ಯುದ್ಧ ಪರಿಸರಕ್ಕೆ ಮಾರಕ… ಸು.ಹೆಬ್ಳೀಕರ್

ಮಳೆ ಕೊರತೆಗೆ ಪರಿಸರ ನಾಶವೇ ನೇರ ಕಾರಣ ಎಂದು ಪ್ರತಿಪಾದಿಸಿರುವ ಹಿರಿಯ ಪರಿಸರವಾದಿ ಸುರೇಶ್‌ ಹೆಬಳೀಕರ್‌ ಯುದ್ಧ ಪರಿಸರಕ್ಕೆ ಮಾರಕ ಎಂದಿದ್ದಾರೆ. ಸಿದ್ಧಾಪುರದಲ್ಲಿ ಸಮಾಜಮುಖಿ ಡಾಟ್‌ ನೆಟ್‌ ಜೊತೆ ಮಾತನಾಡಿದ ಅವರು ಪ್ಲಾಸ್ಟಿಕ್‌, ಪರಿಸರ, ಸಮುದ್ರ ಕಾಡನ್ನು ಹಾಳುಮಾಡುತ್ತದೆ. ನಗರ ನಿರ್ಮಾಣದ ಸಿಮೆಂಟ್‌, ಕಬ್ಬಿಣ ಕೂಡಾ ದೊಡ್ಡ ಮಟ್ಟದಲ್ಲಿ ಪರಿಸರಕ್ಕೆ ಮಾರಕ ಎಂದರು. ಪಶ್ಚಿಮಘಟ್ಟ ಉಳಿಸಿಕೊಳ್ಳಬೇಕಾಗಿರುವುದು ತುರ್ತು ಕೆಲಸ ಎಂದ ಅವರು ಕರಾವಳಿ,ಮಲೆನಾಡಿನ ಸಂಸ್ಕೃತಿ,ಸಂಪನ್ಮೂಲದ ಹಿಂದೆ ಪರಿಸರದ ಪಾತ್ರ ದೊಡ್ಡದು ಎಂದರು.