ಯಾರು ಈ ದೀವರು?

ಯಾರು ಈ ದೀವರು? (ಕರ್ನಾಟಕ ದೀವರು)
ದೀವರು ಅರಣ್ಯ ಸಂಪತ್ತನ್ನು ಸಂಗ್ರಹಿಸುತ್ತಿದ್ದುದರಿಂದ ಅರಣ್ಯಭಂಡಾರರೆಂದು ಕರೆಯಲಾಗಿದೆ.
ಅಶ್ವಾರೋಹಿಗಳಾಗಿದ್ದು ಬಿಲ್ಲುವಿದ್ಯೆಯಲ್ಲೂ ಪರಿಣತಿ ಹೊಂದಿದ ಬಿಲ್ಲುಪಡ್ಡೆಕಾರರಾಗಿದ್ದುಯೋಧಪಡೆಯನ್ನು ಕಟ್ಟಿಕೊಂಡ ಸಾಮಂತರಾಗಿದ್ದವರು. ಕ್ರಿ .ಶ.1129 ರಲ್ಲಿಯೇ ಹೊಯ್ಸಳರ ಅಧೀನ ಅಧಿಕಾರಿ ದೀವರ ಚಿಂಣನ ಬಮ್ಮಣನುಚಂದ್ರಗುತ್ತಿಯನ್ನಾಳುತ್ತಿದ್ದುದು ಮೂಡಿಗೆರೆಯ ಹಂತೂರು, ಕುರುವ ಹಾಗೂ ಸೊರಬ ಶಾಸನಗಳಿಂದ ತಿಳಿದು ಬರುತ್ತದೆ.
ಹೊಸಗುಂದದರಸರಲ್ಲಿ ವೀರಕೋಟಿನಾಯಕ, ಕೆಳದಿ ಅರಸರ ಕಾಲದಲ್ಲಿ ದಂಡನಾಯಕನಾದ ಕಾಸರಗೋಡು ತಿಮ್ಮಣ್ಣನಾಯಕ, ಹೆಮ್ಮೆ ವೀರಭದ್ರಣ್ಣ ಮೊದಲಾದ ದಂಡನಾಯಕರನ್ನು ಕಾಣುತ್ತೇವೆ. ದೀವರು ಸೈನಿಕ ಪಡೆಯನ್ನು ಕಟ್ಟಿಕೊಂಡ ಪಡೆವಳರಾಗಿದ್ದು ಬಿಲ್ಲ ಮೂನೂರ್ವರು, ನಾನೂರ್ವರು ಎನ್ನಿಸಿ ಕೊಂಡವರು.
ಕ್ರಿ.ಶ 1500ರ ಸುಮಾರಿಗೆ ವಿಜಯನಗರದರಸರು ಹಾಗು ಕೆಳದಿ ಅರಸರು ಇವರನ್ನು ಹಳೆಪೈಕದವರು ಅಂದರೆ ಆದಿಕಾಲದ ಪಾಯದಳ, ಕಾಲ್ದಳ, ಅನಾದಿಕಾಲದ ಯೋಧರೆಂದೇ ಗುರುತಿಸಿ ಕೊಂಡವರು. ದೀವರ ಸ್ಮಾರಕಗಳಲ್ಲಿ ವೀರನು ಅಶ್ವಾರೋಹಿಯೂ, ಬಿಲ್ಲುಧಾರಿಯೂ ಆಗಿರುವುದನ್ನು ಕಾಣುತ್ತೇವೆ.
ಮೈಸೂರಿನ ಹೈದರಾಲಿಯು 1763ರಲ್ಲಿ ಬಿದನೂರನ್ನು ವಶಪಡಿಸಿಕೊಳ್ಳುವವರೆಗೆಸಾಮಾಜಿಕವಾಗಿ, ಆರ್ಥಿಕವಾಗಿ ವಿವಿಧ ಹಂತದಲ್ಲಿ ಅಧಿಕಾರವನ್ನು ಹೊಂದಿ ದೀವರು ಸಬಲರಾಗಿದ್ದವರು.
ಶೈಕ್ಷಣಿಕವಾಗಿಯೂ ಪ್ರಗತಿಯಲ್ಲಿದ್ದವರು. ಹೈದರಾಲಿಯು ಬಿದನೂರು ಸೈನ್ಯವನ್ನು ತನ್ನ ಸೈನ್ಯದೊಡನೆ ವಿಲೀನಗೊಳಿಸಿಕೊಳ್ಳಲಿಲ್ಲ. ಇದರಿಂದ ಬಿದನೂರು ಸೈನಿಕರು ನಿರುದ್ಯೋಗಿಗಳಾಗಿ, ನಂತರ ಇನ್ನೂರು ವರ್ಷಗಳಲ್ಲಿ ವಸಾಹತುಶಾಹಿ ಆಡಳಿತದಲ್ಲಿನ ವರ್ಣವ್ಯವಸ್ಥೆಯಲ್ಲಿ ಶೋಷಿಸಲ್ಪಟ್ಟವರು.
ಭಾರತದ ಸ್ವಾತಂತ್ರ್ಯಾನಂತರ ಎಪ್ಪತ್ತರ ದಶಕದಲ್ಲಿ ಸಮಾಜವಾದ ದ ಸಿದ್ಧಾಂತದ ಮೇಲೆ ಶಿವಮೊಗ್ಗ ಜಿಲ್ಲೆಯಲ್ಲಿ ಎಸ್. ಬಂಗಾರಪ್ಪ, ಕಾಗೋಡು ತಿಮ್ಮಪ್ಪ ಹಾಗು ಬಿ. ಸ್ವಾಮಿರಾವ್ ಇವರುಗಳು ಹಿಂದುಳಿದವರ ನೇತಾರರಾಗಿ ಕರ್ನಾಟಕ ರಾಜ್ಯದ ಆಡಳಿತ ಚುಕ್ಕಾಣಿಯನ್ನು ಹಿಡಿದು ಎಲ್ಲ ಶೋಷಿತ ವರ್ಗದ ಅಭಿವೃದ್ಧಿಯ ಹರಿಕಾರರಾದರು.
ಡಾ ಅ.ಸುಂದರರು ಘನವಾದ ಮುನ್ನುಡಿಯನ್ನು ನೀಡಿರುತ್ತಾರೆ. ಡಾ ಪಿ.ಎನ್.ನರಸಿಂಹಮೂರ್ತಿಯವರು ಕೃತಿಯ ಪ್ರೌಢಿಮೆಯನ್ನು ಕುರಿತು ಪ್ರಸ್ಥಾಪಿಸಿದ್ದಾರೆ. ಡಾ ಶ್ರೀ ಕಂಠಕೂಡಿಗೆಯವರು ಕೃತಿಯನ್ನು ಕುರಿತು ಕೆಲವು ಮಾತುಗಳಾನ್ನಾಡಿದ್ದಾರೆ. ಇವರಿಗೆ ನನ್ನ ನಲ್ಮೆಯ ನಮಸ್ಕಾರಗಳು.
ಡಾ ಜಗದೀಶ್ ಅಗಸಿಬಾಗಿಲು ಬೆನ್ನುಡಿಯನ್ನು ನೀಡಿದ್ದು, ಈ ಗ್ರಂಥರಚನೆಗೆ ಪ್ರೇರಣೆ ಹಾಗೂ ಸಲಹೆ, ಸಹಾಕಾರವನ್ನಿತ್ತವರು ಮಂಗಳೂರಿನ ವಿ.ಗ. ನಾಯಕರು ತಮ್ಮ ಸಹಕಾರವನ್ನು ನೀಡಿದ್ದಲ್ಲದೆ ಕೇರಳ ಪ್ರಾಂತ್ಯದಲ್ಲಿರುವ ಬಿದನೂರಿನಿಂದ ಯೋಧರಾಗಿ ಹೋದ, ಹಳೆಪೈಕದವರನ್ನು ಪರಿಚಯಿಸಿ ಕೊಟ್ಟವರು.
ಕೆಳದಿ ದೇವಪ್ಪನವರು ಕ್ಷೇತ್ರಕಾರ್ಯದಲ್ಲಿ ನಮ್ಮೊಡನಿದ್ದು ಸಹಾಕಾರವಿತ್ತವರು ಸ್ನೇಹಿತರಾದ ಎಂ .ಎನ್.ಸುಂದರರಾಜ್ರವರಿಗೂ ,ಕ್ಷೇತ್ರಕಾರ್ಯದಲ್ಲಿ ಸಹಕರಿಸಿದ ಎಲ್ಲಾ ಸ್ನೇಹಿತರಿಗೂ ಹಾಗೂ ತಾಂತ್ರಿಕ ವೃಂದದವರಿಗೂ ಧನ್ಯವಾದಗಳು.
ಮಲೆನಾಡು ಎಂಬುದೇ ನಿಸರ್ಗದ ತವರು. ಪ್ರಕ್ರತಿಯ ಆರಾಧಕರಿಗೆ ಸುಂದರ ತಾಣ. ನೋಡುಗರ ಭಾವಕ್ಕೆ ತಕ್ಕಂತೆ ಹಸಿರುಸ್ವರ್ಣದ ತೇರು, ಸುಂದರ ದೃಶ್ಯಕಾವ್ಯವನ್ನು ಕಣ್ಣಮುಂದೆ ಕಟ್ಟಿನಿಲ್ಲಿಸಿ, ಮನಸ್ಸಿಗೂ ದೇಹಕ್ಕೂ ಚೇತೋಹಾರಿ ಆನಂದವನ್ನು ನೀಡುತ್ತದೆ. ಕರ್ನಾಟಕದ ದಕ್ಷಿಣದ ತುದಿಯಿಂದ ಮಹಾರಾಷ್ಟ್ರದ ಅಂಚಿನವರೆಗೆ ಉತ್ತುಂಗವಾಗಿ 1300 ಕಿ.ಮೀ. ದೂರ ಹಬ್ಬಿದ ಸಹ್ಯಗಿರಿಸಾಲು, ಮತ್ತದರ ಪೂರ್ವದ ಬಳುಸಾದ ತಪ್ಪಲಿನಲ್ಲಿ ಹಬ್ಬಿರುವ ಗಿರಿವೃಂದಗಳು. ಕರ್ನಾಟಕದ ಅತಿ ಹೆಚ್ಚು ವರ್ಷಧಾರೆಯು ಸುರಿವ, ನಿತ್ಯ ಹರದ್ವರ್ಣದ ದಟ್ಟಾರಣ್ಯದಿಂದ ಕೂಡಿದ ಅಪರೂಪದ ಜೀವಜಾಲ ಹೊಂದಿದ ವಿಶಿಷ್ಟ ಕಾನನ ಪ್ರದೇಶ. ನಾನಾ ಕೀಟ,ಪಕ್ಷಿ, ಪ್ರಾಣಿ, ಸಸ್ಯಸಂಕುಲದ ಅಚ್ಚರಿಯ ಪ್ರಭೇದಗಳೊಂದಿಗೆ ಪ್ರಪಂಚದ ಅಪರೂಪದ ಜೈವಿಕ ಉದ್ಯಾನವೆನಿಸಿದೆ.
ಶರಾವತಿ, ತುಂಗ,ಭದ್ರಾ, ವರದ, ಕುಮದ್ವತಿ, ಚಕ್ರಾ, ವರಾಹಿ ಮೊದಲಾದ ಪವಿತ್ರ ಜೀವನದಿಗಳ ಉಗಮ ಸ್ಥಾನವೂ ಆಗಿದೆ. ಹಾಗೆಯೇ ಈ ಮಲೆನಾಡಿನ ಆಯುಧೋಪಜೀವಿಗಳಾದ ದೀವರ ಜನಾಂಗವನ್ನೂ ತನ್ನ ಒಡಲಲ್ಲಿ ತುಂಬಿಕೊಂಡಿದೆ. ಆದಿ ಕವಿ ಪಂಪನು ಈ ಮಲೆನಾಡನ್ನು ಹೀಗೆ ವರ್ಣಿಸಿದ್ದಾನೆ: “ದೇವನಂದನದ ವಿಹಾರ
ಪ್ರಸಾದಿತವೆಂಬಂತೆ ಗಿರಿಶೃಂಗಗಳು ಕಾಂಚನಕುಂಬ ಕಳಶ ಶೋಭಿತನಾಗಿ, ಹಸಿರರತ್ನ ತೋರಣದಲ್ಲಿ ಸಿಂಗರಿಸಿದ ಕಲ್ಪವೃಕ್ಷಗಳು.
ಚಿತ್ರ ವಿಚಿತ್ರ ಪರಿಪರಿಯ ವೃಕ್ಷ ಸಂಕುಲಗಳಿಂದ ತುಂಬಿ ತುಳುಕುವ ಚೇತೋಹಾರಿ ವನದೇಶಗಳು. ಸುಂದರ ಮನಸ್ಸಿಗೂ ಕಣ್ಣಿಗೂ ಆನಂದಮಯ ಸೊಗಸು. ಕಿರುಮಲೆ, ಹಿರಿಮಲೆ, ಏರುಮಲೆಯ ಹಬ್ಬಿದ ಹಸಿರ ಸ್ವರ್ಣದ ತೇರು. ಈ ಮಲೆನಾಡೆ ಇಹುದು ‘ವಿಶ್ವಂಬರಮಾಗಿ’’ ಎಂದಿದ್ದಾನೆ.
ಲಳಿತ ವಿಚಿತ್ರ ಪತ್ರ ಫಲ ಪುಷ್ಪಯುತಾಟವಿ ಸೊರ್ಕಿದಾನೆಯಂ ಬೆಳೆವುದು ದೇವ ಮಾತೃಕಮೆನಿಪ್ಪ ಪೊಲಂ ನವ ಗಂಧಶಾಳಿಯಂ ಬೆಳೆವುದು ರಮ್ಯ ನಂದರ ವನಾಳಿ ವಿಯೋಗಿ ಜನಕ್ಕೆ ಬೇಟಮಂ ಬೆಳೆವುದು ನಾಡ ಕಾಡ ಬೆಳಸಿಂಬೆಳಸಾ ವಿಷಯಾಂತರಾಳದೊಳ್
ಇಂತಹ ಮಲೆನಾಡನ್ನೇ ತಮ್ಮ ವಾಸಸ್ಥಾನವನ್ನಾಗಿ ಆಯ್ದುಕೊಂಡ ಕೃಷಿ ಹಾಗೂ ಕ್ಷಾತ್ರವೃತ್ತಿಯ ಪರಂಪರೆಯ ದೀವರ ಜನಾಂಗವಿದೆ. ಈ ದೀವರ ಜನಾಂಗದ ಹೆಸರಿನಲ್ಲಿ ದೊರೆಯುವ ಅಧಿಕ ಸಂಖ್ಯೆಯ ವೀರಗಲ್ಲು ಹಾಗೂ ಮಹಾಸತಿಕಲ್ಲು ಸ್ಮಾರಕಗಳು ದೀವರರು ‘ಧೀರರು’ ಎಂಬುದನ್ನು ಅಭಿವ್ಯಕ್ತಗೊಳಿಸುತ್ತವೆ.
ಈ ಸ್ಮಾರಕಗಳಲ್ಲಿ ದೀವರ ಶೌರ್ಯ ಸಾಹಸಗಳು ಅಮೋಘವಾಗಿ ಪಲ್ಲವಿಸಿವೆ. ಈ ವೀರಗಲ್ಲುಗಳಲ್ಲಿ ಯೋಧನು ಅಶ್ವಾರೂಢನಾಗಿರುವುದನ್ನು ಕಾಣುತ್ತೇವೆ. ಅವರನ್ನು ಐತಿಹಾಸಿಕ ಅಧ್ಯಯನ ಮಾಡುವುದು ಈ ಕೃತಿಯ ಉದ್ದೇಶ.
(ಕರ್ನಾಟಕ ದೀವರು ಪುಸ್ತಕದಿಂದ, ಲೇಖಕರು-ಮಧುಗಣಪತಿರಾವ್ ಮಡೆನೂರು)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಜಾಗೃತೆ ವಾಹನ ಓಡಾಟ ಹೆಚ್ಚಿದೆ, ಮಂಗಗಳು ಸಾಯುತ್ತಿವೆ! ಸಾ. ಸಮ್ಮೇಳನ ಮುಗಿದು ಹೋದ ಮೇಲೆ……

ಉತ್ತರ ಕನ್ನಡ ಜಿಲ್ಲೆಯ ಸಾಹಿತ್ಯ- ಸಂಸ್ಕೃತಿ ಅಭಿವೃದ್ಧಿ ಬಗ್ಗೆ ಕ್ಷಕಿರಣ ಬೀರುವ ಉತ್ತರ ಕನ್ನಡ ಜಿಲ್ಲೆಯ ೨೪ ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿದೆ....

ಮನುಷ್ಯನ ಒಳಿತನ್ನೇ ಧ್ಯಾನಿಸುತ್ತಾ……‌

ಒಂದು ಅಪರೂಪದ ಡೊಳ್ಳಿನ ಸ್ಫರ್ಧೆ ನೋಡಿದೆ. ನಮ್ಮದೇ ತಾಲೂಕಿನ ಅರೆಹಳ್ಳದ ತಂಡ ಎಷ್ಟು ಸೊಗಸಾಗಿ ಡೊಳ್ಳು ನೃತ್ಯ ಕುಣಿಯಿತು! ಕೊಡಗಿಬೈಲ್‌ ಎಂಬ ಹಳ್ಳಿಯ ಒಕ್ಕಲಿಗ...

ಶಿಕಾರಿಪುರ ಪ್ರಥಮ, ಸಿದ್ಧಾಪುರ ದ್ವಿತೀಯ, ಸಾಗರ ತೃತೀಯ

ಸಿದ್ದಾಪುರದಲ್ಲಿ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ರಾಜ್ಯ ಮಟ್ಟದ ಡೊಳ್ಳು ಕುಣಿತ ಸ್ಪರ್ಧೆಯಲ್ಲಿ ಬೀರಲಿಂಗೇಶ್ವರ ಡೊಳ್ಳಿನ ಸಂಘ ಅಂಬಾರಗೊಪ್ಪ ಶಿಕಾರಿಪುರ ಪ್ರಥಮ,ಸಿದ್ದಿವಿನಾಯಕ...

ಮಕ್ಕಳಿಗೆ ಆಸ್ತಿಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸಿ

ಮಕ್ಕಳಿಗೆ ಆಸ್ತಿ,ಆಭರಣ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾ ಗಿಸಿ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದ್ದಾರೆ. ಸಿದ್ಧಾಪುರ ಹಾಳದಕಟ್ಟಾ ಮತ್ತು ಕೊಳಗಿ ಪ್ರಾಥಮಿಕ ಶಾಲೆಗಳಲ್ಲಿ...

ಮಾಧ್ಯಮ ಪ್ರತಿನಿಧಿಗಳ ಸಂಘದ ಪದಾಧಿಕಾರಿಗಳ ಅಯ್ಕೆ

ಸಿದ್ದಾಪುರ: ತಾಲೂಕಿನಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಮಾಧ್ಯಮ ಪ್ರತಿನಿಧಿಗಳ ಸಂಘ (ರಿ) ಸಿದ್ದಾಪುರ ದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘದ ಅಧ್ಯಕ್ಷರಾಗಿ ಸಮಾಜಮುಖಿ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

1 Comment

Leave a Reply

Your email address will not be published. Required fields are marked *