ಸಿದ್ಧಾಪುರದ ಇಬ್ಬರು ಯುವಕರು ಹತ್ಯೆಯಾದರೆ…..? ಸೂಳೆಮುರಕಿ ಪ್ರಕರಣ!

ಒಂದೇ ಕುಟುಂಬದ ಇಬ್ಬರು ದಲಿತ ಯುವಕರು ಬುಧವಾರ ಸಿದ್ಧಾಪುರ-ಹೊನ್ನಾವರ ಅಂದರೆ… ಹೊನ್ನಾವರ ಬೆಂಗಳೂರು ಮಾರ್ಗದಲ್ಲಿ ಸುಟ್ಟು ಕರಕಲಾದ ವಿಚಾರ ಒಂದು ದಿನದ ನಂತರ ಬಹಿರಂಗವಾಗಿದೆ…

ಈ ಬಡ ದಲಿತ ಯುವಕರ ಸಾವಿನ ಹಿಂದೆ ಸಂಶಯದ ಹುತ್ತವೇ ಎದ್ದಿದೆ.

ಸಿದ್ಧಾಪುರ ಕುಡುಗುಂದದ ಮಂಜುನಾಥ, ಚಂದ್ರಶೇಖರ್‌ ಅಣ್ಣ-ತಮ್ಮ ಇವರಲ್ಲಿ ಒಬ್ಬನಿಗೆ ವಿವಾಹವಾಗಿ ಒಂದು ಶಿಶು ಇದ್ದರೆ ಇನ್ನೊಬ್ಬ ತನ್ನ ಮತ್ತೊಬ್ಬ ತಮ್ಮನಂತೆ ಅವಿವಾಹಿತ.

ಈ ಇಬ್ಬರೂ ಸಹೋದರರು ಚಂದ್ರಘಟಕಿಯ ಪ್ರಮೋದ್‌ ಎನ್ನುವವರ ಬಳಿ ದಿನಂಪ್ರತಿ ಕೆಲಸ ಮಾಡಿಕೊಂಡಿದ್ದವರು.

ಈ ಇಬ್ಬರೂ ಸಹೋದರು ಬೈಕ್‌ ನಿಂದ ಮನೆ ಬಿಟ್ಟವರು ಮಾಲೀಕ ಪ್ರಮೋದ್‌ ಬಳಿ ಇದ್ದ ಮತ್ಯಾರದೋ ಕಾರನಲ್ಲಿ ಹೋಗಿ ಸಂಶಯಾಸ್ಪದ ಸಾವು ಕಂಡ ಬಗ್ಗೆ ಅನೇಕ ವದಂತಿಗಳು ಚರ್ಚೆಯಲ್ಲಿವೆ.

ಅಡ್ಡಕಸಬಿ ಪ್ರಮೋದ್‌ ಬಳಿ ಕೆಲಸ ಮಾಡುತಿದ್ದ ಈ ಹಸ್ಲರ್‌ ಸಹೋದರರು ಪ್ರಮೋದನ ಸಕಲೆಂಟೂ ಅವ್ಯವಹಾರಗಳ ಪಾಲುದಾರರು, ಇನ್ನು ಪ್ರಮೋದ ಎಂಥಾ ಪ್ರಳಯಾಂತಕನೆಂದರೆ… ಹಳೆಯ ವಾಹನಗಳನ್ನು ಖರೀದಿಸಿ ವಾಹನ ವಿಮೆ ಹಣಕ್ಕಾಗಿ ಸುಡುತಿದ್ದ ಭಯಂಕರ ವ್ಯಕ್ತಿ ಎನ್ನಲಾಗಿದೆ. ಕಳೆದ ಮಂಗಳವಾರ ಮಧ್ಯಾಹ್ನದ ವೇಳೆಗೆ ಮನೆಯಿಂದ ಹೊರಟಿದ್ದ ಸಹೋದರರ ಮೊಬೈಲ್‌ ಗಳು ಸಂಜೆ ವೇಳೆಗೆ ಸ್ವಿಚ್‌ ಆಫ್‌ ಆಗಿದ್ದವು.

ಮಾರನೇ ದಿನದ ಬುಧವಾರ ಈ ಇಬ್ಬರೂ ಸಹೋದರರು ಒಂದು ವಾಹನದಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪ್ರಮೋದನ ಅಕ್ರಮವ್ಯವಹಾರಗಳಿಗೆ ಬಳಕೆಯಾಗುತಿದ್ದ ಈ ಇಬ್ಬರು ಸಹೋದರರ ಹೆಸರಿಗೆ ವಾರ್ಷಿಕ ೫ ಲಕ್ಷಗಳ ಕಂತಿನ ವಿಮಾ ಪಾಲಸಿಗಳಿದ್ದು !ಇವುಗಳಿಗೆ ನಾಮಿನಿ ಪ್ರಮೋದ್‌ ನಾಯ್ಕ ಆಗಿದ್ದ !!? ಎನ್ನುವಲ್ಲಿಗೆ ಕುಚ್‌ ಗಡಬಡ ಹೈ ಎನ್ನುವ ಚರ್ಚೆಗಳ ವದಂತಿ ಕೇಳೀಬರುತ್ತಿದೆ.

ಈಗ ಉಳಿದಿರುವ ಪ್ರಶ್ನೆಗಳು… * ಅಕ್ರಮವ್ಯವಹಾರಿ ಪ್ರಮೋದ್‌ ನಾಪತ್ತೆಯಾಗಲು ಕಾರಣವೇನು?

ವಾಹನ ಚಲಾಯಿಸದ ಇಬ್ಬರು ಸಹೋದರರು ಒಂದೇ ಕಾರಿನಲ್ಲಿ ಸುಟ್ಟು ಕರಕಲಾಗಲು ಹೇಗೆ ಸಾಧ್ಯ?

# ವಿಮಾ ಪರಿಹಾರ ಪಡೆಯಲು ಬೆಂಕಿಯಾಟ ಆಡುವ ಪ್ರಮೋದ್‌ ವಿಮೆ ಚಾಲ್ತಿಇಲ್ಲದ ಕಾರ್‌ ನಲ್ಲಿ ಜೀವವಿಮೆ ಮಾಡಿಸಿದ್ದ ಇಬ್ಬರು ಸಹೋದರರನ್ನು ಮುಗಿಸಿಬಿಟ್ಟನೆ!?

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *