ವಾರದ ಓದು-ಪ್ರಕೃತಿಯೆಂಬುದು ನಮಗೆ ತಂತಾನೇ ದಕ್ಕಿದ ಬಹುಮಾನ!

ಆತ್ಮೀಯ ಬರಹಗಾರ ರಸ್ಕಿನ್ ಬಾಂಡ್‍ನ ಜೀವನ ದೃಷ್ಟಿ

  • ಡಿ. ರಾಮಪ್ಪ ಸಿರಿವಂತೆ, ಅಂಕೋಲಾ

ಬ್ರಿಟಿಷ್ ದಂಪತಿಗಳಿಗೆ ಹುಟ್ಟಿ, ಭಾರತೀಯರಲ್ಲಿ ಭಾರತಿಯನಾಗಿ ಬದುಕುತ್ತಿರುವ ರಸ್ಕಿನ್ ಬಾಂಡ್, ತನ್ನ ಭಾರತೀಯತೆಯ ಬಗ್ಗೆ – ಜನಾಂಗದ ಹೆಸರಿನಿಂದಾಗಲೀ, ಧರ್ಮದ ಹೆಸರಿನಿಂದಾಗಲೀ ತಾನು ಭಾರತೀಯನಾಗಲಿಲ್ಲ; ಬದಲಿಗೆ, ಚರಿತ್ರೆಯ ಮೂಲಕ ಭಾರತೀಯನಾದೆ ಎಂದು – ಎಂದೋ ಹೇಳಿದ ಮಾತು ಇಂದಿನ ಸಂದರ್ಭದಲ್ಲಿ ಎಷ್ಟು ಮಾರ್ಮಿಕ!.

ರಸ್ಕಿನ್ ಬಾಂಡ್ ಬ್ರಿಟಿಷ್ ಮೂಲದ, ಇಂಗ್ಲಿಷ್ ಭಾಷೆಯ, ಭಾರತೀಯ ಬರಹಗಾರ. ಕಥೆ, ಕವನ, ಪ್ರಬಂಧ, ಕಾದಂಬರಿ, ವಿಶೇಷವಾಗಿ ಮಕ್ಕಳ ಕಥೆಗಳಲ್ಲಿ, ರಸ್ಕಿನ್ ಬಾಂಡ್ ದೊಡ್ಡ ಹೆಸರು. ಎಡಿತ್ ಕ್ಲಾರ್ಕ್ ಮತ್ತು ಆಬ್ರೆ ಅಲೆಕ್ಷಾಂಡರ್ ಬಾಂಡ್ ಎಂಬ ಆಂಗ್ಲೋ ಇಂಡಿಯನ್ ದಂಪತಿಗಳ ಮಗನಾಗಿ ಹುಟ್ಟಿದ್ದು ಮೇ 19, 1934 ರಲ್ಲಿ. ಅವರ ತಂದೆ ಭಾರತದಲ್ಲಿ, ಬ್ರಿಟಿಷ್‍ರ ರಾಯಲ್ ಏರ್ಫೋರ್ಸ್‍ನಲ್ಲಿ ಇದ್ದರು. ರಸ್ಕಿನ್ 8 ವರ್ಷದರಿದ್ದಾಗ, ಅವರ ತಾಯಿ ಗಂಡನನ್ನು ಬಿಟ್ಟು, ಹರಿ ಎಂಬ ಪಂಜಾಬಿ ಹಿಂದೂವನ್ನು ಮದುವೆಯಾದರು. ಅಲ್ಲಿಯವರೆಗೆ ತಾಯಿಯೊಟ್ಟಿಗೆ ಡೆಹ್ರಾಡೂನ್‍ನಲ್ಲಿ ಇದ್ದ ರಸ್ಕಿನ್‍ರÀನ್ನು ಅವರ ತಂದೆ, ತಾನು ಕೆಲಸಮಾಡುತ್ತಿದ್ದ ದೆಹಲಿಗೆ ಕರೆತಂದು ತನ್ನೊಟ್ಟಿಗೆ ಇಟ್ಟುಕೊಂಡರು. ತಂದೆಯೊಟ್ಟಿಗಿದ್ದ ದಿನಗಳು, ತಾನು ಅತ್ಯಂತ ಸಂತೋಷವಾಗಿ ಕಳೆದ ಸಮಯ ಎಂದು ರಸ್ಕಿನ್ ಹೇಳಿಕೊಂಡಿದ್ದಾರೆ. ಆದರೆ, ಈ ಸಂತೋಷ ಹೆಚ್ಚು ದಿನ ಉಳಿಯಲಿಲ್ಲ. ಖಾಯಿಲೆಯಿಂದ ತಂದೆ ಸತ್ತಾಗ, 10 ವರ್ಷದ ರಸ್ಕಿನ್, ತನ್ನ ಹೆತ್ತ ತಾಯಿ ಮತ್ತು ಮಲ-ತಂದೆಯೊಟ್ಟಿಗೆ ಇರಲು ಡೆಹ್ರಾಡೂನ್‍ಗೆ ಹೋಗಬೇಕಾಯ್ತು.
1950ರಲ್ಲಿ ರಸ್ಕಿನ್, ಹೆಚ್ಚಿನ ಓದಿಗಾಗಿ ಇಂಗ್ಲೆಂಡ್‍ಗೆ ಹೋದರು. ತಬ್ಬಲಿತನ, ತಂದೆ-ತಾಯಿಯರ ಪ್ರೀತಿಯ ಕೊರತೆ ಮತ್ತು ಇಂಗ್ಲೆಂಡ್‍ನಲ್ಲಿನ ಅತಂತ್ರತೆ, ಅವರನ್ನು ಏಕಾಂಗಿಯನ್ನಾಗಿಸಿತು. ಬಹುಷಃ ಅವರು, ಬಾಲ್ಯದ ಈ ನೊವು-ಅತಂತ್ರದ ಗಳಿಗೆಗಳನ್ನೇ ಆಧಾರಿಸಿ, ತಮ್ಮ ಮೊದಲ ಕಾದಂಬರಿ – ದಿ ರೂಂ ಆನ್ ದಿ ರೂಫ್ (ಮಾಳಿಗೆಯ ಮೇಲಿನ ಕೋಣೆ) – ಬರೆದರು. ಅದನ್ನು ಬರೆದಾಗ ರಸ್ಕಿನ್‍ಗೆ 17 ವರ್ಷ!
ಆ ಕಾದಂಬರಿಯ ಪ್ರಕಟಣೆಯಿಂದ ಬಂದ ಹಣ ಪಡೆದು ರಸ್ಕಿನ್ ಕೂಡಲೇ ಭಾರತಕ್ಕೆ ಬಂದು ಡೆಹ್ರಾಡೂನ್‍ನಲ್ಲಿ ನೆಲೆಸಿದರು. 1857ರ ದಂಗೆ ಕುರಿತ ಅವರ ಕಾದಂಬರಿ -–ಎ ಫ್ಲೈಟ್ ಆಫ್ ಪಿಜನ್ಸ್ (ಪಾರಿವಾಳಗಳ ಹಾರಾಟ) – ಶ್ಯಾಮ್ ಬೆನೆಗಲ್ ಕೈಯಲ್ಲಿ ಜುನೂನ್ ಹಿಂದಿ ಸಿನೆಮಾ ಆಗಿದೆ. ಅವರ ಮಕ್ಕಳ ಕಾದಂಬರಿ – ಬ್ಲೂ ಅಂಬ್ರೆಲ್ಲಾ ( ನೀಲಿ ಕೊಡೆ ) ವಿಶಾಲ್ ಭಾರದ್ವಜ್ ಕೈಯಲ್ಲಿ ಸಿನೆಮಾ ಆಗಿ, ಅತ್ಯುತ್ತಮ ಮಕ್ಕಳ ಚಿತ್ರ ಎಂದು ರಾಷ್ಟ್ರಿಯ ಪ್ರಶಸ್ತಿ ಪಡೆದಿದೆ.
ಸಾಹಿತ್ಯಕ ಕೊಡುಗೆಗೆ, 1992 ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಅವರನ್ನು, 1999 ರಲ್ಲಿ ಪದ್ಮಶ್ರೀ ಮತ್ತು 2014 ರಲ್ಲಿ ಪದ್ಮಭೂಶಣ ಪ್ರಶಸ್ತಿಗಳು ಅರಸಿ ಬಂದವು.
ಅವರ ಜೀವನ ದೃಷ್ಟಿಯ ಬಗ್ಗೆ ಬೆಳಕು ಚೆಲ್ಲುವ ಇತ್ತೀಚಿನ ಇಂಗ್ಲಿಷ್ ಬರಹವೊಂದನ್ನು ಇಲ್ಲಿ ಕನ್ನಡೀಕರಿಸಿದ್ದೇನೆ:

ಸುತ್ತಲಿನ ಪರಿಸರವೇ ನಮ್ಮ ಬದುಕು ಪಡೆದ ಬಹುಮಾನವಾಗಬಹುದು:

  • ರಸ್ಕಿನ್ ಬಾಂಡ್
    ಭೂಮಿಯೆಂಬ ಗೃಹದ ಮೇಲೆ ಕಳೆದ, 80 ವರ್ಷಗಳ ನಂತರ ನಾನು ಏನನ್ನು ಕಲಿತೆ?
    ನಿಜ ಹೇಳಬೇಕೆಂದರೆ ಏನೂ ಇಲ್ಲ. ಈ ವಿಷಯದಲ್ಲಿ ಹಿರಿಯರು ಮತ್ತು ತತ್ವಜ್ಞಾನಿಗಳು ಹೇಳುವುದನ್ನು ನಂಬಬೇಡಿ. ಏಕೆಂದರೆ ವಿವೇಕ ವಯಸ್ಸಿನೊಂದಿಗೆ ಬರುವುದಿಲ್ಲ! ಪ್ರಾಯಃ ಅದು ತೊಟ್ಟಿಲಲ್ಲೇ ಪ್ರಾರಂಭವಾಗಿರಬಹುದೆಂದು ನನ್ನ ಅಭಿಪ್ರಾಯ. ಜೀವನ ಸಾರ್ಥಕವೆನಿಸಲು ನಾವು ನಮ್ಮದೇ ಆದ ದಾರಿಯನ್ನು ಆಯ್ಕೆಮಾಡಿಕೊಳ್ಳುತ್ತೇವೆÉ. ಈ ನಡಿಗೆಯಲ್ಲಿ ನಾನು, ಬುದ್ಧಿಯ ಲೆಕ್ಕಾಚಾರಕ್ಕಿಂತ ಸಹಜ ಪ್ರವೃತ್ತಿಯನ್ನು ಹೆಚ್ಚಾಗಿ ಅವಲಂಬಿಸಿದ್ದು ನನಗೆ ಸಂತೋಷ ಕೊಟ್ಟಿದೆ.
    ಧರ್ಮದ ಮೇಲೆ ನಂಬಿಕೆಯಿಲ್ಲದೆ ಈ ಅರಿವಿಗೆ ಬರುವುದೆಂದರೆ, ನನಗೆ ಸಂತೋಷ ಮತ್ತು ನೆಮ್ಮದಿ ತಂದುಕೊಟ್ಟ ಏಲ್ಲಾ ಸಂಗತಿಗಳ ಬಗ್ಗೆ ಹೇಳಿದ ಹಾಗೆ. ಅವುಗಳಲ್ಲಿ ಮೊದಲನೆಯದಾಗಿ ಪುಸ್ತಕಗಳು: ನಿಜ, ಪುಸ್ತಕಗಳು ಮತ್ತು ಕಥೆಗಳಿಲ್ಲದೆ ನಾನು ಬದುಕುತ್ತಿರಲಿಲ್ಲ. ಎರಡನೆಯದಾಗಿ ಒಡನಾಟ: ಒಮ್ಮೆ ಸ್ನೇಹದಿಂದ ಕೂಡಿದ ಒಡನಾಟ, ಹಲವೊಮ್ಮೆ ಪ್ರೀತಿಯಿಂದ ಕೂಡಿದ ಒಡನಾಟ; ಅದೃಷ್ಟ ಇದ್ದರೆ, ಸ್ನೇಹ-ಪ್ರೀತಿ ಸಮ್ಮಿಳಿಸಿದ ಒಡನಾಟ. ಇಂತಹ ಒಡನಾಟಗಳಲ್ಲಿ ಅರಳುವ ಮುಗುಳ್ನಗು ಮತ್ತು ತಿಳಿಯಾದ ಹಾಸ್ಯತುಂಬಿದ ಮಾತು.
    ಇವೆಲ್ಲವನ್ನೂ ಮೀರಿದ್ದೆಂದರೆ, ಈ ಪ್ರಕೃತಿಯೊಟ್ಟಿಗಿನ ನನ್ನ ಸಂಬಂಧಗಳು. ಅಂದರೆ, ಗಿರಿ-ಶಿಖರಗಳ ಈ ಸ್ಥಳಗಳಲ್ಲಿ, ಧೂಳಿನಿಂದ ಕೂಡಿದ ಮೈದಾನಗಳಲ್ಲಿ, ಮರಗಳಿಲ್ಲದ ಉಸಿರುಗಟ್ಟುವ ಕಾಂಕ್ರೀಟ್ ಮನೆಗಳಿಂದ ತುಂಬಿದ ಮೊಹಲ್ಲಾಗಳಲ್ಲಿ, ನಾನು ನಡೆದು-ಪಡೆದ ಸಂಬಂಧಗಳು. ಒಮ್ಮೆ, ಇಂತಹ ಕಾಂಕ್ರೀಟ್ ಮನೆಯ ಬಾಲ್ಕನಿಯ ಬಿರುಕೊಂದರಲ್ಲಿ ಚಂದದ ಹೂವಿನ ಗಿಡ ಬೆಳೆಯುತ್ತಿರುವುದನ್ನು ನೋಡಿದೆ. ಗಿಡದ ಬುಡದ ಸುತ್ತಲ್ಲಿದ್ದ ಕಾಂಕ್ರೀಟನ್ನು ತೆಗೆದು ಅಲ್ಲಿ, ಹೊಸ ಮಣ್ಣು ತುರುಕಿ ದಿನಾ ಬೆಳಿಗ್ಗೆ ನೀರು ಹನಿಸಿದೆ. ಗಿಡ ಬೆಳೆದು ಕೇಸರಿ ಬಣ್ಣದ ಹೂ ಅರಳಿತು. ಒಣಗುವ ಮೊದಲು ಅದನ್ನು ಬೇರೆಯವರಿಗೆ ಕೊಟ್ಟುಬಿಟ್ಟೆ.

ತನ್ನೆಲ್ಲಾ ಕಷ್ಟ-ಕೋಟಲೆ ಮತ್ತು ಗೊಂದಲಗಳ ಮಧ್ಯೆ, ಜೀವನ ಸರಳ ಎಂದು ಮಾತ್ರ ಹೇಳಬಲ್ಲೆ. ಕೇವಲ ಸಂತೋಷದ ಹಿಂದೆ ಬೀಳದ ಮನಸ್ಸು ಮಾತ್ರ ಅದನ್ನು ಪೂರ್ತಿಯಾಗಿ ಪಡೆಯುತ್ತೆ.
ಅಪಾಯಕ್ಕೊಳಗಾಗದೆ ಜೀವನ ಪಯಣದ ಕೊನೆಗಳಿಗೆಗೆ ಬರುತ್ತಿರುವುದು, ಆಕಸ್ಮಿಕವೇ, ಪೂರ್ವ ನಿರ್ಧಾರಿತವೇ ಅಥವ, ನನ್ನ ಸ್ವಭಾವದಲ್ಲಿಯೇ ಇದೆಯೆ? ಈ ಜೀವನವನ್ನು ನಾನು ತುಂಬಾ ಪ್ರೀತಿಸುತ್ತೇನೆ. ಇದು ಹೀಗೆಯೇ ಸದಾ ನಡೆಯುತ್ತಿರಲೆಂದು ಆಶಿಸುತ್ತೇನೆ. ಆದರೆ, ಎಲ್ಲಾ ಒಳ್ಳೆಯ ಸಂಗತಿಗಳೂ ಕೊನೆಗೊಳ್ಳಬೇಕು ತಾನೆ? ನನ್ನ ಸಮಯ ಬಂದಾಗ, ಬಿಗುಮಾನವಿಲ್ಲದೆ ಗೌರವಯುತವಾಗಿ ನಿರ್ಗಮಿಸಬೇಕೆಂದು ಆಶಿಸುತ್ತೇನೆ.
ಒಂದು ಚಿಕ್ಕ ಬೆಕ್ಕು ಪ್ರತಿದಿನ ಮಧ್ಯಾಹ್ನ ನನ್ನ ಮನೆಯ ಟೆರೇಸಿನ ಮೇಲೆ ಬಂದು ಬಿಸಿಲಿಗೆ ಮೈಚಾಚಿ ನೆಮ್ಮದಿಯಿಂದ ಒಂದೆರಡು ತಾಸು ಮಲಗುತ್ತದೆ. ಎಚ್ಚರಗೊಂಡಾಗ, ನಿರಾಳವಾಗಿ ನಿಂತು, ಕಾಲು ಚಾಚಿ, ಮೈ ಮುರಿದು, ಬಂದ ದಾರಿಯಲ್ಲಿಯೇ ಹಿಂದಿರುಗುತ್ತದೆ. ಪ್ರತಿದಿನ ಅದೇ ಸ್ಥಳ, ಅದೇ ಬಂಗಿ, ಅದೇ ಧಾವಂತವಿಲ್ಲದ ನಡಿಗೆಯ ಗತಿ. ಕೆಲವೊಮ್ಮೆ ಇನ್ನೂ ಉತ್ತಮ ಸ್ಥಳ – ಸೂರ್ಯಕಿರಣಗಳು ಹೆಚ್ಚು ಬೀಳುವ, ಹೆಚ್ಚು ಶಾಂತವಾದ, ಮಲಗಿ ಆರಾಮಾಗಿ ಎದ್ದು ಹತ್ತಿರದಲ್ಲೆ ಓಡಾಡಿಕೊಂಡಿರುವ ಹಕ್ಕಿಗಳನ್ನು ಹಿಡಿಯಬಹುದಾದ ಸ್ಥಳ! ಆದರೆ ಇದು ಹೀಗೇ ಇರುತ್ತದೆಂಬ ಗ್ಯಾರಂಟಿಯೇನು ಇಲ್ಲ. ಬೆಕ್ಕಿನ ಈ ಹುಡುಕಾಟಕ್ಕೆ ಕೊನೆಯಿಲ್ಲ. ಈ ಮಧ್ಯೆ ಅದಕ್ಕೆ, ಮಲಗಲು ಸಮಯ ಇರಬೇಕೆಂದೇನೂ ಇಲ್ಲ.
ಇದೆಲ್ಲವನ್ನು ಗಮನಿಸಿದರೆ, ಈ ಬೆಕ್ಕು ಒಬ್ಬ ಸಂತನಿರಬಹುದೆಂದೆನಿಸುತ್ತದೆ. ಹಾಗಂತ, ಸಂತ-ತನ ಕಠಿಣವಾದ ಕೆಲಸ ಎಂದೇನೂ ಅಲ್ಲ. ಏಕಾಗ್ರತೆಯಿಂದ ಅನ್ವೇಷಣೆ ಮಾಡುವ ಯಾವನೂ ಜ್ಞಾನವನ್ನು ಪಡೆಯಬಲ್ಲ. ಒಳ್ಳೆಯ ಮುನಿ ಒಬ್ಬ ಸರಳ ಮನುಷ್ಯ. ಭೋಗದಲ್ಲಿ ಕೊಂಚ ಆಸಕ್ತಿಯಿರುವ, ಜಗತ್ತಿಗೆಲ್ಲ ಕಾರುಣ್ಯ ತೋರಬಲ್ಲ ಶಕ್ತಿಯಿರುವ ವ್ಯಕ್ತಿ. ಸಾರ್ಥಕತೆ ಪಡೆಯಲು ಕಷ್ಟ-ಕೋಟಲೆಯ ಪರ್ವತಗಳನ್ನೆಲ್ಲಾ ಏರಬೇಕಾದ ಅವಶ್ಯಕತೆಯಿಲ್ಲ ಎಂದು ತಿಳಿದವ. ಸಂತೋಷಕ್ಕಿಂತ “ನೆಮ್ಮದಿ” ಹೊಂದುವುದು ಸುಲಭ ಮತ್ತು ಅದಷ್ಟು ಸಾಕು ಎಂದು ಅರಿತವ.
ಸಂತೋಷವೆಂಬುದು, ದುರ್ಬಿಕ್ಷೆ ಮತ್ತು ಸುಭಿಕ್ಷೆಗಳ ಮಧ್ಯೆ ಹುಡುಕಬಹುದಾದ ಅತ್ಯಂತ ನಿಗೂಢ ಸಂಗತಿ. ಹಿಡಿಯಲು ಹೋದರೆ, ಅದು ಪತಂಗದಂತೆ ಹಾರಿಬಿಡುತ್ತದೆ. ಆದ್ದರಿಂದ, ಸಂತೋಷದ ಬೆನ್ನು ಹತ್ತಬಾರದು. ನಾವು ಚಂಚಲರಾಗದಿದ್ದರೆ ಅದು ವಾಪಾಸ್ಸು ಬಂದು ನಮ್ಮ ಮೈಮೇಲೆ ಕೂರಬಹುದು. ಆದರೆ, ಪದೇ-ಪದೇ ಅಂತಹ ಸಮಯ ಮರುಕಳಿಸುವುದಿಲ್ಲ. ಆದ್ದರಿಂದ, ಆ ಕ್ಷಣಗಳು ಬಂದಾಗ ತಲ್ಲೀನರಾಗಿ ಸವಿಯಬೇಕು.
ಪ್ರಕೃತಿ ನಿನ್ನ ಧರ್ಮವೇ? ಎಂದು ಇತ್ತೀಚೆಗೆ ಯಾರೋ ನನ್ನನ್ನು ಕೇಳಿದರು.
ಉತ್ತರಿಸುವುದು ಧಾಷ್ಠ್ರ್ಯದ ಮಾತಾಗುತ್ತದೆ. ಏಕೆಂದರೆ, ಪ್ರಕೃತಿ ನಮಗೆ ಯಾವ ಸಂಗತಿ ಅಥವಾ ವಸ್ತುವಿನ ಬಗ್ಗೆಯೂ ಭರವಸೆ ಕೊಡುವುದಿಲ್ಲ. ಅಂದರೆ ಪುನರ್ಜನ್ಮ, ಸತ್ಕಾರ್ಯಕ್ಕೆ ಪ್ರತಿಫಲ, ವೈರಿಗಳಿಂದ ರಕ್ಷಣೆ, ಮಕ್ಕಳು, ಸಂಪತ್ತು, ಸಂತೋಷ ಹಾಗೂ, ಮನುಷ್ಯ ಆಶೆಪಟ್ಟು ಪ್ರಾರ್ಥಿತಿಸುವ ಯಾವುದರ ಬಗ್ಗೆಯೂ ಭರವಸೆ ಕೊಡುವುದಿಲ್ಲ. ಆದರೆ, ಪ್ರಕೃತಿಗೆ ಹತ್ತಿರವಾಗಿ ಬದುಕುವುದರಿಂದ ನಾವು ಸಹನೆ ಮತ್ತು ತಾಳ್ಮೆಯ ಗುಣ ಕಲಿಯುತ್ತೇವೆ. ಆಗ, ಸುಲಭದಲ್ಲಿ ನಮ್ಮ ಆತ್ಮಶಕ್ತಿಯನ್ನು ಛಿದ್ರಗೊಳಿಸಲಾಗುವುದಿಲ್ಲ. ನಾವು ಮೆಚ್ಚಲು, ಪ್ರೀತಿಸಲು, ಬದುಕಲು ಮತ್ತು ಅರಿಯಲು ಪ್ರಕೃತಿಯಿದೆ. ಒಂದು ರೀತಿಯಲ್ಲಿ ಅದು – ಭೂಮಿ-ಸಮುದ್ರ-ಆಕಾಶಗಳ ಸಮೃದ್ಧಿ ಮತ್ತು ಔದಾರ್ಯಗಳನ್ನು, ನಮ್ಮ ಆಹಾರ, ನೀರು, ನಾವು ಉಸಿರಾಡುವ ಗಾಳಿ ಮತ್ತೂ, ಬೆಲೆ ಗೊತ್ತಿಲ್ಲದೆ ನಾವು ಲಘುವಾಗಿ ಕಾಣುವ – ಪ್ರತಿಯೊಂದನ್ನೂ ಕೊಡುತ್ತದೆ. ಆದ್ದರಿಂದ, ಪ್ರಕೃತಿಯೆಂಬುದು ನಮಗೆ ತಂತಾನೇ ದಕ್ಕಿದ ಬಹುಮಾನ!

ಕೊನೆ ಇಳಿಸುವ ಗಡಗಡೆ ಅಡಿಕೆ ತೋಟದಲ್ಲಿ ಸದ್ದುಮಾಡದೆ ಸಹಕರಿಸುತ್ತಿರುವ ಸರಳ ಯಂತ್ರ
ಆಧುನಿಕ ಆವಿಷ್ಕಾರಗಳು,ಯಾಂತ್ರಿಕತೆ ಇಲ್ಲದೆ ವ್ಯವಸಾಯ ಸುಲಭವಲ್ಲ ಎನ್ನುವ ವೇದನೆ ನಡುವೆ ರೈತರೇ ತಮ್ಮ ಅಗತ್ಯದ ಸಲಕರಣೆಗಳನ್ನು ತಯಾರಿಸಿಕೊಳ್ಳುತಿದ್ದಾರೆ. ಅಡಿಕೆ ತೆಗೆಯುವ, ಸುಲಿಯುವ, ಒಣಗಿಸುವ ಉಪಕರಣಗಳೊಂದಿಗೆ ಅಡಿಕೆಗೊನೆ ಇಳಿಸುವ ಉಪಕರಣವೊಂದು ಈಗ ಮಲೆನಾಡಿನ ತೋಟಗಳಲ್ಲಿ ಸದ್ದಿಲ್ಲದೆ ಕೆಲಸ ಮಾಡುತ್ತಿದೆ. ಹಿಂದೆ ಅಡಿಕೆ ತೆಗೆಯುವ ಕೊನೆಗೌಡ ಗೊನೆ ಕೊಯ್ದು ತನ್ನ ಬಾಲದಂಥ ಹಗ್ಗದ ಮೂಲಕ ನೇರ ಕೊನೆ ಇಳಿಸುತಿದ್ದ ಈಗ ಈ ಕಷ್ಟ ಕಡಿಮೆ ಮಾಡಲು ಮಲೆನಾಡಿನ ರೈತರು ಕೊನೆಗೌಡನ ಅಂಡಿನ ಕಟಕಮಣೆಗೆ ಗಡಗಡೆ ಅಳವಡಿಸಿ ಸುಲಭವಾಗಿ ಕೊನೆ ಇಳಿಸುವ ಸರಳ ತಂತ್ರಜ್ಞಾನಕ್ಕೆ ಮೊರೆಹೋಗಿದ್ದಾರೆ.
ವಾರದ ಓಡಾಟದಲ್ಲಿದ್ದ
ನಮಗೆ ಕಾನಗೋಡಿನ ಪ್ರಭಾಕರ ಡೋಂಗ್ರೆಯವರ ತೋಟದಲ್ಲಿ ಈ ಗಡಗಡಿಯ ಕೊನೆ ಇಳಿಸುವ ಸಾಧನ ಗಮನ ಸೆಳೆಯಿತು. ಅಡಿಕೆ ಕೊನೆ ಹಿಡಿಯುವ ಕಷ್ಟ ಕಡಿಮೆಮಾಡಲು ಮತ್ತು ತೆರೆ ಅಡಿಕೆ ಕಡಿಮೆ ಮಾಡಲು ಈ ಗಡಗಡೆಯ ಸಾಧನ ಬಳಸುತ್ತೇವೆ ಎಂದ ಅವರು.
ಈ ಯಂತ್ರವನ್ನು ಪರಿಚಯಿಸಿದವರು ಕುಶಾಲ್ ಹೆಗಡೆ ಎಂಬುದನ್ನು ಸೇರಿಸುವುದನ್ನು ಮರೆಯಲಿಲ್ಲ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮಂಜುಗುಣಿ ಜಾತ್ರೆ ಸಂಪನ್ನ, ಕದಂಬೋತ್ಸವ ೨೫ಕ್ಕೆ ಚಾಲನೆ,ಶಿವದರ್ಶನ! samajamukhi.net news round 12-04-25

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಿದ್ಧಾಪುರ ಆಯೋಜಿಸಿರುವ ಶಿವದರ್ಶನ ಪ್ರವಚನ ಮಾಲಿಕೆಹಾಗೂ ಭಗವದ್ಗೀತೆಯ ಸಂದೇಶ ʼದ್ವಾದಶ ಜ್ಯೋತಿರ್ಲಿಂಗಗಳ ದಿವ್ಯ ದರ್ಶನ ಕಾರ್ಯಕ್ರಮ ಏ.೧೪ ರ...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *