ಹೆಗ್ಗರಣಿಯಲ್ಲಿ ಮದ್ಯದಂಗಡಿ ಬೇಡ… ಸ್ಥಳೀಯರ ಆಕ್ಷೇಪ, ಮನವಿ ಅರ್ಪಣೆ

ಸಿದ್ಧಾಪುರ,ಜು.೧೬- ತಾಲೂಕಿನ ಹೆಗ್ಗರಣಿಯಲ್ಲಿ ಮದ್ಯದಂಗಡಿ ಸ್ಥಾಪನೆಗೆ ವಿರೋಧ ವ್ಯಕ್ತವಾಗಿದ್ದು ಇಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಮದ್ಯದಂಗಡಿಗೆ ಅನುಮತಿ ನಿರಾಕರಿಸಬೇಕೆಂದು ಹೆಗ್ಗರಣಿ ಭಾಗದ ಸ್ಥಳೀಯರು ಇಲ್ಲಿಯ ಗ್ರಾಮ ಪಂಚಾಯತ್‌ ಮತ್ತು ತಹಸಿಲ್ದಾರರಿಗೆ ಲಿಖಿತ ಮನವಿ ನೀಡಿದ್ದಾರೆ. ಈ ಬಗ್ಗೆ ಮನವಿಯಲ್ಲಿ ವಿವರಿಸಿರುವ ಅವರು ಹೆಗ್ಗರಣಿಯಲ್ಲಿ ವಸತಿ ನಿಲಯ, ದೇವಾಲಯಗಳೆಲ್ಲಾ ಇರುವುದರಿಂದ ಸ್ಥಳೀಯರ ಭಾವನೆಗೆ ಧಕ್ಕೆ ಮತ್ತು ಇಲ್ಲಿಯ ಶಾಂತಿ-ಸುವ್ಯವಸ್ಥೆ ಹಿನ್ನೆಲೆಯಲ್ಲಿ ಮದ್ಯ ದಂಗಡಿ ಸ್ಥಾಪನೆ ಬೇಡ ಎಂದು ವಿವರಿಸಿದ್ದಾರೆ.