

ಸಿದ್ದಾಪುರ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿದ್ದಾಪುರ ತಾಲೂಕಿನ ಕಾನಳ್ಳಿಯ ಶ್ರೀ ಚೌಡೇಶ್ವರಿ ದೇವಾಲಯದ 30ನೇ ವಾರ್ಷಿಕೋತ್ಸವ ಎಪ್ರಿಲ್ 14 ರಿಂದ 16 ರವರೆಗೆ ವಿಜೃಂಭಣೆಯಿಂದ ಜರುಗಲಿದೆ.
ಎಪ್ರಿಲ್ 14 ರಂದು ಬೆಳಿಗ್ಗೆ ದೇವರಲ್ಲಿ ಸಾಮೂಹಿಕ ಪ್ರಾರ್ಥನೆ, ಬ್ರಹ್ಮಕೂರ್ಚ ಹವನ, ಗಣೇಶ ಪೂಜೆ, ದೇವನಾಂದಿ, ಶ್ರೀ ಚೆನ್ನಮ್ಮ ದೇವಿಗೆ ಕಲಾವೃದ್ಧಿ ಹೋಮ, ವಿಶೇಷ ಪೂಜೆ, ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 7 ರಿಂದ ಸತ್ಯಸಾಯಿ ಸೇವಾ ಸಮಿತಿ ಸಿದ್ದಾಪುರದಿoದ ಭಜನಾ ಕಾರ್ಯಕ್ರಮ, ರಾತ್ರಿ 8 ಗಂಟೆಗೆ ಮೂಲಭೂತೇಶ್ವರನ ಸನ್ನಿಧಿಯಲ್ಲಿ ಉಗ್ರನರಸಿಂಹ ಹೋಮ, ಮಹಾಭೂತ ಬಲಿ ನಡೆಯಲಿದೆ.

15 ರಂದು ಯಕ್ಷಿಣಿ ದೇವಿಗೆ ಕಲಾವೃದ್ಧಿ ಹೋಮ, ನಾಗಪ್ರತಿಷ್ಠೆ, ಮಂಗಳಾರತಿ ಹಾಗೂ ಅನ್ನಸಂತರ್ಪಣೆ ಜರುಗಲಿದೆ. ಸಂಜೆ 7 ಗಂಟೆಯಿಂದ ರಾಮಾಂಜನೇಯ ಕಲಾಮಂಡಳ ಕೆಳಗಿನ ಕಂದಳ್ಳಿ ಕುಮಟಾ ದವರಿಂದ ಭಜನಾ ಕಾರ್ಯಕ್ರಮ, ರಾತ್ರಿ 8 ಗಂಟೆಗೆ ಶ್ರೀ ಹೂಣಸೂರು ಭೂತೇಶ್ವರನ ಸನ್ನಿಧಿಯಲ್ಲಿ ಉಗ್ರನರಸಿಂಹ ಹೋಮ ಹಾಗೂ ಮಹಾಭೂತ ಬಲಿ ನಡೆಯಲಿದೆ.
ಕೊನೆಯ ದಿನವಾದ 16 ರಂದು ಪಲ್ಲಕ್ಕಿ ಉತ್ಸವ, ಮಹಾಪೂರ್ಣಾಹುತಿ, ಗುರುಪಾದುಕಾ ಪೂಜೆ, ಸಾಮೂಹಿಕ ಸತ್ಯನಾರಾಯಣ ಪೂಜೆ, ಬ್ರಹ್ಮ ಕಲಶೋತ್ಸವ, ಮಹಾಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ಜರುಗಲಿದ್ದು, ಶಿರಸಿಯ ಬಣ್ಣದಮಠದ ಮನಿಪ್ರ ಶ್ರೀ ಶಿವಲಿಂಗ ಸ್ವಾಮೀಜಿ, ಜಡೆ ಶ್ರೀ ಸಂಸ್ಥಾನ ಮಠದ ಶ್ರೀಮದ್ ನಿರಂಜನ ಪ್ರಭು ಮಹಾಂತ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಅಂದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಶ್ರೀ ರಾಮೇಶ್ವರ ನಾಟ್ಯ ಸಂಘ ಕೋಲಶಿರ್ಸಿ ಯವರಿಂದ ಊರಿಗೆ ಕಾಲಿಟ್ಟ ಹುಲಿ ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಶ್ರೀ ಚೌಡೇಶ್ವರಿ ದೇವಸ್ಥಾನದ ಧರ್ಮದರ್ಶಿ ಭಾಸ್ಕರ್ ಸಿ ಕಾನಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________





