ನೀತಿವಂತ ನಾಯಕರಿಲ್ಲದ ವೆನೆಜುವೆಲಾ ನೆಲಕಚ್ಚಿದ ರೀತಿ -ಡಿ. ರಾಮಪ್ಪ ಸಿರಿವಂತೆ, (ಅಂಕೋಲಾ)

ಪ್ರಪಂಚದಲ್ಲಿಯೇ ಅತೀ ಹೆಚ್ಚು ಪೆಟ್ರೋಲಿಯಂ ಮತ್ತು ಖನಿಜಗಳಿರುವ ಆದರೆ ಇಂದು, ಊಟಕ್ಕೂ ಗತಿಯಿಲ್ಲದ ಅತ್ಯಂತ ಬಡ ದೇಶ ವೆನೆಜುವೆಲಾ!
1940ರ ದಶಕದವರೆಗೂ ಕೃಷಿ ಮತ್ತು ಮೀನುಗಾರಿಕೆ ನೆಚ್ಚಿಕೊಂಡು ಸ್ವಲ್ಪವಾದರೂ ನೆಮ್ಮದಿಯಿಂದಿದ್ದ ನಾಡಿಗೆ, ಭೂಮಿಯಲ್ಲಿ ಅಡಗಿದ್ದ ಪೆಟ್ರೋಕೆಮಿಕಲ್ಸ್ ಸಿಕ್ಕ ಕೂಡಲೆ, ಸಂಪದ್ಭರಿತ ಹಾಗೂ ಐಶಾರಾಮಿ ದೇಶವಾಗಿ ಒಮ್ಮೆಲೇ ಪುಟಿದೆದ್ದಿತು. ರಾಷ್ಟ್ರನಾಯಕರೆಂದು ದೇಶಸೇವೆ ಮಾಡುವವರ ಸ್ವಾರ್ಥ, ಗುಂಪುಗಾರಿಕೆ, ರಾಜಕೀಯ ಎಡಬಿಡಂಗಿತನ ಮತ್ತು ತಪ್ಪು ಆರ್ಥಿಕ ನೀತಿಗಳು ಹೇಗೆ ಒಂದು ದೇಶವನ್ನು ತಿರುಗಿಬಾರದಂತಹ ಅಧೋಗತಿಗೆ ತಳ್ಳಬಹುದು ಎಂಬುದಕ್ಕೆ ಅತ್ಯುತ್ತಮ ಉದಾಹರಣೆ ಈ ವೆನೆಜುವೆಲಾ!
ಬೋಲಿವೇರಿಯನ್ ರಿಪಬ್ಲಿಕ್ ಆಫ್ ವೆನೆಜುವೆಲಾ ಎಂದು ಕರೆಯಲ್ಪಡುವ, ದಕ್ಷಿಣ ಅಮೇರಿಕಾ ಖಂಡದ, ಕೆರೇಬಿಯನ್ ಕರಾವಳಿಗೆ ತಾಗಿಕೊಂಡಿರುವ ವೆನೆಜುವೆಲಾ, 9,16,000 ಚದರ ಕಿ. ಮೀ ವಿಸ್ತೀರ್ಣದ, 290 ಲಕ್ಷ (2018) ಜನರಿರುವ ಒಂದು ಚಿಕ್ಕ ದೇಶ. ವಿಸ್ತೀರ್ಣದಲ್ಲಿ ನಮ್ಮ ಕರ್ನಾಟಕಕ್ಕಿಂತ ಹತ್ತಿರ-ಹತ್ತಿರ 5 ಪಟ್ಟು ದೊಡ್ಡದಿದ್ದರೂ ಜನಸಂಖ್ಯೆ ಮಾತ್ರ ಕರ್ನಾಟಕದ ಅರ್ಧಕ್ಕಿಂತ ಕಡಿಮೆ. 1522 ರಲ್ಲಿ ಸ್ಪೈನ್ ದೇಶದ ವಸಾಹತಾದ ವೆನೆಜುವೆಲಾ, ಮೂರು ನೂರು ವರ್ಷಗಳ ನಂತರ ಅಂದರೆ, 1811ರಲ್ಲಿ ಸ್ವಾತಂತ್ರ್ಯ ಘೋಷಿಸಿಕೊಂಡಿತು. ಆದರೆ 20ನೇ ಶತಮಾನದ ಮಧ್ಯಭಾಗದವರೆಗೆ, ಸ್ಥಳೀಯ ಪಾಳೇಗಾರರು ಮತ್ತು, ನಿರಂಕುಶ ಪ್ರಭುತ್ವಗಳಿಂದ ರಾಜಕೀಯ ಪ್ರಕ್ಷುಬ್ದತೆಯನ್ನೇ ಅನುಭವಿಸಿತು.
1958ರ ನಂತರ, ವೆನೆಜುವೆಲಾ ಪ್ರಜಾಪ್ರಭುತ್ವವಾದಿ ಸರ್ಕಾರಗಳನ್ನೆ ಪಡೆಯುತ್ತಾ ಬಂದಿದೆಯಾದರೂ ನೆಮ್ಮದಿ ಪಡೆದಿಲ್ಲ!
ವ್ಯಾಪಕ ಜೀವವೈವಿಧ್ಯ ಹೊಂದಿರುವ ವೆನೆಜುವೆಲಾದ ಪಶ್ಚಿಮಕ್ಕೆ ಆಂಡಿಸ್ ಪರ್ವತವಿದ್ದು, ವಿಸ್ತಾರವಾದ ಲಾನೋಸ್ ಬಯಲು ಪ್ರದೇಶದ ಮೂಲಕ ಹಾದುಹೋಗುವ ಅಮೇಜಾನ್ ಜಲಾನಯನ ಪ್ರದೇಶದ ಮಳೆ-ಕಾಡು ದಕ್ಷಿಣಕ್ಕೆ ಮತ್ತು, ಒರಿನೋಕೊ ನದಿಯ ಮುಖಜಭೂಮಿ ಪೂರ್ವಕ್ಕಿದೆ. ದೇಶದ ನಾಲ್ಕನೇ ಒಂದು ಭಾಗದಷ್ಟು ಜಮೀನು ಕೃಷಿಯೊಗ್ಯವಿದ್ದು, ಕೃಷಿ, ಅರಣ್ಯ ಉತ್ಪನ್ನಗಳ ತಯಾರಿಕೆ ಮತ್ತು, ಮೀನುಗಾರಿಕೆ ಮಾಡಿಕೊಂಡು ವೆನೆಜುವೆಲಾ, ಕಾಫಿ ಹಾಗು ಕೋಕೋ ರಪ್ತು ಮಾಡುತಿತ್ತು. 1940ರ ದಶಕದವರೆಗೂ – ಪೆಟ್ರೋಲಿಯಂ ಸಿಗುವವರೆಗೂ – ಇವು (ಕೃಷಿ, ಅರಣ್ಯ ಉತ್ಪನ್ನಗಳು ಮತ್ತು ಮೀನುಗಾರಿಕೆ) 60% ಗಿಂತ ಹೆಚ್ಚು ಜನರ ಮುಖ್ಯ ಕಸುಬಾಗಿದ್ದವು. ಹಾಗೂ, ಇವುಗಳ ಪಾಲು ದೇಶೀಯ ಒಟ್ಟು ಉತ್ಪನ್ನದ ಅರ್ಧಕ್ಕಿಂತ ಹೆಚ್ಚಾಗಿತ್ತು. ಆದರೆ ಇಂದು ಕೃಷಿ, ಕೇವಲ 10% ಕಾರ್ಮಿಕರನ್ನು ತೊಡಗಿಸಿಕೊಂಡು, ರಾಷ್ಟ್ರೀಯ ಉತ್ಪನ್ನದ 3% ಮಾತ್ರ ಕೊಡುತ್ತಿರುವ ದುರ್ಬಲ ವಲಯವಾಗಿದೆ. 1997ರ ಒಂದು ಸರ್ವೆ ಪ್ರಕಾರ, 84 ಲಕ್ಷ ಎಕರೆ ಕೃಷಿ ಯೋಗ್ಯ ಜಮೀನಿದ್ದರೂ ಕೇವಲ 17 ಲಕ್ಷ ಎಕರೆಯಷ್ಟು ಜಮೀನು ಮಾತ್ರ ಉಳುಮೆಯಾಗುತ್ತಿದೆ. ಮುಖ್ಯವಾಗಿ, ಕೃಷಿಯೋಗ್ಯ ಜಮೀನಿನ 70% ಹಿಡುವಳಿ ಕೇವಲ 3% ಪಟ್ಟಭದ್ರರ ಕೈಯಲ್ಲಿದೆ. ಎಡಬಿಡಂಗಿ ಜಮೀನು ವಿತರಣೆ ಮತ್ತೂ, ತೈಲದ ಮೇಲೆ ಹೆಚ್ಚುಹೆಚ್ಚಾದ ಅವಲಂಬನೆ, ಜನರ ಮುಖ್ಯ ಕಸುಬಾದ ಸಾಗುವಳಿಯನ್ನು ಅವಗಣಿಸಿ ಜೀವನ ನಿಕೃಷ್ಠ ಸ್ಥಿತಿಗೆ ಬರಲು ಕಾರಣವಾಗಿದೆ.
1940ರ ನಂತರ ತೈಲೋತ್ಪನ್ನ ಮತ್ತು ಗಣಿಗಾರಿಕೆ ಪ್ರಾರಂಭವಾಗಿ ಇಂದು 80% ಗಿಂತ ಹೆಚ್ಚು ಆದಾಯ ಪೆಟ್ರೋಲಿಯಂ ರಪ್ತಿನಿಂದ ಬರುತ್ತಿದೆ. ವೆನೆಜುವೆಲಾ ಒಪೆಕ್‍ನ ಸ್ಥಾಪಕ ಸದಸ್ಯ ರಾಷ್ಟ್ರ ಕೂಡ. ಖನಿಜ ಮತ್ತು ತೈಲಕ್ಕಾಗಿ, ಪ್ರತಿವರ್ಷ 7.10 ಲಕ್ಷ ಎಕರೆಯಂತೆ, 1990 ರಿಂದ 2005 ರ 15 ವರ್ಷಗಳ ಮಧ್ಯೆ, 106 ಲಕ್ಷ ಎಕರೆ ಕಾಡನ್ನು ಕಡಿದು ಕಳೆದುಕೊಂಡಿದೆ.
1940-50 ರ ದಶಕದ ಪೆಟ್ರೋಲಿಯಂ ರಪ್ತಿನಿಂದ ಸಮೃದ್ಧಗೊಂಡ ದೇಶ, ಅದನ್ನು ಶಾಶ್ವತವೆಂಬಂತೆ ಬಳಸತೊಡಗಿತು. ಕೃಷಿಯನ್ನು ಬದಿಗೊತ್ತಿತು. ಕೈಗಾರಿಕೆಗೆ ಬೇಕಾದ ಕಚ್ಚಾ ವಸ್ತುಗಳು ಸಿಕ್ಕುತ್ತಿದ್ದರೂ ವ್ಯವಸ್ಥಿತವಾಗಿ ವಿಸ್ತರಿಸಲಿಲ್ಲ. ಸರ್ಕಾರಿ ಸ್ವೊತ್ತಾದ ಪೆಟ್ರೋಲಿಯಂ ರಪ್ತಿನಿಂದ ಬಂದ ಹಣವನ್ನು ಸಾರ್ವಜನಿಕ ಅಭಿವೃದ್ಧಿಯ ಹೆಸರಲ್ಲಿ, ಸ್ವಾರ್ಥ ಮತ್ತು ರಾಜಕೀಯ ವಿರೋಧವನ್ನು ಬಗ್ಗುಬಡಿಯಲು ಎಗ್ಗಿಲ್ಲದೆ ಬಳಸಲಾಯಿತು. ಜನರಿಗೆ ಸಬ್ಸಿಡಿ ದರದಲ್ಲಿ ಪೆಟ್ರೋಲ್ ಅಲ್ಲದೇ ಜೀವನಾವಶ್ಯಕ ವಸ್ತುಗಳನ್ನು ಕೊಡಲಾಯಿತು. ಇದು 1980ರ ದಶಕದವರೆಗೆ ನಡೆಯಿತು. 1980ರ ದಶಕದ ಆಯಿಲ್ ಗ್ಲಟ್ ವiತ್ತು ನಂತರದ ಕೊಲ್ಲಿ ಯುದ್ಧ, ವೆನೆಜುವೆಲಾದ ಆರ್ಥಿಕತೆಯನ್ನು ದುರ್ಬಲ ಮಾಡಿತು.
ತೈಲ ರಪ್ತಿನ ಹಣ ಕಡಿಮೆಯಾಗಿ ಹೊರದೇಶದ ಸಾಲ ಮತ್ತು ಹಣದುಬ್ಬರ ತೀವ್ರವಾಗಿ ಏರಿತು. 2000ನೇ ಇಸವಿಯಿಂದ ತೈಲಬೆಲೆ ಹೆಚ್ಚಾಗತೊಡಗಿದಂತೆ, ವೆನೆಜುವೆಲಾ ಹೊರದೇಶದ ಸಾಲ ಮತ್ತು ಹಣದುಬ್ಬರ ಮರೆತು, ಅಗ್ಗದ ಜನಪ್ರಿಯ ಕಾರ್ಯಕ್ರಮಗಳಿಗೆ ಹಣ ವಿನಿಯೋಗಿಸತೊಡಗಿತು. ಇದು ದೇಶದ ಆರ್ಥಿಕತೆಯನ್ನು ಮತ್ತೆ ತಿರುಗಿಬರಲಾರದ ಅಸ್ಥಿರತೆಯತ್ತ ನೂಕಿತು. ಆಂತರಿಕ ಉತ್ಪನ್ನಗಳಿಲ್ಲದೆ ಜೀವನಾವಶ್ಯಕ ವಸ್ತುಗಳ ಬೆಲೆ ಗಗನಕ್ಕೇರಿತು. ನಿರುದ್ಯೋಗ, ಬಡತನ, ಹಸಿವು, ರೋಗಗಳು ಮತ್ತು ಅಪರಾಧಗಳು ತೀವ್ರವಾಗಿ ಏರಿ, 2017ರ ಹೊತ್ತಿಗೆ ಕನಿಷ್ಠ 30 ಲಕ್ಷಕ್ಕಿಂತ ಹೆಚ್ಚು ಜನ ದೇಶ ತೊರೆದರು. ಹಣದುಬ್ಬರ ತೀವ್ರವಾಗಿ ಏರತೊಡಗಿ, 2019ರ ಹೊತ್ತಿಗೆ ಒಂದು ಲಕ್ಷ ಪಟ್ಟು ಹೆಚ್ಚಾಯಿತು!
ಈ ಮಧ್ಯೆ, ವೆನೆಜುವೆಲಾದ ಅಂತಾರಾಷ್ಟ್ರೀಯ ಮೀಸಲು ನಿಧಿಯ 60% ಭಾಗ ಚಿನ್ನದ ರೂಪದಲ್ಲಿತ್ತು. ಅದು 11 ಬಿಲಿಯನ್ ಡಾಲರ್ ಅಂದರೆ ಇಂದಿನ 82000 ಕೋಟಿ ರೂಪಾಯಿಗೆ ಸಮನಾಗಿತ್ತು. 2011ರ ಹೊತ್ತಿಗೆ, ಅದನ್ನು ವಾಪಸ್ಸು ತರಿಸಿಕೊಂಡ ವೆನೆಜುವೆಲಾ, ಸರ್ಕಾರಿ ಕೃಪಾಪೋಶಿತ ಕಾರ್ಯಕ್ರಮಗಳಿಗೆ ಉಪಯೊಗಿಸಿ 2013ರ ಹೊತ್ತಿಗೆ ಪೂರ್ತಿ ಖಾಲಿಮಾಡಿತು. ಇದು ಸಾಲದೆಂಬಂತೆ, ಸರ್ಕಾರಿ ಕಂಪನಿಗಳು ಹೊರದೇಶಗಳಲ್ಲಿ ಇಟ್ಟ ಡಾಲರ್ ಮೀಸಲನ್ನೂ ತರಿಸಿ ಖರ್ಚು ಮಾಡಿತು.
ಈ ಎಲ್ಲಾ ಸಮಸ್ಯೆಗಳ ನಡುವೆ – ಉರಿಯುತ್ತಿರುವ ಮನೆಯಲ್ಲಿ ಹಿರಿದು ತಿನ್ನುವುದೇ ಜಾಣತನ ಎಂಬಂತೆ – ಅಮೇರಿಕಾ, ರಷ್ಯಾ ಮತ್ತು, ಚೀನಾ ದೇಶಗಳು ತಮ್ಮ ಸ್ವಾರ್ಥ ಸಾಧನೆಗೆ ವೆನೆಜುವೆಲಾವನ್ನು ಬಳಸಿಕೊಳ್ಳುತ್ತಿವೆ.

ಸ್ವಾರ್ಥ ಮತ್ತು ಅಧಿಕಾರ ಮೋಹದ ರಾಜಕಾರಣಿಗಳು ಇಂದು ವೆನೆಜುವೆಲಾವನ್ನು ಈ ದುಸ್ಥಿತಿಗೆ ತಂದು ನಿಲ್ಲಿಸಿದ್ದಾರೆ. ವಾಸ್ತವದ ಪ್ರಜ್ಞೆಯಿಲ್ಲದೆ ರಾಜಕೀಯ ನಾಯಕರ ಸಮ್ಮೋಹಿನಿಯಲ್ಲಿ ವಿಸ್ಮೃತಿಗೆ ಒಳಗಾದ ಜನ ತಲೆಮೇಲೆ ಕೈಹೊತ್ತು ಆಕಾಶ ನೋಡುತ್ತಿದ್ದಾರೆ.
-0-

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *