ಪರಿಸರ ಕಾರ್ಯಕರ್ತ ಶಿವಾನಂದ ಕಳವೆಯವರೊಂದಿಗಿನ ಸಂದರ್ಶನ

ಪರಿಸರ ಕಾರ್ಯಕರ್ತ, ಬರಹಗಾರ, ಸೂಕ್ಷ್ಮ ವಿಚಾರಗಳ ಸಂಶೋಧಕ, ಅಲೆಮಾರಿ ಹೀಗೆ ಬಹುಮುಖಿ ಆಸಕ್ತಿ, ಅಭಿರುಚಿಗಳ ಗ್ರಾಮಜೀವಿ ಶಿವಾನಂದ ಕಳವೆ, ಪತ್ರಿಕೆಗಳಲ್ಲಿ ನುಡಿಚಿತ್ರ ಬರವಣಿಗೆ ಪ್ರಾರಂಭಿಸಿ ಕರ್ನಾಟಕ ಪರಿಸರ ಪತ್ರಿಕೋದ್ಯಮ ಪುರಸ್ಕಾರಕ್ಕೆ ಪಾತ್ರರಾಗಿರುವ ಇವರು ಪರಿಸರ, ಕೃಷಿಯ ಬಗ್ಗೆ ಬರೆಯುತ್ತಲೇ ಪ್ರಯೋಗಕ್ಕಿಳಿದವರು. ಮಣ್ಣು, ಕೃಷಿ, ಹುಲ್ಲು,ಕಾಡು,ಪರಿಸರ, ನದಿ,ಪ್ರಾಣಿ ಹೀಗೆ ಅನೇಕ ವಿಚಾರಗಳ ಮೇಲೆ ಅಧ್ಯಯನಶೀಲ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಅನಂತ ಭಟ್ಟನ ಅಪ್ಪೆಮಿಡಿ ಬಗ್ಗೆ ಬರೆದವರು ಮಲೆನಾಡು, ಕರಾವಳಿಯ ವಿಶಿಷ್ಟ 450 ಅಪ್ಪೆಮಿಡಿ ಪ್ರಭೇಗಳನ್ನು ಸಂಶೋಧಿಸಿ, ದಾಖಲೀಕರಣ ಮಾಡಿದರು.
ಮಳೆಕೊಯ್ಲು, ನೀರಿಂಗಿಸುವಿಕೆಯ ಕಾರ್ಯಕರ್ತ, ಸಂಪನ್ಮೂಲ ವ್ಯಕ್ತಿಯಾಗಿ ಜಲಕೊಯ್ಲನ್ನು ಭೋದಿಸಿ, ಅಂತರ್ಜಲ ವೃದ್ಧಿಯ ಫಲ ಸಿದ್ಧಿಸಿದವರು. ರಾಜ್ಯದ ಪ್ರಮುಖ ಕೃಷಿ ಮತ್ತು ಪರಿಸರ ತಜ್ಞರಲ್ಲಿ ಒಬ್ಬರಾಗಿರುವ ಶಿವಾನಂದ ಕಳವೆ ಜೀವವೈವಿಧ್ಯತೆಯ ಮೇಲೆ ಸಾಧನೆ ಮಾಡಿದ ಪ್ರಮುಖ ಸಂಪನ್ಮೂಲ ವ್ಯಕ್ತಿ.
ದೇಶಿ ಕಲ್ಫನೆಯೆಂದರೆ ಸುಸ್ಥಿರ ಅಭಿವೃದ್ಧಿಯ ಸಹಜ ಕಲ್ಫನೆ. ಅದು ಈ ನೆಲ-ಜಲದೊಂದಿಗೆ ಬೆರೆತಿರುವ ಲಾಗಾಯ್ತಿನ ಜೀವಪರ ಚಿಂತನೆ. ಅಭಿವೃದ್ಧಿ ಎಲ್ಲದನ್ನೂ ಎಲ್ಲರನ್ನೂ ಒಳಗೊಂಡು ಆಗಬೇಕು. ಆದರೆ ಸರ್ಕಾರ ಮತ್ತು ಆಧುನಿಕ ಸರ್ಕಾರೇತರ ವ್ಯವಸ್ಥೆ ಈ ಸಹಜತೆಯನ್ನೇ ಕೆಡಿಸಿದೆ. ಆಧುನಿಕತೆ, ಅಭಿವೃದ್ಧಿ ಹೆಸರಲ್ಲಿ ನಮ್ಮ ಅಸ್ಮಿತೆ, ಅನನ್ಯತೆ ಕಳೆಯುತ್ತಿದೆ ಎನ್ನುವ ನೋವು ನೀಗಲು ನಾವು ಕಾಡುಜ್ಞಾನದ ಮೊರೆಹೋಗಬೇಕು ಎನ್ನುವ ಶಿವಾನಂದ ಕಾಡೆ ನಾಡಿನ, ಉಸಿರು ಎನ್ನುತ್ತಾರೆ.

ಕಳವೆ ಎನ್ನುವ ಶಿರಸಿಯ ಗ್ರಾಮದೊಂದಿಗೆ ತನ್ನನ್ನು ಜಗತ್ತಿಗೆ ತೆರೆದುಕೊಂಡಿರುವ ಕಾನ್ಮನೆಯ ಸಹಜ, ಸರಳಜೀವಿಯೊಂದಿಗಿನ ಸಂದರ್ಶನ ಇಲ್ಲಿದೆ.

ಸಂದರ್ಶಕ- ಕನ್ನೇಶ್ ಕೋಲಶಿರ್ಸಿ, ಸಿದ್ಧಾಪುರ (ಉ.ಕ.)

ಈಗ ಏನ್ ಮಾಡ್ತಾ ಇದ್ದೀರಾ?

ಮಳೆಗಾಲ ನನಗೆ ಓದಿನ ಕಾಲ. ಸ್ಫಲ್ಫ ಓದುತ್ತಾ, ಪರಿಸರದ ವೈವಿಧ್ಯ ಸವಿಯುತ್ತಾ ಹೊಸತೇನನ್ನಾದರೂ ಮಾಡಬಹುದೆ? ಕಲಿಯಬಹುದೆ? ಎಂದು ಯೋಚಿಸಲು ಮಳೆಗಾಲವೇ ಪ್ರಶಕ್ತ. ಹಾಗಾಗಿ ದಿನನಿತ್ಯದ ಕೃಷಿ, ಹವ್ಯಾಸ, ಅಭ್ಯಾಸಗಳೊಂದಿಗೆ ಸ್ವಲ್ಫ ವಿಶ್ರಾಂತಿಯಲ್ಲಿದ್ದೇನೆ.

ಓದೇ ನಿಮ್ಮನ್ನು ರೂಪಿಸಿದ್ದಲ್ವಾ?

-ವಾಸ್ತವವೇನೆಂದರೆ, ಬಿಕಾಂ ಓದಿನ ನಂತರ ಕೆಲಸಕ್ಕೆಂದು ಊರುಬಿಟ್ಟೆ. ಸದಾ ಅಲೆಮಾರಿಯಾದ ನನಗೆ ಕೆಲಸ, ಆ ಅನಪೇಕ್ಷಿತ ಒತ್ತಡ. ಒಂಥರಾ ಜೀವನಶೈಲಿ ಇವೆಲ್ಲಾ ಒಗ್ಗದೆ ಊರಿಗೆ ಬಂದೆ.
ನನ್ನಿಷ್ಟದ ಕೆಲಸ ಅಲೆದಾಟ. ಕಾಡು, ಮೇಡೆನ್ನದೆ ನಗರದಿಂದ ದೂರದೂರ ನಡೆದೆ. ಹವ್ಯಾಸ, ಅನಿವಾರ್ಯತೆ, ಅವಶ್ಯಕತೆ ನನ್ನನ್ನು ಪರಿಸರದೊಂದಿಗೆ ಸೇರಿಸಿಬಿಟ್ಟವು. ಬರೆದದ್ದು, ಅನುಭವಿಸಿದ್ದು ಕಾರ್ಯರೂಪಕ್ಕೆ ತರಬೇಕಾಗಿತ್ತು. ಸುತ್ತಮುತ್ತಲಿನವರ ಸಹಕಾರ! ದಿಂದ
ಪ್ರಯೋಗಕ್ಕಿಳಿದೆ.

ಪತ್ರಕರ್ತರಾದ್ರಿ?

ಹೌದು, ನಾನು ಕತೆ ಬರೆದೆ. ಅದಕ್ಕೆ ನ್ಯಾಯ ಒದಗಿಸಿಲ್ಲ,
ಪತ್ರಕರ್ತನಾದೆ, ಲೇಖನ ಬರೆದೆ. ಅವ್ಯಾವೂ ನನ್ನ, ವೃತ್ತಿ, ಪೃವೃತ್ತಿಗಳಲ್ಲ. ನನ್ನ ಅಭ್ಯಾಸ, ಹವ್ಯಾಸಗಳ ಕಾರಣಕ್ಕೆ ಜನ ಕರೆದರು. ಭಾಷಣ ಮಾಡಿದೆ. ಪರೋಕ್ಷವಾಗಿ ಟೀಕೆ-ವಿಮರ್ಶೆಗಳು ಬಂದವು.
ವಾಸ್ತವದಲ್ಲಿ ಅವೇ ನನ್ನನ್ನು ರೂಪಿಸಿದವು, ಬೆಳೆಸಿದವು. ಅಭಿರುಚಿ, ಆಸಕ್ತಿಗಳ ಫಲವಾಗಿ ಸಂಪನ್ಮೂಲ ವ್ಯಕ್ತಿಯೊಬ್ಬರ ಬದಲಿ ಅತಿಥಿಯಾಗಿ ಹೋಗಿದ್ದಾಗ, ಯಲ್ಲಾಪುರ ಬಿಸ್ಗೋಡಿನ ಕಾರ್ಯಕ್ರಮದಲ್ಲಿ ಪ್ರಾಯೋಗಿಕವಾಗಿಯಾದರೂ ನೀವೇನು ಮಾಡದ್ದೀರಿ? ಎನ್ನುವ ಪ್ರಶ್ನೆ ಬಂತು. ವೈಯಕ್ತಿಕವಾಗಿ ನಾವು ತೋಟಕ್ಕೆ ನೀರಿನ ಕೊರತೆ, ತೊಂದರೆ ಅನುಭವಿಸಿದೆವು. ಈ ಅನುಭವ, ಆಸಕ್ತಿ, ಹುಡುಕಾಟದ ಫಲ ನೀರಿನ ರಚನೆ ಬಗ್ಗೆ ಅಧ್ಯಯನಕ್ಕೆ ತೊಡಗಿದೆ. ಮಲೆನಾಡು, ಬಯಲುಸೀಮೆ, ಅರೆಮಲೆನಾಡಿನ ಪ್ರದೇಶ, ವ್ಯಕ್ತಿ, ಅನುಭವಗಳನ್ನು ಕೇಳಿದೆ. ಚಿತ್ರದುರ್ಗದಲ್ಲಿ ಕಾಲುವೆಯಲ್ಲಿ ಈಜಾಡಿದ ಅನುಭವ ಹೇಳಿದ ವ್ಯಕ್ತಿಯಂಥ ಅನೇಕ ಹಿರಿಯರನ್ನು ಕಂಡೆ. ಅವರೊಂದಿಗಿನ ಕಲಿಕೆಯ ಅನುಭವದಿಂದ ನೀರು, ನದಿ, ಕೆರೆಗಳತ್ತ ಕೇಂದ್ರೀಕರಿಸಿದೆ. ಪ್ರಯೋಗ ಮಾಡಿ ಯಶಸ್ವಿಯಾದೆ. ಗುಡ್ಡದ ಕೆರೆಗಳಿಂದ ನಮ್ಮೂರ ತೋಟಕ್ಕೆ ನಿರಂತರ ನೀರು ಬಂತು. ಅದರಿಂದ ಅಸಕ್ತಿ, ಹೆಸರು, ಪ್ರಚಾರ ಎಲ್ಲಾ ಬಂತು. ಕೆಲವರು ನಾನು ದುಡ್ಡಿಗೆ, ಪ್ರಚಾರಕ್ಕೆ ಇದನ್ನೆಲ್ಲಾ ಮಾಡುತ್ತೇನೆ ಎಂದುಕೊಂಡಿದ್ದರು. ಅವ್ಯಾವೂ ಸತ್ಯವಲ್ಲ, ಅವರ ನಿರೀಕ್ಷೆಯಂತೆ ಆಗಲಿಲ್ಲ. ಆದರೆ ಮಾಡಿದ ಕೆಲಸದಿಂದ ಪ್ರಚಾರ, ಪ್ರಸಿದ್ಧಿ ಎಲ್ಲಾ ಬಂತು. ನನ್ನ ವೃತ್ತಿ ಯಾವಾಗಲೂ ಕೃಷಿಯೆ.

ಬುಕಾನಿನ್ ಎಲ್ಲಿ ಸಿಕ್ಕ?

ಏನೋ ಮಾಹಿತಿ ಹುಡುಕುತ್ತಾ ಶಿರಸಿಯ ಪಂಡಿತ್ ಗೃಂಥಾಲಯಕ್ಕೆ ಹೋದೆ. ಅಲ್ಲಿ ಹುಲ್ಲಿನ ಬಗ್ಗೆ ನನಗೆ ಮಾಹಿತಿ ಬೇಕಿತ್ತು. ಅಲ್ಲಿಯ ಆಚಾರ್ಯ ಇದು ನೋಡಿ ಎಂದು ಬುಕಾನಿನ್ ವರದಿ ಕೊಟ್ಟರು. ಅದ್ಭುತ. ಸಂಪರ್ಕ ಸಾಧನಗಳಿಲ್ಲದ ಸಮಯದಲ್ಲಿ ಕುದುರೆ, ಎತ್ತಿನ ಗಾಡಿ ಮೇಲೆ ಬಂದು ಬುಕಾನಿನ್ 1800 ರಲ್ಲಿ ಮೈಸೂರು, ಮಲಬಾರ್, ಕೆನರಾದ ಮಾಹಿತಿ ಸಂಗ್ರಹಿಸಿದ್ದ. ಮಾಹಿತಿ ದಾಖಲೆ ಸಂಗ್ರಹಿಸುವ, ಶಿಸ್ತುಬದ್ಧವಾಗಿ ಜೋಡಿಸುವ ಪದ್ಧತಿಯಿಂದ ಪ್ರಾರಂಭವಾಗಿ ವಿಶಿಷ್ಟ ಒಳನೋಟಗಳನ್ನೇ ಕೊಟ್ಟ ವ್ಯಕ್ತಿ ಫ್ರಾನ್ಸಿಸ್ ಬುಕಾನಿನ್. ಅಂಗಿಯ ಗುಂಡಿ, ಸ್ನಾನದ ಸೋಪು ಬರೀ ನೂರು ವರ್ಷಗಳ ಈಚೆಗೆ ಬಳಕೆಗೆ ಬಂದಿದ್ದು. ಅದೇ ಒಂದು ಕ್ರಾಂತಿ.

ಇಂಥವರು ಮತ್ತ್ಯಾರ್ಯಾರೆಲ್ಲಾ ಸಿಕ್ಕರು?

ಬಹಳ ಜನ, ಚಿತ್ರದುರ್ಗದ ಹೊಸ್ಮನೆ ಹನುಮಂತಪ್ಪ, ಯಲ್ಲಾಪುರದ ಶಾಂತಾರಾಮ ಸಿದ್ಧಿ ಸಿಕ್ಕ, ಬಲೆಭೀಮ ಬಹಳವರ್ಷ ಕಾಡಿನಲ್ಲೇ ಇದ್ದ, ಆತ ನರಭಕ್ಷಕ ಎನ್ನುವುದರೊಂದಿಗೆ ಅನೇಕ ವದಂತಿಗಳ ದಂತಕತೆಗಳೇ ಆತನ ಬಗ್ಗೆ ಸೃಷ್ಟಿಯಾಗಿದ್ದವು. ನಾನು ಅವನ ಸ್ನೇಹ ಮಾಡಿದೆ. ಅಂಥ ಅನೇಕರು ನನಗೆ ಸಿಕ್ಕರು. ದೇವನಹಳ್ಳಿಯ ರಾಮಗೌಡ ನಾಟಿಪದ್ಧತಿ ತಿಳಿಯದ ಕಾಲದಲ್ಲಿ ಭತ್ತದ ಬೆಳೆ, ಆಗಿನ ಹೂಲಿ (ಹುಲಿ) ಭತ್ತದ ಕತೆ ಹೇಳಿದ. ಹೀಗೆ ಅಮಾಯಕರು, ಅನಾಮಿಕರೇ ಬಹಳಷ್ಟು ಹೇಳಿದ್ದು, ಅದನ್ನು ನೋಡುವ ಕಣ್ಣು, ಕೇಳುವ ಕಿವಿ ತೆರೆದಿರಬೇಕಷ್ಟೆ.
ಕಾಡಿನ ಜ್ಞಾನ, ಇಲ್ಲಿಯ ಜೀವ ವೈವಿಧ್ಯತೆಗಳ ತಿಳುವಳಿಕೆ. ಹುಲ್ಲು, ಮರ, ಬಳ್ಳಿ, ನೀರು, ನದಿ ನಮ್ಮ ಸ್ಥಳಿಯ ಜ್ಞಾನ, ಅನುಭವ, ವಾಸ್ತವಗಳೆಲ್ಲಾ ಸರಿಯಾಗಿ ಅರ್ಥವಾದದ್ದೇ ಹಿರಿಯರು, ಅನುಭವಿಗಳು, ವಿದ್ಯೆಇಲ್ಲದವರು, ಸಹಜವಾಗಿ ಬದುಕಿದವರಿಂದ. ನೆಲ ಓದಿದವರು, ಕೃಷಿ ಸಾಧಕರು, ಕೃಷಿ ಶಿಕ್ಷಕರು, ಅಭಿವೃದ್ಧಿಯ ಅಂಚಿನಲ್ಲಿ ನಡೆದವರು. ತಮ್ಮಷ್ಟಕ್ಕೆ ತಾವೇ ಬದುಕಿದವರು. ಅಂಥವರೇ ನನಗೆ ಕಲಿಸಿದವರು. ಸರ್ಕಾರಿ, ಅರೆಸರ್ಕಾರಿ, ಸರ್ಕಾರೇತರ ವ್ಯವಸ್ಥೆಯಲ್ಲಿ ತಜ್ಞತೆ ಇಲ್ಲ. ನಮಗೆ ಹೀಗೆ ಸ್ವಯಂ ಸಾಧನೆ ಮಾಡಿದ ತಜ್ಞರಿಂದ ಅನುಕೂಲ ಹೆಚ್ಚು, ಬಡತನ, ಅನಿವಾರ್ಯತೆಗಳ ಜನಜೀವನದ ಕತೆ, ಕೃಷಿ (ಸಂ) ಕಥನಗಳು, ಇವೇ ನಮಗೆ ದಾರಿತೋರಿದ್ದು.

ಕಾಡು, ಪ್ರಾಣಿಪ್ರಪಂಚ, ನೀರು, ಜೀವವೈವಿಧ್ಯತೆ ಇವುಗಳ ಕಾಳಜಿಯ ಗುಟ್ಟು?

ಮನುಷ್ಯನಿಲ್ಲದೆ ಪ್ರಾಣಿ ಬದುಕಬಲ್ಲುದು, ಪ್ರಾಣಿಗಳಿಲ್ಲದೆ ಮನುಷ್ಯ ಬದುಕಲ್ಲ. ಸಾಗರದ ಅಬಸೆಯಂಥ ಗ್ರಾಮದಲ್ಲಿ ನೀರಿದ್ದಾಗ ಹುಲಿ ಇತ್ತು. ಅಥವಾ ಹುಲಿ ಇದ್ದಾಗ ನೀರಿತ್ತು. ಈಗಿಲ್ಲ ಅಂದರೆ ಸಮತೋಲನ ತಪ್ಪುತ್ತಿದೆ ಎಂದರ್ಥ.

ಕಾನ್ಮನೆ ಯೋಜನೆ?

ಕಾನ್ಮನೆ ನಮ್ಮದೇ ಚಿಂತನೆ, ಜನ ನೋಡಲು ಬರುತ್ತಾರೆ, ಅಧ್ಯಯನಾರ್ಥಿಗಳಿಗೆ ಅನುಕೂಲವಾಗಲಿ ಎಂದು 50 ಜನರ ವಸತಿ, ಅಭ್ಯಾಸಕ್ಕೆ ಅನುಕೂಲವಾಗುವಂತೆ ವ್ಯವಸ್ಥೆ ಇದೆ. ಅದನ್ನೆಲ್ಲಾ ನಿರ್ವಹಿಸುವುದೇ ಕಷ್ಟ. ನನ್ನ ಈ ಕಲ್ಫನೆ, ಚಿಂತನೆ, ಹವ್ಯಾಸ, ಅಭ್ಯಾಸಗಳಿಂದಾಗಿ ಸೆಲಿಬ್ರಿಟಿಗಳ ಸಂಪರ್ಕವಾಯಿತು. ಅವರೂ ಜಲಸಂರಕ್ಷಣೆ, ಕೆರೆ, ನದಿ, ಕಾಡು ಪರಿಸರದ ಬಗ್ಗೆ ಕೆಲಸಮಾಡುವ ಆಸಕ್ತಿ ತೋರುತಿದ್ದಾರೆ. ವ್ಯಾವಹಾರಿಕ ಪರಿಸರದ ವ್ಯಕ್ತಿಗಳನ್ನು ಕೈಬೀಸಿ ಕರೆಯುವ ಮಟ್ಟಿಗೆ ನಮ್ಮ ಕೆಲಸ ಫಲ ನೀಡಿದೆ.

ದೇಶಿಯತೆ ಬಿಟ್ಟು ನಾವು ಕಳೆದುಕೊಳ್ಳತ್ತಿರುವುದೇನು?

ಬಡತನದ ಬದುಕು ದಾಖಲೆ ಆಗ್ತಾ ಇಲ್ಲ, ಬಡತನದಲ್ಲಿ, ಬವಣೆಯ ಬದುಕಿನಲ್ಲಿ ಎಷ್ಟೊಂದು ಅನುಭವ, ಜ್ಞಾನ ಸಂಪಾದನೆ ಆಗಿರುತ್ತೆ, ಅವು ಸ್ಥಳಿಯ ಸಮಸ್ಯೆ, ಸವಾಲುಗಳಿಗೆ ಉತ್ತರ ನೀಡುತ್ತವೆ. ಆದರೆ ಸ್ಥಳಿಯತೆ, ಗ್ರಾಮ್ಯಜ್ಞಾನ ಉಪೇಕ್ಷೆಗೊಳಗಾಗಿ ಅಬ್ಬರ, ವೈಭವದ ಬದುಕೇ ಎಲ್ಲಾ ಎನ್ನುವ ಈಗಿನ ವರ್ತಮಾನ ಅನಿವಾರ್ಯ ವ್ಯವಸ್ಥೆ. ಅದನ್ನು ಹಿಡಿದು ನಿಲ್ಲಿಸುವಂಥ ಶಕ್ತಿ ಇಲ್ಲವಲ್ಲ.

ಮುಂದಿನ ದಾರಿ?

ಆಯಾ ಕಾಲಕ್ಕೆ ಏನಾಗಬೇಕು ಅದು ಆಗಿಯೇ ತೀರುತ್ತದೆ. ಜನ, ಜನಸಾಮಾನ್ಯರು ಪರಿಸರ, ನೀರು, ನದಿ, ಕೆರೆಗಳ ಬಗ್ಗೆ ಕೇಳುತಿದ್ದಾರೆ. ಜಾಗೃತಿ ಮಾಡುತ್ತಾ ಸಂಘಟಿತ ಪ್ರಯತ್ನಕ್ಕೆ ಮುಂದಾಗುತಿದ್ದಾರೆ. 1700 ವರ್ಷಗಳ ನೀರಿನ ವಿಕೇಂದ್ರೀಕರಣ ವ್ಯವಸ್ಥೆ ಅರ್ಥವಾಗಬೇಕಿದೆ. ಸಾಧಕರ ಕತೆಗಳಿಂದ ಜನ ಕಲಿಯತೊಡಗಿದ್ದಾರೆ. ಉತ್ತರಕನ್ನಡ ಜಿಲ್ಲೆ, ವಿಶೇಶವಾಗಿ ಶಿರಸಿ, ಬಳ್ಳಾರಿ ರಾಜ್ಯದ ಬಹಳ ಕಡೆ ಜಲಮರುಪೂರಣ, ಜಲಸಂರಕ್ಷಣೆ ಆಂದೋಲನವಾಗುತ್ತಿದೆ. ಜನರಿಗೆ ಕಳೆದುಕೊಂಡ ಅನುಭವ, ಕೊರತೆಯ ಬಿಸಿ ತಾಕಿದಾಗಲೇ ಮುಂಜಾಗೃತೆ, ಮಾರ್ಗೋಪಾಯಗಳು ಹೊಳೆಯುವುದು. ಜನ ಪರ್ಯಾಯಗಳ ಹುಡುಕಾಟಕ್ಕೆ ಮುಂದಾಗಿದ್ದಾರೆ. ಕೆರೆ,ನದಿ, ಜಲ ಪರ್ಯಾಯ ಸಾಧನಗಳು, ಅಸ್ಥಿತ್ವದಲ್ಲಿರುವುದರ ಸಂರಕ್ಷಣೆ ಈಗ ಆಗಬೇಕಾಗಿರುವ ಕೆಲಸ, ಅದು ಈಗಲೇ ಪ್ರಾರಂಭವಾಗಿದೆ.

ನಿಮ್ಮ ಸಾಧನೆ ಬಗ್ಗೆ ನಿಮ್ಮ ಅನಿಸಿಕೆ?

ಅಂಥದ್ದೇನಿಲ್ಲ, ನಾಟಿ ವೈದ್ಯರು, ಬಾಣಂತಿಯರ ಚಿಕಿತ್ಸಾ ಪದ್ಧತಿ, ಮಳೆಕೊಯ್ಲು, ಜಲಸಂರಕ್ಷಣೆ, ಕಾಡು, ಮೇಡು ಇವೆಲ್ಲಾ ನನ್ನ ಹವ್ಯಾಸ. ಇದೊಂದು ಜರ್ನಿ ಅಷ್ಟೆ, ಅದರಿಂದ ಉಪಯೋಗವಾದರೆ ಖುಷಿ, ಮತ್ತೇನಿದೆ ಇದೆಲ್ಲಾ ಬಿಟ್ಟು. ಕಾಡಿನ ಜ್ಞಾನ, ಕಾಡಿನ ಸಂಪತ್ತು ಅಪಾರ ಅದರ ಅಸ್ಮಿತೆಯಲ್ಲಿಯೇ ಹೊಸತು ಕಾಣಬೇಕು. ಜ್ಞಾನ, ಶಬ್ಧ, ಸಂಪತ್ತು, ಜೀವಂತಿಕೆ ಕಾಡಿನಲ್ಲಿದ್ದಷ್ಟು ನಾಡಿನಲ್ಲಿಲ್ಲ. ನಮ್ಮ ಪರಿಸರ ದೊಡ್ಡ ವಿವೇಕ, ಜ್ಞಾನ, ಅದ್ಭುತ ಶಕ್ತಿ ಅದರ ಮುಂದೆ ಮನುಷ್ಯ ತೀರಾ ಸಣ್ಣವ. ಅಪ್ಪೆಮಿಡಿ, ಜಲಮರುಪೂರಣ ಎಲ್ಲಾ ಇಲ್ಲೇ ಇದ್ದ ಸಂಪತ್ತು, ವೈವಿಧ್ಯತೆ, ಅವುಗಳನ್ನು ಜೋಪಾನದಿಂದ ಕಾಪಾಡಿಕೊಳ್ಳಬೇಕಷ್ಟೇ.
ಝೆನ್-
ಬೇಸರವಿಲ್ಲದ ಲಿಪಿ
ಭಾರೀ ಉನ್ನತ ಹುದ್ದೆಯಲ್ಲಿದ್ದಂಥ ಅಧಿಕಾರಿಯೊಬ್ಬ ಒಮ್ಮೆ, ಗುರು ಟಕುಅನ್‍ನ ಹತ್ತಿರ ಬಂದ. ಜನರ ಅಹವಾಲುಗಳನ್ನು ಕೇಳಿಕೊಳ್ಳುವುದರಲ್ಲಿಯೂ ರಾಜ್ಯದ ಸ್ಥಿತಿಗತಿಗಳ ವರದಿಯನ್ನು ಪರಿಶೀಲಿಸುವುದರಲ್ಲಿಯೂ ತಾನು ಇಡೀ ದಿನ ಕಳೆಯುತ್ತಿರುವುದಾಗಿ ಹೇಳಿ, ಅದರಿಂದ ತನಗೆ ಬೇಸರವುಂಟಾಗಿಬಿಟ್ಟಿದೆ. ಎಂದ. ದಿನಗಳನ್ನು ಹೆಚ್ಚು ಉಪಯುಕ್ತವಾಗಿ ಕಳೆಯಲು ಏನಾದರೊಂದು ಉಪಾಯವನ್ನು ಕಾಣಿಸಿಕೊಡಲು ಬೇಡಿಕೊಂಡ.
ಟಕುಅನ್, ಬದಿಯಲ್ಲಿದ್ದ ಒಂದು ಕುಂಚ ಮತ್ತು ಕಾಗದವನ್ನೆತ್ತಿಕೊಂಡು ಎಂಟು ಲಿಪಿಗಳನ್ನು ಮೂಡಿಸಿ ಕಾಣಿಸಿದ. ಚೀನಿ ಭಾಷೆಯ ಆ ಲಿಪಿಗಳ ಒಟ್ಟೂ ಅರ್ಥ ಹೀಗೆ-
ಕಳೆದ ದಿನ ಮರಳುವುದಿಲ್ಲ, ಇಲ್ಲ,
ಒಂದಂಗುಲ ಕಾಲಕ್ಕಿರುವ ಬೆಲೆ
ಗೇಣುದ್ದದ ಪಚ್ಚೆಮಣಿಗಿಲ್ಲ, ಇಲ್ಲ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಜಾಗೃತೆ ವಾಹನ ಓಡಾಟ ಹೆಚ್ಚಿದೆ, ಮಂಗಗಳು ಸಾಯುತ್ತಿವೆ! ಸಾ. ಸಮ್ಮೇಳನ ಮುಗಿದು ಹೋದ ಮೇಲೆ……

ಉತ್ತರ ಕನ್ನಡ ಜಿಲ್ಲೆಯ ಸಾಹಿತ್ಯ- ಸಂಸ್ಕೃತಿ ಅಭಿವೃದ್ಧಿ ಬಗ್ಗೆ ಕ್ಷಕಿರಣ ಬೀರುವ ಉತ್ತರ ಕನ್ನಡ ಜಿಲ್ಲೆಯ ೨೪ ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿದೆ....

ಮನುಷ್ಯನ ಒಳಿತನ್ನೇ ಧ್ಯಾನಿಸುತ್ತಾ……‌

ಒಂದು ಅಪರೂಪದ ಡೊಳ್ಳಿನ ಸ್ಫರ್ಧೆ ನೋಡಿದೆ. ನಮ್ಮದೇ ತಾಲೂಕಿನ ಅರೆಹಳ್ಳದ ತಂಡ ಎಷ್ಟು ಸೊಗಸಾಗಿ ಡೊಳ್ಳು ನೃತ್ಯ ಕುಣಿಯಿತು! ಕೊಡಗಿಬೈಲ್‌ ಎಂಬ ಹಳ್ಳಿಯ ಒಕ್ಕಲಿಗ...

ಶಿಕಾರಿಪುರ ಪ್ರಥಮ, ಸಿದ್ಧಾಪುರ ದ್ವಿತೀಯ, ಸಾಗರ ತೃತೀಯ

ಸಿದ್ದಾಪುರದಲ್ಲಿ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ರಾಜ್ಯ ಮಟ್ಟದ ಡೊಳ್ಳು ಕುಣಿತ ಸ್ಪರ್ಧೆಯಲ್ಲಿ ಬೀರಲಿಂಗೇಶ್ವರ ಡೊಳ್ಳಿನ ಸಂಘ ಅಂಬಾರಗೊಪ್ಪ ಶಿಕಾರಿಪುರ ಪ್ರಥಮ,ಸಿದ್ದಿವಿನಾಯಕ...

ಮಕ್ಕಳಿಗೆ ಆಸ್ತಿಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸಿ

ಮಕ್ಕಳಿಗೆ ಆಸ್ತಿ,ಆಭರಣ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾ ಗಿಸಿ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದ್ದಾರೆ. ಸಿದ್ಧಾಪುರ ಹಾಳದಕಟ್ಟಾ ಮತ್ತು ಕೊಳಗಿ ಪ್ರಾಥಮಿಕ ಶಾಲೆಗಳಲ್ಲಿ...

ಮಾಧ್ಯಮ ಪ್ರತಿನಿಧಿಗಳ ಸಂಘದ ಪದಾಧಿಕಾರಿಗಳ ಅಯ್ಕೆ

ಸಿದ್ದಾಪುರ: ತಾಲೂಕಿನಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಮಾಧ್ಯಮ ಪ್ರತಿನಿಧಿಗಳ ಸಂಘ (ರಿ) ಸಿದ್ದಾಪುರ ದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘದ ಅಧ್ಯಕ್ಷರಾಗಿ ಸಮಾಜಮುಖಿ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *