ನಂಬೂದರಿಗಳು,ಅರಸರು ಕಠಿಣ ಸಾಮಾಜಿಕ ನಿರ್ಬಂಧಗಳನ್ನು ಹೇರಿದ್ದ ೧೮-೧೯ ನೇ ಶತಮಾನದ ಕೇರಳದಲ್ಲಿ ನಂಗೇಲಿ ಎನ್ನುವ ಹೆಣ್ಣುಮಗಳೊಬ್ಬಳು ತನ್ನ ಸ್ತನಗಳನ್ನು ಕೊಯ್ದು ಕೊಡುವ ಮೂಲಕ ಸ್ತನ ತೆರಿಗೆಯನ್ನು ವಿರೋಧಿಸಿ ಆಳುವವರಿಗೆ ಎಚ್ಚರಿಕೆಯ ಸಂದೇಶ ನೀಡುತ್ತಾಳೆ.
ದೇವಾಲಯಗಳ ಪ್ರವೇಶ ಕೊನೆಯ ಮಾತು, ದೇವಸ್ಥಾನದ ಬೀದಿಯಲ್ಲಿ ನಡೆಯಲು ಅವಕಾಶವಿಲ್ಲದ ಕಠಿಣ ಧಾರ್ಮಿಕ, ಸಾಮಾಜಿಕ ನಿರ್ಬಂಧಗಳನ್ನು ವಿರೋಧಿಸಿ ವೈಕಂ ಚಳವಳಿ ಪ್ರಾರಂಭವಾಗುತ್ತದೆ. ಇಂಥ ಸಾಮಾಜಿಕ ಅನಿಷ್ಟಗಳ ಪಾಲನೆ, ಸಾಮಾಜಿಕ ಅಸಮಾನತೆಯ ಪೋಷಣೆ ನಡೆಯುತಿದ್ದ ಕೇರಳ ಒಂದು ಶತಮಾನದ ನಂತರ ದೇಶದ ಅಭಿವೃದ್ಧಿಹೊಂದಿದ ರಾಜ್ಯವಾಗಿ ಬದಲಾಗುತ್ತದೆ. ಶೈಕ್ಷಣಿಕ ಕ್ಷೇತ್ರ ಔಧ್ಯಮಿಕ ಕ್ಷೇತ್ರಗಳಲ್ಲಿ ಇಡೀ ದೇಶದಲ್ಲಿಯೇ ಮೊದಲ ಸ್ಥಾನಕ್ಕೇರುತ್ತದೆ. ಇವೆಲ್ಲಾ ಪವಾಡಗಳ ಹಿಂದಿನ ಶಕ್ತಿ ನಾರಾಯಣ ಗುರುಗಳು
ಬಾಲಕ ನಾಣು ೧೮೫೦ ರ ದಶಕದಲ್ಲಿ ಹುಟ್ಟಿ ತನ್ನ ಆರನೇ ವಯಸ್ಸಿನಲ್ಲಿ ತಮ್ಮ ಮನೆಯಲ್ಲಾದ ಸಾವಿನ ನಂತರ ಮೂರೇ ದಿನದಲ್ಲಿ ಸಾವಿನ ದುಖ: ಮರೆತ ಸಹಜ ಸ್ಥಿತಿಯನ್ನು ಕಂಡು ಆಶ್ಚರ್ಯಚಕಿತನಾಗುತ್ತಾನೆ. ಹುಟ್ಟುಸಾವಿನ ಕಾರಣ ಅರಿಯಬೇಕೆಂದು ಕಾಡಿನೊಳಗೆ ಪ್ರವೇಶಿಸುತ್ತಾನೆ ಧೇಟು ಬುದ್ದನಂತೆ! ಅದೇ ಸಿದ್ಧಾರ್ಥ ಗೌತಮ ಬುದ್ದನಂತೆ!
ರಹಸ್ಯ ಅಷ್ಟು ಸುಲಭಕ್ಕೆ ಬಗೆಹರಿಯಲು ಸಾಧ್ಯವೆ? ಶಿಕ್ಷಣದ ನಂತರ ಮನಸ್ಸು ಸಾಮಾಜಿಕ ಅಸಮಾನತೆ,ವೈಚಿತ್ರ್ಯಗಳತ್ತ ಚಿಂತಿವಾಗತೊಡುತ್ತದೆ. ಸಾಂಸಾರಿಕ ಬಂಧನದಲ್ಲಿ ಸಿಲುಕಿ ಈ ಗಹನ ವಿಚಾರಗಳಿಗೆ ಪರಿಹಾರ ಹುಡುಕಲು ಸಾಧ್ಯವಿಲ್ಲ ಎಂದು ತಿಳಿದು, ಮದುವೆ ಸಂಸಾರಗಳನ್ನು ತ್ಯಜಿಸಿ ಸನ್ಯಾಸಿಯಾಗಿ ಮತ್ತೆ ಅರಣ್ಯ ಪ್ರವೇಶಿಸಿ ಧಾನಸ್ಥನಾಗಿ ಕಾಡುಪ್ರಾಣಿಗಳ ಸಲುಗೆ ಸಂಪಾದಿಸುತ್ತಾನೆ!.
ಅಲ್ಲಿಂದ ಅಸಾಮಾನ್ಯವಾದುದೆಲ್ಲಾ ಘಟಿಸುತ್ತಾ ಅಂತಿಮವಾಗಿ ನಾರಾಯಣ ಗುರು ಎಂದು ಪ್ರಸಿದ್ಧರಾಗುತ್ತಾರೆ ಅವರೇ ನಾರಾಯಣ ಗುರುಗಳು.
ಹಾಗಾದರೆ ನಾರಾಯಣ ಗುರುಗಳ ಸಾಧನೆ ಏನು?
ಹೊಟ್ಟೆಗಿಲ್ಲದೆ ಪರಿತಪಿಸುವ ಬಡಜನರು ನೆಮ್ಮದಿಯಾಗಿ ಬದುಕುವಂತಾಗಲಿ ಎನ್ನುವ ಕಾಣ್ಕೆಯ ಬೆನ್ನುಹತ್ತಿದ ನಾರಾಯಣ ಗುರುಗಳು ಕೇರಳದ ಸಾಂಪ್ರದಾಯಿಕ ವೈದಿಕ ಕಟ್ಟುಪಾಡುಗಳು ಕಂದಾಚಾರಗಳ ವಿರುದ್ಧ ಶಾಂತಿಯುತವಾಗಿ ಸಮರ ಸಾರುತ್ತಾ ಧಾರ್ಮಿಕ ವಿಚಾರಗಳಿಂದ ಜನರ ಸ್ಥಿತಿ-ಸಾಮಾಜಿಕ ಪರಿಸ್ಥಿತಿ ಬದಲಾಯಿಸಬೇಕೆಂದು ಛಲತೊಟ್ಟು ಅರವ್ವಿಪುರಂ ಶಿವಗಿರಿ ಯಲ್ಲಿ ಶಿವನ ಲಿಂಗಸ್ಥಾಪನೆ ಮಾಡುತ್ತಾರೆ.
ಶೂದ್ರ ಈಳವ ಶಿವನನ್ನು ಭಜಿಸುವುದೇ ಎಂದು ಕ್ಷುದ್ರರಾದ ನಂಬೂದರಿಗಳು ನಾರಾಯಣ ಗುರು ವಿರುದ್ಧ ಸಂಘಟಿತರಾಗಿ ಪ್ರಶ್ನಿಸುತ್ತಾರೆ. ನಾನು ನಿಮ್ಮ ಶಿವನನ್ನು ಪ್ರತಿಷ್ಠಾಪಿಸುತ್ತಿಲ್ಲ ಈತ ನಮ್ಮವ ಈಳವ ಶಿವ, ಶೂದ್ರಶಿವ ಎಂದು ವಿರೋಧಿಗಳ ಬಾಯಿ ಮುಚ್ಚಿಸುತ್ತಾರೆ.
ಶಿವಲಿಂಗ, ಶಿವದೇವಾಲಯಗಳ ಮೂಲಕ ಪರ್ಯಾಯ ಧಾರ್ಮಿಕ ವ್ಯವಸ್ಥೆ ಪ್ರಾರಂಭಿಸುವ ನಾರಾಯಣಗುರುಗಳು ೬೦ ಕ್ಕೂ ಹೆಚ್ಚು ದೇವಾಲಯಗಳನ್ನು ಪ್ರಾರಂಭಿಸಿ ಅಲ್ಲಿ ಸ್ವಚ್ಚತೆ, ಜ್ಞಾನಪ್ರಸಾರದ ಗೃಂಥಾಲಯಗಳು, ಸಂವಾದಗಳನ್ನು ಏರ್ಪಡಿಸುತ್ತಾರೆ.
ಆರಂಭಿಕವಾಗಿ ಮೂರ್ತಿ ಪೂಜೆಯ ಮೂಲಕ ಜನರನ್ನು ಸೆಳೆದ ನಾರಾಯಣ ಗುರುಗಳು ನಂತರ ವಿದ್ಯಾದೇವತೆ ಸರಸ್ವತಿ ಕೊನೆಯ ದಿನಗಳಲ್ಲಿ ದೇವಾಲಯಗಳಲ್ಲಿ ಮೂರ್ತಿಯನ್ನಿಡದೆ ಕನ್ನಡಿ ಇಟ್ಟು ತನ್ನನ್ನು ತಾನೇ ಅರಿಯುವ ಅರಿವಿನ ದೀಪ ಹಚ್ಚುತ್ತಾರೆ.
ತಾವು ಪ್ರಾರಂಭಿಸುವ ದೇವಾಲಯಗಳಲ್ಲಿ ಸತ್ಯ, ದಯೆ, ಧರ್ಮ ಅನುಕಂಪ ಗಳೇ ದೇವರು ಎಂದು ಬರೆಸುವ ಗುರುಗಳು ಸರಳತೆ, ಧಾರ್ಮಿಕ ಸಮನ್ವಯ,ಅಂತರ್ಜಾತಿ ವಿವಾಹಗಳ ಮೂಲಕ ಸಾಮಾಜಿಕ ಕ್ರಾಂತಿಯನ್ನೇ ಮಾಡುತ್ತಾರೆ.
೧೯೧೨ ರ ಸುಮಾರಿಗೆ ಯೋಗಕೇಂದ್ರ, ಮಠಗಳನ್ನು ಪ್ರಾರಂಭಿಸುವ ನಾರಾಯಣ ಗುರುಗಳು ಇಲ್ಲಿ ಯಾವ ಸಾಂಪ್ರದಾಯಿಕ ವೈದಿಕ ಕರ್ಮಠ ಪೂಜೆಗೂ ಅವಕಾಶವಿಲ್ಲ ಇದು ಕೇವಲ ಜ್ಞಾನಾರ್ಜನೆಯ ಮಠವೇ ಹೊರತು ದೇವಾಲಯವಲ್ಲ ಎಂದು ಘೋಶಿಸುತ್ತಾರೆ.
ನಾರಾಯಣ ಗುರುಗಳು ಪ್ರಾರಂಭಿಸಿದ ಈ ಧಾರ್ಮಿಕ,ಸಾಮಾಜಿಕ,ಶೈಕ್ಷಣಿಕ ಸುಧಾರಣೆಗಳ ಜೊತೆಗೆ ಯೋಗ ಮತ್ತು ಔಧ್ಯೋಗಿಕ ಕೇಂದ್ರಗಳೂ ಸೇರಿಕೊಳ್ಳುತ್ತವೆ. ಶ್ರೀ ನಾರಾಯಣಧರ್ಮಪರಿಪಾಲನಾ ಯೋಗಂ ಪ್ರಾರಂಭಿಸುವ ಗುರುಗಳು ಕತ್ತಲೆಯಿಂದ ಬೆಳಕೆನೆಡೆಗೆ ಸಾಗುವುದೇ ವಿಕಾಸ ಎನ್ನುವ ವಿಚಾರ ಪ್ರತಿಪಾದಿಸುತ್ತಾರೆ. ಅವರ ತತ್ವ,ಸಿದ್ಧಾಂತ, ಗುರಿ, ಸಾಧನೆಗಳನ್ನು ಪ್ರಮುಖವಾಗಿ ೫ ವಿಭಾಗಗಳಾಗಿ ವಿಂಗಡಿಸಲಾಗಿದೆ.
ವಿದ್ಯೆಯಿಂದ ಸ್ವತಂತ್ರರಾಗಿ ಸಂಘಟನೆಯಿಂದ ಬಲಯುತರಾಗಿ ಎನ್ನುವ ವಿವೇಕ ನೀಡಿರುವ ಗುರುಗಳ ಸುಧಾರಣಾ ಚಳವಳಿ ಅವರ ಸಮಕಾಲೀನ ಢಾ ಪದ್ಮನಾಭ ಪಲ್ಪು ನೇತೃತ್ವದ ಸಾಮಾಜಿಕ ಜಾಗೃತಿ ಯಿಂದ ಮೊದಲ್ಗೊಳ್ಳುತ್ತದೆ. ಶೂದ್ರರಿಗೆ ಶಿಕ್ಷಣಕ್ಕೆ ಅವಕಾಶವಿಲ್ಲದ ತಿರವಾಂಕೂರು ಸಂಸ್ಥಾನದಿಂದ ಮದ್ರಾಸ್ ಗೆ ತೆರಳುವ ಡಾ. ಪದ್ಮನಾಭ ಪಲ್ಪು ವೈದ್ಯರಾಗಿ ಮೈಸೂರು ಸಂಸ್ಥಾನದಲ್ಲಿ ಸೇವೆ ಸಲ್ಲಿಸುತ್ತಲೇ ಕೇರಳದ ಸಾಮಾಜಿಕ ಪರಿಸ್ಥಿತಿಯ ಸುಧಾರಣೆಗೆ ಪಣತೊಡುತ್ತಾರೆ. ಒಬ್ಬ ಸೆಂದಿ ಉಳಿಸುವ ಮೂರ್ತೆದಾರ ತನ್ನ ಮಕ್ಕಳನ್ನು ಡಾಕ್ಟರ್, ಇಂಜಿನಿಯರ್ ಮಾಡಬೇಕೆಂದು ಕನಸು ಕಂಡಿದ್ದೇ ಪಲ್ಪು ಸಹೋದರರು ವೈದ್ಯರು, ಇಂಜಿನಿಯರುಗಳು ಆಗಲು ಸಾಧ್ಯವಾಗಿದ್ದು. ನಾರಾಯಣ ಗುರುಗಳ ಅನುಯಾಯಿಗಳೂ ಸಮಕಾಲೀನರೂ ಆಗಿದ್ದ ಪಲ್ಪು ಸಹೋದರರಲ್ಲೊಬ್ಬರು ಆಗಿನ ಬೆಂಗಳೂರು ನಗರದ ಒಳಚರಂಡಿ ನೀಲನಕ್ಷೆ ತಯಾರಿಸಿದವರು ಎನ್ನುವುದು ಹೆಗ್ಗಳಿಕೆ.
ಡಾ. ಪದ್ಮನಾಭ ಪಲ್ಪು ಸಾಮಾಜಿಕ ಜಾಗೃತಿ ಕಾರ್ಯ ಮಾಡುತಿದ್ದಾಗ ಮೂಢನಂಬಿಕೆ, ಕಂದಾಚಾರಗಳೇ ಶೂದ್ರ ಏಳಿಗೆಗೆ ಅಡ್ಡಯಾಗಿರುವ ಶಾಪಗಳು ಎಂದರಿತು. ಶೋಷಣೆ, ದಬ್ಬಾಳಿಕೆಗೆ ಪರೋಕ್ಷ ಕಾರಣಗಳಾದ ದುಂದುವೆಚ್ಚಕ್ಕೆ ಪ್ರತಿಯಾಗಿ ಸರಳವಿವಾಹ, ಅಂತರ್ ಜಾತಿ ವಿವಾಹ, ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಮೂಲಕ ಗುರುಗಳು ಕೇರಳದಲ್ಲಿ ಶಿವನ ದೇವಾಲಯಗಳ ಮೂಲಕವೇ ಜನಮಾನಸದಲ್ಲಿ ವಿದ್ಯೆ, ಜ್ಷಾನ, ಉದ್ಯೋಗ, ಔಧ್ಯೋಗೀಕರಣಗಳ ಮಹತ್ವ ಸಾರುತ್ತಾ ಪೂಜಾ ವಿಧಾನ, ತಾಂತ್ರಿಕ ಶಿಕ್ಷಣ, ಯೋಗ, ಔದ್ಯೋಗೀಕರಣಗಳ ಮೂಲಕ ಕೆಳವರ್ಗದ ಜನರನ್ನು ಸಬಲೀಕರಿಸುತ್ತಾ ನೇರ ಸಮಾಜ ಸುಧಾರಣೆಯನ್ನೇ ಪ್ರಾರಂಭಿಸುತ್ತಾರೆ.
ಮೂರನೇ ಹಂತದಲ್ಲಿ ಗುರುಗಳ ಇನ್ನೊಬ್ಬ ಅನುಯಾಯಿ ಕುಮಾರನ್ ಆಶಾನ್ ನೇತೃತ್ವದಲ್ಲಿ ಶಾಲಾ ಪ್ರವೇಶ ಚಳವಳಿ ಪ್ರಾರಂಭವಾಗುತ್ತದೆ. ನಾರಾಯಣ ಗುರುಗಳು ನೇರ ದೇವಸ್ಥಾನ ಪ್ರವೇಶ ಮಾಡದೆ ಪರ್ಯಾಯ ಶಿವನನ್ನು ಪ್ರತಿಷ್ಠಾಪಿಸಿದಾಗ ವಿರೋಧಿಸಿದ ನಂಬೂದರಿಗಳು ಶಿವ ಪ್ರತಿಮೆ ಸ್ಥಾಪನೆಗಿಂತ ಉಗ್ರವಾಗಿ ಈಳವರು, ಶೂದ್ರರ ಶಾಲಾ ಪ್ರವೇಶಕ್ಕೆ ತಡೆ ಒಡ್ಡಿ! ಪ್ರತಿಭಟಿಸುತ್ತಾರೆ. ನಾರಾಯಣ ಗುರುಗಳ ಶಾಂತಿಯುತ ಹೋರಾಟದ ಫಲವಾಗಿ ತಿರವಾಂಕೂರಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಶೂದ್ರರ ಪ್ರವೇಶ ಮತ್ತು ಶೂದ್ರರಿಗೆ ಶಾಲೆ ಪ್ರಾರಂಭಕ್ಕೆ ಪರವಾನಗಿ ದೊರೆಯತೊಡಗುತ್ತದೆ.