ಪಲ್ಲಟ (ಕತೆ-ಡಾ.. ಎಚ್.ಎಸ್.ಅನುಪಮಾ)

ಪಲ್ಲಟ
(ಕತೆ-ಡಾ.. ಎಚ್.ಎಸ್.ಅನುಪಮಾ)
ಕಾಯಿಕೊಯ್ಯಲು ತೆಂಗಿನಮರ ಹತ್ತಿದ ತಿಮ್ಮಪ್ಪ ಕೆಳಗಿಳಿಯುವುದರಲ್ಲಿ ಚಳಿಯಿಂದ ನಡುಗತೊಡಗಿದ.
ಮರದ ಮೇಲೆ ಯಾವುದೋ ದೆವ್ವÀ ಮೆಟ್ಟಿತೆಂದು ಭಾವಿಸಿದ. ಮನೆಗೆ ಮರಳಿದ್ದೇ ನೋಟಗಾರರು ಬಂದು ದೆವ್ವ ಓಡಿಸುವ ವಿಧಿಗಳನ್ನು ಶುರುಮಾಡಿದರು.
ಅಂದು ಅಮಾವಾಸ್ಯೆಯೂ ಆಗಿದ್ದರಿಂದ ಅದು ದೆವ್ವವಲ್ಲದೆ ಮತ್ತೇನೂ ಆಗಿರಲು ಸಾಧ್ಯವಿಲ್ಲವೆಂಬುದೇ ನೋಟಗಾರನ ಅಂಬೋಣ.
ಮೊಟ್ಟ್ಟೆಯ ಲೋಡನ್ನು ಪಣಜಿಯಲ್ಲಿಳಿಸಿ ಬಂದು ಮಲಗಿದÀ ಪಾವ್ಲಿನಳ ಮಗ ಸಾಂತಾಲ, ಬೆಳಗಾಗುವುದರಲ್ಲಿ ಜ್ವರಕ್ಕೆ ತುತ್ತಾಗಿದ್ದ. ಅವನಮ್ಮ ಹೊರಗೆ ಹೋಗುವ ಕನಸಲ್ಲೇ ಊಟತಿಂಡಿ ಬಿಟ್ಟು ಜ್ವರ ಬಂದು ಮಲಗಿದ್ದಾನೆಂದು ಭಾವಿಸಿದಳು.
ಸೊಪ್ಪು ಹೊತ್ತುಕೊಂಡು ಕಲ್ಲರೆಯ ಮೇಲಾಗಿ ಬರುತ್ತಿದ್ದ ಮಾರಿಗೆ ಯಾರೋ ಹಿಂದಿನಿಂದ ದೂಡಿದಂತಾಗಿ ತಲೆತಿರುಗಿ ಬಂದು ಬಿದ್ದಳು. ‘ಮುತ್ರ್ಯು’ವೇ ಹೊಡೆದಿದೆಯೆಂದು ತಿಳಿದು ಕಂಗಾಲಾಗಿ ಭಯಂಕರ ಜ್ವರಕ್ಕೆ ಅರ್ಧ ಸತ್ತಂತಾದಳು.

ತಾಲೂಕಾ ಪಂಚಾಯ್ತಿ ಸದಸ್ಯನಾಗಿದ್ದ ನಾಗೇಶನೂ ಮಲಗಿದಾಗ ಸ್ಥಳೀಯ ವೈದ್ಯಾಧಿಕಾರಿಗಳ ಕಿವಿಗೆ ಇಂತೊಂದು ಕಾಯಿಲೆ ಬಾಳೆಬೈಲನ್ನು ಕಾಡುತ್ತಿರುವ ವಿಷಯ ತಿಳಿಯಿತು.
ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಆರೋಗ್ಯಮಂತ್ರಿಗಳ ತನಕ ದೂರನ್ನು ಒಯ್ಯುವುದಾಗಿ ಅವನು ಫೋನಿನಲ್ಲಿ ಕೂಗಾಡಿದ್ದೇ ಮರುದಿನವೇ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ನಾಗೇಶನ ಮನೆಗೆ ಬಂದು ವಿಚಾರಿಸಿಕೊಂಡು ಚಿಕಿತ್ಸೆ ನೀಡಿ ಹೋದರು.
ಮತ್ತೆರೆಡು ದಿನದಲ್ಲಿ ಜಿಲ್ಲಾಕೇಂದ್ರದಿಂದ ಬಂದ ಸರ್ವಿಯಲೆನ್ಸ್ ಟೀಮು ಮನೆಮನೆಗೆ ಭೇಟಿ ನೀಡಿ, ಅರ್ಧಕ್ಕರ್ಧ ಊರೇ ಕಾಯಿಲೆಯಲ್ಲಿ ನರಳುತ್ತಿರುವುದು ಕಂಡು, ಈ ಮುಂಚೆ ಏಕೆ ರಿಪೋರ್ಟ್ ಮಾಡಲಿಲ್ಲವೆಂದು ಸ್ಥಳೀಯ ವೈದ್ಯರನ್ನು ತರಾಟೆಗೆ ತೆಗೆದುಕೊಂಡಿತು.
ರೋಗಪತ್ತೆಗಾಗಿ ರಕ್ತ ಪರೀಕ್ಷೆಗೆ ಸ್ಯಾಂಪಲ್ ಸಂಗ್ರಹಿಸಿತು. ಮುಂದಿನ ದಿನಗಳಲ್ಲಿ ತಂಡತಂಡವಾಗಿ ಬಂದ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮನೆಮನೆಯಲ್ಲು ಗುಳಿಗೆ ಕೊಟ್ಟು ಎಂತದೋ ಹೊಗೆ ಎಬ್ಬಿಸಿ, ಕಾಯಿಲೆಗೆ ‘ಚಿಕುನ್‍ಗುನ್ಯ’ ಅಂತ ನಾಮಕರಣ ಮಾಡಿಹೋದರು.

ಬಾಳೆಬೈಲಿಗೆ ಬಂದದ್ದು ಅದಕ್ಕೆ ತಾಗಿರುವ ಪಳ್ಳಿಕುರ್ವಕ್ಕೆ ಬಾರದಿರುತ್ತದೆಯೇ?
ಪೇಟೆಯಲ್ಲಿ ಬಟ್ಟೆಯಂಗಡಿ ನಡೆಸುತ್ತಿದ್ದ ಖೋಯಾ ಸಾಹೇಬರು ಇದ್ದಕ್ಕಿದ್ದಂತೆ ಒಂದು ದಿನ ಭಾರೀ ಜ್ವರ ಬಂದು ಮಲಗಿದರು. ಉಪವಾಸದ ಹಬ್ಬ ಹತ್ತಿರ ಬರುತ್ತಿರುವಾಗ ವಾರಗಟ್ಟಲೆ ಬಿಡದೇ ಸತಾಯಿಸುತ್ತಿರುವ ಜ್ವರ, ಗಂಟುನೋವಿನಿಂದ ಅರ್ಧಕ್ಕರ್ಧ ಇಳಿದುಹೋದರು. ಕತಾರಿನಲ್ಲಿದ್ದ ಮಗ ತಂದುಕೊಟ್ಟಿದ್ದ ನೋವಿನ ಮುಲಾಮು ತಿಕ್ಕಿದರು. ಸೊಂಟಕ್ಕೆ ಬಣ್ಣದ ಹರಳು ಕೂಡಿಸಿದ ‘ನೋವು ನಿವಾರಕ’ ಬೆಲ್ಟ್ ತೊಟ್ಟರು. ಎಂತ ಕಾಯಿಲೆ ಬಿದ್ದರೂ ನಮಾಜು ತಪ್ಪಿಸದ ಅವರ ಹಣೆ ಬಾಗಿ ನೆಲಕ್ಕೆ ತಾಗಿ ತಾಗಿ ಜಡ್ಡಾಗಿ ಕಪ್ಪಾಗಿತ್ತು. ಈಗ ನಮಾಜಿಗೆ ಕೂತು ಏಳುವುದೂ ಕಷ್ಟವಾಗಿ ಇದಾವುದೋ ಕೊನೆಗಾಲಕ್ಕೆ ಬಂದ ಕಾಯಿಲೆಯೇ ಇರಬೇಕೆಂದು ಮನೆಯವರು ಶಂಕಿಸಿದರು.
ನಂತರದ ಸರದಿ ಯೂಸುಫ್ ಸಾಹೇಬರದು. ಜ್ವರ ಬಿಟ್ಟರೂ ಗಂಟು ನೋವು ಬಿಡದೇ, ವಾಂತಿ ನಿಂತರೂ ಬಾಯಿ ರುಚಿಯಾಗದೇ, ಅಶಕ್ತರಾದ ಅವರನ್ನು ಹೆಂಡತಿಯ ಹರಿತ ಮಾತುಗಳೂ ಎಬ್ಬಿಸಲಾರದಾದವು. ಅಲ್ಲಿಂದ ಸಾವಕಾಶವಾಗಿ ಇಡೀ ಕೇರಿಗೆ ಹರಡಿದ ಕಾಯಿಲೆಯಿಂದ ಮಕ್ಕಳು ಮುದುಕರೆನ್ನದೆ ತುಂಬ ಜನ ಮಲಗಿದರು.

ತಾವು ಚಿಕನ್ನೇ ತಿನ್ನದಿದ್ದರೂ ಚಿಕುನ್‍ಗುನ್ಯಾ ಹೇಗೆ ಬಂತೆಂದು ಬ್ರಾಹ್ಮಣ ಕೇರಿಯವರು ನೋವಿನಿಂದ ನರಳಿದರೆ,
ಕಾಯಿಲೆಯಾದವರು ಆರು ತಿಂಗಳು ಚಿಕನ್ ಮುಟ್ಟದೇ ಪಥ್ಯ ಮಾಡಬೇಕೆಂದು ಯಾರೋ ಹೇಳಿದ್ದನ್ನು ನಂಬಿ ಮಾಂಸ ಪ್ರಿಯರು ಖೇದಗೊಂಡರು. ‘ಅದು ಚಿಕನ್ ತಿಂದು ಬರುವಂಥದಲ್ಲ. ಬಂದವರು ಚಿಕನ್ ತಿನ್ನಬಾರದೆಂದೇನೂ ಇಲ್ಲ. ಅದು ಸೊಳ್ಳೆಗಳಿಂದ ಹರಡುವ ಒಂದು ವೈರಸ್ ಕಾಯಿಲೆ. ಮನೆ ಸುತ್ತ ನೀರು ನಿಲ್ಲದಂತೆ ಸೊಳ್ಳೆ ಹೆಚ್ಚಾಗದಂತೆ ನೋಡಿಕೊಳ್ಳಿ’ ಎಂದು ಪೇಟೆಯ ಕೃಷ್ಣ ಡಾಕ್ಟರು ಹೇಳಿದಾಗ ಎಲ್ಲರೂ ನಿರಾಳವಾದರು.
ಮನೆ ಸುತ್ತ ನೀರು ನಿಲ್ಲದಂತೆ ಹರಿಯಲು ದಾರಿ ಮಾಡಿದ್ದಾಯ್ತು. ಆದರೆ ಗದ್ದೆ ತುಂಬ ನಿಂತ ನೀರು ‘ಸೊಳ್ಳೆ ಮರಿಸಾಕಣಿಕಾ ಕೇಂದ್ರ’ವಾಯಿತು.
ಎಲ್ಲರ ಮನೆಯ ಹೊರಗೂ ಅಡಿಕೆ ಸಿಪ್ಪೆಯ ಹೊಗೆ. ಎಷ್ಟು ಹೊಗೆ ಹಾಕಿದರೇನು, ಎಷ್ಟು ಮಾತ್ರೆ ನುಂಗಿದರೇನು. ಚಿಕುನ್‍ಗುನ್ಯಾ ಮಾತ್ರ ಬೀಳುತ್ತಿದ್ದ ಮಳೆಯಂತೆ ಹೆಚ್ಚುತ್ತಲೇ ಹೋಯ್ತು. ಬಾಳೇಬೈಲಿನ ಉಮಾಮಹೇಶ್ವರ ದೇವರ ಹೊರತಾಗಿ ಎಲ್ಲರೂ ಜ್ವರ ಬಂದು ಮಲಗುವಂತಾಯ್ತು.

ಗದ್ದೆ, ತೋಟದ ಕೃಷಿ ಕೆಲಸಕ್ಕೆ ಈಗ ಜನವೇ ಇಲ್ಲ. ಒಡೆಯನೆನ್ನದೆ, ಆಳುಮಕ್ಕಳೆನ್ನದೆ ಎಲ್ಲರೂ ನೋವು ತಿನ್ನುತ್ತಾ ವಿರಾಮದಲ್ಲಿರುವಾಗ ಕೆಲಸ ಯಾರು ಮಾಡುವವರು?
ಪಕ್ಕದ ಊರುಗಳಿಂದ ಎರಡು ಪಟ್ಟು ಕೂಲಿ ಕೊಟ್ಟು ನೆಟ್ಟಿಗೆ ಅಂತ ಆಳುಗಳನ್ನು ಕರೆಸಿದರು. ಇಡ್ಲಿಯಿಲ್ಲ, ದೋಸೆಯಿಲ್ಲ, ಬರೀ ಅವಲಕ್ಕಿ ಚಹಾದ ಮೇಲೆ ಕೆಲಸ ಮಾಡಿದ ಆಳುಮಕ್ಕಳು ‘ಬಾಳೆಬೈಲಿನ ರುಬ್ಬೋ ಕಲ್ಲೆಲ್ಲ ಈ ಕಾಯಿಲೆಯಾಗೇ ಸತ್ತೋದವಂಬಂಗೆ’ ಎಂದು ಬೈದುಕೊಳ್ಳುತ್ತ ವಾಪಸಾದರು.
ಯಾರ ಕೈಕಾಲು ಸೊಂಟಗಳೂ ನೆಟ್ಟಗಿಲ್ಲದಿರುವಾಗ ದೋಸೆ ಕಡುಬಿಗೆ ಉದ್ದು ರುಬ್ಬುವವರು ಯಾರು? ನೆಟ್ಟಿಮಾಡಿ ಹೋದ ಒಂದಿಬ್ಬರು ಪಕ್ಕದೂರಿನ ಆಳುಮಕ್ಕಳೂ ಜ್ವರ ಬಂದು ಮಲಗಿದ ಸುದ್ದಿ ಬಂದು, ಉಳಿದೆಡೆಯೂ ಜ್ವರ ಸಾವಕಾಶ ಹರಡತೊಡಗಿದ ಸೂಚನೆ ಸಿಕ್ಕಿತು. ‘ಬಾಳೆಬೈಲಿನ ಭೂv’Àಕ್ಕೆ ಹೆದರಿ ದುಪ್ಪಟ್ಟು ಕೂಲಿಗೂ ಜನ ಕೆಲಸಕ್ಕೆ ಬರಲು ಹೆದರಿದರು.

ಜ್ವರಬಿಟ್ಟೆದ್ದು ತಿಂಗಳೆರೆಡು ತಿಂಗಳಾದರೂ ಸಂದುನೋವು ಪೂರ್ತಿ ಗುಣವಾಗುವಂತೆ ಕಾಣಲಿಲ್ಲ. ಓಡುಗಾಲಿನವರು ನಡೆದರು, ನಡೆಯುತ್ತಿದ್ದವರು ಕುಂಟುತ್ತ ತೆವಳಿದರು. ಹೆಕ್ಕುವವರಿಲ್ಲದೆ ಬಿದ್ದ ಹಣ್ಣಡಕೆ ಅಲ್ಲಲ್ಲೆ ಮೊಳೆತು ಸಸಿಯಾಯ್ತು. ತೋಟ, ಗದ್ದೆಗಳ ತುಂಬಾ ಕಳೆ, ಬದು ಕಾಣದಂತೆ ಬೆಳೆದ ಹುಲ್ಲುಜಡ್ಡು, ಅಲ್ಲಲ್ಲಿ ಉದುರಿದ ಸೋಗೆ. ಗೊಬ್ಬರಗುಂಡಿ ತುಂಬಿತುಳುಕುತ್ತಿದ್ದರೂ ಕಂಬಳ ಮಾಡಿ ಸಾಗಿಸುವವರಿಲ್ಲ. ಮುಡಿಯಲಾಗದ್ದಕ್ಕೆ ಚಪ್ಪರದಡಿ ಬಿದ್ದು ಜಾಜಿಹೂವು ಹಾಸಿಗೆಯಂತೆ ತೋರುತ್ತಿತ್ತು. ಹೊಳೆಸಾಲಿನ ಜನ ಮಲಗಿ ಪೇಟೆಯ ಜನ ಹೊಳೆ ಬಾಳೆಕಾಯಿಲ್ಲದೇ ಚಡಪಡಿಸುವಂತಾಯ್ತು.
ದಿನಬೆಳಗಾದರೆ ಸೊಪ್ಪಿಗಾಗಿ ಬೆಟ್ಟಕ್ಕೆ ಓಡುತ್ತಿದ್ದ ತಿಮ್ಮಪ್ಪನ ಕೇರಿ ಪೋರಗಳು ಕಂಗೆಟ್ಟು ಮಲಗಿದವು. ತೋಟಕ್ಕೆ ಮದ್ದು ಹೊಡೆಯಲು ಗಟ್ಟಕ್ಕೆ ಹೊರಟ ಗಂಡಸರು ಒಬ್ಬೊಬ್ಬರಾಗಿ ಕಂಬಳಿ ಹೊದ್ದು ಮಲಗಿ ಗಟ್ಟದ ತನಕ ಈ ಜ್ವರದ ಬಿಸಿ ತಾಗಿತು. ಪ್ಲೋಟು ಮನೆಯ ರಾತ್ರಿಗಳೋ ರಾಗ-ಭಾವ ಕಳೆದುಕೊಂಡು ರಸಹೀನವಾದವು.***

ಜ್ವರ ಬಂದ ಮೇಲೆ ಎಲ್ಲ ಪೇಟೆಯ ಆಸ್ಪತ್ರೆಗೆ ಎಡತಾಕಿ ಬಂದರು. ಮಾತ್ರೆ ಇಂಜಕ್ಷನ್‍ಗೆಂದು ಶಕ್ತ್ಯಾನುಸಾರ ದುಡ್ಡು ಸುರಿದು ಬಂದರು. ಪೇಟೆಯ ಕೃಷ್ಣ ಡಾಕ್ಟರ ಕ್ಲಿನಿಕ್ ಹಿಂದೆಂದೂ ಕಂಡಿರದಷ್ಟು ಪೇಶೆಂಟುಗಳಿಂದ ಕಿಕ್ಕಿರಿಯಿತು. ಅವರ ಪರ್ಸು ತುಂಬಿ ತುಳುಕಿ ಚೀಲದಲ್ಲೆಲ್ಲ ದುಡ್ಡು ತುಂಬಿಟ್ಟರು. ಅದೇ ವೇಳೆಗೆ ಹುಟ್ಟಿದ ತಮ್ಮ ಮಗಳಿಗೆ ‘ ಶ್ರೀಲಕ್ಷ್ಮಿ’ ಅಂತ ಹೆಸರಿಟ್ಟರು. ಇದಕ್ಕೆ ಇಂಗ್ಲಿಷ್ ಮದ್ದಿಲ್ಲ ಅಂತ ಹೇಳಿದವರ ಬಳಿಯೆಲ್ಲ ಕೃಷ್ಣ ಡಾಕ್ಟರು ಸಣ್ಣ ಉಪನ್ಯಾಸ ಕೊಟ್ಟರು. ಬೇರೆಬೇರೆ ಆಕಾರ, ಬಣ್ಣದ ಗುಳಿಗೆಗಳನ್ನೆಲ್ಲ ರೋಗಿಗಳ ಮೇಲೆ ಪ್ರಯೋಗಿಸಿ ನೋಡಿದರು. ಕಡೆಗೆ ಅವರಿಗೇ ಚಿಕುನ್‍ಗುನ್ಯಾ ಆಗಿ ಮಲಗಿದರು. ಬೈಕಿಗೆ ಕಿಕ್ ಹೊಡೆಯುವುದೂ ಕಷ್ಟವಾಗಿ ಆ ಹಳ್ಳಿ ಡಾಕ್ಟ್ರೂ ಹೊಸಾ ಮಾರುತಿ ಕಾರಿನಲ್ಲಿ ತಿರುಗುವಂತಾಯಿತು. ಅವರ ಕಂಪೌಂಡರ ಸುಬ್ರಾಯ ಸೈಕಲ್ ಮಾರಿ ಹೊಸಾ ಹೀರೋಹೊಂಡಾ ಬೈಕಿನಲ್ಲಿ ಓಡಾಡುತ್ತಿದ್ದಾನೆ.

ಎಷ್ಟು ದಿನ ಕಳೆದರೂ ನೋವು ಗುಣವಾಗುವ ಸೂಚನೆಗಳಿಲ್ಲದಾಗ ಕೆಲವರು ಗಾಂವ್‍ಟಿ ಮದ್ದಿಗೆ ಇಳಿದರು.
‘ಆ ಡಾಕ್ಟ್ರಿಗೆಂತ ಗೊತ್ತು ಅಮ್ಟೆಕಾಯಿ? ಇದು ತೈಲ ತಿಕ್ಕದೆ ಹೋಗುವುದಿಲ್ಲ. ಸಂಧಿವಾತ ಇದು’ ಎನ್ನುತ್ತ ತಿಕ್ಕುವವರನ್ನು ಕರೆಸಿ ಅಂಗಮರ್ದನ ಮಾಡಿಸಿಕೊಂಡ ಕೆಲವರು ಮತ್ತಷ್ಟು ನೋವಿನಿಂದ ನರಳಿದರು. ‘ವಾತಸಂಹಾರಿ ತೈಲ’, ‘ಯೋಗರಾಜ ಗುಗ್ಗುಳ’ವಂತೂ ಬಿಸಿ ದೋಸೆಯ ತರ ಖರ್ಚಾಯಿತು. ಕೆಲವರು ದಿನವೂ ‘ಅಮೃತ ಬಳ್ಳಿ ಕಷಾಯ’ ಮಾಡಿ ಕುಡಿದರು. ಮತ್ತೆ ಹಲವರು ಮಠದ ‘ಗೋ ಮೂತ್ರ ಅರ್ಕ’ದ ಮೊರೆ ಹೋದರು.
ಅಳಲೆಕಾಯಿ ಪಂಡಿತನೊಬ್ಬ ಹೋದವರ ಬಾಯಿಗೆ ನಾಲ್ಕು ಹುಂಡು ಎಂತದೋ ನೀರು ಬಿಟ್ಟು, ಅದು ಅಮೃತ ಸಮಾನವೆಂತಲೂ, ಅದನ್ನು ಕುಡಿದರೆ ಚಿಕುನ್‍ಗುನ್ಯಾ ಅಷ್ಟೇ ಅಲ್ಲ, ಮತ್ಯಾವ ರೋಗವೂ ಬರುವುದಿಲ್ಲವೆಂದೂ ಪ್ರಚಾರ ಮಾಡಿ ಕಿಸೆ ತುಂಬಿಸಿಕೊಂಡ.
ಆ ತಾಲೂಕಿನ ಏಕೈಕ ‘ಉಮಾಪತಿ’ ಡಾಕ್ಟರೂ ಈಗ ಬಹಳ ಬಿಜಿó.
ಈ ಕಾಯಿಲೆ ತಮಗೇ ಹೇಗೆ ತಾಗಿತೆಂದು ಚಿಂತಿಸುತ್ತ, ಎಲ್ಲರೂ ಕಾಲೆಳೆಯುತ್ತ, ಭಟ್ಟರ ಮನೆ ಮೆಟ್ಟಿಲು ಹತ್ತಿಳಿಯುತ್ತಿದ್ದಾರೆ. ಜಾತಕ ನೋಡಿ. ಕವಡೆ ಉರುಳಿಸಿ, ಎಣಿಸಿ, ಗುಣಿಸಿ, ಲೆಕ್ಕ ಹಾಕಿದ ಉಮಾಮಹೇಶ್ವರ ದೇವಸ್ಥಾನದ ಭಟ್ಟರು, ಈ ಬಾರಿ ನಾಲ್ಕು ಗ್ರಹಣ ಒಂದೇ ಬಾರಿ ಬಂದಿದ್ದರಿಂದ ಹೀಗಾಗಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಊರದೈವವನ್ನು ಎಲ್ಲ ಮರೆತದ್ದಕ್ಕೆ ಉಮಾಮಹೇಶ್ವರ ದೇವರ ಕೋಪದಿಂದ ಬಾಳೆಬೈಲಿಗೆ ಮಾತ್ರ ಈ ಕಾಯಿಲೆ ಬಂತೆಂದೂ ನಂಬಿಸಿದ್ದಾರೆ. ಮನೆಮನೆಯಿಂದ ವರ್ಗಿಣಿ ಸಂಗ್ರಹಿಸಿ ಬರುವ ಕಾರ್ತಿಕ ಮಾಸದಲ್ಲಿ ದೊಡ್ಡ ದೇವತಾ ಕಾರ್ಯ ನಡೆಸಲು ತಯಾರಿ ನಡೆಸುತ್ತಿದ್ದಾರೆ.
ಹೊಳೆಸಾಲಕೇರಿಯವರು ಗುಡ್ಡದ ಜಟಗನಿಗೆ ಸಿಟ್ಟು ಬಂದಿರಬಹುದು ಎಂದು ಲೆಕ್ಕಹಾಕಿ ಮೂರ್ನಾಲ್ಕು ದೋಣಿ ಜನ ಸಮುದ್ರ ಮಧ್ಯ ದ್ವೀಪವಾದ ರಾಯನಗುಡ್ಡಕ್ಕೆ ಹೋಗಿ ಜಟಗನಿಗೆ ಪೂಜೆ, ಬಲಿ ಕೊಟ್ಟು ಬಂದಿದ್ದಾರೆ. ಕಿರಿಸ್ತಾನರು ಚಂದಾವರ ಪೇಸ್ತಿಗೆ, ವೇಲಂಕಣಿ ಆರೋಗ್ಯ ಮಾತೆಗೆ ಹರಕೆ ಹೊತ್ತಿದ್ದರೆ. ತಿಮ್ಮಪ್ಪನ ಕೇರಿಯ ಜನ ವರ್ಷವೂ ಗೇರುಸೊಪ್ಪೆ ಅಮ್ಮನವರನ್ನು ಕರೆಸಿ ‘ಆವರಿ’ ಓಡಿಸುತ್ತಿದ್ದವರು, ಈಗೆರೆಡು ವರ್ಷಗಳಿಂದ ಅದು ನಡೆಯದೇ ಹೀಗಾಗಿರಬೇಕೆಂದು ಶಂಕಿಸಿ ಬರುವ ನವರಾತ್ರಿಗೆ ಅಮ್ಮನೋರ ಪಾಲಕಿ ಕರೆಸಲು ನಿಶ್ಚಯಿಸಿದರು.
ತುರಿಕೆಗೆ ಹೆದರಿ ಕೆಲವರು ಸುಬ್ರಹ್ಮಣ್ಯ ದೇವರಿಗೆ ಜಪ ಮಾಡಿಸಿ ಬಾಳೆಕೊನೆ ಕೊಟ್ಟು ಕೃತಾರ್ಥರಾದರು. ‘ಮುತ್ರ್ಯು’ವಿಗೆ ಮದ್ದು ಹಾಕುವವ ಅರ್ಧ ರಾತ್ರಿಯಲ್ಲಿ, ಮೌನದಲ್ಲಿ ಹಲವರಿಗೆ ಮದ್ದು ಹಾಕಿ ಹೋದ. ಮಂಜು ಮನೆ ನಾಗರಾಜನಿಗೆ ಬೆನ್ನ ಮೇಲೆ ಮೂರು ಬೆರಳು ಮೂಡುವ ಹಾಗೆ ಮೃತ್ಯು ಹೊಡೆದು, ಮದ್ದು ಹಾಕಿಸದಿದ್ದರೆ ಹೋಗೇ ಬಿಡುತ್ತಿದ್ದ ಎಂದೆಲ್ಲ ಗುಲ್ಲಾಯಿತು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *