


ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು, ಸಂಸ್ಥೆಗಳ ನೆರವು ಪಡೆದ ಕೆಲವು ನೌಕರರು ತಮ್ಮ ಸಂಸ್ಥೆಗಳನ್ನೇ ಮುಳುಗಿಸುತ್ತಿರುವ ಗುಟ್ಟು ಈಗ ಬಹಿರಂಗ ಗುಟ್ಟಾಗುತ್ತಿದೆ ಎನ್ನುವ ಅಂಶ ರೈತರ ಆತಂಕಕ್ಕೆ ಕಾರಣವಾಗಿದೆ. ಕಳೆದ ೫-೬ ವರ್ಷಗಳಲ್ಲಿ ಒಂದು ದಶಕಕ್ಕೂ ಹೆಚ್ಚು ಅವಧಿಯಿಂದ ಸಹಕಾರಿ ಸಂಘಗಳ ಬಿಲ ಕೊರೆಯುತ್ತಿದ್ದ ಕೆಲವು ಪ್ರಕರಣಗಳು ಬಹಿರಂಗವಾಗಿವೆ. ಇದೇ ರೀತಿ ಸಿದ್ದಾಪುರ ತಾಲೂಕಿನ ಕನಿಷ್ಠ ೮-೧೦ ಸಂಘಗಳ ಪರಿಸ್ಥಿತಿ ಎನ್ನುವುದು ವಾಸ್ತವದ ಸತ್ಯ!!


ಸಿದ್ದಾಪುರದ ಸಿರಳ ಗಿ ಸೇವಾ ಸಹಕಾರಿ ಸಂಘದಲ್ಲಿ ಲಕ್ಷಾಂತರ ಅವ್ಯವಹಾರ ಮಾಡಿದ್ದ ಹೆಗಡೆ ಎನ್ನುವ ಕಾರ್ಯದರ್ಶಿ ಆತ್ಮಹತ್ಯೆ ಗೆ ಶರಣಾದ ವಿಷಯ ಜನಮಾನಸದಿಂದ ಮಾಸುವ ಮೊದಲೇ ಹೇರೂರು vss ಅಧ್ಯಕ್ಷ ಗಣಪತಿ ಭಟ್ ಆತ್ಮಹತ್ಯೆಗೆ ಶರಣಾಗಿದ್ದರು. ಈ ಪ್ರಕರಣದಲ್ಲಿ ಗಣಪತಿ ಭಟ್ಟರ ಇತರ ವ್ಯವಹಾರ ಮೈಮೇಲೆ ಬಂದಿತ್ತು ಎಂದು ಬಿಂಬಿಸಲಾಗಿತ್ತು! ಆದರೆ ಅಸಲಿಯತ್ತೆಂದರೆ…. ಹೇರೂರು vss ಹಾನಿಯಾಗಿಲ್ಲ ಎಂದು ತೋರಿಸಲು ಬೇರೆ ಕಥೆ ಹೆಣೆಯಲಾಗಿತ್ತು! ಈ ಸಹಕಾರಿ ದುರಂತಗಳ ನಂತರ ಕೋಲಶಿರಸಿ ಸರದಿ…ಇದರ ನಂತರ ಸಿದ್ದಾಪುರದ ನಾಲ್ಕು ದಿಕ್ಕುಗಳ ಕನಿಷ್ಠ ಎರಡೆರಡು vss ಗಳ ಹಗರಣ ಬಹಿರಂಗವಾಗುವ ಎಲ್ಲಾ ಲಕ್ಷಣಗಳಿವೆ!!?

ಈ ಅವ್ಯವಹಾರಗಳ ಹಿಂದೆ ಸಿಇಒ/ ಕಾರ್ಯದರ್ಶಿಗಳ ಕೈ ಚಳಕ ಇರುತ್ತದಾದರೂ ಇವರನ್ನು ರಕ್ಷಿಸುವವರು, ಪಾರು ಮಾಡುವವರು ಸಹಕಾರಿ ಗಣ್ಯರು ಎಂಬುದು ಜಿಲ್ಲೆ, ರಾಜ್ಯದ ದುರಂತ. ಈ ಜಾಡು ಹಿಡಿದು ಹೋದರೆ… ರಾಜ್ಯಕ್ಕೆ ಮಾದರಿ ಎನ್ನುವ ಉತ್ತರ ಕನ್ನಡ ಜಿಲ್ಲೆಯ ಸಹಕಾರಿ ವ್ಯವಸ್ಥೆಯ ಚೆಡ್ಡಿ ಹರಿದಿರುವುದನ್ನು ನೋಡಲು ಕನ್ನಡಿಯ ಅವಶ್ಯಕತೆ ಇಲ್ಲ. ಇದೇ ದಶಕ ತಪ್ಪಿದರೆ… ಮುಂದಿನ ದಶಕದಲ್ಲಿ ಉತ್ತರ ಕನ್ನಡ ಜಿಲ್ಲೆಯ ನೂರಾರು ಸಹಕಾರಿಗಳು ಹಿಂಡಲಗಾ ರೊಟ್ಟಿ ಅಥವಾ ಮುದ್ದೆ ಮುರಿಯುವ ವಾಸ್ತವ ಮಾತ್ರ ಉತ್ತರ ಕನ್ನಡದ ಸಹಕಾರಿಯ ದುರಂತ ಚರಿತ್ರೆಯಾಗುತ್ತಿರುವುದು ಇಲ್ಲಿಯ ರೈತರ ಮರಣಶಾಸನ.




_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________




