

ಅನುಪಮಾರ ಅಂಡಮಾನ್‍ವಾಸ್ತವ ಪಯಣ ಅಮಾನುಷ್ಯತ್ವದ ಅತಿಗೆ ಉತ್ಕøಷ್ಟ ನಿದರ್ಶನ
ಆಧುನಿಕ ಆಕರ್óಣೆಗಳ ಅನ್ವೇಷಣೆಗಳಿಂದ ಲಯತಪ್ಪಿ ಮಿತಿಮೀರಿ ಬಹುದೂರ ಸಾಗಿರುವ ಆಧುನಿಕ ಮಾನವ ಈಗೀಗ ಮಾನವನಮೂಲ ಪುರುಷ ಕೋತಿಗಳ ಕಾಟಕ್ಕೆ ಬಲಿಯಾಗುತಿದ್ದಾನೆ. ವಿಶೇಶವೆಂದರೆ..
ಕೋತಿಗಳಂತೆ ಕಾಡುಬಿಟ್ಟು ನಾಡಿಗೆಬರುವ ಸ್ವಾತಂತ್ರ್ಯವೇ ಇಲ್ಲದ ಆದಿಮಾನವ ಜನಾಂಗದ ಪ್ರಸ್ತುತತೆ ವಾಸ್ತವದ ಧಾರುಣತೆಯನ್ನು ಈಗಿನ ಜನತೆ ಕಲ್ಫಿಸಿಕೊಳ್ಳಲು ಸಾಧ್ಯವೇ? ನೋ.ಚಾನ್ಸ್.
ಏಕೆಂದರೆ ನಮ್ಮ ಪ್ರಗತಿ ವಿಸ್ಮøತಿಗೆ ಕಾರಣವಾಗಿದೆ. ಕಾಂಕ್ರೀಟ್‍ಕಾಡಿನ ನಿರ್ಬಂಧಿತ ಹವಾನಿಯಂತ್ರಿತ ಕೋಣೆಯೊಳಗೆ ನಮ್ಮದೇ ಸಂಸಾರ,ಕುಟುಂಬಗಳೆಂಬ ‘ಲೋಕಸೃಷ್ಟಿಸಿಕೊಂಡಿರುವ ನಮಗೆ ಸಹಜ ಸಂವೇದನೆಗಳೇ ಸತ್ತುಹೋಗಿವೆ. ನಮ್ಮ ಸಂಬಮಧಿಗಳು ಅಂಡಮಾನ್ ಪ್ರವಾಸಕ್ಕೆ ತೆರಳಿದಾಗ ಅಲ್ಲಿರುವ ಸಂಬಂಧಿಗಳ ಬಗ್ಗೆ ಮಾತು ಪ್ರಾರಂಭವಾದಾಗ ನನ್ನ ತಲೆಯಲ್ಲಿ 20 ವರ್ಷಗಳ ಹಿಂದಿನ ಮಲಿಯಾಳಿ ಸಿನೆಮಾ ಕಾಲಾಪಾನಿ (ಸಜಾ ಇ-ಕಾಲಾಪಾನಿ) ನೆನಪಾಗುತಿತ್ತು. ನಮಗೆಬಾರದ ಭಾಷೆಯ ವಿಶಿಷ್ಟಚಿತ್ರ ನಮಗೆ ರವಾನಿಸಿದ ಕುತೂಹಲ ನೆನಪಿಸಿದ ಇತಿಹಾಸ ಆ ನಂತರ ಅಂಡಮಾನ್ ಬಗ್ಗೆ ನನಗೆ ಸಿಕ್ಕ ಸಾಹಿತ್ಯ ಮಾಹಿತಿಗಳು ಅಂಡಮಾನ್ ಬಗ್ಗೆ ಒಂಥರಾ ವಿಚಿತ್ರ,ವಿಶೇಶ ಕಲ್ಫನೆಗೆ ಕಾರಣವಾಗಿದ್ದವು.
ಮೊನ್ನೆ ಡಿ.ಬಿ.ಯವರು ಕೊಟ್ಟ ಡಾ. ಎಚ್.ಎಸ್. ಅನುಪಮಾರ ‘ಅಂಡಮಾನ್ ಕಂಡಹಾಗೆ’ ಪುಸ್ತಕ ನನ್ನನ್ನು ನಿಜಕ್ಕೂ ಅಲ್ಲಾಡಿಸಿಬಿಟ್ಟಿತ್ತು.
ಅಂಡಮಾನ್ ದ್ವೀಪ ಆದಿಮಾನವನ ಮುಗ್ಧತೆ ಅನಿವಾರ್ಯತೆ,ಆಧುನಿಕ ಯುದ್ಧ ಸ್ವಾತಂತ್ರ್ಯ, ಅಧಿಕಾರ-ಪ್ರಭುತ್ವ ಎಲ್ಲದಕ್ಕೂ ಸಾಕ್ಷಿಯಾಗಿ ಹ್ಯಾಗೆ ಪ್ರತ್ಯೇಕತೆಯ ಅಪಾಯವನ್ನು ಸಹಿಸಿಕೊಂಡಿದೆ ಎಂದು ಯೋಚಿಸಿದಾಗ ನೋವು,ವೇದನೆಗಳ ಜೊತೆಜೊತೆಗೇ ಆಶ್ಚರ್ಯ-ವಿಸ್ಮಯ ಆಗದೆ ಇರುವುದಿಲ್ಲ.
ಮನುಷ್ಯನನ್ನು ಮನುಷ್ಯನನ್ನಾಗಿ ಕಾಣದ ಜಾಗತಿಕ ವಾಸ್ತವ, ಭಾರತದ ಹೀನ ಚಾರಿತ್ರ್ಯಕ್ಕೆ ಹಿಡಿದ ಕನ್ನಡಿ ಅಂಡಮಾನ ವಾಸ್ತವ ಮತ್ತು ಪ್ರಸ್ತುತ ವಾತಾವರಣ ಹಾಗೂ ಇತಿಹಾಸ. ಮಾನವವಿಶಿಷ್ಟ ಪ್ರಬೇಧವೊಂದು ಅಳಿವಿನ ಅಂಚಿಗೆ ಸರಿದು ಕ್ರಮೇಣ ಚೇತರಿಸಿಕೊಳ್ಳುತ್ತಾ ಪ್ರಾಣಿಸದ್ರಶ ಬದುಕು ಸಾಗಿಸುತ್ತಿರುವುದನ್ನು ವಿಶೇಷತೆ ಎನ್ನಬೇಕೋ,
ಅವನತಿ ಎನ್ನಬೇಕೋ? ಮತ್ತೇನೆನ್ನಬೇಕು?
ಆಧುನಿಕ ಸುಧಾರಿತ ನಾಗರಿಕತೆ ತನ್ನ ಮಿತಿಅರಿಯದೆ ಅನೇಕರ ವ್ಯಾಪ್ತಿ-ಮಿತಿಗಳನ್ನು ಸಹಕರಿಸಿದ ಈಗಿನ (ಪ್ರಸ್ತುತ) ಪೈಶಾಚಿಕತೆ ಅಂಡಮಾನ್ ದ್ವೀಪವನ್ನು ಹೇಗೆಲ್ಲಾ ಹಿಂಸಿಸಿದೆ ಇದಕ್ಕೆ ಪರಿಹಾರ ಮಾರ್ಗ ಯಾವುದು? ಇವುಗಳನ್ನೆಲ್ಲಾ ಯೋಚಿಸುವಂತೆ ಮಾಡುವ ಲಡಾಯಿಪ್ರಕಾಶನದ ಅಂಡಮಾನ್ ಕಂಡಹಾಗೆ ಇತ್ತೀಚಿನ ಅಮೋಘಪ್ರಕಟಣೆ.
ಈ ಪುಸ್ತಕ ಓದಿಸಲು ಕಾರಣರಾದ ಲಡಾಯಿಬಸು, ಡಾ.ಅನುಪಮಾಕೃಷ್ಣ, ವೀರಲಿಂಗನಗೌಡ್ರು, ಡಿ.ಬಿ ಮಾವ, ಎಲ್ಲರಿಗೂ ನಾನಂತೂ ಋಣಿ. ಈ ಪುಸ್ತಕದ ಒಂದು ಪುಟ್ಟ ಬರಹದ ಮೂಲಕ ಸಮಾಜಮುಖಿ ಹುತಾತ್ಮರಾದ, ಹುತಾತ್ಮರಂತೆ ಬದುಕುತ್ತಿರುವ ಹುತಾತ್ಮರಾಗಲಿರುವವರಿಗೂ ಸ್ಮರಿಸಿ ಓದುಗರಿಗೆ ಅಂಡಮಾನ್ ಪರಿಚಯಿಸುತ್ತದೆ.
-ಕನ್ನೇಶ್.

(ಅಂಡಮಾನ್ ಕಂಡಹಾಗೆ-ಡಾ. ಎಸ್.ಎಚ್. ಅನುಪಮಾ)
ಮಹುವಾಮರ ಹೂಬಿಟ್ಟಾಗ ಅಥವಾ ಜೇನು ದೊರೆತಾಗಲಷ್ಟೇ ಮದ್ಯತಯಾರಿಸಿ ಕುಡಿಯತೊಡಗಿದ್ದವರಿಗೆ ಕ್ರೇಟುಗಟ್ಟಲೇ ಮದ್ಯ ಕಣ್ಣೆದುರು ಕುಣಿಯತೊಡಗಿದರೆ? ಬೇಟೆಗಾರ ಕುಲಗಳಿಗೆ ಅಕ್ಕಿ,ಗೋಧಿ-ಸಕ್ಕರೆಗಳನ್ನು ರೇಷನ್ನಿನಲ್ಲಿ ಪೂರೈಸಿ ಆಹಾರಭದ್ರತೆ ದೊರಕಿದರೆ?
ಮೈಕೈಗೆ ಬಳಿದ ಜೇಡಿಮಣ್ಣೇ ಉಡುಪಾದ ನಗ್ನ ಅರಣ್ಯವಾಸಿಗಳಿಗೆ ಅಂದಚೆಂದದ ಉಡುಪು ಅದರಿಂದ ಉತ್ಪ್ರೇಕ್ಷೆಗೊಳ್ಳುವ ದೇಹ ಸೌಂದರ್ಯ ನೋಡಿಕೊಳ್ಳಲೊಂದು ಕನ್ನಡಿ ಸಿಕ್ಕರೆ?
ಹಗಲು ಹೊತ್ತಿನ ವಿರಾಮ ಕಳೆಯಲು ಹಾಡು,ನರ್ತನ, ವಾದನದಲ್ಲಿ ತೊಡಗುತಿದ್ದ ಸಂಗೀತಪ್ರಿಯ ಬುಡಕಟ್ಟುಗಳಿಗೆ ರಾತ್ರಿಹಗಲೆನ್ನದೆ ಕೂಗುವ ಟಿವಿ. ಒಂದು ಬಟನ್ನಿನಷ್ಟೇ ದೂರವೆಂದಾದರೆ?
ಕೈಗಾರಿಕೀಕರಣಗೊಂಡ ಜಗತ್ತಿನ ಆಮಿಷಗಳು ಬುಡಕಟ್ಟುಗಳನ್ನು ಅಯಸ್ಕಾಂತದಂತೆ ಸೆಳೆಯುತ್ತವೆ, ಇದರಿಂದ ಏನಾಗುತ್ತದೆ ಎನ್ನುವುದಕ್ಕೆ ಅಂಡಮಾನ್ ಬುಡಕಟ್ಟುಗಳು ಉದಾಹರಣೆಯಾಗಿವೆ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
