ಸಿಗಂದೂರಿಗೆ ಲಾಂಚ್ ಪುನರಾರಂಭ ಪ್ರವಾಸಿಗರಿಗೆ ನಿರಾಳ
ಸಾಗರದ ತೀರ್ಥಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ತೆರಳುವ ಲಾಂಚ್ ಅನ್ನು ಪುನರಾರಂಭ ಮಾಡಲಾಗಿದೆ. ನೀರಿನ ಕೊರತೆ ಹಿನ್ನೆಲೆಯಲ್ಲಿ ೨೦ ದಿವಸಗಳ ಕೆಳಗೆ ಲಾಂಚ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಲಾಂಚ್ ಸಂಚಾರ ಸ್ಥಗಿತಗೊಂಡಿದ್ದರಿಂದ ಪ್ರವಾಸಿಗರ ವಾಹನಗಳು ದೇವಾಲಯದ ವೆರೆಗೆ ತೆರಳದೆ ಪ್ರವಾಸಿಗರು ಬೇಸರಿಸುವಂತಾಗಿತ್ತು. ಈ ವಾರದ ನಿರಂತರ ಮಳೆಯ ಕಾರಣದಿಂದ ಶರಾವತಿ ಹಿನ್ನೀರಿನ ಏರಿಕೆಯಾಗಿ ಲಾಂಚ್ ಸಂಚಾರಕ್ಕೆ ಅನುಕೂಲವಾಗಿದೆ. ಮಳೆ, ಚಳಿ ಲೆಕ್ಕಿಸದೆ ಸಿಗಂದೂರಿಗೆ ಬರುವ ರಾಜ್ಯದ ಪ್ರವಾಸಿಗರಿಗೆ ಈ ಬೆಳವಣಿಗೆಯಿಂದ ನಿರಾಳವಾದಂತಾಗಿದೆ.
Copy and paste this URL into your WordPress site to embed
Copy and paste this code into your site to embed