಯತ್ನ ನಡೆಯಿತು. ಮಂಚೀಕೇರಿಯಲ್ಲೊಂದು ನಾಟಕ್ಕಾಗಿಯೇ ಕಟ್ಟಲ್ಪಟ್ಟ ಸರಳ ರಂಗಮಂದಿರದ ನಿರ್ಮಾಣವಾಯಿತು. ನಾಟಕಗಳ ನಿರ್ಮಾಣ ಸುಲಭವಾಯಿತು. ಹವ್ಯಾಸಿಗಳ ಉಮೇದೂ ಹೆಚ್ಚಿತು.ಇಂಥ ಹುಮ್ಮಸ್ಸಿನಿಂದಲೇ … Continue reading ಕೃಷ್ಣೇಗೌಡನಆನೆ