mr.ಪರ್ಫೆಕ್ಟ್‌ ಸರಳತೆಯ ಸಾಹುಕಾರ ಸಚಿವ ಸತೀಶ್‌ ಜಾರಕಿಹೊಳಿ

ಸರಿ ಸುಮಾರು ೧೭-೧೮ ವರ್ಷಗಳ ಹಿಂದಿನ ಕಥೆಯದು. ಆಗ ಜನತಾದಳದ ಜಿಲ್ಲಾ ಅಧ್ಯಕ್ಷರಾಗಿದ್ದ ಕಮಲಾಕರ್‌ ಗೋಕರ್ಣ ಕಿರಣ ಮಾಸೂರಕರ್‌ ಸೇರಿದ ನಾಲ್ಕೈದು ಜನರ ತಂಡ ಬೆಂಗಳೂರಿನ ಸತೀಶ್‌ ಜಾರಕಿಹೊಳಿಯವರ ಮನೆಗೆ ತೆರಳಿದ್ದೆವು. ಬಹುಶ: ಆಗ ಇಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ದೇವೆಗೌಡರ ವಿರುದ್ಧ ಬಂಡಾಯವೆದ್ದು ಅಹಿಂದ ಪ್ರಾರಂಭಿಸಬೇಕಿದ್ದ ಸಮಯವದು ಆಗ ನಾವೆಲ್ಲಾ ಪ್ರಗತಿಪರ ಜನತಾದಳದ ಪ್ರಮುಖರಾಗಿದ್ದೆವು.

ಕರ್ನಾಟಕದಲ್ಲಿ ಮೂರು ಪಕ್ಷಗಳ ವಿರುದ್ಧದ ಪರ್ಯಾಯ ಪಕ್ಷವಾಗಿ ಪ್ರಗತಿಪರ ಜನತಾದಳವನ್ನು ಕಟ್ಟುವ ಹುಮ್ಮಸ್ಸಿನಲ್ಲಿದ್ದ ಸಿದ್ಧರಾಮಯ್ಯ ಸತೀಶ ಜಾರಕಿಹೊಳಿಯವರಿಗೆ ಉನ್ನತ ಹುದ್ದೆ ಕೊಟ್ಟಿದ್ದರು. ಆಮೇಲೆ ಸಿದ್ಧರಾಮಯ್ಯ ಕಾಂಗ್ರೆಸ್‌ ಸೇರಿ ಪ್ರಗತಿಪರ ಜನತಾದಳ ಪ್ರಗತಿಕಾಣದ್ದು ಹಳೆ ಕಥೆ. ಆ ಸಮಯದಲ್ಲಿ ಇನ್ನೂ ಮಂತ್ರಿಯಾಗದ ಸಾಹುಕಾರ ಸತೀಶ ಜಾರಕಿಹೊಳಿ ತಮ್ಮ ಗಟ್ಟಿತನ, ಪ್ರಗತಿಪರತೆಯಿಂದ ಹೆಸರು ಮಾಡಿದ್ದರು.

ಸತೀಶ್‌ ಜಾರಕಿಹೊಳಿ ಎಂದರೆ ಹಾಗೆ, ಹೀಗೆ ಎಂದುಕೊಂಡಿದ್ದ (ಬ್ರಮಿಸಿದ್ದ) ನಮ್ಮಲ್ಲಿ ಎಲ್ಲಾ ರಾಜಕಾರಣಿಯಂತೆ ಇವರೂ ಕೂಡಾ ಐಶಾರಾಮಿ,ವೈಭವದಲ್ಲಿರುತ್ತಾರೆ ಎಂದುಕೊಂಡು ತೆರಳಿದ್ದ ನಮಗೆ ಸತೀಶ್‌ ಜಾರಕಿಹೊಳೆಯವರ ಮೊದಲ ದರ್ಶನ ನಿಬ್ಬೆರಗಾಗಿಸಿತ್ತು. ಬೆಂಗಳೂರಿನ ತಮ್ಮದೇ ಬಂಗಲೆಯಲ್ಲಿದ್ದ ಸತೀಶಣ್ಣ ಜನಸಾಮಾನ್ಯನಂತಿದ್ದರು. ಎತ್ತರದ ಬಡಕಲು ದೇಹದ ಬಿಳಿ ಅರ್ಧತೋಳಿನ ಸಾದಾ ಅಂಗಿಯ ಸತೀಶ ಆ ಬಂಗಲೆಯಲ್ಲಿರದಿದ್ದರೆ ಇವರ್ಯಾರೋ! ಸಹಾಯಕರೋ? ಸೆಕಿರಿಟಿಯೋ ಎನ್ನುವಷ್ಟು ಸರಳವಾಗಿದ್ದರು ಚೀಪ್‌ ಹವಾಯಿ ಚಪ್ಪಲಿಯ ಸರದಾರ ಸತೀಶ್.‌

ಪ್ರಗತಿಪರ, ಖಡಕ್‌ ಮಾತಿನ, ನೇರ ನಡೆನುಡಿಯ ಸತೀಶ್‌ ಸಾಹುಕಾರ್‌ ಎಷ್ಟು ಜನಪ್ರೀಯ ಜನಾನುರಾಗಿ ಹೃದಯ ಶ್ರೀಮಂತರೋ ಅಷ್ಟೇ ಸರಳಾತಿಸರಳ ಮನುಷ್ಯ. ಗುರುವಾರ ರಾಯರಂತೆ ದಿಢೀರನೆ ನಮ್ಮೂರಿಗೆ ಬಂದ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳೆ ಈ ಎರಡು ದಶಕಗಳಲ್ಲಿ ಎಳ್ಳಷ್ಟೂ ಬದಲಾದಂತೆ ಕಾಣಲಿಲ್ಲ. ತಮ್ಮ ಸಚಿವಾಲಯದ ಕೆಲಸ ವೈಯಕ್ತಿಕ ಕೆಲಸವೋ? ಜನಾರ್ಧನನ ಕೆಲಸವೋ ಎಂಬಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ತಿರುಗಾಡಿ ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳನ್ನು ವೀಕ್ಷಿಸಿ, ಅಧಿಕಾರಿಗಳೊಂದಿಗೆ ಚರ್ಚಿಸಿದ ಸಚಿವರ ಸರಳತೆ,ಸಾರ್ವಜನಿಕರೊಂದಿಗೆ ಬೆರೆತು ತಮ್ಮ ಇಲಾಖೆಯ ಕಾಮಗಾರಿಗಳ ಉಪಯೋಗದ ಬಗ್ಗೆ ಚರ್ಚಿಸಿದ ರೀತಿ ಅವರ ಕ್ರೀಯಾಶೀಲತೆ, ಬದ್ಧತೆಗೆ ಸಾಕ್ಷಿ ಒದಗಿಸುವಂತಿತ್ತು. ಜಾರಕಿಹೊಳಿ ಕುಟುಂಬವೆಂದರೆ ಹಾಗೆ, ಹೀಗೆ ಎನ್ನುವ ಬೇಸ್‌ ಲೆಸ್‌ ಆರೋಪಗಳ ನಡುವೆ ಸತೀಶ ಜಾರಕಿಹೊಳೆಯವರ ದಿಟ್ಟತನದ ಜನಪರತೆ ಅವರನ್ನು ಕರ್ನಾಟಕದ ಮುಖ್ಯಮಂತ್ರಿಗಳ ಪಟ್ಟಿಯ ಯಾದಿಯಲ್ಲಿ ನಿಲ್ಲಿಸಿದರೂ ಆಶ್ಚ ರ್ಯವಿಲ್ಲ ಎನಿಸಿತು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

1 Comment

Leave a Reply

Your email address will not be published. Required fields are marked *