

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ.

ಈ ಬಗ್ಗೆ vss ಆಡಳಿತ ಸಮೀತಿ ಸಹಾಯಕ ಪ್ರಬಂಧಕರಿಗೆ ದೂರು ನೀಡಿದೆ. ಆಡಳಿತ ಸಮೀತಿ ನೀಡಿದ ವರದಿ/ ದೂರಿನಲ್ಲಿ ಒಟ್ಟೂ ಆಗಿರುವ ೧೧.೧೧ ಕೋಟಿ ಅವ್ಯವಹಾರದ ಹಿಂದೆ ಮಾರುತಿ ಮಾಳವಿ ಕೈ ಚಳಕವಿದ್ದು ೫ ಕೋಟಿಗೂ ಹೆಚ್ಚು ಸಾರ್ವಜನಿಕರ ಠೇವಣಿ ಜೊತೆಗೆ ಸರಿಸುಮಾರು ೬ ಕೋಟಿ ಯಷ್ಟು ಸಂಸ್ಥೆಯ ಲಾಭ/ ದುಡಿಯುವ ಬಂಡವಾಳವನ್ನೇ ಎಗರಿ ಸಿರುವುದಾಗಿ ದೂರಲಾಗಿದೆ.
ಈ ದೂರಿಗೆ ಲಿಖಿತ ಉತ್ತರದ ವಿವರಣೆ ನೀಡಿರುವ ಮಾರುತಿ ತನ್ನ ಚಿರಾಸ್ತಿ – ಸ್ಥಿರ ಆಸ್ತಿ ಸೇರಿ ಒಟ್ಟೂ ತನ್ನ ಹೆಸರಿನ ಬರೋಬ್ಬರಿ ಹತ್ತು ಕೋಟಿ ಆಸ್ತಿ ಮುಟ್ಟುಗೋಲಿಗೂ ಅನುಮತಿ ನೀಡಿರುವ ಮಾಹಿತಿ samajamukhi.net News ಗೆ ಲಭಿಸಿದೆ.


ಈ ಮಧ್ಯೆ ಮಾರುತಿಮಾಳವಿಯ ಬಹುಕೋಟಿ ಹಗರಣದ ಹಿಂದೆ ರಾಜಕೀಯ ಜಿದ್ದು ಪ್ರವೇಶಿಸಿದ್ದು ಆಡಳಿತ ಮಂಡಳಿಯ ಸದಸ್ಯರು ಸೇರಿ ಸಿಇಒ ಜೊತೆ ಎಲ್ಲರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಇನ್ನೊಂದು ಗುಂಪು ಕಾರ್ಯಾಚರಣೆಗೆ ಇಳಿದಿದೆ…. ಈ ಹಗರಣದ ಬಾಲ್ ಈಗ aro ಅಂಗಳದಲ್ಲಿದ್ದು ಪೊಲೀಸ್, ಕೋರ್ಟ್ ಮೆಟ್ಟಿಲೇರುವ ಲಕ್ಷಣಗಳು ನಿಚ್ಚಳವಾಗಿದೆ.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________




