



ಸಿದ್ದಾಪುರ: ದೇಶದ ಪವಿತ್ರ ನದಿಯಾದ ಅಘನಾಷಿನಿ ಯಾವುದೇ ಆಣೆಕಟ್ಟು, ನದಿ ತಿರುವಿನಂತೆ ಯೋಜನೆಗಳಿಂದ ಅಪವಿತ್ರಗೊಳ್ಳದೆ ಪವಿತ್ರವಾಗಿ ಇರುವಂತೆ, ಕಾಲಕಾಲಕ್ಕೆ ಮಳೆ-ಬೆಳೆಯಾಗಿ ನಾಡಿನ ಸಮಸ್ತ ಜನತೆಗೆ ಒಳಿತನ್ನು ನೀಡುವಂತೆ ಪಾರ್ಥಿಸಿ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಸಿದ್ದಾಪುರ ತಾಲೂಕಿನ ಬಾಳೂರಿನಲ್ಲಿ ಅಘನಾಷಿನಿಗೆ ಬಾಗಿನ ಅರ್ಪಿಸಿ ಪವಿತ್ರ ಗಂಗಾ ಪೂಜೆ ನೆರವೇರಿಸಿದರು.
ಅಘನಾಶಿನಿಯ ಉಗಮಸ್ಥಾನವಾದ ಶಿರಸಿ ನಗರದ ಶಂಕರಹೊಂಡದಲ್ಲಿ ಪೂಜೆ ಸಲ್ಲಿಸಿ ನಂತರ ಸಿದ್ದಾಪುರದ ಬಾಳೂರಿನಲ್ಲಿ ಮಂಜುಗುಣಿ ಹಾಗೂ ಹೆರೂರ, ಹಾರ್ಸಿಕಟ್ಟಾ ಭಾಗದಿಂದ ಬಂದು ನೀರು ಸೇರುವ ಸ್ಥಳದಲ್ಲಿ ಕುಟುಂಬ ಸಮೇತರಾಗಿ ಸಕಲ ಧಾರ್ಮಿಕ ವಿಧಿ-ವಿಧಾನದೊಂದಿಗೆ ಪೂಜೆ ಸಲ್ಲಿಸಿ ಶಿರಸಿ-ಸಿದ್ದಾಪುರ ಕ್ಷೇತ್ರದ ಜನತೆಯ ಪರವಾಗಿ ಬಾಗೀನ ಅರ್ಪಿಸಿ ಗಂಗಾ ಪೂಜೆ ನೆರವೇರಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ದೇಶದಲ್ಲಿರುವ ಎಕೈಕ ಪವಿತ್ರ ನದಿ ಅಘನಾಶಿನಿ ಈ ಭಾಗದ ಜನಜೀವನದ ಜೀವನದಿಯಾಗಿದೆ. ಪಾಪನಾಶಿನಿ ಎಂದು ಕರೆಸಿಕೊಳ್ಳುವ ಅಘನಾಶಿನಿ ಈಗಿರುವಂತೆ ಪವಿತ್ರವಾಗಿರಬೇಕು. ಬೇಡ್ತಿ-ಅಘನಾಶಿನಿ ನದಿ ತಿರುವು ಎಂಬ ಪ್ರಸ್ತಾಪವನ್ನು ವಿರೋಧಿಸಿ ಈ ಭಾಗದ ಸ್ವಾಮೀಜಿಗಳ ನೇತ್ರತ್ವದಲ್ಲಿ ಶಿರಸಿಯಲ್ಲಿ ಸಹಸ್ರಾರು ಜನ ಸೇರಿ ಬೃಹತ್ ಪ್ರತಿಭಟನಾ ಸಭೆ ನಡೆಸಿ ಜಿಲ್ಲೆಯ ಸಚಿವರು, ಸಂಸದರು, ಶಾಸಕರೊಂದಿಗೆ ದೆಹಲಿಗೆ ನಿಯೋಗ ತೆರಳಿ ನದಿ ತಿರುವು ಯೋಜನೆಯನ್ನು ಒಕ್ಕೊರಲಿನಿಂದ ವಿರೋಧಿಸಲಾಗಿದೆ. ಅಘನಾಶಿನಿಗೆ ಯಾವುದೇ ಯೋಜನೆಗಳು ಬಾರದಂತೆ ಪ್ರಾರ್ಥಿಸಿ ರೈತರು ಹಾಗೂ ಸಮಸ್ತ ಜನತೆಯ ಒಳಿತನ್ನು ಬಯಸಿ ಬಾಗೀನ ಅರ್ಪಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಿದ್ದಾಪುರ ತಾಲೂಕಾ ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಜಿ.ನಾಗರಾಜ, ಶಿರಸಿ ತಾಲೂಕಾ ಗ್ಯಾರೆಂಟಿ ಸಮಿತಿ ಅಧ್ಯಕ್ಷೆ ಸುಮಾ ಉಗ್ರಾಣಕರ್, ಸ್ಥಳೀಯ ಮುಖಂಡರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.




_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________

