ಶನಿವಾರಬೇಡ್ಕಣಿ ಜೇಡಗೆರೆ ಹಸ್ತಾಂತರ ವಾಜಗೋಡು ವಿ.ಎಸ್.ಎಸ್.‌ ಕಟ್ಟಡ ಉದ್ಘಾಟನೆ

( ಸಿದ್ಧಾಪುರ ಉ.ಕ.) ನವೆಂಬರ್‌ ೨೨ ರ ಶನಿವಾರ ಬೇಡ್ಕಣಿಯ ಜೇಡಗೆರೆ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗ್ರಾ.ಪಂ. ಬೇಡ್ಕಣಿ ಮತ್ತು ಬೇಡ್ಕಣಿಯ ಜೇಡಗೆರೆ ಅಭಿವೃದ್ಧಿ ಸಮೀತಿಗಳ ಸಹಕಾರದಲಿ ನಡೆಯಲಿರುವ ಈ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಲ್ಲಿ ಶಾಸಕ ಭೀಮಣ್ಣ ನಾಯ್ಕ ಕಾರ್ಯಕ್ರಮ ಉದ್ಘಾಟಿಸಿ ಕೆರೆಗೆ ಬಾಗಿನ ಅರ್ಪಿಸಲಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳು, ಪ್ರಮುಖರು ಪಾಲ್ಗೊಳ್ಳಲಿದ್ದಾರೆ.