ಜಯಂತ್ ಕಾಯ್ಕಿಣಿಯವರ ಬರಹ,ಭಾಷಣ,ಉಪನ್ಯಾಸಗಳ ವಿಶೇಷವೆಂದರೆ….
ಜಯಂತ್ ಪಾಂಡಿತ್ಯ ಪ್ರದರ್ಶನಕಾರರಲ್ಲ, ಸಹಜ ವಿಚಾರಗಳನ್ನು ಸರಳವಾಗಿ ಹೇಳುವ ಕಲೆ ಜಯಂತರಂತೆ ಅನ್ಯರಿಗೆ ಸಿದ್ಧಿಸಿದ್ದುಅತಿವಿರಳ. ಜಯಂತ್ ಸಿದ್ಧಾಪುರದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದು (ಕಿಕ್ಕಿರಿದ ವಿದ್ಯಾರ್ಥಿಗಳು)
‘ನೀವು ನಾನು ಕೊಟ್ಟ
‘ನಡೆದಾಡುವ ಕಾಮನ ಬಿಲ್ಲು…….’
‘ಅನಿಸುತಿದೆ ಯಾಕೊ ಇಂದು….’
ಸಂತೆಯಲ್ಲೂ ನಿಂತರೂನು ನೋಡು ನೀನು ನನ್ನನ್ನೇ….. ಈ ಸಂಜೆ ಯಾಕಾಗಿದೆ….ಎನ್ನುವಂಥಾ ಹಾಡುಗಳನ್ನೆಲ್ಲಾ ಕೇಳಿದ್ದೀರಿ. ಇವೆಲ್ಲವನ್ನೂ ನಿಮಗಾಗಿ ನೀಡಿದ್ದೇನಿ. ಈ ಕಾರಣಕ್ಕಾಗಿ ನೀವೆಲ್ಲಾ ನನ್ನದೊಂದು ಸಣ್ಣಕೋರಿಕೆಈಡೇರಿಸಬೇಕು ‘ಈಡೇರಿಸುತ್ತೀರಾ ?
ಓ…..ಹ್ ! ನೋಡಿ ಹುಡುಗ್ರೆ, ಈಗ ಕಾಲ ಬದಲಾಗಿದೆ,ಮೊದಲಿನಂತೆ ಹುಡುಗಿಯರಿಗೆ ಅಪ-್ಪಅಮ್ಮ ಅಡುಗೆ-ಪಡಗೆ ಮಾಡೋದೆಲ್ಲಾ ಕಲಿಸ್ತಾಇಲ್ಲಾ, ನಿಮ್ಹಂಗೆ ಅವಳೂ ಒಬ್ಳೆ, ನಿಮಗಿಂತ ಚೆನ್ನಾಗಿ ಓದಿಯೂ ಇರ್ತಾಳೆ. ಅಂಥವ್ಳತ್ರ ನೀನೇ ಅಡಿಗೆ ಮಾಡ್ಬೇಕು, ಗಂಡ ಆಗಿ ನಾನು ಪೇಪರ್ ಓದ್ತಾ, ಟಿ.ವಿ.ನೋಡ್ತಾಇರ್ಬೇಕು. ಅನ್ನೋ ರೀತಿ ಇರ್ಬೇಡಿ, ನೀವೂ ಸ್ವಲ್ಪ ಅಡಗೆ-ಗಿಡಗೆ ಮಾಡೋದ್ ಕಲ್ತ್ ಕೊಳ್ರಪ್ಪ. ಪ್ರಾಮೀಸ್ ಮಾಡಿ, ನಾನ್ ಕೊಟ್ಟ ಹಾಡಿಗೆ ಪ್ರತಿಯಾಗಿ ಒಂದ್ ಸಣ್ಣ ಬಾಷೆ ಕೊಟ್ಟ್ ಬಿಡಿ !
ಅಂಕೋಲಾದ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಹೇಳಿದ್ದು.
ನೋಡಿ, ಕಾಲ, ಮೌಲ್ಯ ಹೆಂಗೆ ಬದಲಾಗ್ತಾಇದೆ. ಹಿಂದೆ ನಾವೆಲ್ಲಾ ಹೋಟೆಲ್‍ಗೆ ಹೋಗಿದ್ದಾಗ ಊಟ-ತಿಂಡಿ, ಐಟಮ್ ರುಚಿ, ಚೆನ್ನಾಗಿ ಮಾಡಿದ್ದಾಗಲೆಲ್ಲಾ ‘ನೋಡು ಇವತ್ತು ಒಳ್ಳೆ ಮನೆ ಊಟ ಮಾಡ್ದಾಂಗೆ ಮಾಡಿದ್ದ. ಅಂತಿದ್ವಿ,
ಆದರೆ, ಈಗ ಅಪರೂಪಕ್ಕೆ ಮನೆಯಲ್ಲಿ ಒಳ್ಳೆ ಊಟ-ತಿಂಡಿ ತಯಾರ್ ಮಾಡಿದ್ದಾಗ ‘ಓಹ್ ಇವತ್ತು ಒಳ್ಳೆ ಹೋಟೆಲ್ ತಿಂಡಿ, ಡಿಶ್ ತಿಂದಂಗೆ ಆಗ್ತಾ ಅದೆ ಅಂತಾ ಕಾಂಪ್ಲಿಮೆಂಟ್ ಕೊಡ್ತೆವೆ.
ಹಿಂದೆ ಜನ ‘ನನ್ಮಗ ಕೆಲ್ಸದಲ್ಲಿ ಇದ್ದ, ಪ್ರಾಮಾಣಿಕ, ಒಳ್ಳೆ ಮನಸು, ಅಂತಾ ಜನರ ಮುಂದೆ ಮಗನ್ನ, ತಮ್ಮನ್ನ, ಅಳಿಯನ್ನೆಲ್ಲಾ ಹೊಗಳ್ತಾ ಇದ್ರು.
ಈಗ ಕಾಲ ಬದಲಾಗಿದೆ ‘ ಒಳ್ಳೆ ನೌಕರಿ, ಕೆಲಸ ಏನೂ ಇಲ್ಲ ಮೆಲ್ಕಾಸು ಬರಪೂರ್ ಸಂಪಾದನೆ (ಲಂಚ)ಅನ್ನೋ ನೀತಿಗೆಟ್ಟ ಮಾತು, ಹೇಳಿಕೆಗಳನ್ನು ನಾಲ್ಕೈದು ಸೀಟು ಅಂತರದಲ್ಲಿ ಕುಳಿತು ಒಂದೇ ವಾಹನದಲ್ಲಿ ಪ್ರಯಾಣಿಸುವ ಜನ ಮಾತಾಡ್‍ಕೊತಾರೆ. ಜನರಿಗೆ ಸಿಗ್ಗು ಕಡಿಮೆಯಾಗಿದೆ. ಈ ಸಿಗ್ಗು,ಪ್ರಾಮಾಣಿಕತೆ ಕಡಿಮೆ ಆಗೋದು ಜಾಗತಿಕ ದುರಂತ.
ಕಳ್ಳತನ, ನಯವಂಚನೆಗಳನ್ನು ಜನ ಬಹಿರಂಗವಾಗಿ ಸಮರ್ಥಿಸುತ್ತಾ ಪ್ರೋತ್ಸಾಹಿಸುವ ವರ್ತಮಾನ.
ಹೀರೋಗಳು. ಊರು ಅಂದ್ರೆ, ಅಲ್ಲಿ ಕಾಯ್‍ಪಲ್ಲೆ ಮಾರೋರು, ಸಲೂನು, ಅದು-ಇದು. ಬದುಕು-ಊರಿನ ಜೀವಂತಿಕೆ ಅಂದ್ರೆ ಅದು. ಬರೀಸಾಫ್ಟ್ ವೇರ್- ಗ್ಲಾಮರ್, ಅದೆಂಥಾ ಬದುಕು ?
ಶುದ್ಧತೆ ಬಗ್ಗೆ ಮಾತನಾಡುತ್ತಾ… ಜಯಂತ್ ಉದಾಹರಿಸಿದ್ದು
‘ಲಂಕೇಶ್ ಪತ್ರಿಕೆಯ ವಾರ್ಷಿಕೋತ್ಸವ ನಡೀತಾ ಇತ್ತು. ಆಗ, ಜೆ.ಎಚ್. ಪಟೇಲ್ ಅತಿಥಿ, ಪತ್ರಿಕೆ, ಪತ್ರಕರ್ತನ ಅಂತರಂಗದ ಬಗ್ಗೆ ‘ನೋಡಿ ಹೋಟೆಲ್‍ನ ಸಾಪ್ ಬಟ್ಟೆ( ಒರೆಸೊ ವಸ್ತ್ರ ) ಎಲ್ಲಾ ಟೆಬಲ್ ಕ್ಲೀನ್ ಮಾಡುತ್ತೆ, ಆದ್ರೆ ಆ ಸಾಪ್ ಬಟ್ಟೆಯನ್ನೂ ಸಹ ಆಗಾಗ ತೊಳ್ದು, ಕ್ಲೀನ್ ಮಾಡ್ದೆ ಇದ್ರೆ ಟೇಬಲ್ ಕ್ಲೀನ್ ಮಾಡಲುಸಾಧ್ಯವಿಲ್ಲಾ.
( ಜೆ.ಎಚ್.ಪಿ. ಯವರ ಈ ಮಾತು ಮರೆಯಲಾರದ್ದು -ಜಯಂತ್)
ಜಯಂತರಿಗೆ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರ ಹಿಗಿತ್ತು.
ಪ್ರಶ್ನೆ-ನೀವು ಸಿನಿ(ಮಾ) ಸಾಹಿತಿಯಾದ ಮೇಲೆ ಸಾಹಿತಿ, ಕತೆಗಾರ ಆಗಿ ಕಳೆದು ಹೋಗಿದ್ರಾ ?
ಜಯಂತ್ ಉತ್ತರ- ಹಾಗೇನಿಲ್ಲ. ಅದಕ್ಕೆ ಏನ್ ದಾಖಲೆ ಇದೆ. ಕವಿತೆ, ಕಥೆ-ಬರಹ ಎಲ್ಲಾ ಬರಿತಾ ಇದ್ದೇನಿ.
ಕವಿತೆ, ಕಥೆ, ಬರಹಗಳಿಗೆ ಹೆಚ್ಚು ಸಮಯ ತಗೊಳಲ್ಲಾ ಆದ್ರೆ, ಸಿನೆಮಾ ಹಾಡಿಗೆ ಬಾಳ ಟೈಮ್ ಹಿಡಿಯುತ್ತೆ. ಕಾವ್ಯ, ಕಥೆ ಲೇಖನ ನನ್ನ ಸೃಷ್ಟಿ. ಸಿನೇಮಾ ಗೀತೆ ತೀರಾ ಕೃತಕ. ಯಾರೋ ಲೂಜು-ಗೀಜು ಅವನ ಭಾವ, ಅಭಿಪ್ರಾಯವನ್ನು ನಾನು ಗೀತೆಯಲ್ಲಿ ಬರಿಬೇಕು,
ಟ್ಯೂನ್ ಏನ್ ಬಯಸುತ್ತೆ ಹಾಗೆ ಬರೀಬೇಕು. ಕಥೆ, ಕಾವ್ಯ ಹಾಗಲ್ಲ ಬಯಸಿದಂತೆ, ಒಲಿದಂತೆ ಬರೆಯೋದು. ಅಷ್ಟಕ್ಕೂ ಸಿನೇಮಾ ಗೀತೆ, ಸಂಭಾಷಣೆ ಬರೆಯೋ ಮೊದ್ಲೆ ನಾನೆಲ್ಲಿದ್ದೆ, ಏನ್ ಮಾಡ್ತಾ ಇದ್ದೆ, ಹೇಗಿದ್ದೆ? ಎಂದು ಕೇಳದವರು, ತಿಳಿಯದವರೆಲ್ಲಾ ಈಗ ಕಳೆದುಹೋಗಿರೊ! ಬಗ್ಗೆ ಮಾತಾಡ್ತಾರೆ. ಆದ್ರೆ ನನ್ನ ಸಿನೆಮಾ ಪ್ರಪಂಚ ಸೇರ್ಪಡೆ ನಂತ್ರ ನಾನ್ಯಾರು? ನನ್ನ ಸಾಹಿತ್ಯ ಏನು ಅಂತಾ ಗೊತ್ತಾಯ್ತು. ನನ್ನ ಪ್ರಕಾರ, ನನ್ನ ಚಿತ್ರಗೀತೆ ಅಭಿಮಾನಿಗೂ ಕಥೆ-ಕವನ, ಸಾಹಿತ್ಯ ಓದುಗನಿಗೂ ಏನೂ ವ್ಯತ್ಯಾಸ ಇಲ್ಲ .
ಸಾಹಿತ್ಯ-ಸಂಗೀತ ಕ್ಷೇತ್ರದ ಸುಪ್ರಸಿದ್ಧ ಪ್ರತಿಭೆ ಜಯಂತ್. ಜಯಂತ್‍ಗೆ ಜನ ಮುತ್ತುವುದು ಸಾಮಾನ್ಯ. ಜಯಂತ್‍ರೊಂದಿಗೆ ಅವರ ಕುಟುಂಬಕ್ಕೆ ಈ ಕೀರ್ತಿ, ಪ್ರೀತಿ ಇವೆಲ್ಲಾ ಮುಜುಗರ.ಜಿಲ್ಲಾಸಾಹಿತ್ಯಸಮ್ಮೇಳನದಲ್ಲಿ ಜಯಂತ್‍ರೊಂದಿಗೆಸನ್ಮಾನಿಸಿಕೊಳ್ಳಲು ಅವರ ಪತ್ನಿ-ಪುತ್ರಿ (ಆಕೆ ಲಂಡನ್ ವಾಸಿ) ಯರನ್ನು ಕರೆದೆವು, ಆದರೆ ಅವರ್ಯಾರೂ ವೇದಿಕೆ ಹತ್ತಲಿಲ್ಲ. ಈ ಬಗ್ಗೆ ಪ್ರತಿಕ್ರೀಯಿಸಿದ ಜಯಂತ್ ‘ಅವರಿಗೆ ಅದೆಲ್ಲಾ ಮುಜುಗರ, ಬಹಳಷ್ಟು ಸಂದರ್ಭಗಳಲ್ಲೆಲ್ಲಾ ಅವರು ನನ್ನಿಂದ ದೂರದಲ್ಲೇ ಇರ್ತಾರೆ. (ಎಂದರು)
ಸಮ್ಮೇಳನಾಧ್ಯಕ್ಷ ಜಯಂತರೊಂದಿಗಿನ ಸಂವಾದದಲ್ಲಿ ಜಯಂತ ‘ನೀವು ನಿಮ್ಮ ‘ಲವ್ ಲೈಫ್ ಬಗ್ಗೆ ಹೇಳಿ ಎಂದಾಗ.
‘ಮಾರಾಯ್ರ ನಾನು ಇಲ್ಲಿಂದ ಮನೆಗೆ ಹೊಗ್ಬೇಕು, ನನ್ಹೆಂಡ್ತಿ ಬೇರೆ ಮುಂದೇಕೂತುಕೊಂಡಿ ದ್ದಾರೆ. ಎಂದು ಪೆಂಗನೆ ನಕ್ಕರು.
ಮತ್ತೊಂದು ಪ್ರಸಂಗ
ನನ್ಹೆಂಡ್ತಿಗೆ ಕನ್ನಡ-ಕೊಂಕಣಿ ಬರ್ತಾ ಇರ್ಲಿಲ್ಲ. ಆ ಟೈಮಲ್ಲಿ ನಮ್ ಮನೆಯವರು ನನ್ನ ಬಹಳ ದೊಡ್ಡ ಸಾಹಿತಿ ಅಂತಾ ತಿಳ್ಕೊಂಡಿದ್ರು. ಆಗಲೇ ಚಲೋ ಇತ್ತು ಕಡೆಗೆ ಅವಳು ಕನ್ನಡ ಕೊಂಕಣಿ ಮಾತನಾಡೋದು, ಕನ್ನಡಓದೋದು ಎಲ್ಲಾ ಕಲ್ತುಬಿಟ್‍ಳು ಈಗ ಫಜೀತಿ ಸತ್ಯ ಎಲ್ಲಾ ಗೊತ್ತಾಗಿದೆ !
ಗಳಿಕೆ ದುಡಿಮೆ ಬಗ್ಗೆ-
ನನ್ನ ಒಬ್ಬ ಅಭಿಮಾನಿ ಇದ್ದಾನೆ, ಅಂವನ ಪ್ರಕಾರ ದುಡ್ಡು ಅಧಿಕಾರಗಳೇ ಅಲ್ಟಿಮೇಟು ‘ಸರ್, ನನ್ ಫ್ರೆಂಡು ಸಕತ್ ಇದ್ದಾನೆ, ಎರಡ್ಮೂರು ಪೆಟ್ರೋಲ್ ಬಂಕು, ಬಾರು, ರೆಸ್ಟೊರೆಂಟು ಎಲ್ಲಾ ಸಾಲಿಡ್ ಬಿಸನೆಸ್’ ‘ಅದೆಂಥಾ ಸಾಲಿಡ್ಡು, ಲಿಕ್ವಿಡ್ ಬಿಸನೆಸ್ಸೆ ಅದು. ಈ ರೀತಿ ದುಡ್ಡು, ಗಳಿಕೆ, ಆಸ್ತಿ ಅಧಿಕಾರವನ್ನು ವೈಭವೀಕರಿಸುವ ಅನೈತಿಕತೆ ನಮ್ಮಲ್ಲಿ ಬೆಳಿತಾ ಇದೆ. ಆದ್ರೆ ನನ್ ಪ್ರಕಾರ ಅಧಿಕಾರ, ಅವಕಾಶ ಇದ್ದೂ ಬ್ರಷ್ಟ, ಅಹಂಕಾರಿ, ವೈಭವಿ ಆಗದಮನುಷ್ಯ ಹೀರೋ.
ಅಂಕೋಲಾ ಸೇರಿದಂತೆ ಸಣ್ಣ-ಸಣ್ಣ ಊರಿನ ಮೀನುಮಾರುಕಟ್ಟೆಗಳನ್ನು ನೋಡಿ, ಅಲ್ಲೊಬ್ಬ ಅಮಾಯಕ, ಹವಾಯಿ ಚಪ್ಪಲ್ ಹಾಕ್ಕಂಡು ಸೈಕಲ್ ಹಿಡ್ಕಂಡು ನಿಂತಿರ್ತಾನೆ. ಆತ ಮೀನ್ ಖರೀದಿಗೆ ಬಂದವರಿಗೆಲ್ಲಾ ‘ಅದೋ ಅಲ್ಲಿ ಚಲೋ ಅದೆ’ ‘ಅಲ್ನೋಡಿ ಮೀನ್ ದೊಡ್ದು, ತಾಜಾ ಅದೆ. ಅಂತಿರ್ತಾನೆ. ಅದು ಅವನ ಸಮಾಜ ಸೇವೆ. ಈ ಉಚಿತ ಸಲಹೆ, ಮಾರ್ಗದರ್ಶನದಿಂದ ಅವನಿಗೆ ಏನೂ ಆಗಲ್ಲ, ಆದ್ರೆ ಆತ ಅನೇಕರಿಗೆ ಉಪಯೋಗ ಆಗೋ ಅಮಾಯಕ ಆಗಿರ್ತಾನೆ, ಅಂಥವರು ನಿಜವಾದ ಹೀರೋ.