ಶಿಕ್ಷಕರ ದಿನಾಚರಣೆ… ರಂಜಿಸಿದ ಶಿಕ್ಷಕಿಯರು

ಸಿದ್ದಾಪುರದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಕ್ಷಕಿಯರ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಪ್ರಾಥಮಿಕ ಶಾಲಾ ಶಿಕ್ಷಕಿಯರ ಸಮೂಹ ಗಾನ, ಡೊಳ್ಳು ನೃತ್ಯಗಳು ಪ್ರೇಕ್ಷಕರನ್ನು ರಂಜಿಸಿದವು. ಅಚ್ಚುಕಟ್ಟಾದ ಕಾರ್ಯಕ್ರಮಗಳೊಂದಿಗೆ ನಿರೂಪಣೆಗೆ ತಕ್ಕಂತೆ ಶಿಸ್ತುಬದ್ಧವಾಗಿ ಸಾಗಿದ ಕಾರ್ಯಕ್ರಮ ಮಾದರಿ ಎನಿಸಿತು. ಶಾಸಕರ ಮಾತಿನ ವೇಳೆ ವಿದ್ಯುತ್‌ ವ್ಯತ್ಯಯವಾಗಿದ್ದು ಬಿಟ್ಟರೆ ಇಡೀ ಕಾರ್ಯಕ್ರಮ ಸೊಗಸಾಗಿ ನಡೆಯಿತು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರ ಬೇಡಿಕೆ, ಕ್ಷೇತ್ರಶಿಕ್ಷಣಾಧಿಕಾರಿ ಎಂ.ಎಚ್.‌ ನಾಯ್ಕರ ಚುಟುಕು ಪ್ರಾಸ್ಥಾವಿಕ ನುಡಿಗಳು ಹೈಲೈಟ್‌ ಗಳಾಗಿದ್ದವು.