ಆರ್ಯ ಹೆಗಡೆಗೆ ಮೊದಲ ಸ್ಥಾನ

ಸಿದ್ದಾಪುರದಲ್ಲಿ ನಡೆದ ಶಿರಸಿ ಶೈಕ್ಷಣಿಕ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದಲ್ಲಿ ಸಿದ್ದಾಪುರ ತಾಲೂಕಿನ ಹೆಗ್ಗರಣಿಸಹಿಪ್ರಾ ಶಾಲೆಯ ಆರ್ಯ ಹೆಗಡೆ ಭಕ್ತಿಗೀತೆ ಹಾಗೂ ಲಘು ಸಂಗೀತ ಈ ಎರಡೂ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ. ಈತನು ಗಾಯಕ ವಿನಾಯಕ ಹೆಗಡೆ ಹಿರೇಹದ್ದ ಹಾಗೂ ರಂಜನಾ ಹೆಗಡೆ ದಂಪತಿ ಪುತ್ರ.