ತಮ್ಮಣ್ಣರ ಮರ ಬಿದ್ದಾಗ ಬಸು ಕಂಡದ್ದು-

ಸೃಷ್ಟಿಶೀಲತೆಯ ದಾರಿ ಹಿಡಿದು…..
ಮಕ್ಕಳಿಗಾಗಿ ಕತೆ, ಕವಿತೆಯಷ್ಟೇ ಸಾಲದು. ಅವರ ವಿಚಾರ ಲಹರಿ ಗರಿಗೆದರುವಂತೆ ಮಾಡುವ ಇತರ ಬರಹಗಳೂ ಬೇಕಾಗುತ್ತವೆ. ಇತರ ಸೃಷ್ಟಿ ಶೀಲ ಪ್ರಭೇದಗಳು ಮಕ್ಕಳನ್ನು ಮುಟ್ಟಬೇಕಾಗುತ್ತವೆ. ತಮ್ಮಣ್ಣ ಬೀಗಾರ ಅವರ ಈ ಶಬ್ಧ ಚಿತ್ರಗಳ ಕೃತಿ

ಆ ನಿಟ್ಟಿನಲ್ಲಿ ಬಂದಿರುವ ಒಂದು ಅಪೂರ್ವ ಮಕ್ಕಳ ಲಲಿತ ಬರಹ ಸಂಕಲನವಾಗಿದೆ.
ತುಂಬ ಸಾಂಪ್ರದಾಯಿಕ ರೀತಿಯಲ್ಲಿ ಬರುತ್ತಿರುವ ಮಕ್ಕಳ ಕಥೆ ಹಾಗೂ ಹಳೆಯ ರಾಗಕ್ಕೆ ಜೋತುಬಿದ್ದಿರುವ ಕವಿತೆ ಮಕ್ಕಳ ಸಾಹಿತ್ಯಕ್ಕೆ ಹೊಸತನ ನೀಡುವಲ್ಲಿ ಸೋತಿದೆ. ಆದರೂ ಕೆಲವರ ಕಲ್ಪನಾಶೀಲ ಬರವಣಿಗೆಯಿಂದಾಗಿ ಕನ್ನಡ ಮಕ್ಕಳ ಸಾಹಿತ್ಯ ತನ್ನ ಚೈತನ್ಯವನ್ನು ಉಳಿಸಿಕೊಂಡಿದೆ. ಈ ದಿಶೆಯಲ್ಲಿ ಕೆಲವರು ಹೊಸ ಪ್ರಯೋಗಗಳನ್ನು ಮಾಡುತ್ತಿರುವುದು, ತಮ್ಮ ಅನುಭವಗಳಿಗೆ ನವೀನ ಅಭಿವ್ಯಕ್ತಿಯ ಮಾದರಿ ಒದಗಿಸುತ್ತಿರುವುದು ಗಮನಿಸತಕ್ಕ ಬೆಳವಣಿಗೆಯಾಗಿವೆ. ಬಿಳಗೆರೆ ಕೃಷ್ಣಮೂರ್ತಿ, ರಾಧೇಶ ತೋಳ್ಪಡಿ, ವಿಜಯಶ್ರೀ ಹಾಲಾಡಿ, ಗಣೇಶ ನಾಡೋರ, ಗಿರೀಶ ಜಕಾಪುರೆ, ತಮ್ಮಣ್ಣ ಬೀಗಾರ, ನಿರ್ಮಾಲಾ ಸುರತ್ಕಲ್ ಮುಂತಾದ ಕೆಲವರು ಮಕ್ಕಳ ಅನುಭವ ಲೋಕಕ್ಕೆ ಹೊಸ ವಿಸ್ತಾರಗಳನ್ನು ಜೋಡಿಸುತ್ತಿದ್ದಾರೆ. ಬಾಲರ ಅರಿವಿನ ಹುಡುಕಾಟ, ಕುತೂಹಲಕಾರಿಯೂ, ವಾಸ್ತವವೂ, ಕಲ್ಪನಾಶೀಲವೂ ಆಗಬಲ್ಲದೆಂಬುದು ಈ ಲೇಖಕರ ಬರಹಗಳ ತಿರುಳಾಗಿದೆ.
ಅಂದರೆ ಅಭಿವ್ಯಕ್ತಿಯ ಬಗೆಗಳು ಬಗೆಬಗೆಯಾಗಿ ಇರಬಲ್ಲವೆಂದೂ ಸೃಷ್ಟಿಶೀಲತೆಯ ರೂಪಗಳು ಹಲವು ಬಣ್ಣಗಳಲ್ಲಿ ಕಾಣಿಸಬಲ್ಲವೆಂದೂ ಲೇಖಕರಿಂದ ಲೇಖಕರಿಗೆ ರಚನೆ-ರೀತಿ-ಬಂಧ- ಶೈಲಿಗಳು ಭಿನ್ನಭಿನ್ನವಾಗಿರ ಬಲ್ಲವೆಂದೂ ಮಕ್ಕಳ ಸಾಹಿತ್ಯದಲ್ಲಿ ನಾವು ತೋರ್ಪಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಇಲ್ಲಿರುವ ಪ್ರಬಂಧ ಮಾದರಿಯ ಗದ್ಯ ರೂಪಗಳು ಒಂದು ಹೊಸ ಅಭಿವ್ಯಕ್ತಿಯ ಮಾದರಿಯಾಗಿ ನಮಗೆ ಕಾಣಿಸುತ್ತವೆ.
ಮರವೊಂದು ಬಿದ್ದಾಗ ಎಷ್ಟೊಂದು ಹೃದಯಗಳು ನಲುಗುತ್ತವೆ ಎಂಬುದರಿಂದ ಹಿಡಿದು ತಮ್ಮನನ್ನು ಶಾಲೆಗೆ ಕರೆದುಕೊಂಡು ಹೋಗುವುದರ ತೊಂದರೆಗಳವರೆಗೆ, ಅವನು ಮಾಡುವ ತುಂಟಾಟ-ಹುಟ್ಟಿಸುವ ಆಶ್ಚರ್ಯಗಳವರೆಗೆ, ಸಮಾನತೆ- ಸಾಮಾಜಿಕ ನ್ಯಾಯದ ಪರೋಕ್ಷ ಪಾಠವನ್ನು ಅಪ್ಪನಿಗೆ ಹೇಳುವ ಮಕ್ಕಳವರೆಗೆ, ಕನ್ನಡದಲ್ಲಿ ಯಾವುದೆಲ್ಲ ಹೊಸ ಪುಸ್ತಕ ಬಂದಿದೆ ಎಂದು ಮಕ್ಕಳು ಮಾತಾಡಿಕೊಳ್ಳುವವರೆಗೆ, ಮಕ್ಕಳಿಗೆ ಪುಸ್ತಕ ಕೊಡಿಸದ ಜಿಪುಣ ಅಪ್ಪ-ಅಮ್ಮ-ಮಾಮಾ-ಕಾಕಾರವರೆಗೆ ಇಲ್ಲಿಯ ಲಲಿತ ಬರವಣಿಗೆ ಹರಡಿಕೊಂಡಿದೆ.
‘ನವಿಲೆ ನವಿಲೆ ಕಾಡಿಗೆ ಹೋಗು’ ಎನ್ನುವ ಪ್ರಬಂಧದಲ್ಲಿ ನವಿಲು ಮಕ್ಕಳಿಗೆ ಎಷ್ಟೊಂದು ಅಪ್ಯಾಯಮಾನವಾದ ಪಕ್ಷಿಯೆಂಬುದು ನಿರೂಪಿತವಾಗಿದೆ. ಅಪ್ಪ ತಂದಿದ್ದ ನವಿಲಿನ ಮೊಟ್ಟೆಗೆ ಕೋಳಿ ಕಾವು ಕೊಟ್ಟು ನವಿಲಿನ ಮರಿ ಹೊರ ಬರುವುದು-ಅದು ಮೊದಮೊದಲು ಕೋಳಿಯ ಗುಂಪಿನೊಡನೆ ಇರುವುದು, ಮರವೇರಿ ಕುಳಿತುಕೊಳ್ಳುವುದು, ಅನಂತರ ಅದು ಊರ ನವಿಲಾಗಿ ಎಲ್ಲರಿಗೂ ಪ್ರೀತಿ ಪಾತ್ರವಾಗುವುದು ಮುಂತಾದ ಪ್ರಸಂಗಗಳು ತುಂಬ ಚೆಂದಾಗಿ ಮಗುವಿನ ನಿರೂಪಣೆಯಲ್ಲಿ ಹೇಳಲ್ಪಟ್ಟಿವೆ.
ನವಿಲಿಗೆ ಏನೂ ಆಗುವುದು ಬೇಡ ಎಂಬ ಹುಡುಗನ ಹಾರೈಕೆ, ಹೆದರಿಕೆ ಇಷ್ಟವಾಗುತ್ತದೆ : ‘ ನನಗೆ ಭಯವಾಗುತ್ತಾ ಇದೆ, ಜನರಿಗೆ ಹೆದರದ ಅದು ರಸ್ತೆಯ ಮಧ್ಯದಲ್ಲೇ ಒಮ್ಮೊಮ್ಮೆ ನಡೆಯುತ್ತಿರುತ್ತದೆ. ಯಾರ್ಯಾರೋ ಹಾಕುವ ತಿಂಡಿಗಳನ್ನು ತಿನ್ನುತ್ತದೆ. ದಿನವಿಡೀ ಮನೆಯಿಂದ ಮನೆಗೆ ತಿರುಗುತ್ತದೆ. ತೇಜಸ್ವಿ ಅವರ ಕತೆಯೊಂದರಲ್ಲಿ ತಿಂಡಿ ತಿನ್ನುತ್ತಿದ್ದ ಹಕ್ಕಿಯೊಂದು ಮೀನು ಹಿಡಿಯುವ ಗಾಳವನ್ನೇ ನುಂಗಿಕೊಂಡು ಪ್ರಾಣ ಕಳೆದುಕೊಳ್ಳುತ್ತದೆ. ನಮ್ಮ ನವಿಲಿಗೆ ಹಾಗಾಗದಿದ್ದರೆ ಸಾಕು ಎನಿಸುತ್ತದೆ. ನಮ್ಮ ಗದ್ದೆ ಬಯಲಿನ ತುದಿಯಲ್ಲಿರುವ ನವಿಲುಗುಂಪಿನೊಂದಿಗೆ ಈ ನವಿಲೂ ಸೇರಿಕೊಳ್ಳಲಿ ಎಂಬುದು ನನ್ನ ಆಸೆ . ಅದಕ್ಕೆ ನವಿಲೇ ನೀನು ಕಾಡಿಗೆ ಹೋಗು ಎಂದೆಲ್ಲಾ ಅಂದುಕೊಳ್ಳುತ್ತೇನೆ.’
‘ಒಳಗೆ ಕರೆದು ತಿಂಡಿಕೊಡು’ ಎನ್ನುವ ಬರಹ ನಮ್ಮ ಸಾಮಾಜಿಕ ಏರುಪೇರುಗಳನ್ನು ಟೀಕಿಸುತ್ತದೆ.
‘ಒಂದು ಮರ ಬಿದ್ದಾಗ’ ಎನ್ನುವ ಪ್ರಬಂಧ ಪರಿಸರದ ಮಾನವೀಯ ತುಡಿತಗಳನ್ನು ಚಿತ್ರವತ್ತಾಗಿ ಬಿಡಿಸಿಟ್ಟಿದೆ. ಕತೆ ಎನ್ನುವುದು ಹೇಗಡ ಯೋಚಿಸಿದಂತೆ ಹೊಳೆಯುವ ಕೌಶಲ ಎಂಬುದನ್ನು ತಮ್ಮಣ್ಣ ಬೀಗಾರ ತುಂಬಾ ಸ್ವಾರಸ್ಯಕರವಾಗಿ ‘ ಅಜ್ಜಿಹೇಳೋ ಕಥೆ’ಯಲ್ಲಿ ಹೇಳಿದ್ದಾರೆ
‘ಮರಬಿದ್ದಾಗ’, ‘ಹೂವು ಕೊಯ್ಯೋದಕ್ಕೆ ಹೋದರೆ’ ಮುಂತಾದ ರಚನೆಗಳಲ್ಲಿ ಮಲೆನಾಡಿನ ಅನೇಕ ಚಿತ್ರಗಳು ಆಪ್ತವಾಗಿ ಹರಡಿಕೊಂಡಿವೆ.’ಬಸ್ಸಿಗಾಗಿ ಕಾಯ್ತಾಇದ್ರೆ’ ಎನ್ನುವ ಲಲಿತ ಬರಹದಲ್ಲಿ ಬಸ್ಸಿನ ನೂಕುನುಗ್ಗಲು ಹಾಗೂ ನಡೆದು ಹೋಗುವ ಖುಶಿಗಳು ಮಗುವಿನ ದೃಷ್ಟಿಯಿಂದ ತುಂಬಾ ಚಿತ್ರವತ್ತಾಗಿ ನಿರೂಪಿತವಾಗಿವೆ.
ತಮ್ಮಣ್ಣ ಬೀಗಾರರ ಈ ಪುಸ್ತಕದ ಮತ್ತೊಂದು ವೈಶಿಷ್ಟ್ಯವೆಂದರೆ ಮಗುವಿನ ದೃಷ್ಟಿಕೋನ ಮತ್ತು ಯೋಚನಾ ಲಹರಿಯಂತೆ ಇದನ್ನು ರೂಪಿಸಿರುವುದು. ಉಪದೇಶದ ಸೆಳಕು ಕಾಣಿಸಿಕೊಳ್ಳದಂತೆ ಅವರು ಎಚ್ಚರಿಕೆ ವಹಿಸಿರುವುದು.
ಉಪದೇಶದ ಸೆಳಕು ಕಾಣಿಸಿಕೊಳ್ಳದಂತೆ ಅವರು ಎಚ್ಚರಿಕೆ ವಹಿಸಿರುವುದು ಒಂದು ಮೆಚ್ಚತಕ್ಕ ಅಂಶವಾಗಿದೆ. ಅವರು ಬಳಸುವ ಭಾಷೆಯೂ ಅಷ್ಟೆ. ಓದುವ ಮಕ್ಕಳಲ್ಲಿ ಹಾಗೂ ಹಿರಿಯರಲ್ಲಿ ತೀವ್ರ ಸಂವೇದನೆಯನ್ನು ಉಂಟುಮಾಡುವ ಶಕ್ತಿ ಅದಕ್ಕಿದೆ. ಒಂದೊಂದು ಪ್ರಸಂಗ ಅಥವಾ ಸನ್ನಿವೇಶವನ್ನು ವಿವರಿಸುವಾಗಲೂ ಅಷ್ಟೇ- ಸುಮ್ಮಸುಮ್ಮನೇ ಅವರು ಎಳೆಯಲಾರರು,
ಅಗತ್ಯವಾದ ವಿಷಯ ಬಿಟ್ಟು ಆಚೆ ಹೋಗಲಾರರು, ಅಸಂಗತವನ್ನು ಎಳೆದು ತರಲಾರರು. ಹೀಗಾಗಿ ವಾಸ್ತವಿಕ ಮತ್ತು ಕಾಲ್ಪನಿಕ ಅಂಶಗಳು ಅವರಲ್ಲಿ ಮೇಳೈಸುವ ಬಗೆ ಮಜವಾಗಿರುತ್ತದೆ. ಮಕ್ಕಳು ಇವುಗಳನ್ನು ಮೆಚ್ಚುವುದರಲ್ಲಿ ಯಾವುದೇ ಸಂದೇಹವಿಲ್ಲ.
ಹೀಗೆ ಕೆಲವು ಪ್ರಸಂಗಗಳನ್ನು ಇಟ್ಟುಕೊಂಡು ಮಕ್ಕಳ ಮನಸ್ಸನ್ನು ಮುಟ್ಟುವ ಹಾಗೆ ತಮ್ಮಣ್ಣ ಬೀಗಾರ ಅವರು ತಮ್ಮ ಅನುಭವಗಳಿಗೆ ಅಭಿವ್ಯಕ್ತಿ ನೀಡಿದ್ದಾರೆ. ಪುಟ್ಟ ಗದ್ಯ ಲೇಖನಗಳು ಇಷ್ಟೊಂದು ಚೇತೋಹಾರಿಯಾಗಿರಬಲ್ಲವು, ವಾಸ್ತವದ ಕನ್ನಡಿಯನ್ನು ಹಿಡಿದು ನಮ್ಮನ್ನು ನಾವು ಹೀಗೆ ತಿದ್ದಿಕೊಳ್ಳಬಲ್ಲೆವು ಎಂಬುದು ಇವುಗಳಿಂದ ತಿಳಿಯುತ್ತದೆ.
ಪುಟ್ಟ ನಿಬಂಧಗಳು ಹೇಗೆಲ್ಲ ಲಾಲಿತ್ಯವೂ ಹುಡುಗಾಟಿಕೆಯುಳ್ಳವೂ, ವೈನೋದಿಕವೂ, ವಾಸ್ತವವೂ ಆಗಿರಬಲ್ಲವು ಎಂಬುದಕ್ಕೆ ಈ ಕೃತಿ ಒಂದು ಉದಾಹರಣೆ ಎಂದು ನಾನು ತಿಳಿಯುತ್ತೇನೆ.
– ಡಾ. ಬಸು ಬೇವಿನಗಿಡದ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

ಬಿ.ಜೆ.ಪಿ. & ಕಾಂಗ್ರೆಸ್‌ ಗಳಿಂದ ತುಷ್ಟೀಕರಣದ ಸ್ಫರ್ಧೆ… ಕಾಂಗ್ರೆಸ್‌ ಬಸ್ಮಾಸುರ,ಬಿ.ಜೆ.ಪಿ. ಬಕಾಸುರ….

ಮುಸ್ಲಿಂ ಅಲ್ಪಸಂಖ್ಯಾತರನ್ನು ಒಲೈಸುವಲ್ಲಿ ಬಿ.ಜೆ.ಪಿ. ಮತ್ತು ಕಾಂಗ್ರೆಸ್‌ ಗಳು ಸ್ಫರ್ಧೆ ನಡೆಸಿದ್ದು ಅಪಾಯಕಾರಿ ನಡೆಗಳಲ್ಲಿ ಎರಡೂ ಪಕ್ಷಗಳೂ ಒಂದೇ ನಾಣ್ಯದ ಎರಡು ಮುಖಗಳಿಂತಿವೆ ಎಂದು...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *