ಕಸ್ತೂರಿ ರಂಗನ್ ವರದಿ…. ಭಿನ್ನಮತ

ಕಸ್ತೂರಿರಂಗನ್ ವರದಿ ಕುರಿತು ಸಂಸದ ಕಾಗೇರಿ ಹೇಳಿಕೆಗೆ ಅರ್ಜುನ್ ಆಕ್ರೋಶ

ಬೆಟ್ಟ ಅಕ್ರಮಿಗಳ ಪರ ನಿಲುವಿಗೆ ಭೀಮಘರ್ಜನೆ ಆಕ್ಷೇಪ

ಶಿರಸಿ : ಕೆನರಾ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಕಸ್ತೂರಿ ರಂಗನ್ ವರದಿ ಜಾರಿಯ ವಿರುದ್ಧ ಮಾತನಾಡುತ್ತಾ, “ರಾಜ್ಯ ಸರ್ಕಾರ ವೈಜ್ಞಾನಿಕ ಕಾರಣಗಳನ್ನು ಸಂಗ್ರಹಿಸಿ ಕೇಂದ್ರ ಮತ್ತು ಸುಪ್ರೀಂ ಕೋರ್ಟ್‌ಗೆ ಮನದಟ್ಟು ಮಾಡಿ ವರದಿಯನ್ನು ತಿರಸ್ಕರಿಸಬೇಕು” ಎಂದು ನೀಡಿರುವ ಹೇಳಿಕೆ ಸಂಪೂರ್ಣವಾಗಿ ಪ್ರಕೃತಿ ವಿರೋಧಿ ಹಾಗೂ ಅರಣ್ಯ ಕಬಳಿಕೆದಾರರನ್ನು ರಕ್ಷಿಸುವ ತಂತ್ರವಾಗಿದೆ ಎಂದು ಭೀಮಘರ್ಜನೆ ಸಂಘಟನೆಯ ಜಿಲ್ಲಾಧ್ಯಕ್ಷರಾದ ಅರ್ಜುನ್ ಮಿಂಟಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿರಸಿ, ಸಿದ್ದಾಪುರ ಹಾಗೂ ಯಲ್ಲಾಪುರ ವ್ಯಾಪ್ತಿಯಲ್ಲಿ ಬ್ರಿಟಿಷರ ಕಾಲದ ‘ಬಾಗಾಯತು ಬೆಟ್ಟದ ಸವಲತ್ತು’ ಮತ್ತು ‘ಹಳೆಯ ಒತ್ತುವರಿ’ ಎಂಬ ಜಾಣ ನೆಪಗಳನ್ನು ಒಡ್ಡಿ, ಸಾವಿರಾರು ಎಕರೆ ‘ಸಂರಕ್ಷಿತ ಅರಣ್ಯ’ ಭೂಮಿಯನ್ನು ಕಬಳಿಸಿ, ಕೋಟಿ ಕೋಟಿ ಮೌಲ್ಯದ ಕಾಂಕ್ರೀಟ್ ಬಂಗಲೆ, ಅಕ್ರಮ ತೋಟ ಮಾಡಿ ವೃಕ್ಷ ನಾಶ ಮಾಡಿರುವುದೇ ನಿಜವಾದ ಪರಿಸರ ವಿನಾಶ ಎಂಬುದನ್ನು ಸಂಸದರು ಮರೆತಂತಿದೆ.
ಕಸ್ತೂರಿ ರಂಗನ್ ವರದಿ ಕೇವಲ ಬೃಹತ್ ಗಣಿಗಾರಿಕೆ, ಬೃಹತ್ ಕಮರ್ಷಿಯಲ್ ಕಟ್ಟಡಗಳು ಹಾಗೂ ಸರ್ಕಾರಿ ಅರಣ್ಯ ಕಬಳಿಕೆಗೆ ಮಾತ್ರ ತಡೆ ಒಡ್ಡುತ್ತದೆ ಹೊರತು ಸಾಮಾನ್ಯ ರೈತರ ಕೃಷಿ, ಮನೆ ಅಥವಾ ದಿನನಿತ್ಯದ ಜೀವನೋಪಾಯಕ್ಕಲ್ಲ! ಹೀಗಿರುವಾಗ ಬಡ ರೈತರ ಹೆಸರನ್ನು ಗುರಾಣಿಯನ್ನಾಗಿ ಬಳಸಿಕೊಂಡು ಅರಣ್ಯದಲ್ಲಿ ಬಂಗಲೆ ಕಟ್ಟಿಕೊಂಡ ಶ್ರೀಮಂತ ಒತ್ತುವರಿದಾರರನ್ನು ರಕ್ಷಿಸಲು ನಾಯಕರು ಪೈಪೋಟಿಗೆ ಬಿದ್ದಿರುವುದು ಖಂಡನೀಯ ಎಂದು ಅರ್ಜುನ್ ಕಟುವಾಗಿ ಟೀಕಿಸಿದ್ದಾರೆ. ಹಾಗೆಯೇ ಇಂತಹ ಹೇಳಿಕೆಗಳಿಂದ ಅಕ್ರಮ ಬೆಟ್ಟ ಕಬಳಿಕೆ ಪ್ರಕರಣಗಳನ್ನು ಮುಚ್ಚಿ ಹಾಕಲು ಸಾಧ್ಯವಿಲ್ಲ ಎಂಬುದನ್ನು ಎಲ್ಲರೂ ಅರಿಯುವುದು ಒಳ್ಳೆಯದು ಎಂಬ ಉತ್ತರ ನೀಡಿದ್ದಾರೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

aghanaashini ಅಘನಾಶಿನಿ ಉಳಿಸಲು ಭಾಗೀನ

ಸಿದ್ದಾಪುರ: ದೇಶದ ಪವಿತ್ರ ನದಿಯಾದ ಅಘನಾಷಿನಿ ಯಾವುದೇ ಆಣೆಕಟ್ಟು, ನದಿ ತಿರುವಿನಂತೆ ಯೋಜನೆಗಳಿಂದ ಅಪವಿತ್ರಗೊಳ್ಳದೆ ಪವಿತ್ರವಾಗಿ ಇರುವಂತೆ, ಕಾಲಕಾಲಕ್ಕೆ ಮಳೆ-ಬೆಳೆಯಾಗಿ ನಾಡಿನ‌ ಸಮಸ್ತ ಜನತೆಗೆ...

ಕಥಾ ಸರಣಿ..೦೨- ಪೊಲೀಸ್ ಕೆಲಸ ಮಾಡದಿರುವುದೂ ದೇಶದ್ರೋಹ…

ನನ್ನ ಛತ್ರಿಯೇ… ಬೇಕು…! ಜಜ್… ಎಲ್ರಿ ಛತ್ರಿ ಕತೆ ಮುಗಿಸಬಹುದಾ? fine… ಪಿ. ಪಿ. ಇದು ನನ್ನ ಸರ್ವೀಸ್ ನಲ್ಲೇ ಅಪರೂಪದ ಪ್ರಕರಣ.. ಮಾಜಿ...

ಕಸ್ತೂರಿ ರಂಗನ್ ವರದಿ…. ಭಿನ್ನಮತ

ಕಸ್ತೂರಿರಂಗನ್ ವರದಿ ಕುರಿತು ಸಂಸದ ಕಾಗೇರಿ ಹೇಳಿಕೆಗೆ ಅರ್ಜುನ್ ಆಕ್ರೋಶ ಬೆಟ್ಟ ಅಕ್ರಮಿಗಳ ಪರ ನಿಲುವಿಗೆ ಭೀಮಘರ್ಜನೆ ಆಕ್ಷೇಪ ಶಿರಸಿ : ಕೆನರಾ ಸಂಸದ...

ಕಥಾ ಸರಣಿ -೦೧ –

ಜಜ್. ಹಾಗಾದರೆ… ಒಬ್ಬ ವ್ಯಕ್ತಿ ಒಂದೇ ರಾತ್ರಿ ಐದು ಕೊಲೆ ಮಾಡಿದ್ದಾನೆ ಎಂದು ನಾನೂ ನಂಬಬೇಕೆ? ವಕೀಲ- ಮೈ ಲಾರ್ಡ್… ಅವನೇ ಒಪ್ಪಿಕೊಂಡಿದ್ದಾನೆ…. ಕೊಲೆಯ...

ಆರ್ಥಿಕ ಸಬಲೀಕರಣಕ್ಕೆ ಸಹಕಾರಿ ಸಾಥ್

ಶಿರಸಿ: ಸಹಕಾರ ಕ್ಷೇತ್ರವು ಗ್ರಾಮೀಣ ಹಾಗೂ ನಗರ ಪ್ರದೇಶಗಳ ಆರ್ಥಿಕ ಸಬಲೀಕರಣಕ್ಕೆ ಪ್ರಮುಖ ಶಕ್ತಿಯಾಗಿದೆ ಎಂದು ಶಾಸಕ ಭೀಮಣ್ಣ ಟಿ. ನಾಯ್ಕ ಹೇಳಿದರು. ಶಿರಸಿಯ...

Latest Posts

aghanaashini ಅಘನಾಶಿನಿ ಉಳಿಸಲು ಭಾಗೀನ

ಸಿದ್ದಾಪುರ: ದೇಶದ ಪವಿತ್ರ ನದಿಯಾದ ಅಘನಾಷಿನಿ ಯಾವುದೇ ಆಣೆಕಟ್ಟು, ನದಿ ತಿರುವಿನಂತೆ ಯೋಜನೆಗಳಿಂದ ಅಪವಿತ್ರಗೊಳ್ಳದೆ ಪವಿತ್ರವಾಗಿ ಇರುವಂತೆ, ಕಾಲಕಾಲಕ್ಕೆ ಮಳೆ-ಬೆಳೆಯಾಗಿ ನಾಡಿನ‌ ಸಮಸ್ತ ಜನತೆಗೆ ಒಳಿತನ್ನು ನೀಡುವಂತೆ ಪಾರ್ಥಿಸಿ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಸಿದ್ದಾಪುರ ತಾಲೂಕಿನ ಬಾಳೂರಿನಲ್ಲಿ ಅಘನಾಷಿನಿಗೆ‌ ಬಾಗಿನ ಅರ್ಪಿಸಿ ಪವಿತ್ರ ಗಂಗಾ ಪೂಜೆ‌ ನೆರವೇರಿಸಿದರು.ಅಘನಾಶಿನಿಯ ಉಗಮಸ್ಥಾನವಾದ ಶಿರಸಿ ನಗರದ...

Recommended For You

About the Author: Kanneshwar Naik

Leave a Reply

Your email address will not be published. Required fields are marked *