ಸುಬ್ರಮಣ್ಯ ಶಾಸ್ತ್ರಿ ಸಾವಿಗೆ ದಿಗ್ಭ್ರಮೆ
ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ನ ಮಾಜಿ ಸದಸ್ಯ ಕರ್ವಾದ ಸುಬ್ರಮಣ್ಯ ಶಾಸ್ತ್ರಿ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಕಳೆದ ಒಂದು ವರ್ಷದಿಂದ ಮೆದುಳು ಕ್ಯಾನ್ಸರ್ ನಿಂದ ಬಳಲುತಿದ್ದ ಅವರು ಚಿಕಿತ್ಸೆ ಫಲನೀಡದೆ ಇಂದು ದೈವಾದೀನರಾದರು. ಮೃತರು ಒಂದು ಬಾರಿ ಸಮಾಜವಾದಿ ಪಕ್ಷದಿಂದ ಜಿ.ಪಂ. ಸದಸ್ಯರಾಗಿ ನಂತರ ಬಿ.ಜೆ.ಪಿ.ಸೇರ್ಪಡೆಯಾಗಿದ್ದರು. ಯುವ ರಾಜಕಾರಣಿ ಸುಬ್ರಮಣ್ಯ ಶಾಸ್ತ್ರಿ ಸಾವು ಸಾರ್ವಜನಿಕ ವಲಯದ ದಿಗ್ಭ್ರಮೆಗೆ ಕಾರಣವಾಗಿದ್ದು ಅನೇಕರು ಸಂತಾಪ ಸೂಚಿಸಿದ್ದಾರೆ. ಮೃತರು ಪತ್ನಿ ಮಕ್ಕಳು ಸೇರಿದ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
Copy and paste this URL into your WordPress site to embed
Copy and paste this code into your site to embed