breaking news….. ಬೇಡ್ಕಣಿ ಬಳಿ ಭೂ ಕುಸಿತ, ಸಿದ್ಧಾಪುರ-ಕುಮಟಾ ಹೆದ್ದಾರಿ ಬಂದ್‌ ಸಾಧ್ಯತೆ

ಸಿದ್ಧಾಪುರ,ಜು೨೫- ಸಿದ್ಧಾಪುರದ ಸಿದ್ಧಾಪುರ-ಕುಮಟಾ ರಾಜ್ಯ ಹೆದ್ದಾರಿಯ ಬೇಡ್ಕಣಿ ದುಬಾರಿ ಘಾಟ್‌ ಬಳಿ ಭೂ ಕುಸಿತವಾಗಿ ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ. ಬೇಡ್ಕಣಿ-ಭುವನಗಿರಿ ನಡುವಿನ ದುಬಾರಿ ಘಾಟ್ ಬಳಿ ಗುಡ್ಡ ಕುಸಿದು ರಸ್ತೆಯ ಅಂಚಿನ ವರೆಗೆ ಮಣ್ಣು ಕುಸಿದು ಬಿದ್ದಿದೆ. ತಕ್ಷಣ ತುರ್ತು ಕೆಲಸ ಆಗದಿದ್ದರೆ ವಾಹನ ಸಂಚಾರ ಸ್ಥಗಿತಗೊಳ್ಳುವ ಅಪಾಯ ಎದುರಾಗಿದೆ. ಈ ಬಗ್ಗೆ ಸಮಾಜಮುಖಿ ಡಾಟ್‌ ನೆಟ್‌ ಗೆ ಮಾಹಿತಿ ನೀಡಿರುವ ಸ್ಥಳೀಯರು ಸ್ಥಳಿಯಾಡಳಿತ ತಕ್ಷಣ ಸ್ಪಂದಿಸಿ ಶೀಘ್ರ- ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.