ಮಲೆನಾಡಿನ ದೀವರ ಸಂಪ್ರದಾಯಗಳ ವೈಶಿಷ್ಟ್ಯ ತಿಳಿಯಬೇಕೆ?

ಬ್ರಾಹ್ಮಣರು ಮತ್ತು ದೀವರು
ಅಣ್ಣ-ತಮ್ಮಂದಿರು
ಐತಿಹ್ಯ
ವೇದಕಾಲದಿಂದ ಹಿಡಿದು ಕ್ರಿ.ಶ. 5-6ನೇ ಶತಮಾನದವರೆಗೆ ಎಲ್ಲಾ ಜನಾಂಗಗಳೂ ಪರಸ್ಪರ ಸಂಕರಣಗೊಳ್ಳುತ್ತ ಬಂದಿವೆ.
ದೀವರಲ್ಲಿನ ಬಳಿಗಳನ್ನು ಪರಾಂಬರಿಸಿದಾಗ ವಿವಿಧ ಜನಾಂಗಗಳು ಒಂದರೊಡನೊಂದು ಸಂಕರಗೊಂಡಿರುವುದು ಖಚಿತಪಡುತ್ತದೆ.
ದೀವರಲ್ಲಿ ಇಂದಿಗೂ ಇರುವ ಐತಿಹ್ಯದಂತೆ ಬ್ರಾಹ್ಮಣ ಮತ್ತು ದೀವರು ಅಣ್ಣ-ತಮ್ಮಂದಿರು ಎಂಬ ಪ್ರತೀತಿ ಇದೆ.
ಕಾರಣ ಕ್ರಿ.ಶ. 345 ರಲ್ಲಿ ಅಹಿಚ್ಛತ್ರದಿಂದ ಕದಂಬರ ಮಯೂರವರ್ಮನು ಬ್ರಾಹ್ಮಣರನ್ನು, ಬಂಟರನ್ನು ಹಾಗೂ ನಾಯಕರನ್ನು ಕರ್ನಾಟಕಕ್ಕೆ ಕರೆದು ತಂದನೆಂಬ ಐತಿಹ್ಯವಿದೆ.

ಬ್ರಾಹ್ಮಣರ 16 ಕುಟುಂಬಗಳನ್ನು ಉತ್ತರ ಕನ್ನಡಕ್ಕೂ ಬಂಟರ 32 ಕುಟುಂಬಗಳನ್ನು ತುಳುನಾಡಿಗೂ, ನಂಬೂದರಿಯ 6 ಕುಟುಂಬ ಕುಟುಂಬಗಳನ್ನು ಕೇರಳಕ್ಕೂ ಕಳಿಸಿ ಸ್ಥಾಪಿಸಿದ.
ಹೀಗೆ ಬನವಾಸಿ ಪ್ರಾಂತ್ಯದಲ್ಲಿ ಸ್ಥಾಪಿತರಾದ ಯುವಕರ ವಿವಾಹಕ್ಕೆ ಕನ್ಯೆಯರು ದೊರೆಯದಿದ್ದಾಗ ಮಲೆನಾಡು ಭಾಗದಲ್ಲಿನ ದೀವರ ಕನ್ಯೆಯರನ್ನುಮದುವೆಯಾದರೆಂಬ ಪ್ರತೀತಿ ಇದೆ.
ಕರಾವಳಿ ತೀರದಲ್ಲಿ ಮೊಗವೀರರ ಕನ್ಯೆಯರನ್ನು ವಿವಾಹ ಮಾಡಿಕೊಳ್ಳುವರು ಎಂಬ
ಪ್ರತೀತಿಯೂ ಇದೆ. ಈ ಕುರಿತು ಹೆಚ್ಚಿನ ಅಧ್ಯಯನವಾಗಬೇಕಾಗಿದೆ.

ಕುಲ ಕಸುಬು-ಕೂರಿಗೆ ಬಿತ್ತುವುದು
ದೀವರು ಮೂಲತಃ ಒಕ್ಕಲಿಗರು. ಕೃಷಿ ಮತ್ತು ಪಶುಪಾಲನೆ ಇವರ ಕಸುಬು ಎಂಬುದನ್ನು ಈ ಹಿಂದೆಯೇ ಹೇಳಿದೆ. ಇವರ ಮದುವೆ ಆಚರಣೆಯಲ್ಲಿ ತಮ್ಮ ಕುಲಕಸುಬಾದ ಕೂರಿಗೆ ಬಿತ್ತುವಶಾಸ್ತ್ರ-ಸಂಪ್ರದಾಯ ನಡೆಸುವರು. ಹೆಣ್ಣಿನ ಮನೆಯಲ್ಲಿ ಧಾರೆಯಾಗಿ ದಿಬ್ಬಣ ಗಂಡಿನ ಮನೆಗೆ ಬಂದಾಗ ಸಂಪ್ರದಾಯದನ್ವಯ ಕೆಲವೊಂದು ಕುಲಾಚಾರ ಶಾಸ್ತ್ರಗಳನ್ನು ಆಚರಿಸುವರು. ಅದರಲ್ಲಿ ಕೂರಿಗೆ ಬಿತ್ತುವಶಾಸ್ತ್ರವು ಬಹು ಪ್ರಧಾನವಾದುದು.
ಸಂಜೆ ಮದುಮಕ್ಕಳನ್ನು ಕವಣ ಚಪ್ಪರದಲ್ಲಿ ಕೊರಡಿನ ಮೇಲೆ ಕೂರಿಸಿ, ಅಡಿಕೆ ಹುಡುಕಿಸುವುದು, ಓಕಳಿ ಆಡಿಸುವುದು ಮುಗಿದನಂತರ ಕೂರಿಗೆ ಬಿತ್ತಿಸುವರು.
ಹಲಸಿನ ಎಲೆಯಲ್ಲಿ ಎರಡು ಎತ್ತುಗಳನ್ನು ಮಾಡಿ, ಬಾಳೆದಿಂಡಿನಲ್ಲಿ ನೇಗಿಲು, ಕೊರಡುಗಳನ್ನು ನಿರ್ಮಿಸುವರು. ಗೊಬ್ಬರ ಬೀರಿದಲ್ಲಿ ಮದುಮಗ ಕೂರಿಗೆ ಸಾಲು ಹೊಡೆಯುತ್ತಾ ಹೋಗುತ್ತಿರಲು, ಮದುಮಗಳು ಸಾಲಿನಲ್ಲಿ ಭತ್ತ ಬಿತ್ತುವಳು. ಬಿತ್ತಿದ ನಂತರ ಮದುಮಗ ಕೊರಡಿನಿಂದ ಸಾಲು ಮುಚ್ಚುವನು.

….. ಹೀಗೆ ಕೂರಿಗೆ ಬಿತ್ತುವ ಶಾಸ್ತ್ರಸಂಪ್ರದಾಯ ದೀವರಲ್ಲಿದ್ದು, ಇವರು ಒಕ್ಕಲಿಗರು. ಗೃಹದ ಒಳಗಡೆ ನಡೆಯುವ ಸಂಪ್ರದಾಯಗಳನ್ನು ಹೊರತುಪಡಿಸಿ, ಕವಣ ಚಪ್ಪರದಲ್ಲಿ ನಡೆಯುವ ಕೆಲವೊಂದು ಆಚರಣೆಗಳಲ್ಲಿ ವ್ಯವಸಾಯದ ಕೊರಡು ಬಳಕೆಯಾಗುವುದು ವಿಶೇಷ.
ಗುರುಪರವು ದಿನದಿಂದ ಹಿಡಿದು ದಿಬ್ಬಣ ಮನೆದುಂಬುವವರೆಗೆ ಈ ವ್ಯವಸಾಯದ ಕೊರಡಿನ ಮೇಲೆಯೆ ಕವಣ ಚಪ್ಪರದಲ್ಲಿ ಕೂರಿಸಿ ಬಿನ್ನಾಣಿ, ಕಳಸ ನೀರೆರೆಯುವ, ಓಕಳಿ ಆಡಿಸುವುದು, ಕೂರಿಗೆ ಬಿತ್ತುವ ಶಾಸ್ತ್ರದವರೆಗೆ ಸಂಪ್ರದಾಯ ಆಚರಣೆಗಳು ನಡೆಯುತ್ತವೆ.
ದೀವರಲ್ಲಿ ವ್ಯವಸಾಯದ ಕೊರಡಿಲ್ಲದೆ ಮದುವೆ ನಡೆಯದು. ದೀವರ ಮದುವೆಯಲ್ಲಿ ಗುರುಪರವು (ಗುರುಪರ್ವ) ದಿನ ಮದುಮಗನಿಗೆ ನಿಲುವಂಗಿ ಅಂದರೆ ರಾಜಪೋಷಾಕು ತೊಡಿಸಿ ಆ ದಿನದ ಮದುವೆ ಶಾಸ್ತ್ರಕಾರ್ಯ ನಡೆಸುತ್ತಿದ್ದರು.
70ರ ದಶಕದಿಂದೀಚೆ ಹಳೆಯ ನಿಲುವಂಗಿಗಳು ಜೀರ್ಣವಾಗಿದ್ದು ಇಂದು ಅವು ಆಚರಣೆಯಲ್ಲಿಲ್ಲ. ಮದುವೆ ಕಾರ್ಯಗಳಲ್ಲಿ ಖಡ್ಗ ಇಲ್ಲವೇ ಕಠಾರಿ ಬಳಕೆಯಲ್ಲಿದೆ. ಕ್ಷಾತ್ರಪರಂಪರೆಯಂತೆ ಕಠಾರಿಯನ್ನು ಮದುಮಗ ಬಲಗೈಯಲ್ಲಿ ಹಿಡಿದಿರಲೇಬೇಕು. ಇಂದಿಗೂ ಖಡ್ಗ ಅಥವಾ ಕಠಾರಿ ಇಲ್ಲವೇ ಬಾಕುವಿಗೆ ಎರಡು ಮಾವಿನ ಎಲೆ ಕಟ್ಟಿ, ಶಿರದ ಮೇಲಿಂದ ಕಳಸನೀರೆರೆಯಲು ಬಳಸುವರು ಇದನ್ನು ಸುರಗಿ ನೀರೆರೆಯುವುದು ಎನ್ನುವರು.

ಇದು ಕ್ಷಾತ್ರ ಕುಲಧರ್ಮದ ಸಂಕೇತವಾಗಿ ಸುರಗಿಖಡ್ಗದ ಆಚರಣೆ ಇಂದಿಗೂ ನಡೆದು ಬರುತ್ತಿದೆ. ಕೊಯ್ಲು ಮುಗಿದ ನಂತರ ಪ್ರಥಮ ಉಕ್ಕೆಯನ್ನು ಸಕನಾರು ಕಟ್ಟುವುದು ಎನ್ನುವರು.
ಅಂದು ನೇಗಿಲು ನೊಗ ಹಾಗು ಎತ್ತುಗಳ ತಲೆಗೆ ತೋರಣ ಕಟ್ಟಿ ಅವುಗಳನ್ನೂ, ಭೂಮಿಯನ್ನೂ ಗಂಧ. ಹೂವು, ಧೂಪ, ದೀಪಗಳಿಂದ ಪೂಜಿಸಿ; ಹಾಲು, ಹಣ್ಣು ಎಲೆ-ಅಡಿಕೆಗಳ ನೈವೇದ್ಯಮಾಡಿ ಭಕ್ತಿಯಿಂದ ನಮಿಸಿ ಮೊದಲ ‘ವ್ಹಾಕೆ’ಹೊಡೆಯುವುದೇ ರೈತರಿಗೆ ಬಲು ಸಡಗರ. ಆರಂಭ ಮತ್ತೆ ಇಂದಿನಿಂದ ಆರಂಭವಾಗುವುದು (ವ್ಹಾಕೆ-ಮೊದಲ ಉಕ್ಕೆ) (ಉಕ್ಕೆ ಎಂದರೆ-ಉಳುವುದು)
ಕುರೋಳಿ ಕೊಳ್ಳಿ
ದೀವರು ವೈದಿಕ ಪರಂಪರೆಯ ಷೋಡಶ ಸಂಸ್ಕಾರ ಅನುಸರಿಸುವವರು. ಮೃತರಾದ ಅಪ್ರಾಪ್ತ ಮಕ್ಕಳನ್ನು ಮಣ್ಣುಮಾಡುತ್ತಿದ್ದು, ಪ್ರಾಯಕ್ಕೆ ಬಂದವರು ಮತ್ತು ಮದುವೆಯಾದವರ ದಹನಕ್ರಿಯೆ ದೀವರಲ್ಲಿದೆ.
ಶವಸಂಸ್ಕಾರದ ದಹನಕ್ರಿಯೆಯಲ್ಲಿ ಚಿಂತೆಗೆ ‘ಕುರೋಳಿ ಕೊಳ್ಳಿ’ ಯಿಂದ ಅಗ್ನಿಯನ್ನು ಸ್ಪರ್ಶಿಸುತ್ತಾರೆ. ಕುರೋಳಿ ಕೊಳ್ಳಿಯು ಒಕ್ಕಲುತನದ ಪರಿಪೂರ್ಣತೆಯನ್ನು ಪ್ರತಿಪಾದಿಸುತ್ತದೆ.
ಆದರೆ ಇತ್ತೀಚೆಗೆ ಆಧುನಿಕತೆಯ ಸೋಗಿನಲ್ಲಿ ಈ ಸಂಪ್ರದಾಯ ಮರೆಯಾಗುತ್ತಾ ಬಂದಿದ್ದು ಕೆಲವು ಕಡೆ ಮಾತ್ರ ಅಲ್ಲಲ್ಲಿ ಉಳಿದು ಕೊಂಡಿದೆ.
ಕುರೋಳಿ-ಎಂದರೆ, ಉಳುಮೆಯಲ್ಲಿ ಸವೆದು ಹೋಗಿ ಸಣ್ಣಗಾತ್ರಕ್ಕೆ ತಲುಪಿದ ಸವಕಲು ನೇಗಿಲು. ಇದನ್ನು ‘ಕುರೋಳಿ ಮೋಟು’ ಎಂದೂ ಕರೆಯುವರು. ಇಲ್ಲಿ ‘ಕೊಳ್ಳಿ’- ಎಂದರೆ ಶವದ ದಹನಕ್ರಿಯೆಯಲ್ಲಿ ಅಗ್ನಿಸ್ಪರ್ಶದ ಕೊಳ್ಳಿಯಾಗಿ ಈ ನೇಗಿಲನ್ನು ಉಪಯೋಗಿಸುವುದರಿಂದ ‘ಕುರೋಳಿ ಕೊಳ್ಳಿ’ ಎಂದು ಕರೆಯಲಾಗಿದೆ.

ನೇಗಿಲು ಉಳುಮೆಯಲ್ಲಿ ಸವೆದು ಹೋಗಿದ್ದು ಮತ್ತೆ ಉಪಯೋಗಿಸಲು ಬಾರದಷ್ಟು ಸವಕಳಿಯಾದುದರಿಂದ ಇದನ್ನು ನೇಗಿಲ ಮೋಟು,ಕುರೋಳಿ ಮೋಟು ಎಂದು ಕರೆಯುವರು.
‘ಈಡು’ ಎಂದರೆ ಶವಸಂಸ್ಕಾರಕ್ಕಾಗಿ ಶವದ ಉದ್ದಕ್ಕನುಗುಣವಾಗಿ ಚೌಕಾಕಾರವಾಗಿ ಜೋಡಿಸಿ ಸಿದ್ಧಪಡಿಸಿದ ಕಟ್ಟಿಗೆ ರಾಸಿ. ಮೇಳಿ ಹಾಗೂ ಈಸನ್ನು ಕಳಚಿಟ್ಟು ನೇಗಿಲನ್ನು ಮಾತ್ರ ಚಿತೆಯ ಕೊಳ್ಳಿಯಾಗಿ ಉಪಯೋಗಿಸುವರು.
ತೀರ್ಥಹಳ್ಳಿ ತಾಲ್ಲೂಕಿನ ಹಣಗೆರೆ ಗ್ರಾಮದ ಆಡಗಳಲೆ ಮಂಜುನಾಯ್ಕರ ಅಪೇಕ್ಷೆಯಂತೆ ಅವರೇ ತೆಗೆದಿರಿಸಿದ್ದ ಕುರೋಳಿ ಮೋಟನ್ನು, ಅವರು 20 ರ ದಶಕದಲ್ಲಿ ಮೃತಪಟ್ಟಾಗ ಅವರ ಶವಸಂಸ್ಕಾರದ ವೇಳೆ ಅವರ ಮಗ ಸ್ವಾಮಿ ಎನ್ನುವರು ಕುರೋಳಿ ಕೊಳ್ಳಿಯಾಗಿ ಉರಿಸಿ ಶವದ ಈಡಿಗೆ ಉರಿತಾಗಿಸಿದರು.
ಇದೇರೀತಿ ಶಿಕಾರಿಪುರ ತಾಲ್ಲೂಕಿನ ಕಲ್ಮನೆ ಗ್ರಾಮದ ಮಜರೆ ಕಟ್ಟಿಗೆಹಳ್ಳ ವಾಸಿ ಚಿಕ್ಕಮತ್ತೂರು ದೊಡ್ಡಮನೆ ತಿಮ್ಮನಾಯ್ಕರು 1993 ರಲ್ಲಿ ಮೃತರಾದಾಗ ಕುರೋಳಿ(ನೇಗಿಲು)ಯನ್ನು ‘ಕುರೋಳಿ ಕೊಳ್ಳಿ’ ಯಾಗಿ ಈಡಿಗೆ ಸ್ಪರ್ಶಿಸಲಾಯ್ತು.
ಹೊಸನಗರ ತಾಲ್ಲೂಕಿನ ಕುದುರೆ ಬೀರಪ್ಪನ ವೃತ್ತದ ಬಳಿಯ ಹನ್ನಾರ ಸೀಮೆಯ ಹನ್ನಾರ ಗ್ರಾಮದ ತುದಿಬಸ್ತಿ ಮನೆತನದ 72 ವರ್ಷದ ಸುಬ್ಬಾನಾಯ್ಕರು ಹೇಳುವಂತೆ ದೀವರ ಶವಸಂಸ್ಕಾರ ಕ್ರಿಯೆಯಲ್ಲಿ ಕುಲವೃತ್ತಿಯ ಸಲಕರಣೆಯಾದ ನೇಗಿಲನ್ನು ಸಹ ಶವದೊಂದಿಗೆ ದಹಿಸುವ ಕ್ರಿಯೆ ಇರುವುದಾಗಿ ತಿಳಿಸುತ್ತಾರೆ.

ಇವರ ತಂದೆ, ತಾಯಿ, ಅಕ್ಕ, ಭಾವ ಇವರುಗಳು ತೀರಿಕೊಂಡಾಗ ಅವರ ಶವದೊಂದಿಗೆ ಕುರೋಳಿ ಮೋಟನ್ನು ತಾವೇ ಶವದ ಈಡಿಗೆ ಇಟ್ಟು ದಹಿಸಿರುವುದಾಗಿ ಹೇಳುವರು.
ಪ್ರಸ್ತುತ ಇವರು ಇದೇ ಹೊಸನಗರ ತಾಲ್ಲೂಕಿನ ಕೆರೆಹಳ್ಳಿ ಹೋಬಳಿಯ ಬಿಳಿಕಿ ಗ್ರಾಮದ ಮಾವಿನಸರದಲ್ಲಿ ನೆಲೆಸಿರುವರು. ಈ ಪರಿಸರದ ಗವಟೂರು, ಹುಳಿಗದ್ದೆ, ಹಳಿಯೂರು, ಬಿಳಿಕಿ ಹಾಗೂ ಇತರೆ
ಗ್ರಾಮಗಳಲ್ಲಿ ‘ಕುರೋಳಿ ಕೋಳಿ’ ಪದ್ಧತಿ ಇರುವುದಾಗಿ ತಿಳಿಸುತ್ತಾರೆ.

ಮಲೆನಾಡಿನ ದೀವರು, ಕೃಷಿಕನ
ಜೀವನಾಡಿಯಾದ ನೇಗಿಲು ಕೂಡ ಪರಲೋಕದಲ್ಲೂ ಸದಾ ತನ್ನ ಜೊತೆಯಲ್ಲಿ ಇರಲಿ ಎಂಬುದು ಒಕ್ಕಲು ಮಕ್ಕಳ ಹಂಬಲ.
ಒಮ್ಮೆ ಕ್ಷಾಮ, ಬರಗಾಲಗಳು ಬಂದರೂ ಹೊಟ್ಟೆಯ ಹಿಟ್ಟಿಗಾಗಿ ದೀವರು ಬಿಕ್ಷೆ ಬೇಡುವ ಹಾಗಿಲ್ಲ. ಹಸಿವಿನಿಂದ ಪ್ರಾಣ ಹೋಗುವ ಪರಿಸ್ಥಿತಿ ಉಂಟಾದಲ್ಲಿ ಕೊರಳಿಗೆಕುರೋಳಿ(ನೇಗಿಲ ಮೋಟು) ಕಟ್ಟಿಕೊಂಡು ಬಿಕ್ಷೆ ಬೇಡಬೇಕೆಂಬ ಕಟ್ಟು ದೀವರಲ್ಲಿದೆ.
ಇದು ದೀವರ ಸ್ವಾಭಿಮಾನವನ್ನು ಎತ್ತಿಹಿಡಿಯುತ್ತದೆ. ಅನ್ನದಾತನಾದ ದೀವರು ದುಡಿದು ತಿನ್ನಬೇಕೇ ವಿನಃ ಬಿಕ್ಷೆ ಬೇಡುವುದು ಅವಮಾನಕರ, ಇದಕ್ಕಿಂತ ಸಾವೇ ಮೇಲು ಎನ್ನುವ ಭಾವನೆ ಎಂದು ಸುಬ್ಬನಾಯ್ಕರು ನುಡಿಯುತ್ತಾರೆ.
ಸಾಮಾನ್ಯವಾಗಿ ಯಾವುದೇ ಕೃಷಿಕರು ಸವೆದ ನೇಗಿಲು, ನೊಗ, ನಳ್ಳಿ, ಕುಂಟೆ ಮೊದಲಾದ ವ್ಯವಸಾಯದ ಮುಟ್ಟುಗಳನ್ನು ಸುಡುವುದಿಲ್ಲ. ತೆಗೆದು, ಒಂದು ಕಡೆ ಜೋಪಾನವಾಗಿಡುತ್ತಾರೆ. ಒಮ್ಮೆ ಮುರಿದು ಹೋದಲ್ಲಿ ಅದನ್ನು ಎಸೆದುಬಿಡುತ್ತಾರೆ.

ಸಂಪ್ರದಾಯ
ಧೀವರು ವಂಶಪಾರಂಪರ್ಯವಾಗಿ ಕೃಷಿಕರು. ಪ್ರಾಚೀನತಮವಾಗಿ ಕುರುಂಬಿಕೆ-ಪಶುಪಾಲನೆ ಇವರ ಕಸುಬು. ಜೊತೆಗೆ ಸ್ವಭಾವತಃ ಆದಿ ಯೋಧರು. ಧಾರೆ ಮೊದಲಿನ ದಿನವನ್ನು ಚಪ್ಪರದ ದಿನ, ಗುರುಪರಾವದ ದಿನವನ್ನು ಊರೊತ್ತಲದಿನವೆಂದೂ ಕರೆಯುವರು. ಮದುಮಕ್ಕಳಿಗೆ ಅಂದು ಬಿನ್ನಾಣಿ, ಕಳಸನೀರು ಮುಗಿದನಂತರ ಹಸೆಗೋಡೆಯಲ್ಲಿ ಕೂರಿಸಿ ನೆಯ್ ಏರಿಸುವರು.
ನೆಯ್ ಎಂದರೆ ತುಪ್ಪ, ಎಣ್ಣೆ-ಅರಶಿಣವನ್ನು ಕೀಟಾಣು ನಿರೋಧಕ ಹಾಗು ದೃಷ್ಟಿತಾಗದಿರಲೆಂದು
ಮದುಮಕ್ಕಳಿಗೆ ಬಳಿಯುವರು.
ಹಸೆಗೋಡೆಯಲ್ಲಿ ಪ್ರಥಮವಾಗಿ ಕೂರಿಸುವ ಮೊದಲು ಅಕ್ಕಿಯಿಂದ ನಾಲ್ಕು ಮೂಲೆಗಳಲ್ಲಿ ಮತ್ತು ನಡುವೆ ಮಂಟಪದಾಕಾರದಲ್ಲಿ ವಿಶಿಷ್ಟವಾಗಿ ಐದು ದಿಕ್ಕಿನಲ್ಲಿ ಹಾಡು ಹೇಳುತ್ತಾ ಚೌಕ ತುಂಬುವರು.
ಈ ಚೌಕಗಳ ಮೇಲೆ ಎಲೆ, ಅಡಿಕೆ ಹಾಗೂ ಒಂದೊಂದು ನಾಣ್ಯವನ್ನಿಡುವರು. ಐದು ಜನ ಮುತ್ತೈದೆಯರು ಕರಿಯ ಕಂಬಳಿ ಜಾಡಿಯನ್ನು ಉದ್ದವಾಗಿ ಬಿಚ್ಚಿಹಿಡಿದು, ಜಾಡಿ ಹಾಸುವ ಹಾಡನ್ನು ಹೇಳುತ್ತಾ ನಾಲ್ಕು ಬಾರಿ ಚೌಕಕ್ಕೆ ಮುಟ್ಟಿಸಿ ಎತ್ತಿ, ಐದನೇ ಬಾರಿ ಈ ಚೌಕದ ಮೇಲೆ ಗದ್ದುಗೆ ಹಾಸುವರು. ಗದ್ದುಗೆ ಮೇಲೆ ಮದುಮಗನೂ, ಮದುಮಗಳನ್ನು ಕೂರಿಸಿ ಹಾಡು ಹೇಳುತ್ತಾ ಆರತಿ ಬೆಳಗುವರು. ಇದನ್ನು ಜಾಡಿ (ಝಾಡಿ) ಹಾಸುವುದು ಎನ್ನುವರು.

ಈ ಕರಿಯ ಕಂಬಳಿ ಜಾಡಿಯ ದೀವರ ಹಿಂದಿನ ಕುರುಂಬಿಕೆಯನ್ನು ದೃಷ್ಟಾಂತಿಸುತ್ತದೆ.
ಮಾರನೆಯ ದಿನದಿಂದ ಹಸೆಗೋಡೆಯಲ್ಲಿ ಚಾಪೆ ಹಾಸುವ ರೂಢಿ ಇದೆ. ಸೊರಬ ಹಾಗೂ ಶಿಕಾರಿಪುರ ತಾಲ್ಲೂಕುಗಳ ದೀವರಲ್ಲಿ ಮದುಮಗ ಧಾರೆಮುಹೂರ್ತಕ್ಕೆ ಹೊರಡುವಾಗ ಹಾಸಿದ ಜಾಡಿಯನ್ನು ಕಂಬಳಿಯ ಕೊಪ್ಪೆಯಾಗಿ ಹೊದೆದು ಧಾರೆ ಮಂಟಪದವರೆಗೆ ಹೋಗುವನು. ಅಲ್ಲಿಂದ ಮುಂದೆ ಜಾಡಿಯ ಬಳಕೆ ಇಲ್ಲ. ಶಂ.ಬಾ. ಜೋಶಿಯವರು ಜಾಡಿಯನ್ನು ಕುರಿತು ಹೀಗೆ ಪ್ರಸ್ತಾಪಿಸುವರು. ಹಟ್ಟಿಕಾರ-ದನಗಾರರೂ, ಹಟ್ಟಿಗಾರ-ಜಾಡರೂ ಪ್ರಾಚೀನ ಕಾಲದಲ್ಲಿ ಒಂದೇ ಬಗೆಗೆ ಸೇರಿದವರೆಂಬುದನ್ನು ಹೀಗೂ ಕಂಡುಕೊಳ್ಳಬಹುದಾಗಿರುತ್ತೆ ಎನ್ನುತ್ತಾರೆ. ಹಟ್ಟಿಕಾರ ದನಗಾರರಲ್ಲಿ ಎಂದರೆ ಕುರುಂಬರಲ್ಲಿ ಜಾಡಿಯವರುಂಟು. ಇವರು ನೇಯುವುದು ಕಂಬಳಿ. ಇವರು ಉಣ್ಣೆ ಕಂಕಣದವರು. ಜಾಡರೆಂಬುವರು ಈ ನೇಯುವುದು ನೂಲಿನ ಬಟ್ಟೆಗಳನ್ನು ಉಣ್ಣೆ ಕಂಕಣದ ಜಾಡಿಗಳೇ, ಹತ್ತಿಯು ಗೊತ್ತಾದ ಬಳಿಕ ಜಾಡರಾಗಿ-ದೇವಾಂಗರಾಗಿ ಮುಂದುವರಿದಿರುವುದು ವ್ಯಕ್ತವಾಗುತ್ತದೆ.

ಜಾಡಿಕೆಗೂ, ಜಟಾ-ಜಡೆ (ಕೂದಲು) ಶಬ್ದಗಳಿಗೂ ಹತ್ತಿರದ ಸಂಬಂಧವಿದೆ ಜಾವಳಿ ಎಂಬುದು ಒಂದು ವಿಶಿಷ್ಟ ಜಾತಿಯ ಕುರಿ ಎಂಬುದಾಗಿ ಮಹಾರಾಷ್ಟ್ರ ಶಬ್ದಕೋಶದಲ್ಲಿದೆಎನ್ನುವರು. ಇದರೊಡನೆ ಜವಳಿ (ವಸ್ತ್ರ) ಎಂಬ ಶಬ್ದರೂಪವೂ ಧ್ವನಿತವಾಗುತ್ತದೆ. ಜಾಡಿ-ಜಾಡವೆಂದರೆ ಕುರುಬ ಜನಾಂಗವೆಂದೂ ಆಗುತ್ತದೆ. ಪ್ರಾಚೀನ ತಮಿಳು ಸಾಹಿತ್ಯದಲ್ಲಿ ಜಾಡರಿಗೆ (ಯಮ) -ತುರ್ವರೇ ಜಾಡ ತುರುಕಾರರು ಎನ್ನುತ್ತಾರೆ.

ಪರುಷ್ಣಿ ನದಿಯ ನಾಡು ಋಗ್ವೇದದ ಕಾಲದಲ್ಲಿ ಉಣ್ಣೆಯ ಸಲುವಾಗಿ ಪ್ರಖ್ಯಾತವಾಗಿತ್ತು. ದೀವರಲ್ಲಿ ಆದಿಕಾಲದ ಜಾಡ, ಮರವರು ಕುರುಂಬರೂ ಆಗಿದ್ದಿರಬಹುದಾದ ಕುರುಹುವನ್ನು ಈ ಜಾಡಿ ಹಾಸುವುದು, ಹೊದೆಯುವುದು ವ್ಯಕ್ತಪಡಿಸುತ್ತದೆ.

ಸಂಪ್ರದಾಯ
ಧೀವರ ವಂಶಪಾರಂಪರ್ಯವಾಗಿ ಕೃಷಿಕರು. ಪ್ರಾಚೀನತಮವಾಗಿ ಕುರುಂಬಿಕೆ-ಪಶುಪಾಲನೆ ಇವರ ಕಸುಬು. ಜೊತೆಗೆ ಸ್ವಭಾವತಃ ಆದಿ ಯೋಧರು. ಧಾರೆ ಮೊದಲಿನ ದಿನವನ್ನು ಚಪ್ಪರದ ದಿನ, ಗುರುಪರಾವದ ದಿನವನ್ನು ಊರೊತ್ತಲದಿನವೆಂದೂ ಕರೆಯುವರು. ಮದುಮಕ್ಕಳಿಗೆ ಅಂದು ಬಿನ್ನಾಣಿ, ಕಳಸನೀರು ಮುಗಿದನಂತರ ಹಸೆಗೋಡೆಯಲ್ಲಿ ಕೂರಿಸಿ ನೆಯ್ ಏರಿಸುವರು. ನೆಯ್ ಎಂದರೆ ತುಪ್ಪ, ಎಣ್ಣೆ-ಅರಶಿಣವನ್ನು ಕೀಟಾಣು ನಿರೋಧಕ ಹಾಗು ದೃಷ್ಟಿತಾಗದಿರಲೆಂದು ಮದುಮಕ್ಕಳಿಗೆ ಬಳಿಯುವರು. ಹಸೆಗೋಡೆಯಲ್ಲಿ ಪ್ರಥಮವಾಗಿ ಕೂರಿಸುವ ಮೊದಲು ಅಕ್ಕಿಯಿಂದ ನಾಲ್ಕು ಮೂಲೆಗಳಲ್ಲಿ ಮತ್ತು ನಡುವೆ ಮಂಟಪದಾಕಾರದಲ್ಲಿ ವಿಶಿಷ್ಟವಾಗಿ ಐದು ದಿಕ್ಕಿನಲ್ಲಿ ಹಾಡು ಹೇಳುತ್ತಾ ಚೌಕ ತುಂಬುವರು.
ಈ ಚೌಕಗಳ ಮೇಲೆ ಎಲೆ, ಅಡಿಕೆ ಹಾಗೂ ಒಂದೊಂದು ನಾಣ್ಯವನ್ನಿಡುವರು. ಐದು ಜನ ಮುತ್ತೈದೆಯರು ಕರಿಯ ಕಂಬಳಿ ಜಾಡಿಯನ್ನು ಉದ್ದವಾಗಿ ಬಿಚ್ಚಿಹಿಡಿದು, ಜಾಡಿ ಹಾಸುವ ಹಾಡನ್ನು ಹೇಳುತ್ತಾ ನಾಲ್ಕು ಬಾರಿ ಚೌಕಕ್ಕೆ ಮುಟ್ಟಿಸಿ ಎತ್ತಿ, ಐದನೇ ಬಾರಿ ಈ ಚೌಕದ ಮೇಲೆ ಗದ್ದುಗೆ ಹಾಸುವರು. ಗದ್ದುಗೆ ಮೇಲೆ ಮದುಮಗನೂ, ಮದುಮಗಳನ್ನೊ ಕೂರಿಸಿ ಹಾಡು ಹೇಳುತ್ತಾ ಆರತಿ ಬೆಳಗುವರು.
ಇದನ್ನು ಜಾಡಿ (ಝಾಡಿ) ಹಾಸುವುದು ಎನ್ನುವರು. ಈ ಕರಿಯ ಕಂಬಳಿ ಜಾಡಿಯ ದೀವರ ಹಿಂದಿನ ಕುರುಂಬಿಕೆಯನ್ನು ಧೃಷ್ಟಾಂತಿಸುತ್ತದೆ. ಮಾರನೆಯ ದಿನದಿಂದ ಹಸೆಗೋಡೆಯಲ್ಲಿ ಚಾಪೆ ಹಾಸುವ ರೂಢಿ ಇದೆ. ಸೊರಬ ಹಾಗೂ ಶಿಕಾರಿಪುರ ತಾಲ್ಲೂಕುಗಳ ದೀವರಲ್ಲಿ ಮದುಮಗ ಧಾರೆಮುಹೂರ್ತಕ್ಕೆ ಹೊರಡುವಾಗ ಹಾಸಿದ ಜಾಡಿಯನ್ನು ಕಂಬಳಿಯ ಕೊಪ್ಪೆಯಾಗಿ ಹೊದೆದು ಧಾರೆ ಮಂಟಪದವರೆಗೆ ಹೋಗುವನು.
ಅಲ್ಲಿಂದ ಮುಂದೆ ಜಾಡಿಯ ಬಳಕೆ ಇಲ್ಲ. ಶಂ.ಬಾ. ಜೋಶಿಯವರು ಜಾಡಿಯನ್ನು ಕುರಿತು ಹೀಗೆ ಪ್ರಸ್ತಾಪಿಸುವರು. ಹಟ್ಟಿಕಾರ-ದನಗಾರರೂ, ಹಟ್ಟಿಗಾರ-ಜಾಡರೂ ಪ್ರಾಚೀನ ಕಾಲದಲ್ಲಿ ಒಂದೇ ಬಗೆಗೆ ಸೇರಿದವರೆಂಬುದನ್ನು ಹೀಗೂ ಕಂಡುಕೊಳ್ಳಬಹುದಾಗಿರುತ್ತೆ ಎನ್ನುತ್ತಾರೆ. ಹಟ್ಟಿಕಾರ ದನಗಾರರಲ್ಲಿ ಎಂದರೆ ಕುರುಂಬರಲ್ಲಿ ಜಾಡಿಯವರುಂಟು. ಇವರು ನೇಯುವುದು ಕಂಬಳಿ. ಇವರು ಉಣ್ಣೆ ಕಂಕಣದವರು. ಜಾಡರೆಂಬುವರು ಈ ನೇಯುವುದು ನೂಲಿನ ಬಟ್ಟೆಗಳನ್ನು ಉಣ್ಣೆ ಕಂಕಣದ ಜಾಡಿಗಳೇ, ಹತ್ತಿಯು ಗೊತ್ತಾದ ಬಳಿಕ ಜಾಡರಾಗಿ-ದೇವಾಂಗರಾಗಿ ಮುಂದುವರಿದಿರುವುದು ವ್ಯಕ್ತವಾಗುತ್ತದೆ.
ಜಾಡಿಕೆಗೂ, ಜಟಾ-ಜಡೆ (ಕೂದಲು) ಶಬ್ದಗಳಿಗೂ ಹತ್ತಿರದ ಸಂಬಂಧವಿದೆ. ಜಾವಳಿ ಎಂಬುದು ಒಂದು ವಿಶಿಷ್ಟ ಜಾತಿಯ ಕುರಿ ಎಂಬುದಾಗಿ ಮಹಾರಾಷ್ಟ್ರ ಶಬ್ದಕೋಶದಲ್ಲಿದೆಎನ್ನುವರು. ಇದರೊಡನೆ ಜವಳಿ (ವಸ್ತ್ರ) ಎಂಬ ಶಬ್ದರೂಪವೂ ಧ್ವನಿತವಾಗುತ್ತದೆ. ಜಾಡಿ-ಜಾಡವೆಂದರೆ ಕುರುಬ ಜನಾಂವೆಂದೂ ಆಗುತ್ತದೆ. ಪ್ರಾಚೀನ ತಮಿಳು ಸಾಹಿತ್ಯದಲ್ಲಿ ಜಾಡರಿಗೆ (ಯಮ) -ತುರ್ವರೇ ಜಾಡ ತುರುಕಾರರು ಎನ್ನುತ್ತಾರೆ. ಪರುಷ್ಣಿ ನದಿಯ ನಾಡು ಋಗ್ವೇದದ ಕಾಲದಲ್ಲಿ ಉಣ್ಣೆಯ ಸಲುವಾಗಿ ಪ್ರಖ್ಯಾತವಾಗಿತ್ತು. ದೀವರಲ್ಲಿ ಆದಿಕಾಲದ ಜಾಡ, ಮರವರು ಕುರುಂಬರೂ ಆಗಿದ್ದಿರಬಹುದಾದ ಕುರುಹುವನ್ನು ಈ ಜಾಡಿ ಹಾಸುವುದು, ಹೊದೆಯುವುದು ವ್ಯಕ್ತಪಡಿಸುತ್ತದೆ.
(ಮಧುಗಣಪತಿರಾವ್ ಮಡೇನೂರುರ ಕರ್ನಾಟಕ ದೀವರು ಪುಸ್ತಕದಿಂದ)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮೀನು ಕಚ್ಚಿ ಸಾವು!

ದೇವಬಾಗ್: ಬಲೆಗೆ ಬಿದ್ದಿದ್ದ ‘jellyfish’ ಕುಟುಕಿ ಮೀನುಗಾರ ಸಾವು! ಮೀನು ಯಾರಿಗೂ ಏನೂ ಮಾಡೋಲ್ಲ ಅನ್ನೋದೇನೋ ನಿಜ. ಆದರೆ, ಅದರಲ್ಲೂ ವಿಷಕಾರಿ ಮೀನುಗಳು ಉಂಟು...

ತೈಲ ಬೆಲೆ ಏರಿಕೆ ಪ್ರತಿಭಟನೆ ವೇಳೆ ಹೃದಯಾಘಾತ: BJP ಮಾಜಿ MLC ಎಂ.ಬಿ ಭಾನುಪ್ರಕಾಶ್ ನಿಧನ

ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ ಭಾನುಪ್ರಕಾಶ್ ಅವರು ಹೃದಯಾಘಾತದಿಂದ ಸೋಮವಾರ ನಿಧನ ಹೊಂದಿದ್ದಾರೆ. ಭಾನುಪ್ರಕಾಶ್ ಶಿವಮೊಗ್ಗ: ಇಂಧನ ಮೇಲಿನ ವ್ಯಾಟ್ ಏರಿಕೆ ವಿರೋಧಿಸಿ...

ಪ.ಪಂ. ರಸ್ತೆ, ಚರಂಡಿ ನಿರ್ವಹಣೆಗೆ ಆದ್ಯತೆ ನೀಡಲು ಶಾಸಕರ ಸೂಚನೆ

ಸಿದ್ಧಾಪುರ ಪಟ್ಟಣ ಪಂಚಾಯತ್‌ ವ್ಯಾಪ್ತಿಯ ರಸ್ತೆಗಳ ನಿರ್ವಹಣೆ,ಹಾಗೂ ಚರಂಡಿ ಮತ್ತು ನೀರಿನ ವ್ಯವಸ್ಥೆಗಳಿಗೆ ಆದ್ಯತೆಯ ಮೇಲೆ ಕೆಲಸ ಮಾಡಲು ಶಾಸಕ ಭೀಮಣ್ಣ ನಾಯ್ಕ ಸೂಚಿಸಿದರು....

fake modi menia…….. ಮೋದಿ ಭಜನೆಯಿಂದ ಕಾಂಗ್ರೆಸ್‌ ಸೋಲು! ಕಾಂಗ್ರೆಸ್‌ ಸೋಲಿಗೆ ಕಾರಣ ಭಾಗ-೦೫ : ಕ್ರಾಂತಿ ಚಿರಾಯುವಾಗದೆ ಅನ್ಯ ದಾರಿಯೆ ಇಲ್ಲ.

ಸಾಹಿತ್ಯ, ಚಿಂತನೆ, ಹೋರಾಟಗಳೆಲ್ಲ ಯಾಕೆ ಬೇಕು ಎನ್ನುವ ಮನಸ್ಥಿತಿ ಹಲವರಲ್ಲಿದೆ. ಸಾಹಿತ್ಯ ಪ್ರಭುತ್ವವನ್ನು ಪ್ರಶ್ನಿಸಿ ಆಡಳಿತವನ್ನು ಜನಪರವಾಗಿಸುವತ್ತ ಕೆಲಸ ಮಾಡುತ್ತದೆ. ಚಿಂತನೆ ಹೊಸ ಹೊಳಹುಗಳ...

ದುರಹಂಕಾರ ಪಟ್ಟವರನ್ನು ಶ್ರೀರಾಮನೇ 240 ಸೀಟುಗಳಿಗೆ ತಡೆದ: RSS ನಾಯಕ ಇಂದ್ರೇಶ್ ಕುಮಾರ್ ವಾಗ್ದಾಳಿ

ಲೋಕಸಭಾ ಚುನಾವಣೆಯ ಫಲಿತಾಂಶಗಳ ನಂತರ ಆರೆಸ್ಸೆಸ್‌ ನಾಯಕ ಇಂದ್ರೇಶ್‌ ಕುಮಾರ್ ಆಡಳಿತ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ ಹಾಗೂ ʼಅಹಂಕಾರʼಕ್ಕಾಗಿ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ....

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

2 Comments

  1. Nice..ಆದರೆ ಕಾಲಕಾಲಕ್ಕೆ ತಕ್ಕಂತೆ ಹಲವು ತಲೆಮಾರುಗಳು ತನ್ನೊಂದಿಗೆ ವಾಸಿಸುವ ಇನ್ನಿತರೆ ಸಮುದಾಯಗಳ ಜೀವನ ಶೈಲಿ ಅಚಾರಗಳಿಂದ ಪ್ರಬಾವಿತವಾಗಿರುವುದಕ್ಕೆ ಸಾಧ್ಯವಿದೆ.. ಹಾಗಂದ ಮಾತ್ರಕ್ಕೆ ದೀವರು ಭ್ರಹ್ಮಣರೊ… ಒಕ್ಕಲಿಗರು. ಕುರುಬರು ಎನ್ನಲಾಗದು.. ದೀವರು ಮೂಲ ಕೃಷಿಕರಾದರು ಯಾವುದೋ ಬುಡಕಟ್ಟು ಜನಾಂಗದ ಮೂಲದಂತೆ ಕಾಣುತ್ತಾರೆ… ಇದಕ್ಕೆ ಹಸೆ ಚಿತ್ತಾರ ಆಧಾರ ಇಟ್ಟುಕೊಂಡು ನೋಡಿದರೆ ಸೂಕ್ತವಾಗಿ ….ತಿಳಿಯುತ್ತೆ.. ಯಾಕೆಂದರೆ ಕರ್ನಾಟಕದ ಎಲ್ಲೂ ಈ ಬಗೆ ಚಿತ್ರ ..ಸಂಪ್ರದಾಯ ಇಲ್ಲ

    1. Super sir
      Nammantha sanna sanna sasegalige nam hemmarada bagge kelidaga odidage my romanchanavagutthadea…
      Namma vaishitatheagalea Namma hemmea….

Leave a Reply

Your email address will not be published. Required fields are marked *