ಜೋಗದ ಸಿರಿಗೆ ಮುಸುಕಿದ ಮಂಜು!

ವಿಶ್ವ ಪ್ರಸಿದ್ಧ ಜೋಗ ಜಲಪಾತದ ಇತಿಹಾಸ ದೊಡ್ಡದು. ಜೋಗದ ನೀರಸಿರಿ ಬಳಸಿ ವಿದ್ಯುತ್‌ ಉತ್ಪಾದನೆ ಇದಕ್ಕಾಗಿ ಕಟ್ಟಿದ ಆಣೆಕಟ್ಟುಗಳು ಇವುಗಳಿಗೆ ಭಾರತದ ಸ್ವಾತಂತ್ರ್ಯ ಸಂಬ್ರಮದ ಚರಿತ್ರೆಯಷ್ಟೇ ಹಿನ್ನೆಲೆಇದೆ. ಈ ವೈಶಿಷ್ಟ್ಯಗಳನ್ನು ನೋಡಲು ಜನರು ಪ್ರಪಂಚದಾದ್ಯಂತ ಇಲ್ಲಿಗೆ ಬರುತ್ತಾರೆ. ಜೋಗದ ವೀಕ್ಷಣೆ ಆಗಸ್ಟ್‌ ನಿಂದ ಪ್ರಾರಂಭವಾಗಿ ಡಿಸೆಂಬರ್‌, ಜನೇವರಿ ವರೆಗೂ ಮುಂದುವರಿಯುತ್ತದೆ. ಆದರೆ ಜೋಗ ಜೋಗದ ನೀರಿನ ಸೊಬಗು ನೋಡಲು ಬರುವವರು ಜೂನ್‌, ಜುಲೈನ ಮಳೆಗಾಲದಲ್ಲಿ ಆಗಮಿಸುತ್ತಾರೆ. ಆದರೆ ಬಿಸಿಲು ಕಾಣದ ಮಳೆಗಾಲದಲ್ಲಿ ಜೋಗ ಮಂಜು ಹೊದ್ದು ಮಲಗಿರುತ್ತದೆ.