ಎನ್.ಪಿ. ಗಾಂವ್ಕರ್‌ ಇನ್ನಿಲ್ಲ

ಉತ್ತರ ಕನ್ನಡ ಡಿ.ಸಿ.ಸಿ. ಬ್ಯಾಂಕಿನ ಮಾಜಿ ಎಂ.ಡಿ. ,ನಿರ್ಧೇಶಕ ನಾಗೇಶ್‌ ಪಿ.ಗಾಂವ್ಕರ್‌ ಮಂಗಳವಾರ ನಿಧನರಾಗಿದ್ದಾರೆ. ಕರಾವಳಿ ತೀರದಿಂದ ವಲಸೆ ಬಂದು ಶಿರಸಿಯಲ್ಲಿ ನೆಲೆನಿಂತು ಡಿ.ಸಿ.ಸಿ. ಬ್ಯಾಂಕ್‌ ಉದ್ಯೋಗಿಯಾಗಿ ಹಣಕಾಸು ಸಂಸ್ಥೆ ನಡೆಸುತ್ತಲೇ ಡಿ.ಸಿ.ಸಿ. ಬ್ಯಾಂಕಿನ ಪ್ರಮುಖರೊಬ್ಬರಾಗಿ ಗುರುತಿಸಿಕೊಂಡಿದ್ದ ಎನ್.ಪಿ.ಗಾಂವ್ಕರ್‌ ಹಣಕಾಸು ಸಲಹೆಗಾರರಾಗಿಯೂ ಹೆಸರು ಮಾಡಿದ್ದರು. ಶಿರಸಿ ವಿನಾಯಕ ನಗರದ ಅವರ ಮನೆಗೆ ತೆರಳಿದ ಅನೇಕ ಗಣ್ಯರು ಮೃತರ ಅಂತಿಮ ದರ್ಶನ ಪಡೆದರು.