ನೆಜ್ಜೂರಿನಲ್ಲಿ ಮಸೀದಿ ಉದ್ಘಾಟನೆ, ಅನ್ನಸಂತರ್ಪಣೆ

ಸಿದ್ಧಾಪುರ, ಇಲ್ಲಿಯ ನೆಜ್ಜೂರಿನಲ್ಲಿ ಬೃಹತ್‌ ಸುನ್ನಿ ಜಾಮೀಯಾ ಮಸೀದಿ ಉದ್ಘಾಟನೆ ನಡೆಯಿತು. ಉತ್ತರ ಕನ್ನಡ ಜಿಲ್ಲೆಯಲ್ಲೇ ಭವ್ಯ, ವ್ಯವಸ್ಥಿತ ಎನ್ನುವ ಈ ಮಸೀದಿಯ ಉದ್ಘಾಟನೆ ರವಿವಾರ ನಡೆಯಿತು. ಈ ಮಸೀದಿ ಉದ್ಘಾಟನೆ ಅಂಗವಾಗಿ ರವಿವಾರ ಮಧ್ಯಾಹ್ನದಿಂದ ತಡ ರಾತ್ರಿಯ ವರೆಗೆ ಅನ್ನ ಸಂತರ್ಪಣೆ ನಡೆಯಿತು. ಈ ಕಾರ್ಯಕ್ರಮ, ಭೋಜನಕೂಟದಲ್ಲಿ ಎಲ್ಲಾ ಜಾತಿ, ಧರ್ಮ, ಸಮೂದಾಯಗಳ ಜನರು ಪಾಲ್ಗೊಂಡಿದ್ದು ವಿಶೇಶವಾಗಿತ್ತು.