ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ

ಸಿದ್ದಾಪುರ,ಸೆ,೩:- ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಶಿಕ್ಷಕರ ಘಟಕದಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಸಿದ್ದಾಪುರ ತಾಲೂಕಿನ ಬಿಳಗಿಯ ಜ್ಷಾನಸಾಗರ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ರಾಜ್ಯ ಶಾಸ್ರ್ತದ ಉಪನ್ಯಾಸಕರಾದ ವಿರೂಪಾಕ್ಷಪ್ಪ ಸೋಮಲಿಂಗಪ್ಪ ಮೇಟಿ ರನ್ನು ಆಯ್ಕೆಮಾಡಲಾಗಿದೆ.ಮೇಟಿಯವರು ವಿದ್ಯಾರ್ಹತೆಯಲ್ಲಿ ಎಂ.ಎ. ಎಂ.ಫಿಲ್‌ ಪೂರೈಸಿದ್ದಾರೆ.
2001 ರಿಂದ ವಿವಿಧ ಕಾಲೇಜುಗಳಲ್ಲಿ ರಾಜ್ಯಶಾಸ್ತ್ರ ಅತಿಥಿ ಉಪನ್ಯಾಸಕರಾಗಿ ಕಾರ್ಯ
ನಿರ್ವಹಿಸಿ 2012 ರಿಂದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಬಿಳಗಿಯ ಜ್ಞಾನಸಾಗರ
ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಅನುದಾನಕ್ಕೆ ಒಳಪಟ್ಟು ಇಲ್ಲಿಯವರೆಗೆ
ಉಪನ್ಯಾಸಕ ವೃತ್ತಿಯಲ್ಲಿ 25 ವಸಂತಗಳನ್ನು ಪೂರೈಸಿದ್ದಾರೆ. ಮತ್ತು ಪ್ರಸ್ತುತ ಉಪನ್ಯಾಸಕರಾಗಿ
ವೃತ್ತಿಯಲ್ಲಿದ್ದಾರೆ.
ಪ್ರತಿ ವರ್ಷ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ಇವರು ರಾಜ್ಯಶಾಸ್ತ್ರ ವಿಷಯದಲ್ಲಿ ಉತ್ತಮ
ಅಂಕಗಳನ್ನು ಗಳಿಸುವಂತೆ ವಿದ್ಯಾರ್ಥಿಗಳಿಗೆ ಬೋಧನೆಯ ಜೊತೆಗೆ ಮಾರ್ಗದರ್ಶನ
ಮಾಡುತ್ತಿದ್ದಾರೆ.ಮತ್ತು ಪ್ರತಿ ವರ್ಷ ಉತ್ತಮ ಫಲಿತಾಂಶ ನೀಡುತ್ತಾ ಬಂದಿದ್ದಾರೆ.
ಉಪನ್ಯಾಸಕರ ವೃತ್ತಿಯ ಜೊತೆಗೆ ಸಿದ್ದಾಪುರ ಮತ್ತು ಶಿರಸಿಯ ತಾಲೂಕಿನ ಕೆಲವು
ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮುಖ್ಯಸ್ಥರ ಆಮಂತ್ರಣದ ಮೇರೆಗೆ ಮಕ್ಕಳಿಗೆ ಮಾನವೀಯ
ಮೌಲ್ಯಗಳು, ನೈತಿಕತೆ, ಓದುವ ಕಲೆಗಳು, ರಾಷ್ಟ್ರೀಯತೆ, ಸಂವಿಧಾನದ ಪರಿಚಯ ಮುಂತಾದ
ವಿಷಯಗಳ ಮೇಲೆ ಪರಿಣಾಮಕಾರಿ ಬೋಧನಾ ಕಾರ್ಯ ಮಾಡುತ್ತಿದ್ದಾರೆ.
ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯ ರಾಜ್ಯಶಾಸ್ತ್ರ ವಿಷಯದ ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾಗಿ
ಕಾರ್ಯ ನಿರ್ವಹಿಸುವುದರ ಜೊತೆಗೆ ರಾಜ್ಯಶಾಸ್ತ್ರ ವಿಷಯ ಸಂಪನ್ಮೂಲ ವ್ಯಕ್ತಿಯಾಗಿ
ಬೇರೆ ಬೇರೆ (ಹಾವೇರಿ, ಬೆಳಗಾವಿ) ಜಿಲ್ಲೆಗಳಲ್ಲಿ ಭಾಗವಹಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ರಾಜ್ಯಶಾಸ್ತ್ರ ಪ್ರಶ್ನೆ ಪತ್ರಿಕೆಯ ಕಾರ್ಯಗಾರದಲ್ಲಿ ಭಾಗವಹಿಸಿ ಜಿಲ್ಲಾ
ಮಟ್ಟದ ಪ್ರಶ್ನೆ ಪತ್ರಿಕೆಗಳನ್ನು ತಯಾರಿಸಿದ್ದಾರೆ.ಹಾಗೆಯೇ ಪ್ರತಿ ವರ್ಷ ಸರಕಾರಿ ಕಾಲೇಜಿನ
ವಿಷಯ ಉಪನ್ಯಾಸಕರಿಗೆ ನೀಡುವ ತರಬೇತಿಯಲ್ಲಿ ರಾಜ್ಯಶಾಸ್ತ್ರ ವಿಷಯದ ಸಂಪನ್ಮೂಲ
ವ್ಯಕ್ತಿಯಾಗಿ ಸರಕಾರದ ಆದೇಶದ ಮೇರೆಗೆ ಕಾಲ ಕಾಲಕ್ಕೆ ಕರ್ತವ್ಯ ನಿರ್ವಹಿಸುತ್ತಾ ಬಂದಿದ್ದಾರೆ.
ಸಿದ್ದಾಪುರ ತಾಲೂಕಿನ ಪದವಿ ಪೂರ್ವ ಕಾಲೇಜುಗಳ ಇ.ಎಲ್.ಸಿ. ಸ್ವಿಪ್ ದ ತಾಲೂಕಾ
ಸಂಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತ ಇ.ಎಲ್.ಸಿ. ಯ ಎಲ್ಲಾ
ಕಾರ್ಯಕ್ರಮಗಳನ್ನು ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ ಉತ್ತಮವಾಗಿ
ಕಾರ್ಯಗತಗೊಳಿಸುತ್ತಿದ್ದಾರೆ
ಸ್ಕಾಲೇಜು ದಿನಗಳಲ್ಲಿ ಕ್ರೀಡಾಪಟುವಾಗಿದ್ದ ಮೇಟಿ

ಕಾಲೇಜಿನ ಕ್ರೀಡಾ ವಿಭಾಗದ ಸಂಚಾಲಕರಾಗಿ ತುಂಬಾ
ವರ್ಷಗಳಿಂದ ಕಾರ್ಯ ನಿರ್ವಹಿಸುತ್ತ ಕಾಲೇಜಿನ ಅನೇಕ
ವಿದ್ಯಾರ್ಥಿಗಳನ್ನು ಗುಡ್ಡುಗಾಡು ಓಟ, ಲಾಂಗ್ ರನ್ನಿಂಗ್, ಜಾವಲಿನ್ ಮುಂತಾದ
ಆಟಗಳಲ್ಲಿ ಪ್ರತೀ ವರ್ಷ ರಾಜ್ಯಮಟ್ಟಕ್ಕೆ ಆಯ್ಕೆಯಾಗುವಂತೆ ಮಾಡಿದ್ದಾರೆ. ಇವರ ಈ ಎಲ್ಲಾ ಕಾರ್ಯಗಳನ್ನು ಗುರುತಿಸಿ ಬೆಂಗಳೂರಿನ ಶೈಕ್ಷಣಿಕ ಜ್ಞಾನ ಮಾಸ ಪತ್ರಿಕೆಯು ರಾಷ್ಟ್ರ ನಾಯಕರು ಹಾಗೂ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಎಸ್ ನಿಜಲಿಂಗಪ್ಪನವರ 120ನೇ ಜಯಂತಿ ಅಂಗವಾಗಿ 2023ರಲ್ಲಿ “ಶಿಕ್ಷಣ ಜ್ಞಾನ” ಪ್ರಶಸ್ತಿ ನೀಡಿ ಗೌರವಿಸಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

vss ಹಗರಣ…part -೦೩… ಒಪ್ಪುವವರಿಗೆ OK ಬೇರೆಯವರಿಗೆ ಎಲ್ಲದಕ್ಕೂ ಯಾಕೆ? ೧೦-೧೫ ಕೋಟಿ ವಿಚಾರ!!!!

. ಕೋಲಶಿರಸಿ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘವನ್ನು next ಲೆವೆಲ್ ಗೆ ಒಯ್ಯುವ ಭ್ರಾಂತಿ ಹುಟ್ಟಿಸಿದ ಮಾರುತಿ ಮಾತಿಗೆ ಎಲ್ಲರೂ ತಲೆದೂಗಲು ಇಷ್ಟೇ...

ಹತ್ತಲ್ಲ…೧೫ ಕೋಟಿಗೂ ಹೆಚ್ಚು ಲಪಡಾ… !!! ಮಾರುತಿ ಮಹಿಮೆ…೦೨ kolsirsi vss issue…?

ಮಾರುತಿ ಯಶವoತ್ ಮಾಳವಿ… ೨೦ ವರ್ಷಗಳ ಹಿಂದೆ ಸೈಕಲ್ ಏರಿ ಕೋಲಶಿರಸಿ ಗೆ ಬಂದು ಇಲ್ಲಿ vss ceo ಆದ ಹಿಂದೆ ದೊಡ್ಡ ಕತೆಯೇ...

Latest Posts

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:- ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಶಿಕ್ಷಕರ ಘಟಕದಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಸಿದ್ದಾಪುರ ತಾಲೂಕಿನ ಬಿಳಗಿಯ ಜ್ಷಾನಸಾಗರ...

Recommended For You

About the Author: Kanneshwar Naik

Leave a Reply

Your email address will not be published. Required fields are marked *