ಇಂದು ಸಿದ್ಧಾಪುರದಲ್ಲಿ ಶಿರಸಿ ಅರ್ಬನ್‌ ಬ್ಯಾಂಕ್‌ ಪ್ರಾರಂಭೋತ್ಸವ

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ನಗರಗಳಲ್ಲಿ ತನ್ನ ಶಾಖೆ ಹೊಂದಿರುವ ಶಿರಸಿಯ ದಿ ಶಿರಸಿ ಅರ್ಬನ್‌ ಕೋ ಅಫ್‌ ಬ್ಯಾಂಕ್‌ ಈಗ ಸಿದ್ದಾಪುರದಲ್ಲಿ ತನ್ನ ಶಾಖೆ ಪ್ರಾರಂಭಿಸಿದೆ. ನಗರದ ಕೃಷಿ ಉತ್ಫನ್ನ ಮಾರುಕಟ್ಟೆ ರಸ್ತೆಯ ಗಾಡಿಬಿಡ್ಕಿ ಎದುರಿನ ನೂತನ ನವೀಕೃತ ಕಟ್ಟಡದಲ್ಲಿ ಇಂದು ಸಿದ್ಧಾಪುರದ ಶಿರಸಿ ಅರ್ಬನ್‌ ಬ್ಯಾಂಕ್‌ ಶಾಖೆ ಪ್ರಾರಂಭವಾಗುತ್ತಿದೆ. ಇಂದು ಮದ್ಯಾಹ್ನ ೩ ಗಂಟೆಗೆ ಅನೇಕ ಗಣ್ಯರ ಉಪಸ್ಥಿತಿಯಲ್ಲಿ ಸಿದ್ಧಾಪುರ ಶಾಖೆ ಲೋಕಾರ್ಪಣೆ ನಡೆಯುತ್ತಿದೆ.