


ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ ಸುರಿದು ತಂಪು ಮಾಡಲಿ ಎನ್ನುವ ಬಹುದಿನಗಳ ನಿರೀಕ್ಷೆಯೇನೋ ಫಲಿಸಿದೆ. ಆದರೆ ವಿಪರೀತ ಗಾಳಿಯಿಂದಾಗಿ ಅಪಾರ ಹಾನಿ ಸಂಭವಿಸಿದೆ. ಸಿದ್ದಾಪುರ ತಾಲೂಕಿನಾದ್ಯಂತ ಮರಗಳು, ವಿದ್ಯುತ್ ಕಂಬಗಳು ಸರಣಿಯಂತೆ ಧರೆಗೆ ಉರುಳಿದ್ದು ಅಪಾರ ಹಾನಿ ಸಂಭವಿಸಿದೆ. ಮಳೆ,ಗಾಳಿ ಸಿಡಿಲು,ಮಿಂಚುಗಳೊಂದಿಗೆ ಒಂದು ಘಂಟೆಗೂ ಅಧಿಕ ಸಮಯ ಸುರಿದ ಮಳೆ ಮಲೆನಾಡನ್ನು ತಂಪು ಮಾಡಿದ್ದು ಇದರಿಂದಾದ ಹಾನಿ ಮಾತ್ರ ಈವರೆಗೂ ಅಂದಾಜಿಗೂ ಸಿಕ್ಕಿಲ್ಲ.


ಕಾಡುಮರಗಳು ಅಡಕೆ ತೋಟ, ಮನೆ ರಸ್ತೆಗಳ ಮೆಲೆ ಬಿದ್ದಿದ್ದು ಬಹುತೇಕ ಕಡೆ ಸ್ಥಳೀಯರೇ ಈ ತೊಂದರೆಗಳಿಗೆ ಸ್ಫಂದಿಸಿದ್ದಾರೆ. ತಾಲೂಕಾ ಆಡಳಿತ ಕೂಡಾ ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಅಪಾರ ಪ್ರಮಾಣದಲ್ಲಿ ವಿದ್ಯುತ್ ಕಂಬಗಳು ಮುರಿದಿರುವುದರಿಂದ ಸಿದ್ಧಾಪುರ ಗ್ರಾಮೀಣ ಭಾಗದಲ್ಲಿ ವಿದ್ಯುತ್ ವ್ಯಥ್ಯಯವಾಗಿದ್ದು ಹೆಸ್ಕಾ ಕೂಡಾ ಇಂದು ಮುಂಜಾನೆಯಿಂದಲೇ ಪರಿಹಾರ ಕಾರ್ಯ ಪ್ರಾರಂಭಿಸಿದೆ.


_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






