ವೈದ್ಯಕೀಯರಂಗ: ಸೇವೆಯೆ, ಸುಲಿಗೆಯೆ?

-ಡಾ.ಎ.ಅನಿಲ್‍ಕುಮಾರ್
ಎಂ.ಬಿ.ಬಿ.ಎಸ್, ಡಿ.ಎನ್.ಬಿ,
ಜನರಲ್ ಸರ್ಜನ್ ಮತ್ತು ಲೆಪ್ರೋಸ್ಕೋಪಿಕ್ ಪರಿಣಿತರು

-ಡಾ.ಎ.ಅನಿಲ್‍ಕುಮಾರ್

ಜನಸಾಮಾನ್ಯರಲ್ಲಿಒಂದಾನೊಂದು ಕಾಲದಲ್ಲಿ ಪೂಜ್ಯ ಭಾವನೆಯನ್ನು ಹೊಂದಿದ್ದ ವೈದ್ಯಕೀಯರಂಗ ಈಗ ಧ್ವೇಷ, ಅನುಮಾನಗಳಿಂದ ಕೂಡಿದೆ, ಸೇವೆಯಾಗಿಇದ್ದಂತಹ ವೈದ್ಯಕೀಯರಂಗಯಾವುದೇ ಸಂಶಯವಿಲ್ಲದೆ ಸುಲಿಗೆಯಾಗಿದೆ, ಇದು ಮನುಕುಲದಒಂದು ದೊಡ್ಡದುರಂತ, ಮಾನವನ ಸಾಮಾಜಿಕ ಬೆಳವಣಿಗೆಯ ಹಾಗೂಇತಿಹಾಸದಒಂದುಕಪ್ಪು ಚುಕ್ಕೆ ಇಂದಿನ ವೈದ್ಯಕೀಯರಂಗ,
ಈ ಲೇಖನವನ್ನು ಬರೆಯುವಾಗ ನನಗೆ ಒಬ್ಬ ವೈದ್ಯನಾಗಿ ನಾವು, ಕೆಲವರು ಇಷ್ಟು ಹದಗೆಟ್ಟಿದ್ದೇವೆಯೆ ಎನ್ನುವದುಃಖವುಕಾಡುತ್ತಿದೆ. ಮೊದಲಿಗೆ, ನಾವು ಪ್ರಸ್ತುತ ಭಾರತದೇಶದಜನರಆರೋಗ್ಯ ಪರಿಸ್ಥಿತಿಯನ್ನು ಗಮನಿಸಿದರೆ ಸ್ವಾತಂತ್ರೋತ್ತರ ಭಾರತದಲ್ಲಿ ಕೆಲವು ಅಂಶಗಳಲ್ಲಿ ಸುಧಾರಣೆಕಂಡುಬಂದರೂ ಜನಸಾಮಾನ್ಯರಆರೋಗ್ಯ ಪರಿಸ್ಥಿತಿಯು ಭಯಾನಕವಾಗಿದೆ, ವಿಶ್ವದಲ್ಲೇಅತ್ಯಂತ ಹೆಚ್ಚು ರಕ್ತಹೀನತೆಯಿಂದ ನರಳುತ್ತಿರುವ ಜನರಿರುವುದು ಭಾರತದಲ್ಲೇ!ಶೇ.40 ರಷ್ಟು ಭಾರತೀಯರಲ್ಲಿರಕ್ತಹೀನತೆಇದೆ, ಶೇ. 51 ರಷ್ಟು 15-49ವರ್ಷದ ಮಹಿಳೆಯರಲ್ಲಿ ರಕ್ತಹೀನತೆಇದೆ, ಪ್ರಪಂಚದಲ್ಲೇಅತ್ಯಂತ ಹೆಚ್ಚು ಅಪೌಷ್ಟಿಕತೆಯಿಂದ ನರಳುವ ಮಕ್ಕಳಿರುವುದು ನಮ್ಮದೇಶದಲ್ಲಿಯೆ. ಶೇ.75 ರಷ್ಟು 3ವರ್ಷದೊಳಗಿನ ಮಕ್ಕಳು ರಕ್ತಹೀನತೆಯಿಂದ(ಂಟಿemiಚಿ) ಬಳಲುತ್ತಿದ್ದಾರೆ.


ಭಾರತವು ವಿಶ್ವದ ಶೇ50% ರಷ್ಟು”Wಚಿsಣeಜ” ಮಕ್ಕಳಿಗೆ ಮನೆಯಾಗಿದೆ. ಹಾಗೆಯೇ, ಶೇ31% ರಷ್ಟು”Sಣuಟಿಣeಜ”ಮಕ್ಕಳಿಗೆ ಮನೆಯಾಗಿದೆ.ಭಾರತವು ವಿಶ್ವದ ಶೇ.49ರಷ್ಟು ಮಧುಮೇಹದ ರೋಗಿಗಳಿಗೆ ಮನೆಯಾಗಿದೆ, ಹೀಗೆ ಬರೆಯುತ್ತಾ ಹೋದರೆಕೊನೆಯೇಇಲ್ಲದಂತಿದೆ.

ಸ್ವಾತಂತ್ರ ಬಂದು ಏಳು ದಶಕಗಳು ಕಳೆದರೂಭಾರತದಲ್ಲಿಇಷ್ಟೊಂದು ಅನಾರೋಗ್ಯದಿಂದ ಬಳಲುತ್ತಿರುವ ಜನರಿದ್ದಾರೆಂದರೆಇದಕ್ಕೆ ಮುಖ್ಯಕಾರಣ ನಮ್ಮ ಸರ್ಕಾರಗಳು ತಂದಂತಹನೀತಿಗಳು.


ಭಾರತದಲ್ಲಿಆರ್ಥಿಕ ನೀತಿಗಳು ಬದಲಾದಂತೆಲ್ಲಾಅದರ ಪರಿಣಾಮಜನಸಾಮಾನ್ಯರಆರೋಗ್ಯದ ಮೇಲೆ ಹಾಗೂ ವೈದ್ಯಕೀಯರಂಗದ ಮೇಲೆ ಬಿದ್ದಿದೆ. ಹೊರ ರೋಗಿಗಳ ವಿಭಾಗದಲ್ಲಿ ಶೇ.71ರಷ್ಟು ರೋಗಿಗಳು ಖಾಸಗಿ ಆಸ್ಪತ್ರೆಗಳನ್ನು ಹಾಗೂ ಶೇ25 ರಷ್ಟು ರೋಗಿಗಳು ಸರ್ಕಾರಿ ಆಸ್ಪತ್ರೆಗಳನ್ನು ಬಳಸುತ್ತಿದ್ದಾರೆ, ಹಾಗೆಯೆ ಒಳರೋಗಿಗಳ ವಿಭಾಗದಲ್ಲಿ ಶೇ73 ರಷ್ಟು ರೋಗಿಗಳು ಖಾಸಗಿ ಅಸ್ಪತ್ರೆಗಳನ್ನು ಬಳಸುತ್ತಿದ್ದಾರೆ. ಭಾರತದಲ್ಲಿಒಟ್ಟುಆರೋಗ್ಯ ವೆಚ್ಚದಲ್ಲಿ ಶೇ.70 ರಷ್ಟುತಮ್ಮ ಸ್ವಂತಜೇಬಿನಿಂದಖರ್ಚು ಮಾಡಬೇಕಾಗುತ್ತಿದೆ(ಔuಣ oಜಿ ಣhe ಠಿoಛಿಞeಣ exಠಿeಟಿಜiಣuಡಿe).
ವಿಶ್ವzಲ್ಲಿರುವÀ ಸರಾಸರಿ ಕೇವಲ ಶೇ18.ಇದರಿಂದ ಪ್ರತಿ ವರ್ಷ 9ಕೋಟಿ ಭಾರತೀಯರು ಕೇವಲ ತಮ್ಮಆರೋಗ್ಯ ವೆಚ್ಚದಿಂದಲೇ ಬಡತನರೇಖೆಗಿಂತ ಕೆಳಗೆ ತಳ್ಳಲ್ಪಡುತ್ತಿದ್ದಾರೆ.
ನಮ್ಮದೇಶದಲ್ಲಿರೈತರಆತ್ಮಹತ್ಯೆಗೆಎರಡನೇ ಮುಖ್ಯಕಾರಣಇದುಎಂದೂಗುರುತಿಸಲಾಗಿದೆ. ತಮ್ಮಆರೋಗ್ಯಕ್ಕಾಗಿತಾವು ಮಾಡುವಖರ್ಚು, ಈ ಎರಡು ಕಾರಣಗಳು ಸಾಲದೆ,
ವೈದ್ಯಕೀಯರಂಗ ಸುಲಿಗೆಯಾಗಿದೆಎಂದು ಸಾಬೀತುಪಡಿಸಲು ಸೇವೆಯಾಗಿದ್ದ ವೈದ್ಯಕೀಯರಂಗ ಸುಲಿಗೆಯಾಗಿ ಮಾರ್ಪಾಡಾಗಿದ್ದು ಹೇಗೆ, ಇದಕ್ಕೆ ಕಾರಣಗಳೇನು?ಎನ್ನುವುದು ಈಗ ನಮ್ಮ ಮುಂದೆಇರುವ ಪ್ರಶ್ನೆ!

ಭಾರತದಲ್ಲಿ ಬ್ರಿಟೀಷ್ ಸಾಮ್ರಾಜ್ಯಶಾಹಿಯ ಆಡಳಿತದ ಪೂರ್ವದಲ್ಲಿ ವೈದ್ಯಕೀಯರಂಗ ಸೇವೆಯನ್ನು ಪ್ರತಿಪಾದಿಸುತ್ತಿತ್ತು.ಅಂದು ವೈದ್ಯಕೀಯರಂಗ 3 ಗುಣಗಳನ್ನು ಹೊಂದಿತ್ತು.

  1. ವೈದ್ಯಕೀಯ ಸೇವೆಯುಒಂದು ಸಾಮಾಜಿಕಜವಾಬ್ದಾರಿಯಾಗಿತ್ತು.
  2. ಅದುಎಲ್ಲರಿಗೂಉಚಿತವಾಗಿತ್ತು. (ಆದರೆ ಭಾರತದೇಶದಲ್ಲಿರುವ ಶ್ರೇಣೀಕೃತಜಾತಿ ವ್ಯವಸ್ಥೆ ವರ್ಗ ಹಾಗೂ ವೃತ್ತಿ ಈ ಸೇವೆಯನ್ನುಎಲ್ಲರೂ ಸಮವಾಗಿ ಪಡೆಯುವುದನ್ನುತಡೆದಿತ್ತು).
  3. ಈ ಎಲ್ಲಾ ಸೇವೆಗಳು ಪಟ್ಟಣಗಳಲ್ಲಿಕೇಂದ್ರಿತವಾಗಿದ್ದವು.
    ಅಂದುಒಂದು ಸಾಂಸ್ಥಿಕವಾಗಿ ತರಭೇತಿಯನ್ನು ಪಡೆದ ವೈದ್ಯರಾಗಲಿ, ವೈದ್ಯಕೀಯ ಸಿಬ್ಬಂದಿಯಾಗಲಿ ಇರಲಿಲ್ಲ.ಅಂದುಇದ್ದದ್ದು ವಂಶ ಪಾರಂಪರಿಕವಾದ ವೈದ್ಯಕೀಯ ಸೇವೆ, ಮಠಗಳು, ಆಶ್ರಮಗಳು, ಪುಣ್ಯಸ್ಥಳಗಳು, ದೇವಾಲಯಗಳು, ಛತ್ರಗಳು,ಆಸ್ಪತ್ರೆಗಳಾಗಿ ಮಾರ್ಪಾಡಾಗಿರೋಗಿಗಳಿಗೆ ಚಿಕಿತ್ಸೆಯನ್ನುಕೊಡುವ ಸ್ಥಳಗಳಾಗಿದ್ದವು. ಆದರೆ ಬ್ರಿಟೀಷರು ಬಂದ ನಂತರ ಸಾಂಸ್ಥಿಕವಾಗಿ ತರಬೇತಿ ಪಡೆದ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಈ ಹಳೆಯ ವೈದ್ಯರ ನಡುವೆ ರೋಗಿಗಳಿಗೆ ಚಿಕಿತ್ಸೆಯನ್ನು ಕೊಡಲಾರಂಭಿಸಿದರು.
    ಆಧುನಿಕಅಲೋಪತಿಕ್ ವೈದ್ಯಕೀಯ ವಿಧಾನಗಳನ್ನು ಬಳಸಿ ಚಿಕಿತ್ಸೆಯನ್ನುಕೊಡುತ್ತಿದ್ದರು.ಬ್ರಿಟೀಷರು ಮೊದಲಿಗೆ ಕಂಟೋನ್‍ಮೆಂಟ್‍ಗಳಲ್ಲಿ ಈ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಿದರು
    .ನಂತರ ಹಲವು ದೊಡ್ಡ ಅಸ್ಪತ್ರೆಗಳು ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಿ ಈ ಆಧುನಿಕಅಲೋಪತಿಕ್‍ಚಿಕಿತ್ಸಾ ವಿಧಾನ ಬೇರೆಎಲ್ಲಚಿಕಿತ್ಸಾ ವಿಧಾನಗಳಿಗಿಂತ ಶ್ರೇಷ್ಠ ಎಂಬುದನ್ನು ಬಲವಾಗಿ ಪ್ರತಿಪಾದಿಸಿ ಬಹುತೇಕಜನರ ಮನಸ್ಸಿನಲ್ಲಿ ಇದೇಅಭಿಪ್ರಾಯವನ್ನು ಮೂಡಿಸುವಲ್ಲಿ ಯಶಸ್ವಿಯಾದರು.
    ಬ್ರಿಟೀಷ್ ಆಡಳಿತದ ಕಾಲದಲ್ಲಿಯೇ ವೈದ್ಯರುತಮ್ಮ ಖಾಸಗಿ ಕ್ಲಿನಿಕ್‍ಗಳಲ್ಲಿ ಹಣವನ್ನು ಪಡೆದುಚಿಕಿತ್ಸೆಯನ್ನುಕೊಡುವುದಕ್ಕೆ ಪ್ರಾರಂಭಿಸಿದರು.ಸ್ವಾತಂತ್ರೋತ್ತರ ಭಾರತದಲ್ಲಿಇದೇ ವಿಧಾನಗಳನ್ನು ನಮ್ಮಸರ್ಕಾರಗಳು ಮುಂದುವರೆಸಿದವು.ಇದರಿಂದಜನಸಾಮಾನ್ಯರಲ್ಲಿಚಿಕಿತ್ಸೆಎಂದರೆ ಆಸ್ಪತ್ರೆಗಳಲ್ಲಿ ಹಾಗು ವೈದ್ಯರಿಂದ ಪಡೆಯಬೇಕೆಂದುಅಭಿಪ್ರಾಯ ಮೂಡಿಸಿದರು.ಹಾಗೆಯೇ ಖಾಸಗಿ ವಲಯದಲ್ಲಿಚಿಕಿತ್ಸೆಕೊಡುತ್ತಿದ್ದ ವೈದ್ಯರನ್ನು ಮುಂದುವರೆಯಲು ಬಿಟ್ಟರು.

ಸೇವೆಯಾಗಿದ್ದ ವೈದ್ಯಕೀಯರಂಗ ಸುಲಿಗೆಯಾಗಿ ಮಾರ್ಪಾಟಾಗಲು ನಾವು ಮುಖ್ಯವಾಗಿ 5 ಕಾರಣಗಳನ್ನು ಗುರುತಿಸಬಹುದು,

  1. ಮೊದಲಿಗೆ, ಇಂದಿನ ವೈದ್ಯಕೀಯರಂಗದಲ್ಲಿರುವ ಭ್ರಷ್ಟಾಚಾರದ ಮೂಲವು ಬ್ರಿಟೀಷ್ ಸಾಮ್ರಾಜ್ಯಶಾಹಿಯ ಆಡಳಿತದ ಕಾಲದಲ್ಲಿ ಸ್ಥಾಪಿಸಲ್ಪಟ್ಟಿರುವ ವೈದ್ಯಕೀಯ ಸೇವೆಯ ಸಂಸ್ಥೆಗಳು ಹಾಗೂ ವೈದ್ಯಕೀಯ ವೃತ್ತಿಗಳಲ್ಲಿದೆ.
  2. ಎರಡನೆಯದು, ಈ ಭ್ರಷ್ಟಾಚಾರ ಹಾಗು ಸುಲಿಗೆಯುಆಧುನಿಕಅಲೋಪತಿಕ್ ವೈದ್ಯಕೀಯ ವಿಧಾನವನ್ನುಅನುಸರಿಸುವ ವೈದ್ಯರ ಹಾಗು ಅಸ್ಪತ್ರೆಯಕೇಂದ್ರೀಕೃತ ವೈದ್ಯಕೀಯ ಸೇವೆಗಳ ಸ್ಥಾಪನೆಯ ಪರಿಣಾಮವಾಗಿ ಹೊರಹೊಮ್ಮಿದೆ. ಬ್ರಿಟೀಷ್ ಸಾಮ್ರಾಜ್ಯಶಾಹಿ ಆಡಳಿತದಲ್ಲಿ ಇಡೀ ವೈದ್ಯಕೀಯ ಸೇವಾ ಸಂಸ್ಥೆಗಳು ಸಾರ್ವಜನಿಕವಾಗಿ ಸ್ಥಾಪಿಸಿರುವುದಿಲ್ಲ. ಹಾಗೆಯೆ ಬ್ರಿಟೀಷ್ ವಸಾಹತುಶಾಹಿಯು ಭಾರತವನ್ನು ಕೊಳ್ಳೆಹೊಡೆದಿದ್ದರಿಂದ ಸ್ವಾತಂತ್ರದ ನಂತರ ಭಾರತದಲ್ಲಿಅತಿಹೆಚ್ಚು ಬಡತನ, ಹಸಿವು, ನಿರುದ್ಯೋಗ ಹಾಗೂಅಸಮಾನತೆತಾಂಡವವಾಡುತ್ತಿದ್ದರಿಂದ ವೈದ್ಯಕೀಯ ಸೇವೆಗಳನ್ನು ಸಂಪೂರ್ಣವಾಗಿ ಸಾರ್ವಜನಿಕವಾಗಿ ಸ್ಥಾಪಿಸಲು ಸಾಧ್ಯವಾಗಲಿಲ್ಲ. ಹಾಗಾಗಿ, ಖಾಸಗಿ ವೈದ್ಯಕೀಯರಂಗದ ಮುಂದುವರಿಕೆಗೆ ಅನುವು ಮಾಡಲಾಗಿತ್ತು. ಈ ಕಾರಣಗಳಿಗಾಗಿ ಆರೋಗ್ಯವುಒಂದು ವಸ್ತುವಾಗಿ ಅದನ್ನುಯಾರಿಗೆ ಕೊಂಡುಕೊಳ್ಳುವ ಶಕ್ತಿ ಇರುವುದೋಅವರಿಗೆ ಲಭ್ಯವಾಯಿತು.
  3. ಮೂರನೆಯದು, ವೈದ್ಯಕೀಯರಂಗದ ಮೇಲೆ ಯಾವುದೇ ನಿಯಂತ್ರಣಇಲ್ಲದೆಇರುವುದು ಹಾಗೂ ಸಾಮಾನ್ಯಜನರಿಗೆ ಈ ಅಧುನಿಕ ವೈದ್ಯಕೀಯ ವಿಜ್ಞಾನದ ಬಗ್ಗೆ ಅರಿವುಇಲ್ಲದೆಇರುವುದರಿಂದ, ವೈದ್ಯರು ಹಾಗು ವೈದ್ಯಕೀಯ ಸಿಬ್ಬಂದಿ ತಮ್ಮತಮ್ಮ ಹೊಣೆಗಾರಿಕೆಯಿಂದ ನುಣಿಚಿಕೊಳ್ಳುತ್ತಿದ್ದಾರೆ.
  4. ನಾಲ್ಕನೆಯದು, ವೈದ್ಯಕೀಯರಂಗ ಹಾಗು ದೊಡ್ಡ ಕಾರ್ಖಾನೆಗಳ ಒಂದುಒಳ ಒಪ್ಪಂದ,ಔಷಧಿ ತಯಾರು ಮಾಡುವ ಕಂಪನಿಗಳು, ವಿವಿಧ ಪರೀಕ್ಷೆಗಳನ್ನು ಮಾಡುವ ಪರೀಕ್ಷಾ ಕೇಂದ್ರಗಳು(ಆಚಿigಟಿosಣiಛಿ ಟಚಿbs) ಸಾರ್ವಜನಿಕ, ಖಾಸಗಿ ಹಾಗೂಕಾಪೆರ್Çೀರೇಟ್ ಆಸ್ಪತ್ರೆಗಳು, ಆರೋಗ್ಯ ವಿಮಾರಂಗ ಹಾಗೂ ತಂತ್ರಜ್ಞಾನ, ಇವೆಲ್ಲವು ವೈದ್ಯಕೀಯ ಸೇವೆಗಳನ್ನು ಹೆಚ್ಚು ದುಬಾರಿಯನ್ನಾಗಿ ಮಾಡಿವೆ, ಹಾಗೂ ವೈದ್ಯಕೀಯರಂಗ ಹೆಚ್ಚು ವಾಣಿಜ್ಯೀಕರಣಕ್ಕೆಕಾರಣವಾಗಿದೆ.
  5. ಐದನೆಯದು, ಇಂದಿನ ವೈದ್ಯಕೇಂದ್ರಿತ ಆಸ್ಪತ್ರೆಗಳು, ಆಧುನಿಕ ವೈದ್ಯಕೀಯ ವಿಧಾನಗಳು, ತಂತ್ರಜ್ಞಾನಇವೆಲ್ಲವೂ ವೈದ್ಯರ ಕೈಗೆ ಜನ ಸಾಮಾನ್ಯರಆರೋಗ್ಯದಚುಕ್ಕಾಣಿಯನ್ನುಕೊಟ್ಟಿದೆ.ಅದನ್ನು ಇಂದಿನ ವೈದ್ಯರುತಮ್ಮ ಸ್ವಾರ್ಥಕ್ಕಾಗಿ ಹಾಗೂ ಸ್ವಂತ ಲಾಭಕ್ಕಾಗಿ, ಮಾನವೀಯ ಮೌಲ್ಯಗಳನ್ನು ಮರೆತು ಬಳಸುತ್ತಿದ್ದಾರೆ.
    ಈ ಎಲ್ಲಾ ಕಾರಣಗಳ ನಡುವೆ, ನಮ್ಮದೇಶದಲ್ಲಿ ಹಾಗು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಳುವವರುತಂದಂತಹ ನವಉಧಾರವಾದಆರ್ಥಿಕ ನೀತಿಗಳು, ಜಾಗತೀಕರಣ, ಖಾಸಗೀಕರಣ ಹಾಗೂಅಂತರರಾಷ್ಟ್ರೀಯ ನಿಯಂತ್ರಣ ಮಂಡಳಿಗಳು ಮತ್ತು ಒಪ್ಪಂದಗಳು ಒಬ್ಬ ವೈದ್ಯ ಹಾಗು ರೋಗಿಯ ಸಂಬಂಧವನ್ನುಒಬ್ಬ ಸಲಹೆಗಾರ (ವ್ಯಾಪಾರಿ) ಹಾಗೂ ಗಿರಾಕಿಯ ಸಂಬಂಧವನ್ನಾಗಿ ಮಾರ್ಪಾಟು ಮಾಡಿವೆ. ಹಾಗಾಗಿ,ಆರೋಗ್ಯವುಒಂದು‘ವಸ್ತು’ವಾಗಿ (ಸರಕು) ಬಿಟ್ಟಿದೆ.ಅದನ್ನು ವೈದ್ಯಕೀಯರಂಗ ಮಾರಾಟಕ್ಕಿಟ್ಟಿದೆ ಹಾಗೂ ಹಣಇದ್ದವರುಅದನ್ನು ಕೊಂಡುಕೊಳ್ಳುತ್ತಿದ್ದಾರೆ.
    ಬಡವರು, ಬಡರೈತರು ಕಾಯಿಲೆಗಳಿಂದ ಸಾಯುತ್ತಿದ್ದಾರೆಅಥವಾಕಾಯಿಲೆಯ ನಿವಾರಣೆಗೆಖರ್ಚು ಮಾಡಿದ ಹಣದ ಸಾಲವನ್ನುತೀರಿಸಲಾಗದೆ ನೇಣು ಹಾಕಿಕೊಳ್ಳುತ್ತಿದ್ದಾರೆ.ಇಂದು ವೈದ್ಯಕೀಯರಂಗದ ವ್ಯಾಪಾರದಲ್ಲಿದೊಡ್ಡ ಕಾಪೆರ್Çರೇಟ್‍ಗಳು, ವಿದೇಶಿ ನೇರ ಬಂಡವಾಳ, ವಿದೇಶಿ ಹಣಕಾಸು ಬಂಡವಾಳ, ಹೀಗೆ ದೊಡ್ಡರೀತಿಯಲ್ಲಿ ಬಂಡವಾಳವನ್ನು ಹೂಡಿಕೆ ಮಾಡುತ್ತಿದ್ದಾರೆ. ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಇವರಿಗೆ ಜೀತದ ಆಳುಗಳಾಗಿದ್ದಾರೆ!
    ಈ ರೀತಿಯ‘ಯಜಮಾನ ಹಾಗೂ ಆಳು’ ಸಂಬಂಧದಲ್ಲಿಹೆಚ್ಚು ಲಾಭತಂದುಕೊಡುವಂತೆ‘ಆಳುಗಳ’ ಮೇಲೆ ‘ಯಜಮಾನರು’ ಒತ್ತಡಗಳು ಹೇರುತ್ತಾರೆ!ಅದೇ ಸಂದರ್ಭದಲ್ಲಿ ಈ ಕಾಪೆರ್Çರೇಟ್‍ಗಳ ನಡುವೆಇರುವ ಪೈಪೆÇೀಟಿಯಲ್ಲಿ ನುರಿತ ವೈದ್ಯರಿಗೆ ಹೆಚ್ಚು ಆಮಿಷಗಳನ್ನು ಒಡ್ಡುತ್ತಾರೆ.ಅಂತಹ ವೈದ್ಯರುಕಮೀಷನ್‘ಏಜೆಂಟು’ಗಳಾಗಿ ವರ್ತಿಸುತ್ತಿದ್ದಾರೆ. ಈ ವ್ಯಾಪಾರಯಾವ ಮಟ್ಟಕ್ಕೆ ಬೆಳೆದಿದೆಯೆಂದರೆ,ಅದನ್ನು ನಿಯಂತ್ರಿಸಲುಯಾವುದೇ ಸರ್ಕಾರಕ್ಕೆ ಸಾಧ್ಯವಿಲ್ಲ!

ಇನ್ನುಇದರ ಸುಧಾರಣೆಗೆ ನಮ್ಮ ಮುಂದಿರುವದಾರಿಯಾವುದು?
ನನ್ನ ವೈಯುಕ್ತಿಕಅಭಿಪ್ರಾಯದಲ್ಲಿ, ಜನಸಾಮಾನ್ಯರಲ್ಲಿಆರೋಗ್ಯದ ಬಗ್ಗೆ ಹಾಗೂ ವೈದ್ಯಕೀಯ ವಿಜ್ಞಾನದ ಬಗ್ಗೆ ‘ಸಾಕ್ಷರತೆ’ಯನ್ನು ಮೂಡಿಸುವುದುಜನಸಾಮಾನ್ಯರಲ್ಲಿಚೈತನ್ಯವನ್ನುತುಂಬಿ, ‘ಆರೋಗ್ಯವುತಮ್ಮ ಹಕ್ಕು’ ಮತ್ತುಅದನ್ನು ಪಡೆಯಲು ಹೋರಾಟಕ್ಕೆ ಮುಂದಾಗಬೇಕೆಂಬಜಾಗೃತಿ ಮೂಡಿಸುವುದು.ಪರ್ಯಾಯ ವೈದ್ಯಕೀಯ ಸಂಸ್ಥೆಗಳನ್ನು ಜನರೇ ನಿರ್ಮಾಣವನ್ನು ಮಾಡಲುಅರಿವು-ಮುತುವರ್ಜಿತರುವುದು.

ಈ ನಿಟ್ಟಿನಲ್ಲಿಒಂದು ‘ವೈದ್ಯಕೀಯರಂಗದಕ್ರಾಂತಿ’ಆಗದೇಗತ್ಯಂತರವೇಇಲ್ಲ ಎನಿಸುತ್ತದೆ.ಆಮೂಲಕ ಅಮೂಲಾಗ್ರ ಬದಲಾವಣೆತರಬೇಕಿದೆ.ಅದಕ್ಕಾಗಿ ಶ್ರಮಿಸಲು ನಿರ್ಧರಿಸುತ್ತಾ ಈ ಲೇಖನದಓದುಗರಲ್ಲಿಕೂಡ ಬದಲಾವಣೆಯಕಡೆ ಹೆಜ್ಜೆ ಹಾಕಲು ಕೋರುತ್ತೇನೆ.

ಇಂತಿತಮ್ಮ ವಿಶ್ವಾಸಿ ಡಾ.ಎ.ಅನಿಲ್‍ಕುಮಾರ್
ಪೀಪಲ್ಸ್ ಸರ್ಜಿಕಲ್‍ಅಂಡ್ ಮೆಟರರ್ನಿಟಿ ಹೋಮ್,
ಬಾಗೇಪಲ್ಲಿ, ಚಿಕ್ಕಬಳ್ಳಾಪುರ ಜಿಲ್ಲೆ.
9663811860 ಇmಚಿiಟ: ಜಡಿಚಿಟಿiಟಞumಚಿಡಿ0007@ಥಿಚಿhoo.ಛಿo.iಟಿ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಜಾಗೃತೆ ವಾಹನ ಓಡಾಟ ಹೆಚ್ಚಿದೆ, ಮಂಗಗಳು ಸಾಯುತ್ತಿವೆ! ಸಾ. ಸಮ್ಮೇಳನ ಮುಗಿದು ಹೋದ ಮೇಲೆ……

ಉತ್ತರ ಕನ್ನಡ ಜಿಲ್ಲೆಯ ಸಾಹಿತ್ಯ- ಸಂಸ್ಕೃತಿ ಅಭಿವೃದ್ಧಿ ಬಗ್ಗೆ ಕ್ಷಕಿರಣ ಬೀರುವ ಉತ್ತರ ಕನ್ನಡ ಜಿಲ್ಲೆಯ ೨೪ ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿದೆ....

ಮನುಷ್ಯನ ಒಳಿತನ್ನೇ ಧ್ಯಾನಿಸುತ್ತಾ……‌

ಒಂದು ಅಪರೂಪದ ಡೊಳ್ಳಿನ ಸ್ಫರ್ಧೆ ನೋಡಿದೆ. ನಮ್ಮದೇ ತಾಲೂಕಿನ ಅರೆಹಳ್ಳದ ತಂಡ ಎಷ್ಟು ಸೊಗಸಾಗಿ ಡೊಳ್ಳು ನೃತ್ಯ ಕುಣಿಯಿತು! ಕೊಡಗಿಬೈಲ್‌ ಎಂಬ ಹಳ್ಳಿಯ ಒಕ್ಕಲಿಗ...

ಶಿಕಾರಿಪುರ ಪ್ರಥಮ, ಸಿದ್ಧಾಪುರ ದ್ವಿತೀಯ, ಸಾಗರ ತೃತೀಯ

ಸಿದ್ದಾಪುರದಲ್ಲಿ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ರಾಜ್ಯ ಮಟ್ಟದ ಡೊಳ್ಳು ಕುಣಿತ ಸ್ಪರ್ಧೆಯಲ್ಲಿ ಬೀರಲಿಂಗೇಶ್ವರ ಡೊಳ್ಳಿನ ಸಂಘ ಅಂಬಾರಗೊಪ್ಪ ಶಿಕಾರಿಪುರ ಪ್ರಥಮ,ಸಿದ್ದಿವಿನಾಯಕ...

ಮಕ್ಕಳಿಗೆ ಆಸ್ತಿಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸಿ

ಮಕ್ಕಳಿಗೆ ಆಸ್ತಿ,ಆಭರಣ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾ ಗಿಸಿ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದ್ದಾರೆ. ಸಿದ್ಧಾಪುರ ಹಾಳದಕಟ್ಟಾ ಮತ್ತು ಕೊಳಗಿ ಪ್ರಾಥಮಿಕ ಶಾಲೆಗಳಲ್ಲಿ...

ಮಾಧ್ಯಮ ಪ್ರತಿನಿಧಿಗಳ ಸಂಘದ ಪದಾಧಿಕಾರಿಗಳ ಅಯ್ಕೆ

ಸಿದ್ದಾಪುರ: ತಾಲೂಕಿನಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಮಾಧ್ಯಮ ಪ್ರತಿನಿಧಿಗಳ ಸಂಘ (ರಿ) ಸಿದ್ದಾಪುರ ದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘದ ಅಧ್ಯಕ್ಷರಾಗಿ ಸಮಾಜಮುಖಿ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *