ಸಿದ್ದಾಪುರ ಟಿ.ಎಂ.ಎಸ್‌ಗೆ ಮಾಜಿ ಸಚಿವ ಹಾಲಪ್ಪಆಚಾರ್ ಭೇಟಿ

ಸಿದ್ದಾಪುರ ೨೩, ಸ್ಥಳೀಯ ಟಿ.ಎಂ.ಎಸ್‌ಗೆ ಮಾಜಿ ಸಚಿವ ಹಾಗೂ ಕರ್ನಾಟಕರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಮಾಜಿಅಧ್ಯಕ್ಷ ಹಾಲಪ್ಪಆಚಾರ್‌ ಭೇಟಿ ನೀಡಿ ಸಂಘದ ಕಾರ್ಯಚಟುವಟಿಕೆಗಳನ್ನು ವೀಕ್ಷಿಸಿ ,ಸಂತಸ ವ್ಯಕ್ತಪಡಿಸಿದರು.ಅವರೊಂದಿಗೆ ನಿರ್ದೇಶಕರಾಗಿ ಸೇವೆ ನೀಡಿದ ಸಂಘದಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಅವರು ಸ್ವಾಗತಸಿ, ಸಂಘವು ೭೯ನೇ ಆರ್ಥಿಕ ವರ್ಷಕ್ಕೆಕಾಲಿಟ್ಟಿದ್ದು ,ಸಂಘದ ಕಾರ್ಯಚಟುವಟಿಕೆಗಳನ್ನು ವಿವರಿಸಿದರು.ನಿರ್ದೇಶಕರುಗಳಾದ ಸುಬ್ರಹಣ್ಯ ಭಟ್ ಚಟ್ನಳ್ಳಿ,ಸುಧೀರಗೌಡರ, ವ್ಯವಸ್ಥಾಪಕ ಸತೀಶ ಹೆಗಡೆ ಹೆಗ್ಗಾರಕೈಹಾಗೂ ಹಿರಿಯ ಸಾಮಾಜಿಕಕಾರ್ಯಕರ್ತ ಎಸ್.ಕೆ.ಭಾಗ್ವತ್‌ಉಪಸ್ಥತರಿದ್ದರು.