ಕುಡುಗುಂದ ಯುವಕರ ಸಾವಿನಲ್ಲಿ ಕೆಲವರ ಕೈವಾಡದ ಶಂಕೆ!

ಸಿದ್ದಾಪುರ, ೦೮- ಹೊನ್ನಾವರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಯುವಕರ ಸಾವಿನಲ್ಲಿ ಕೆಲವರ ಕೈವಾಡ ವಿರುವ ಬಗ್ಗೆ ಶಂಕೆ ವ್ಯಕ್ತವಾಗಿ ಈ ಬರ್ಭರ ಸಾವಿನಲ್ಲಿ ಶಾಮೀಲಾಗಿರುವ ವ್ಯಕ್ತಿಯನ್ನು ಬಂಧಿಸುವಂತೆ ಒತ್ತಾಯಿಸಿ ಇಂದು ಪೊಲೀಸ್‌ ಮತ್ತು ಕಂದಾಯ ಇಲಾಖೆಗೆ ಬಾಧಿತರ ಪರವಾಗಿ ನೂರಾರು ಜನರು ಸೇರಿ ಮನವಿ ಅರ್ಪಿಸಿದರು. ಸ್ಥಳೀಯ ಒಬ್ಬ ವ್ಯಕ್ತಿ ಜೊತೆ ಕೆಲವರು ಈ ಘಟನೆಗೆ ಕಾರಣವಾಗಿರುವ ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಪ್ರತಿಭಟನಾ ಕಾರರು ಆಗ್ರಹಿಸಿದರು.