ಶಿರಳಗಿ ಗ್ರಾ.ಪಂ. ಎರಡು ಪ್ರಕರಣಗಳು…. ಯಾರದ್ದೋ ಲಾಭಕ್ಕೆ ಯಾರಿಗೋ ಬರೆ! # love jihAd! #

ಸಿದ್ಧಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರಕರಣಗಳು ಪಿಸುಮಾತು ಬಹುದೂರ ಕೇಳಿಸುತ್ತದೆ ಎನ್ನುವಂತೆ ಸದ್ದು ಮಾಡಿವೆ.

ಪ್ರಕರಣ ಒಂದು-

ಶಿರಳಗಿ ಗ್ರಾಮ ಪಂಚಾಯತ್‌ ನ ಪಿ.ಡಿ.ಓ ರಾಜೇಶ್‌ ನಾಯ್ಕ ಮೇಲೆ ಪ್ರಭು ದೊಡ್ಮನಿ ಎನ್ನುವ ವ್ಯಕ್ತಿ ಹಲ್ಲೆಗೆ ಮುಂದಾದ ಬಗ್ಗೆ ಪ್ರಕರಣ ದಾಖಲಾಗಿದೆ. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ, ಶಿರಳಗಿ ಗ್ರಾಮ ಪಂಚಾಯತ್‌ ಪ್ರಭಾರಿ ಪಿ.ಡಿ.ಓ. ರಾಜೇಶ್‌ ಪೊಲೀಸ್‌ ದೂರು ನೀಡಿರುವ ಪ್ರಕಾರ ದಾಖಲೆ ಇಲ್ಲದ ತನ್ನ ಕೆಲಸ ಮಾಡಿಸುವ ಪ್ರಭು ದೊಡ್ಮನಿ ರಾಜೇಶ್‌ ನಾಯ್ಕರಿಗೆ ಕರ್ತವ್ಯಕ್ಕೆ ಅಡ್ಡ ಪಡಿಸಿದ್ದಲ್ಲದೆ ಕಲ್ಲಿನಿಂದ ಹೊಡೆದು ಹಿಂಸೆ ಮಾಡಿದ್ದಾನೆ ಎಂದು ಪೊಲೀಸ್‌ ದೂರಿನಲ್ಲಿ ಆರೋಪಿಸಿದ್ದಾರೆ.

ಸಿದ್ಧಾಪುರದ ಗ್ರಾಮೀಣ ಮಹಿಳಾ ಸ್ವಸಹಾಯ ಸಂಘಗಳಿಗೆ ಯಂತ್ರ ಒದಗಿಸುವ ಒಪ್ಪಂದದಲ್ಲಿ ಲಕ್ಷಾಂತರ ಹಣ ದುರುಪಯೋಗ ಪಡಿಸಿಕೊಂಡಿರುವ ಆರೋಪವಿರುವ ಪ್ರಭು ದೊಡ್ಮನಿ ತನ್ನ ಕೆಲಸಕ್ಕೆ ಕಾನೂನಾತ್ಮಕವಾಗಿ ವ್ಯವಹರಿಸಬಹುದಿತ್ತು ಆದರೆ ಅವರು ಹಲ್ಲೆ ಮಾಡಿ ಸರ್ಕಾರಿ ಸಿಬ್ಬಂದಿಗೆ ಹಿಂಸೆ ನೀಡಿರುವುದನ್ನು ಯಾರೂ ಸಮರ್ಥಿಸಲು ಸಾಧ್ಯವಿಲ್ಲ.

ರಾಜೇಶ್‌ ನಾಯ್ಕ ಹೇಳುವಂತೆ ದಾಖಲೆ ಪತ್ರಗಳು ಸರಿ ಇಲ್ಲದೆ ಉದ್ಯೋಗ ಪರವಾನಗಿ ಕೊಡುವುದು ತಪ್ಪು ಈ ಬಗ್ಗೆ ನಿಯಮ, ಕಾನೂನು ಮೀರಿಮಾಡಲು ಅವಕಾಶವಿಲ್ಲ ಇಂಥ ಕಾನೂನು ಬಾಹೀರ ಕೃತ್ಯ ಮಾಡಿಕೊಡಲಿಲ್ಲದ ಕಾರಣಕ್ಕೆ ತನ್ನ ತೇಜೋವಧೆ ಮಾಡುತ್ತಿರುವ ದಂಪತಿಗಳ ಬಗ್ಗೆ ಮಾನನಷ್ಟ ಮೊಕದ್ದಮೆ ದಾಖಲಿಸಲೂ ಅವಕಾಶವಿದೆ ಎನ್ನುತ್ತಾರೆ. ಈ ಘಟನೆ ಸರ್ಕಾರಿ ನೌಕರರ ನೈತಿಕತೆ ಕುಸಿಯುವಂತೆ ಮಾಡಿದೆ ಎಂದಿರುವ ಸರ್ಕಾರಿ ನೌಕರರ ಸಂಘ ಈ ಬಗ್ಗೆ ಸೂಕ್ತ ಕ್ರಮಕ್ಕೆ ಮನವಿ ಮಾಡಿದೆ. ಈ ಘಟನೆಯ ಮಧ್ಯೆ ರಾಜೇಶ್‌ ನಾಯ್ಕ ಮೇಲೆ ಕೂಡಾ ಪ್ರಭು ದೊಡ್ಮನಿ ದಂಪತಿಗಳಿಂದ ಪೊಲೀಸ್ ದೂರು ನೀಡುವ ವಿಫಲ ಯತ್ನ ನಡೆದಿರುವ ಬಗ್ಗೆ ವರದಿಯಾಗಿದೆ.

ಪ್ರಕರಣ -೦೨- ಲವ್‌ ಜಿಹಾದ್!‌?

ಶಿರಳಗಿ ಗ್ರಾ. ಪಂ. ನ ಹಿಂದುಳಿದ ವರ್ಗಗಳ ಯುವತಿಯೊಬ್ಬಳಿಗೆ ನಗರದ ಅನ್ಯ ಕೋಮಿನ ಯುವಕನೊಬ್ಬ ಪ್ರೀತಿ ಮಾಡುವ ನಾಟಕ ಆಡಿ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಗ್ಗೆ ಬಿ.ಜೆ.ಪಿ. ನೇತೃತ್ವದಲ್ಲಿ ದಾಖಲೆ ರಹಿತ ದೂರು ನೀಡಲಾಗಿದೆ. ಈ ಪ್ರೇಮ ಪ್ರಕರಣದಲ್ಲಿ ಅನ್ಯಾಯಕ್ಕೊಳಗಾಗಿರುವ ಯುವತಿ ಅನ್ಯ ಧರ್ಮದ ವರನೊಂದಿಗೆ ಮದುವೆಯಾಗಲು ಅಡ್ಡಿ ಮಾಡಬಹುದಾದ ಕೆಲವು ಸಂಘಟನೆಗಳ ಭಯದಿಂದಲೇ ಮದುವೆಯಾಗದೆ ಪ್ರಾಣಕಳೆದುಕೊಂಡಲು ಎನ್ನುವ ಅಭಿಪ್ರಾಯ ಒಂದು ಬಣದ್ದಾದರೆ, ಕೆಲವು ಸಂಘಟನೆಗಳು ಇದನ್ನು ಲವ್‌ ಜಿಹಾದ್‌ ಎಂದು ತೀರ್ಪು ನೀಡಿ ಬಿಟ್ಟಿವೆ.‌

ಇಲ್ಲಿ ಬಾಧಿತ ಯುವತಿಯ ಕುಟುಂಬ ವಾಸ್ತವ, ಚಾರಿತ್ರಿಕ ಸತ್ಯ ಅರಿತು ಮೌನಕ್ಕೆ ಶರಣಾದರೆ ಕೆಲವು ಸಂಘಟನೆಗಳು ಈ ವಿಚಾರದಲ್ಲಿ ರಾಜಕೀಯ ಲಾಭಕ್ಕಾಗಿ ಪ್ರಯತ್ನಿಸಿ ಸಾರ್ವಜನಿಕ ಶಾಂತಿ-ಸುವ್ಯವಸ್ಥೆ ಹಾಳು ಮಾಡಿ ಸರ್ಕಾರ

ಸ್ಥಳೀಯ ಜನಪ್ರತಿನಿಧಿಗಳಿಗೆ ಇರುಸುಮುರುಸುಮಾಡಿ ಅದರಲ್ಲಿ ರಾಜಕೀಯ ಹುಡುಕುತ್ತಿರುವ ವಾಸ್ತವ ಚರ್ಚೆಯಲ್ಲಿದೆ.

ಪೊಲೀಸ್‌ ವ್ಯವಸ್ಥೆ ವಾಸ್ತವ ತನಿಖೆ ಮಾಡಿ ತಪ್ಪಿತಸ್ಥರನ್ನು ಶಿಕ್ಷಿಸಲು ಯಾರ ತಕರಾರೂ ಇಲ್ಲ. ಆದರೆ ಬಾಧಿತರಿಗೆ ಶವ ಸಂಸ್ಕಾರ, ಇತರ ರೀತಿ-ನೀತಿಗಳಿಗೆ ನೆರವಾಗದ ಕೆಲವು ಸಂಘಟನೆಗಳು ಈಗ ಬಾಧಿತರಿಗೆ ನ್ಯಾಯ ಕೊಡಿಸುವ ಸೋಗಿನಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ಪ್ರಯತ್ನ ಮಾಡುತ್ತಿರುವುದು ಉತ್ತರ ಕನ್ನಡ ಮತ್ತು ಸಿದ್ದಾಪುರದ ಶಾಂತಿ-ಸುವ್ಯವಸ್ಥೆಗೆ ಧಕ್ಕೆ ತರುವ ದುಷ್ಟ ಪ್ರಯತ್ನ ಎಂದೇ ಚರ್ಚಿಸಲಾಗುತ್ತಿದೆ.

ಈ ಬಗ್ಗೆ ಪ್ರತಿಕ್ರೀಯಿಸಿ, ತಮ್ಮ ಹೆಸರು ಗೌಪ್ಯವಾಗಿಡಿ ಎಂದಿರುವ ಬಿ.ಜೆ.ಪಿ. ನಾಯಕರೊಬ್ಬರು ಎರಡು ಕೈ ಯಿಂದ ಚಪ್ಪಾಳೆ ಆಗಿದೆ. ಬಾಧಿತ ಯುವತಿ ಮತ್ತವರ ಕುಟುಂಬ ನೋವಿನಲ್ಲಿದೆ. ಈ ಅಸಹಾಯಕ ಕುಟುಂಬಕ್ಕೆ ನೆರವು-ಸಾಂತ್ವನ ಅಗತ್ಯ ಈಗಿದೆ. ಆದರೆ ಕೆಲವರು ಈ ಪ್ರಕರಣ ಮುಂದಿಟ್ಟುಕೊಂಡು ರಾಜಕೀಯ ಲಾಭಕ್ಕೆ ಪ್ರಯತ್ನಿಸುತಿದ್ದಾರೆ. ಇವರು ಈಗ ಯಾವ ಬೆಲೆ ತೆತ್ತಾದರೂ ಈ ಪ್ರಕರಣ ಲವ್‌ ಜಿಹಾದ್‌ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಾರೆ. ಆದರೆ ಇದರಿಂದ ಬಾಧಿತರ ಕುಟುಂಬಕ್ಕೇ ತೊಂದರೆ… ಈ ರಾಜಕೀಯ ಮಸಲತ್ತನ್ನು ನಾವು ವಿರೋಧಿಸುವಂತಿಲ್ಲ ಆದರೆ ಇಂಥ ಕೀಳು ನಡವಳಿಕೆಯನ್ನು ನಮ್ಮ ಅಂತರಾತ್ಮ ಒಪ್ಪಲ್ಲ ಎಂದು ಬೇಸರಿಸಿದ್ದಾರೆ,

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

kamalaakara bhandaari no more

ಸಮಾಜಮುಖಿ ಕೆಲಸಗಾರ, ಚಳುವಳಿಗಳ ಹಿತೈಷಿ, ಪುಸ್ತಕ ಪರಿಚಾರಕ, ಬಂಡಾಯ ಪ್ರಕಾಶನ ಮತ್ತು ಸಹಯಾನದ ಒಡನಾಡಿ ಕಮಲಾಕರ ಭಂಡಾರಿಯವರು ಈ ಬೆಳಿಗ್ಗೆ ಅಗಲಿದರೆಂದು ತಿಳಿಸಲು ತೀವ್ರ...

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

Latest Posts

kamalaakara bhandaari no more

ಸಮಾಜಮುಖಿ ಕೆಲಸಗಾರ, ಚಳುವಳಿಗಳ ಹಿತೈಷಿ, ಪುಸ್ತಕ ಪರಿಚಾರಕ, ಬಂಡಾಯ ಪ್ರಕಾಶನ ಮತ್ತು ಸಹಯಾನದ ಒಡನಾಡಿ ಕಮಲಾಕರ ಭಂಡಾರಿಯವರು ಈ ಬೆಳಿಗ್ಗೆ ಅಗಲಿದರೆಂದು ತಿಳಿಸಲು ತೀವ್ರ ದುಃಖವಾಗುತ್ತಿದೆ. ಅವರಿಗೆ ಅಂತಿಮ ನಮನಗಳು. ಅವರ ಆಶಯದಂತೆ ಮತ್ತು ಬಾಳಸಂಗಾತಿ ಪ್ರೀತಿಯ ಇನ್ನಕ್ಕ (ಇಂದಿರಾ) ಮಕ್ಕಳಾದ ಛಾಯಾ ಮತ್ತು ಅನಿಲ್ ಅವರ ಸದಾಶಯದಂತೆ ಅವರ ದೇಹವನ್ನು ವೈದ್ಯಕೀಯ ಸಂಶೋಧನೆಗಾಗಿ...

O

Recommended For You

About the Author: Kanneshwar Naik

Leave a Reply

Your email address will not be published. Required fields are marked *