ಎಲ್ಲದಕ್ಕೂ ಕಾರಣ ಕಾವ್ಯ

ಎಲ್ಲದಕ್ಕೂ ಕಾರಣ ಕಾವ್ಯ
ಕಾವ್ಯವನ್ನು ನಾನು ಈ ಭಾಷೆಯ ಅಹಂಕಾರದ ನೆಲೆಯ ಆಚೆಗೇ ಇಡ ಬಯಸುತ್ತೇನೆ. ಪ್ರತಿಜೀವಿಯಅಹಂಕಾರ ಶೂನ್ಯ ಕ್ಷಣವೇ ಆತನ ಸೃಜನ ಕ್ಷಣ, ಅತ್ಯುತ್ತಮ ಕ್ರೀಡಾಪಟುವಿನ ಶಿಖರಕ್ಷಣ, ಸಂಗೀತಗಾರನ ತನ್ಮಯ ಕ್ಷಣ, ಶಸ್ತ್ರ ಕ್ರಿಯೆಯ ನಡುವಿನ ವೈದ್ಯನಶ್ರದ್ಧಾವಂತ ಕ್ಷಣ ಮತ್ತು ಕಾವ್ಯ ನಿರ್ಮಿತಿಯ ಕ್ಷಣ ಇವು ಒಂದೇ.
ಮನುಷ್ಯ ಈಗ ಅತ್ಯಂತ ಸಂಕಟದ ಸ್ಥಿತಿಯಲ್ಲಿದ್ದಾನೆ. ಆತನಿಗೆ ತನ್ನೊಳಗಿನ ನಿಷ್ಕಪಟ ಮಗುವಿನ ಸಂಪರ್ಕವೇ ಕಡಿದು ಹೋಗಿದೆ. ಆತ ಮೊಂಡಾಗಿ ಹೋಗಿದ್ದಾನೆ.ಮರಗಟ್ಟಿದ್ದಾನೆ.
ಆದರೆ, ಈ ಮನುಷ್ಯನೂ ಎಂಥ ಬಿಸಿಲಿನಲ್ಲೂ ಎಂಥ ಅಪರಿಚಿತ ಶಿಶು ನಕ್ಕರೂ ಪ್ರತಿಯಾಗಿ ನಗದೇ ಇರಲಾರ. ಪೋಸ್ಟ್ ಆಫೀಸಿನಲ್ಲಿ ನಡುಗುವ ಕೈಗಳ ವೃದ್ಧ ವಿಳಾಸ ಬರೆಯಲು ತಡಕಾಡುತಿದ್ದರೆ ಆತನಿಗೆ ನೆರವಾಗದೇ ಇರಲಾರ. ಬಸುರಿ ಹೆಂಗಸು ನಿಂತಿದ್ದರೆ ಎದ್ದು ಆಕೆಗೆಸೀಟು ಕೊಡದೇ ಇರಲಾರ. ಇದು ಆತನೊಳಗೆ ಇನ್ನೂ ಜೀವ ಹಿಡಿದಿರುವ ಕಾವ್ಯ.
ಮನುಷ್ಯನೇನು ಕಬ್ಬಿಣದ ಪುಡಿಯೆ? ಆತ ಒಂದು ಮಣ್ಣಿನ ಗುಪ್ಪೆ,ತುಸುನೀರು ಸಿಂಪಡಿಸಿದರೂ ಕೊನರಬಲ್ಲ. ಮನುಷ್ಯ ನೇ ಮಾಡಿಕೊಂಡ ಮಣ್ಣಿನಗೋಡೆಗಳೂ ಒಂದು ಮಳೆಗೆ ಹಸಿರಾಗುತ್ತವಂತೆ. ಮನುಷ್ಯನೇಕೆ ಮೊಳೆಯಲಾರ?
ಒಳ್ಳೆಯ ಕಾವ್ಯಕ್ಕೆ ಈಗ ಬೇಕಾಗಿರುವುದು ಒಳ್ಳೆಯ ಕವಿಗಳಲ್ಲ, ಒಳ್ಳೆಯ ಜೀವಿಗಳು.
ಕೆಲವರು ಹೇಳುತ್ತಾರಲ್ಲ ಪ್ರೇತಾತ್ಮಗಳು ತಮಗೆ ಬೇಕಾದ ಶರೀರ ವನ್ನು ಅರಸುತ್ತಾ ಈ ಅವಕಾಶದಲ್ಲಿ ಅಲೆಯುತ್ತವೆ ಅಂತ. ಅದೇ ಥರ ಕಾವ್ಯಾತ್ಮವೂ ತಾನು ಪ್ರವೇಶಿಸಲು, ನೆಲೆಸಲು ಒಳ್ಳೆಯ ಮನಸ್ಸಿನ ಜಾಗವನ್ನು ಅರಸುತ್ತ ಅಲೆಯುತ್ತಲೇ ಇರುತ್ತದೆ. (ಮಕ್ಕಳಲ್ಲಿ ಅದು ಈಗಾಗಲೇ ನೆಲೆಸಿದೆ) ನಮ್ಮ ಹೃದಯ ವಿಶಾಲವಾದಷ್ಟೂ ಕಾವ್ಯಕ್ಕೆ ಅಷ್ಟು ಜಾಗ ಸಿಕ್ಕಂತೆ.
ಲಿಖಿತ ಕಾವ್ಯದಲ್ಲಿ ಸಮಾಜ ತರುವುದೇನೂ ಕಷ್ಟವಲ್ಲ. ಆದರೆ ಸಮಾಜದಲ್ಲಿ ಕಾವ್ಯ ತರುವುದು ಮತ್ತು ಉಳಿಸುವುದು ಅತ್ಯಂತ ಮುಖ್ಯ. ಇದೊಂದೇ ತನ್ನ ಶುದ್ಧ ರೂಪದಲ್ಲಿ ಮನುಷ್ಯನನ್ನು ಬರ್ಬರತೆಯಿಂದ ಕಾಪಾಡುವಸಂಜೀವಿನಿಆಗಬಹುದು.
ಲಿಖಿತ ಕಾವ್ಯ, ಸಮಾಜದ ಛಿಚಿಡಿಜiogಡಿಚಿm ನಂತೆ, ಅದರ ಹೃದಯದ ಸ್ಥಿತಿಗತಿಯ ದಿಕ್ಸೂಚಿ,ನಮ್ಮ ಬದುಕಿನ ಭಾವಗುಣ (emoಣioಟಿಚಿಟ quಚಿಟiಣಥಿ) ಹೆಚ್ಚಲಿ. ಬರೆಯದ ಕವಿತೆಗಳ ಮೊತ್ತ ಬರೆದ ಕವಿತೆಗಳಿಗಿಂತ ಸದಾ ಹೆಚ್ಚಿಗೇ ಇರಲಿ.
…..ಹೀಗೆ ಶಬ್ದ ತೀರದಲ್ಲಿ ‘ಕಾವ್ಯಕಾರಣ’ ಎಂಬ ಶಿರ್ಷಿಕೆಯಡಿ ನನ್ನ ಪ್ರೀತಿಯ ಕವಿ, ಕತೆಗಾರ ಜಯಂತ ಕಾಯ್ಕಿಣಿ ಬರೆಯುತ್ತಾರೆ.
ಅವರ ಕಾವ್ಯ ಕಾರಣ ಓದುವ ಮೊದಲೇ ಜಯಂತರಿಗೆ ನಮ್ಮ ‘ನೂರು ಕವಿತೆ ಸಾಲದು’ಕಾರ್ಯಕ್ರಮಕ್ಕೆ ಬರುತ್ತೀರೋ ಕೇಳಿದ್ದೆ. ಏನದು? ಎಂದವರಿಗೆ ‘ನೂರು ಕವಿತೆ ವಾಚನ ದೊಂದಿಗೆ ನೂರು ಹಣ್ಣಿನ ಗಿಡಗಳನ್ನು ನೆಡುವ ಅಪರೂಪದ ಕಾರ್ಯಕ್ರಮ’ ಎಂದೆ.
‘ನಿಮ್ಮ ಕವನ ಕೇಳಿ ಗಿಡಗಳು ಬಾಡದಿರಲಿ’ ಎಂದು ಕಿಚಾಯಿಸಿ ನಕ್ಕರು.
ಜಯಂತರ ಈ ವಿನೋದ ಪ್ರಜ್ಞೆ ಅವರನ್ನು ಈಗಲೂ ಥಿouಣh ಆಗಿಟ್ಟಿದೆ. ಹೀಗೆ ಸದಾ ಯುವಕರಾಗಿರುವ ಲಾಭವೆಂದರೆ. ಅವರ ಬರಹ, ಅಂಕಣ, ಕಾವ್ಯ ಒಟ್ಟಾರೆ ಸಾಹಿತ್ಯ ಸದಾ ಚೇತೋಹಾರಿ ಲವಲವಿಕೆಯಿಂದತುಂಬಿ ತುಳುಕುತ್ತಿರುತ್ತದೆ.
ಇಂಥ ಜೀವಪರ ಬರಹ, ಸಾಹಿತ್ಯಾಸಕ್ತಿಯ ಫಲಾನುಭವಿ ಗಳಾದ ನಾವು ನಮ್ಮ ಮಿತಿಯಲ್ಲಿ ಸಾಹಿತ್ಯ, ಸಾಂಸ್ಕøತಿಕ, ಸಾಮಾಜಿಕ ಸೇವೆ ಮಾಡುತ್ತಿರುವುದು ತೀರಾ ವ್ಯವಹಾರಿಕರಿಗೆ, ಸೃಜನಶೀಲತೆಗೆ ವಿಮುಖರಾಗಿದ್ದವರಿಗೆ ‘ಮಳ್ಳುತನ’ ಎನಿಸಬಹುದು.
ಆದರೆ, ಇಂಥ ಚಟುವಟಿಗಳ ಬಗ್ಗೆ ಕಾಳಜಿ ಇರುವ ಡಾ.ಆರ್.ಪಿ.ಹೆಗಡೆ,ನಾಗೇಶ್ ಹೆಗಡೆ, ರೋಹಿದಾಸನಾಯಕ, ನಾ.ಡಿಸೋಜಾ ವಿಷ್ಣುನಾಯ್ಕರಂಥ ಹಿರಿಯರೆಲ್ಲಾ ನಮ್ಮ ‘ನೂರು ಕವಿತೆ ಸಾಲದು’ ವಿಶಿಷ್ಟ ಸಮಾಜಮುಖಿ ಕೆಲಸ ಎಂದು ಶ್ಲಾಘಿಸಿದ್ದಾರೆ.
ಉಳಿದಂತೆ ನಮ್ಮ ಕಾಳಜಿ, ಪ್ರಗತಿಪರತೆ ಸಣ್ಣಮನಸ್ಸಿನ ಕೆಲವರ ಹೊಟ್ಟೆ ಉರಿಗೆ ಕಾರಣವಾದರೆ, ಅದಕ್ಕೆ ನಾವಂತೂ ಜವಾಬ್ಧಾರರಲ್ಲ ಯಾಕೆಂದರೆ, ನಮ್ಮ ಮುಂದಿರುವುದು ನಮ್ಮ ಕನಸಿನ ಜನಾಂಗ ಸಮಾಜಮುಖಿ ಸಮಾಜ, ಪ್ರತ್ಯಕ್ಷ-ಪರೋಕ್ಷವಾಗಿ, ಕೆಲವೆಡೆನಿರ್ಲಿಪ್ತರಾಗಿ ಬೆಂಬಲಿಸುತ್ತಿರುವ ಅಸಂಖ್ಯ ಒಳ್ಳೆಯ ಮನಸ್ಸುಗಳೇ ನಮಗೆ ಉತ್ತೇಜನ, ಪ್ರೇರಣೆ.
ನಮ್ಮ ‘ನೂರು ಕವಿತೆ ಸಾಲದು’ ಕಾರ್ಯಕ್ರಮದ ಬಗ್ಗೆ ಧ್ಯಾನಿಸುತ್ತ ಬರೆದ ಒಂದು ಕವನದೊಂದಿಗೆ ಬಿ.ಆರ್.ಲಕ್ಷಣರಾವ್‍ರ ನನ್ನಆಯ್ಕೆಯ ಒಂದು ಕವನ ಈ ಸಂದರ್ಭಕ್ಕೆ ಪ್ರಸ್ತುತ ಎಂದು ಭಾವಿಸಿ ಪ್ರಕಟಿಸಿದ್ದೇವೆ. ಧನ್ಯವಾದಗಳೊಂದಿಗೆ.
-ಕೋಲಶಿರ್ಸಿ ಕನ್ನೇಶ್
ಕಾವ್ಯ
ಕಾವ್ಯವೆಂದರೆ…. ಒಲುಮೆ,
ಕೈಗೆ ಸಿಕ್ಕಾಗ ತೋಯ್ದ ಗುಬ್ಬಿ
ಅವಚಿ, ಮುದ್ದಿಸಿ, ಆರಿಸಿ, ಆಡಿಸಿ
ಪುರ್ ಎಂದು ಹಾರಿಬಿಡುವ ಮೋಜು.
ಕಾವ್ಯವೆಂದರೆ….. ಕುಲುಮೆ
ಭಾವನೆಗಳಿಗೆ ಶಾಖ ಕೊಟ್ಟು
ಕಲ್ಫನೆಗಳಿಗೆ ರೂಪ ಕೊಟ್ಟು
ಕಾಯಿಸಿ, ಬೇಯಿಸಿ
ಬಡಿದ ನೇಗಿಲು.
ಕಾವ್ಯವೆಂದರೆ….. ಪ್ರತಿಮೆ
ಕೈ, ಕಾಲು, ಮೂಗು, ಬಾಯಿ
ಎಲ್ಲಾ ಆಕೃತಿಗಳನ್ನು ಜೋಡಿಸಿ
ಬೆರಳ ಬಲದಿಂದ ಎದ್ದು ನಿಲ್ಲುವ ಸಾಕಾರಮೂರ್ತಿ.
ಕಾವ್ಯವೆಂದರೆ….. ಚಿಲುಮೆ
ಮಳೆ, ಬಿಸಿಲು, ನೀರು, ಗಾಳಿ ಒತ್ತಡ ಎಲ್ಲವನ್ನೂ ಕೊಡವಿಕೊಂಡು
ಒಮ್ಮೆಲೇ ಚಿಮ್ಮುವ ನೀರು.
ಕಾವ್ಯವೆಂದರೆ.. ಕವಳ
ಎಲೆ, ಅಡಿಕೆ,ಸುಣ್ಣ, ಬಾಯಿ,ಹಲ್ಲು

ನವೆನವೆದು ಕೆಂಪಾಗಿ ಪಿಚ್ಚೆನ್ನುವ ಪಿಚಕಾರಿ

ನನ್ನ ಗೀತೆ
ನೆಲದ ಅನ್ನವನುಂಡು ತೇಗೀತೆ?
ಹಸಿರುಟ್ಟು, ಹೂ ಕೊಟ್ಟು ಬೀಗೀತೆ?
ಮೈ ತುಂಬ ಫಲ ಹೊತ್ತು ಬಾಗೀತೆ?
ನನ್ನ ಗೀತೆ…
ಹಕ್ಕಿಗಳ ಕೊರಳಿಂದ ಗುನುಗೀತೆ?
ಮೊಲದ ಕಣ್ಣುಗಳಿಂದ ಮಿನುಗೀತೆ?
ಜೇನ ಕೆಚ್ಚಲಿನಿಂದ ಜಿನುಗೀತೆ?
ನನ್ನ ಗೀತೆ…
ಪ್ರೇಮಿಗಳ ಒಸಗೆಯಲ್ಲಿ ತೊಡಗೀತೆ?
ಕಾಮಿಗಳ ಬೆಸುಗೆಯಲಿ ಅಡಗೀತೆ?
ಎಲ್ಲ ಉಲ್ಲಾಸದಲೂ ಇಡುಗೀತೆ?
ನನ್ನ ಗೀತೆ…
ಅಳುವ ಮಕ್ಕಳ ಹಾಡಿ ತೂಗೀತೆ?
ದಣಿದ ಒಕ್ಕಲ ಬಳಿಗೆ ಕೂಗೀತೆ?
ನೋವುಗಳ ಸಂತೈಸಿ ನೀಗೀತೆ?
ನನ್ನ ಗೀತೆ…
ಅಸಹಾಯಕರಿಗಾಗಿ ಮರುಗೀತೆ?
ದುರುಳರಿಗೆ ಕೆಚ್ಚಿಂದ ಎರಗೀತೆ?
ಮುರಿದರೂ ಕಂಗೆಡದೆ ಮಿರುಗೀತೆ?
ನನ್ನ ಗೀತೆ…
ಸಂಸಾರಿಗಳ ಜೋಡಿ ಏಗೀತೆ?
ಬೈರಾಗಿಗಳ ಕೂಡಿ ಮಾಗೀತೆ?
ತನ್ನದೇ ಪಥ ಹಿಡಿದು ಸಾಗೀತೆ?
ನನ್ನ ಗೀತೆ…ಎಲ್ಲರಿಗೂ ಹಿತವಾಗಿ ಒಗ್ಗೀತೆ?ಒಲ್ಲದವರನೂ ಬಳಿಗೆ ಜಗ್ಗೀತೆ?
ಬಲ್ಲವರ ಎದೆಗಳಲಿಹಿಗ್ಗೀತೆ?ನನ್ನಗೀತೆ…
-ಬಿ.ಆರ್ ಲಕ್ಷ್ಮಣರಾವ್
(14-08-2014 ರಲ್ಲಿ ಬರೆದದ್ದು)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *