ಅನಂತಮೂರ್ತಿಯವರ ಅವಸ್ಥೆ ಬಗ್ಗೆ ತಿಳಿಯಿರಿ-

ಎರಡೆರಡು ದಿವ್ಯ ಶೃದ್ಧಾಂಜಲಿಗಳು
ಮತ್ತು ಅವಸ್ಥೆ…
ಒಬ್ಬ ಕೃಷ್ಣಪ್ಪನೆಂಬ ದನಕಾಯುವ ಹುಡುಗ.
ಆತನಿಗೆ ಒಬ್ಬ ಜಂಗಮ ಗುರು ದೊರೆಯುತ್ತಾನೆ. ಹೆಂಡತಿ ಪರಪುರುಷನೊಂದಿಗೆ ವ್ಯಭಿಚಾರಕ್ಕೆ ಇಳಿದ ಪರಿಣಾಮ ಜಂಗಮಗುರು ಊರೂರು ಅಲೆಯುವ ಅಲೆಮಾರಿಯಾಗಿದ್ದಂತೆ. ಇಂಥ ಗುರು ದನಕಾಯುವ ಕೃಷ್ಣಪ್ಪನನ್ನು ಆ ಕೆಲಸದಿಂದ ಪಾರುಮಾಡಿ, ಹಾಸ್ಟೇಲಿಗೆ ಸೇರಿಸುತ್ತಾರೆ.
ಹಾಸ್ಟೇಲಿನಲ್ಲಿ ವಾರ್ಡನ್ ಶ್ರೀಮಂತ ಜಮೀನ್ಧಾರ. ಆತ ಬಡ ಕೃಷ್ಣಪ್ಪನನ್ನು ಅತ್ಯಂತ ತಾತ್ಸಾರದಿಂದ ಕಾಣುತಿದ್ದನಂತೆ.
ಹೀಗೆ ಗೋಪಾಲಕ ಕೃಷ್ಣಪ್ಪ ಗೌಡ ನಿಗಿನಿಗಿ ಕೆಂಡದಂಥ ತನ್ನ ವ್ಯಕ್ತಿತ್ವದೊಂದಿಗೆ ವಿದ್ಯಾಭ್ಯಾಸ ಮಾಡುತಿದ್ದಾಗ ಗೌರಿ ದೇಶಪಾಂಡೆ ಎಂಬ ವಿಭಿನ್ನ ವ್ಯಕ್ತಿತ್ವದ ಹುಡುಗಿಯ ಸ್ನೇಹವಾಗುತ್ತದೆ. ಈ ಮಧ್ಯೆ ಕೃಷ್ಣಪ್ಪಗೌಡರಿಗೆ ನೆರೆಯ ರಾಜ್ಯದಿಂದ ಬಂದ ಅಣ್ಣಾಜಿ ಎಂಬ ಭೂಗತ ವ್ಯಕ್ತಿ ಪರಿಚಯವಾಗಿ ಸ್ನೇಹಕ್ಕೆ ತಿರುಗುತ್ತದೆ. ರಸಿಕ ಬೈರಾಗಿ ಮಹೇಶ್ವರಯ್ಯ, ಅಣ್ಣಾಜಿ ಇವರ ಸ್ನೇಹ-ಸಂಬಂಧದ ನಡುವೆ ಬರುವ ಗೌರಿ ಪಾತ್ರಕ್ಕೆ ಕೃಷ್ಣಪ್ಪ ಹೀಗೆ ಬರೆಯುತ್ತಾರೆ.-
‘ಪ್ರಿಯ ಶ್ರೀಮತಿ ಗೌರಿ ದೇಶಪಾಂಡೆ,
ನೀವು ನನ್ನ ಮೇಲೆ ಪರಿಣಾಮ ಮಾಡಲೆಂದು ಮಾತಾಡಿದಿರಿ ಎಂದು ಅನುಮಾನವಾಗಿ ನಾನು ಉತ್ತರ ಕೊಡಲಿಲ್ಲ. ನಾವು ಒಂಟಿಯಾಗಿದ್ದಾಗ ನಮಗೇ ಆಡಿಕೊಳ್ಳದ ಮಾತುಗಳನ್ನು ಬೇರೊಬ್ಬರಿಗೆ ಯಾಕೆ ಹೇಳಬೇಕು?
ಎದುರೊಬ್ಬರು ಇದ್ದಾರೆ ಎಂಬ ಭಾವನೆಯಿಂದ ಹುಟ್ಟುವ ಮಾತುಗಳಲ್ಲೆ ಪಡಪೋಶಿ ಇದೆ.ಆದ್ದರಿಂದ ನಾನು ಸೌಜನ್ಯದ ವಿರೋಧಿ. ದುಡ್ಡು ಮಾಡುವವರಿಗೆ, ಜನಪ್ರೀಯತೆ ಬಯಸುವವರಿಗೆ ಸೌಜನ್ಯದ ಅಗತ್ಯವಿದೆ.
ಆಳವಾದ ಸಂಬಂಧಗಳಿಗೆ ಸೌಜನ್ಯ ಅಡ್ಡವಾಗುತ್ತದೆ. ನಾನು ನಿಮ್ಮನ್ನು ಹುಡುಕಿಕೊಂಡು ಬಂದು ಹೇಳಿದ್ದರ ಉದ್ದೇಶ ಬರೀ ಒಬ್ಬರನ್ನೊಬ್ಬರು ಗುರುತಿಸಿಕೊಳ್ಳಬೇಕೆಂಬುದು. ಆದರೆ ನಿಮ್ಮ ಸಹಾನುಭೂತಿ ಬೇಡುವ ದೌರ್ಬಲ್ಯದ ಅಂಶ ನನ್ನ ಕ್ರಿಯೆಯಲ್ಲೂ ಇದ್ದಿರಬಹುದು.
ನಾನು ಅಹಂಕಾರಿಯಲ್ಲ. ನೀವುಅಲ್ಲ. ಕ್ಷುದ್ರತೆಗೆ ತುತ್ತಾದವರಿಗೆ ನಾನು ಹಾಗೆ ಕಾಣಿಸಬಹುದು.
ಒಂದು ಮರ, ಒಂದು ಪಕ್ಷಿ, ಒಂದು ಮೃಗ, ಒಬ್ಬ ತಿರುಕ-ಯಾರನ್ನೇ ನೋಡಿದಾಗಲೂ ನಾನು ಎಲ್ಲರಿಗಿಂತಲೂ ಅನ್ಯಅನ್ನಿಸುತ್ತದೆಯೇ ಹೊರತು ಅವುಗಳಿಗಿಂತ ದೊಡ್ಡವನು ಎಂದು ಅನ್ನಿಸುವುದಿಲ್ಲ. ಇತರರು ತನ್ನನ್ನು ಆಕ್ರಮಿಸಲು ಬಂದಾಗ ಮಾತ್ರ ಹಾವು ತನ್ನ ವಿಷವನ್ನು ಬಳಸುವಂತೆ ನಾನು ನನ್ನ ಗರ್ವವನ್ನುವ್ಯಕ್ತಪಡಿಸುತ್ತೇನೆ.
ನಾನು ಹುಟ್ಟಿ ಬಂದ ವಾತಾವರಣದಲ್ಲಿ ಕ್ಷುದ್ರತೆ ಗೆಲ್ಲಲು ಇದು ನನಗೆ ಅಗತ್ಯವಾದ್ದಕ್ಕೆ ನಾನುಕಾರಣನಲ್ಲ. ನಿಮ್ಮ ಹಿನ್ನೆಲೆ ನೋಡಿದರೆ ನಿಮ್ಮ ಬಗ್ಗೆಯೂ ಇದು ನಿಜ ಎನ್ನಿಸುತ್ತದೆ. ಈ ಹೊರಗಿನ ಕ್ಷುದ್ರತೆ ಹೊರಗಿನದು ಮಾತ್ರವಲ್ಲ -ನಮ್ಮ ಒಳಗೂ ಇರುವಂಥಾದ್ದು. ನಮ್ಮ ತೀವ್ರತೆಯನ್ನು ಕೊಲ್ಲಲು ಇಂಥ ಸಂಚು ನಮ್ಮ ಒಳಗೂ ಹೊರಗೂ ನಡೆಯುತ್ತಲೇ ಇರುವುದರಿಂದ ಸದಾ ಎಚ್ಚರವಾಗಿರುವ ನಿಲುವು ಸಂಪನ್ನರಿಗೆ ಗರ್ವದಂತ ಕಾಣಬಹುದು. ಇದು ಅನಿವಾರ್ಯ, ಮೋಹಕ್ಕೆ ವಶವಾಗದ ನಿಷ್ಠುರತೆ, ನಮ್ಮ ಸುತ್ತ ಸಾಯುತ್ತ ಹುಟ್ಟುತ್ತ ಇರುವುದಕ್ಕೆಲ್ಲ ತೆರೆದುಕೊಂಡ ಎಚ್ಚರ-ಇದೇ ಯೋಗ. ಚೈತನ್ಯ ಮತ್ತು ಜಡತ್ವ ಜೋಡಿಗಳು ಎಂಬುದನ್ನು ಮರೆಯಬೇಡಿ.


….ಇಂಥ ಕೃಷ್ಣಪ್ಪ ಓದುನಿಲ್ಲಿಸಿ, ಪೇಟೆಯಿಂದ ಮರಳಿ ತನ್ನೂರಿನಲ್ಲಿ ರೈತ ಸಂಘಟನೆಯಲ್ಲಿ ತೊಡಗುವಂತೆ ಮಾಡಿದ್ದು ಅಣ್ಣಾಜಿಯ ಬಂಧನ ಮತ್ತು ಕೊಲೆ. ಭೂಗತ ಕಮ್ಯುನಿಷ್ಟ್ ಅಣ್ಣಾಜಿ ರೈತ, ಸಮಾಜವಾದಿ ಚಳವಳಿಗೆ ಭೂಮಿಕೆ ಸಿದ್ಧಪಡಿಸುತಿದ್ದಾಗ ಉಮೆಯೆಂಬ ಶ್ರೀಮಂತನೊಬ್ಬನ ಹೆಂಡತಿಯ ಸ್ನೇಹ ಬಾಂಧವ್ಯಕ್ಕೆ ಸಿಕ್ಕು, ನಂತರ ಪೊಲೀಸರಿಗೆ ಸೆರೆ ಸಿಕ್ಕು ಅಮಾನವೀಯವಾಗಿ ಕೊಲ್ಲಲ್ಪಡುತ್ತಾನೆ.
ಈ ಅಣ್ಣಾಜಿ ಬಂಧನ, ಕೊಲೆ ಜಾಡುಹಿಡಿದು ಆಂಧ್ರದ ವಾರಂಗಲ್‍ಗೆ ಹೋದ ಕೃಷ್ಣಪ್ಪ ಗೌಡರಿಗೆ ಸಾರ್ವಜನಿಕ ವ್ಯವಸ್ಥೆ ಪೊಲೀಸ್ ದುಷ್ಟತನಗಳೆಲ್ಲಾ ತಿಳಿದು ವ್ಯವಸ್ಥೆ ಹದಗೆಟ್ಟಿರುವ ಅನುಭವವಾಗುತ್ತದೆ. ಪೊಲೀಸ್ ಕಾರ್ಯವನ್ನು ಪ್ರತಿಭಟಿಸುತ್ತಲೇ ಕೃಷ್ಣಪ್ಪ ಅಂತೂಇಂತೂ ಬಂಧನಮುಕ್ತವಾಗುತ್ತಾರೆ. ಈ ಮಧ್ಯೆ ಕೃಷ್ಣಪ್ಪನವರಿಗೆ ಶೋಷಣೆ, ದಬ್ಬಾಳಿಕೆ, ಜಾತಿ ಶ್ರೇಷ್ಠತೆ ದೇವರು, ಮಠದ ಅಸ್ಥಿತ್ವಗಳ ಮೂಲಕ ಜನಸಾಮಾನ್ಯರನ್ನು ಹಿಂಡುವ ದಬ್ಬಾಳಿಕೆ ಎಲ್ಲವೂ ತನ್ನ ಬದುಕಿನ ಅನಿವಾರ್ಯತೆಗಳಂತೆನಡೆದುಹೋಗುತ್ತವೆ. ಈ ಸ್ಥಿತಿಯ ಮುಂದುವರಿಕೆಯಂತೆ ಕೃಷ್ಣಪ್ಪ ಗೌಡರ ರೈತಹೋರಾಟ ಪ್ರಾರಂಭವಾಗುತ್ತದೆ.
ಜಮೀನ್ಧಾರರ ವಿರುದ್ಧವಿರುವ ಕೃಷ್ಣಪ್ಪ ಬ್ರಾಹ್ಮಣರನ್ನು ವಿರೋಧಿಸದೆ ವಾಸ್ತವ ಕ್ಷುದ್ರತೆಗಳ ಪ್ರತಿರೋಧಕ್ಕೆ ಅಡಿಪಾಯ ಹಾಕುತ್ತಾರೆ. ನಾಗೇಶ್ ಎಂಬ ಬ್ರಾಹ್ಮಣ ಒಮ್ಮೆ ಪ್ರಾಸಂಗಿಕವಾಗಿ ‘ಇನ್ನಷ್ಟು ಒದೀಬೇಕು ಗೌಡರೆ ಬ್ರಾಹ್ಮಣರನ್ನ, ಆಗಲೇ ಈ ಜಾತಿ ವ್ಯವಸ್ಥೇನ್ನ ನಾಶಮಾಡೋದು ಸಾಧ್ಯ.’ ಎಂದಾಗ ಕೃಷ್ಣಪ್ಪ, ನಮ್ಮ ಜಾತಿ ಜಮೀನ್ದಾರರೇನು ಯೋಗ್ಯರು ಅಂತ ನೀನು ತಿಳಿದಿರೋದ ಹಂದಿ, ಕುರಿ ತಿನ್ನೋ ನಮ್ಮ ಗೌಡರು ನಿನ್ನಂಥ ಒಬ್ಬ ಪುಳಚಾರು ತಿನ್ನೋ ಬಡಪಾಯಿಯನ್ನ ಒದೀಬೇಕೂಂತ ಅಂತೀಯಲ್ಲ ಎಂದು ನಗುತ್ತಾರೆ.
ಹೀಗೆ ರಾಜಕೀಯವಾಗಿ ಬೆಳೆದ ಸಮಾಜವಾದಿ ಮುಖ್ಯಮಂತ್ರಿಯಾಗುವ ಮಟ್ಟಕ್ಕೆ ಬೆಳೆಯುತ್ತಿರುವಾಗ ಕೃಷ್ಣಪ್ಪನನ್ನು ಪಾಶ್ರ್ವವಾಯು ಬಡಿಯುತ್ತದೆ. ವಿನಾಶಿ ದೇಹದ ನಡುವೆ ಅವಿನಾಶಿ ಆಸೆ, ಬಯಕೆ, ರುಚಿಗಳು ಹೇಗೆಲ್ಲಾ ಮನುಷ್ಯನನ್ನು ಕೊಲ್ಲುತ್ತಲೇ ಜೀವಂತವಾಗಿಡುತ್ತವೆ ಎನ್ನುವ ವಾಸ್ತವದ ಕಾಲ್ಫನಿಕ ಕಥೆಯನ್ನ ಯು.ಆರ್. ಅನಂತಮೂರ್ತಿ ಅವಸ್ಥೆ ಕಾದಂಬರಿಯಲ್ಲಿ ಬರೆದ ಬಗೆ ಅವರ ತಾತ್ವಿಕತೆ, ಬದ್ಧತೆ, ಸಾಮಥ್ರ್ಯವನ್ನು ಸಾಬೀತು ಮಾಡುತ್ತದೆ.
ನನ್ನ ವಯಸ್ಸಿಗಿಂತ ಹಳೆಯದಾದ ಈ ಕಾದಂಬರಿ ಬರೆಯಿಸಿಕೊಂಡ ಕಾಲದಲ್ಲಿ ವ್ಯವಸ್ಥೆ ಹೇಗಿತ್ತು ?
ಅದರ ಬದಲಾವಣೆ, ಪರಿವರ್ತನೆಗೆ ಪ್ರಯತ್ನಿಸುವ ಯು.ಆರ್.ಎ. ಒಳತುಡಿತ ಸಭ್ಯ-ಸಾಂಪ್ರದಾಯಿಕ ರೋಗಗ್ರಸ್ತ ಮನಸ್ಥಿತಿಯವರಿಗೆ ಅಪಥ್ಯವಾಗಿ ಕಾಣಬಹುದೇನೋ? (ಅಂದೂ ಕಂಡಿರಬೇಕು) ಇಂಥದೊಂದು ಕಾದಂಬರಿಯನ್ನು ತಮ್ಮ ಐವತ್ತನೇ ವಯಸ್ಸಿನ ಆಸು-ಪಾಸು ಬರೆದ ಮೂರ್ತಿಯವರ ದಾಢಸಿತನಕ್ಕೆ ಆಗಲೂ ಪ್ರತಿರೋಧ ವ್ಯಕ್ತವಾಗಿದೆ. ಆದರೆ ವ್ಯವಸ್ಥೆ ಬದಲಾಗಬೇಕೆಂಬ ಮನುಷ್ಯನ ಬದ್ಧತೆ, ಕಾಣ್ಕೆ ಹೆಚ್ಚುಕಡಿಮೆ ಯಾವತ್ತೂ ಪ್ರಸ್ತುತವೇ ಎನ್ನುವ ಅಂಶವನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುವಲ್ಲಿ ಈ
‘ಅವಸ್ಥೆ’ ಯಶಸ್ವಿಯಾಗಿದೆ.
ಅನಂತಮೂರ್ತಿಯವರ ಫಿಲಾಸಫಿ ತಮ್ಮ ಅವಸ್ಥೆಯ ಕಥಾನಾಯಕ ಕೃಷ್ಣಪ್ಪ ಗೌಡರ ಮಾತುಗಳ ಮೂಸೆಯ ಮೂಲಕ ಹೀಗೆಲ್ಲಾ ಹೊರಬಂದಿದೆ ಒಟ್ಟಾರೆ ಸಾಮಾಜಿಕ ಕಾಳಜಿಯ ಸಮಾಜವಾದಿ ಬರಹಗಾರ ಅನಂತ ಮೂರ್ತಿ ತಮ್ಮ ಜೀವಿತಾವಧಿಯುದ್ದಕ್ಕೂ ಪ್ರಸ್ತುತರಾಗಿ ಈಗಲೂ ಚೈತನ್ಯ ಸ್ಥಾಯಿಯಾಗಿ ನಮ್ಮ ನಡುವಿದ್ದಾರೆ.ಸ್ನೇಹಿತ ಗಂಗಾಧರಕೊಳಗಿಯವರು ಹೇಳುವಂತೆ ಅವರ ಓದು, ಅವರ ಸಾಹಿತ್ಯದ ಪ್ರಚಾರವೇ ನಾವು ಅವರಿಗೆ ಸಲ್ಲಿಸುವ ಶ್ರದ್ಧಾಂಜಲಿ ಮತ್ತು ಅವರ ವಿರೋಧಿಗಳಿಗೂ ಕೂಡಾ. _ಸಂ.(ಕನ್ನೇಶ್ ಕೋಲಶಿರ್ಸಿ) (5 ವರ್ಷಗಳ ಹಿಂದಿನ ಲೇಖನ)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *