ದುಡಿಮೆಯೇ ದೊಡ್ಡಪ್ಪ…ಕಾಯಕ ಸಂಸ್ಕೃತಿಯಿಂದ ನವೋದಯದ ಮೂಲಕ ಸರ್ವೋದಯ ಸಾಕಾರ

ದುಡಿಮೆಯೇ ದೊಡ್ಡಪ್ಪ ಎಂದು ಪ್ರತಿಪಾದಿಸಿದ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ದುಡಿಮೆಯಿಂದ ದೇಶ ಕಟ್ಟಲು ಸಾಧ್ಯ ಎನ್ನುವ ನಂಬಿಕೆಯಿಂದ ದುಡಿಯುವವರಿಗಾಗಿ ಅನೇಕ ಯೋಜನೆಗಳನ್ನು ಜಾರಿ ಮಾಡಿರುವುದಾಗಿ ತಿಳಿಸಿದರು. ಸಿದ್ಧಾಪುರದ ಐತಿಹಾಸಿಕ ನೆಹರೂ ಮೈದಾನದಲ್ಲಿ ನಾನಾ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಅನೇಕ ಭಾಗದಲ್ಲಿ ಅಸಮಾನತೆ,ಅವ್ಯವಸ್ಥೆಗಳಿವೆ ಆದರೆ ಕಾಯಕ ಸಂಸ್ಕೃತಿಯಫಲವಾಗಿ ನಾವು ಅಭಿವೃದ್ಧಿಯ ಹೊಸ ಯುಗವನ್ನು ಕಾಣುತಿದ್ದೇವೆ. ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿಯ ಮಾರ್ಗದ ಮೂಲಕವೇ ಸರ್ವೋದಯವನ್ನು ನವೋದಯದ ಮೂಲಕ ಸಾಧಿಸುತಿದ್ದೇವೆ ಎಂದರು.