ಕಾಲಿಗೆ ಶಸ್ತ್ರಚಿಕಿತ್ಸೆಯಾಗಿದ್ದರೂ ಮತದಾನ ಮಾಡಿದ ಮಹಿಳೆ

ಸಿದ್ದಾಪುರಕೆಲವು ದಿನಗಳ ಹಿಂದೆ ಎರಡೂ ಕಾಲಿನಮಂಡಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಪಟ್ಟಣದ ರವೀಂದ್ರನಗರದ ಮತದಾರರಾದ ಉದ್ಯಮಿ ರಾಘವೇಂದ್ರ ಶೇಟ್ ಮತ್ತು ಪ್ರಸನ್ನ ಶೇಟ್ ರ ತಾಯಿ ಸರೋಜ ಶ್ರೀನಿವಾಸ ಶೇಟ್ ಎನ್ನುವ ಮಹಿಳೆ ನಡೆಯಲಾಗದ ಸ್ಥಿತಿಯಲ್ಲೂ ಪುತ್ರರ ಸಹಾಯದೊಂದಿಗೆ ಪಟ್ಟಣದ ಸಿದ್ದಿವಿನಾಯಕ ಶಾಲೆಯ ಮತಗಟ್ಟೆಗೆ ಬಂದು ಮತ ಚಲಾಯಿಸುವದರ ಮೂಲಕ ಮಾದರಿಯೆನ್ನಿಸಿದ್ದಾರೆ.