ನದಿ ತಿರುವು… ಮೂವರು ಹೀರೋಗಳು & ಜೀರೋಗಳು!!!

ನದಿತಿರುವು ಯೋಜನೆಗಳು ಉತ್ತರ ಕನ್ನಡ ಜಿಲ್ಲೆಯ ಬೇಡತಿ, ಅಘನಾಶಿನಿ, ಶರಾವತಿ ನದಿಗಳನ್ನು ತಿರುಗಿಸಲಿವೆ. ಈ ಯೋಜನೆಗಳ ಬಗ್ಗೆ ಹಿಂದಿನ ಶತಮಾನದಲ್ಲಿ ಪರಮಶಿವಯ್ಯ ಸಮೀತಿ ಸೂಚಿಸಿತ್ತು. ೯೦ ರಿಂದ ಈ ನಾಲ್ಕು ದಶಕಗಳಲ್ಲಿ ಎನೆಲ್ಲಾ ಬದಲಾವಣೆಗಳೂ ಆಗಿ ಹೋಗಿವೆ. ಆದರೆ, ಆದರೆ ನದಿ ತಿರುಗಿಸುವ ಬೃಹತ್‌ ಯೋಜನೆಗಳ ವಿಚಾರ ಬದಲಾಗಿಲ್ಲ!

ಶಾಲ್ಮಲಾ, ಅಘನಾಶಿನಿ, ಬೇಡ್ತಿ, ಶರಾವತಿಗಳು ಉತ್ತರಕನ್ನಡದ ಮೂಲಕ ಹರಿದು ಅರಬ್ಬೀ ಸಮುದ್ರ ಸೇರುತ್ತವೆ. ಇವುಗಳ ಹರಿಯುವಿಕೆ ಸರಿಸುಮಾರು ನೂರು ಕಿಲೋಮೀಟರ್ಗಳ ವ್ಯಾಪ್ತಿ. ಈ ನದಿಗಳ ಸ್ವರೂಪ ಬದಲಾಗಬಾರದು ಇವುಗಳಿಗೂ ಮೂಲಭೂತ ಹಕ್ಕುಗಳುಂಟು! ಎಂದು ಪ್ರತಿಪಾದಿಸಬಹುದಿತ್ತು!

ಆದರೆ ಆಗಿದ್ದು ಬೇರೆ…. ನದಿ- ನೀರು- ನಾಗರಿಕತೆಗಳ ಕಾರ್ಯಕಾರಿಣಿ ಸಂಬಂಧಗಳ ಹಿನ್ನೆಲೆಯಲ್ಲಿ ಯಾವ ನದಿಗಳನ್ನೂ ತಿರುಗಿಸಬಾರದು… ಆದರೆ ಬೊಮ್ಮಾಯಿ- ಮೋದಿ ಸಾಹೇಬರು ಹಾಗೆ ಹೇಳುತ್ತಿಲ್ಲ!

ಜೋಗದ ವಿಚಾರದಲ್ಲಿ ನೆಹರೂ ಪುಟವೊಂದರ ತುದಿ ಹರಿದು ಇಷ್ಟು ಹರಿದು ಹೋದರೆ… ಅಂದ ಕೆಡಬಹುದು ಆದರೆ ಆಕಾರ, ಚಂಧ! ಕೆಡಲ್ಲ ಈ ೫ ಪ್ರತಿಶತ ಮೂಲೆ ಕಳೆದುಕೊಂಡು ೯೫% ಜನರಿಗೆ ನೆರವಾಗುತ್ತೇವೆ ಎಂದಿದ್ದರು. ಈಗಲೂ ಹಾಗೆ ಮಲೆನಾಡಿನ ೨೦ ಸಾವಿರ ಜನರಿಗೆ ತೊಂದರೆ ಕೊಟ್ಟು ಬಯಲುಸೀಮೆಯ ೨೦ ಲಕ್ಷ ಜನರಿಗೆ ಜೀವಜಲ ಕೊಡುವ ನಿರ್ಧಾರವನ್ನು ಸರ್ಕಾರಗಳು ಮಾಡಿವೆ!

ಜನಪ್ರತಿನಿಧಿಗಳಲ್ಲಿ ಸಚಿವ ವೈದ್ಯ, ಶಾಸಕ ಭೀಮಣ್ಣ ನದಿ ತಿರುವಿಗೆ ವಿರೋಧವಾಗಿ, ಸಂಸದ ಬಸವರಾಜ್‌ ಬೊಮ್ಮಾಯಿ ನದಿ ತಿರುವು ಪರವಾಗಿ ಹೀರೋಗಳಾಗುತಿದ್ದಾರೆ. ವೈದ್ಯ ಕಾಗೇರಿಯವರಿಗೆ ನೀವು ಮೂವತ್ತು ವರ್ಷಗಳಿಂದ ಜನಪ್ರತಿನಿಧಿಯಾಗಿ ಏನು ಮಾಡುತಿದ್ದೀರಿ…? ಎಂದು ಪ್ರಶ್ನಿಸಿದರೆ… ಭೀಮಣ್ಣ ಸಂಸದ ಬೊಮ್ಮಾಯಿಗೆ ಹುಷಾರ್‌ ಎಂದು ಹೆದರಿಸಿದ್ದಾರೆ. ಬೊಮ್ಮಾಯಿ ನಾನೇನೂ ಕೇರ್‌ ಮಾಡಲ್ಲ ಎನ್ನುತ್ತಾ ತನ್ನ ಪ್ರಯತ್ನ ಮುಂದುವರಿಸುತ್ತೇನೆ ಎಂದಿದ್ದಾರೆ.

ಉತ್ತರ ಕನ್ನಡವನ್ನು ೩೦ ವರ್ಷಗಳಿಂದ ಗುತ್ತಿಗೆ ಪಡೆದಿದ್ದ ಅನಂತಕುಮಾರ ಹೆಗಡೆ ತಲೆಮರೆಸಿಕೊಂಡಿದ್ದಾರೆ. ದೇಶಪಾಂಡೆ ನಾಘರ್‌ ಕಾ…. ಎನಿಸಿಕೊಂಡಿದ್ದಾರೆ. ಉಪಾಯಗಾರ ಸಂಸದ ವಿಶ್ವೇಶ್ವರ ಹೆಗಡೆ ಬಾಲಸಿಕ್ಕ ಬೆಕ್ಕಿನಂತಾಗಿದ್ದಾರೆ!. ಪರ ವಿರೋಧವೇನೇ ಇರಲಿ ನದಿತಿರುವು ಯೋಜನೆಯಲ್ಲಿ ನಿಶ್ಚಿತವಾಗಿ ಬೊಮ್ಮಾಯಿ, ಮಂಕಾಳು ವೈದ್ಯ, ಭೀಮಣ್ಣ ಹೀರೋಗಳಾದರೆ…

ಮೂವತ್ತು ವರ್ಷಗಳಿಂದ ಉತ್ತರ ಕನ್ನಡ ಆಳಿದ ಅವಳೀ ಹೆಗಡೆಗಳು, ಹಿರಿಯ ಅಣ್ಣ ದೇಶಪಾಂಡೆ ಜೀರೋಗಳಾಗಿ ಕಾಣುತಿದ್ದಾರೆ… ನೀವೇನಂತೀರಾ…!?

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *