

ಸಸ್ಯಪಾಲಕ ಸುರೇಶ್ ನಾಯ್ಕ ಸಂಪಗೋಡರಿಗೆ ಸನ್ಮಾನ ಪಂಚವೃಕ್ಷಗಳ ಮಹತ್ವ ವಿವರಿಸಿದ ಗಣ್ಯರು
ಕಾರ್ಯಕ್ರಮದ ಆಯ್ದ ವಿಚಾರಗಳು ಹೀಗಿವೆ-
ಶರಾವತಿ ನೀರು ಕೊಂಡೊಯ್ಯುವುದು,ಶರಾವತಿ ಅಭಯಾರಣ್ಯದ ವ್ಯಾಪ್ತಿ ಹಿಗ್ಗಿಸುವ ಯೋಜನೆಗಳು ಜನವಿರೋಧಿ ಯೋಜನೆಗಳು. ಈ ಯೋಜನೆಗಳ ಬದಲು ಶರಾವತಿ ಬಳಸಿಕೊಂಡು ಸ್ಥಳಿಯರಿಗೆ ಅನುಕೂಲಮಾಡುವ ಉಪಯುಕ್ತ ಯೋಜನೆಗಳ ಪರವಾಗಿ ಜಿಲ್ಲೆಯ ಜನ ಹೋರಾಟ ಮಾಡಬೇಕಿದೆ.

- ಗಣೇಶ್ ಭಟ್, ತಾಲೂಕಾ ಪತ್ರಕರ್ತರ ಸಂಘದ ಅಧ್ಯಕ್ಷ
ಪಂಚವೃಕ್ಷ ಸಂಕುಲದ 8 ಗಿಡಗಳನ್ನು ವಾರ್ಷಿಕವಾಗಿ ನೆಡುವುದರಿಂದ ಫಲ ನಿಶ್ಚಿತ - ಶೇಷಗಿರಿಭಟ್ ಗುಂಜಗೋಡು.
ಪರಸ್ಫರ ವಿರೋಧಿ ಲಕ್ಷಣಗಳ, ಗಿಡಮೂಲಿಕೆಗಳ ಮಹತ್ವದ ಪಂಚವೃಕ್ಷಗಳು ಆಯುರ್ವೇದದ ಬಹುಉಪಯೋಗಿ ಸಸ್ಯಗಳು – ಡಾ.ರೂಪಾ ಭಟ್
ರೈತರಿಂದ ಆಗುತ್ತಿರುವ ಅರಣ್ಯನಾಶ ತಪ್ಪಿಸಲು ಸರ್ಕಾರ ಅನೂಕೂಲ ಕಲ್ಪಿಸಬೇಕು, ಸಂತಾನಭಾಗ್ಯಕ್ಕಾಗಿ ಅಶ್ವಥಕ್ಕೆ 45 ದಿವಸ ಪ್ರತಿದಿನ 108 ಪ್ರದಕ್ಷಿಣೆ ಮಾಡುವ ನಂಬಿಕೆ ವೈಜ್ಞಾನಿಕ ತಳಹದಿಯ ಮೇಲೆ ನಿಂತಿದೆ. - ರಾಮಚಂದ್ರ ಭಟ್ ಕಲ್ಲಾಳ.
ಪರಿಸರ ಉಳಿಸಿ, ಬೆಳೆಸುವ ಕೆಲಸಕ್ಕೆ ಜನಸಹಕಾರ ಮುಖ್ಯ - ಗಣಪತಿ ಹೆಗಡೆ ವಡ್ಡಿನಗದ್ದೆ.
ಜಾಗತಿಕ ತಾಪಮಾನದ ಹೆಚ್ಚಳ, ಪ್ರಾಕೃತಿಕ ಬದಲಾವಣೆಗಳಿಂದ ವಿಪ್ಲವ ಸಂಭವಿಸುವ ಮೊದಲೇ ಜಾಗರೂಕರಾಗಲು ಸಾಹಿತಿ ಸುಬ್ರಾಯ ಮತ್ತೀಹಳ್ಳಿ ಕರೆ ನೀಡಿದ್ದಾರೆ.
ಇಂದು ಇಲ್ಲಿಯ ಶಂಕರಮಠದಲ್ಲಿ ನಡೆದ ವೇದ ಮತ್ತು ಆಯುರ್ವೇದ ಗಳಲ್ಲಿ ಪಂಚವೃಕ್ಷಗಳ ಮಹತ್ವ ಎನ್ನುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಾತಾವರಣದ ಬಿಸಿ ಏರಿಕೆಯಿಂದ ಮಲೆನಾಡಿನ ಏಲಕ್ಕಿ ಸೇರಿದಂತೆ ಅನೇಕ ಸಸ್ಯ ಪ್ರಭೇದ ಈಗ ಬೆಳೆಯುತ್ತಿಲ್ಲ.
ಇತ್ತೀಚೆಗೆ ಟಿಬೇಟ್ ನಲ್ಲಿ ಗರಿಷ್ಠ ತಾಪಮಾನ ದಾಖಲಾಗಿರುವುದರಿಂದ ಅದು ಪರಿಸರದ ಮೇಲೆ ಬೀರುವ ದುಷ್ಟ ಪರಿಣಾಮಗಳ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ.
30 ಸೆಂಟಿಗ್ರೇಡ್ ಗಿಂತ ಹೆಚ್ಚಿನ ವಾತಾವರಣದಲ್ಲಿ ಏಲಕ್ಕಿ ಬೆಳೆಯುವುದಿಲ್ಲ ಎಂದರೆ, ಕಾಶ್ಮೀರದ ಕೇಸರಿ ಕೂಡಾ ಮುಂದೆ ಮರೀಚಿಕೆಯಾಗಬಹುದು ಹಾಗಾಗಿ ವಾತಾವರಣದ ಬಿಸಿ ನಿಯಂತ್ರಿಸುವ ಕೆಲಸ ಈಗಲೇ ಸಮರೋಪಾದಿಯಲ್ಲಿ ನಡೆಯಬೇಕು ಎಂದು ಅವರು ವಿವರಿಸಿದರು.
ಭಾರತೀ ಸಂಪದ,
ಸಂಸ್ಕøತಿ ಸಂಪದ ಮತ್ತು ಪ್ರಯೋಗ ಸಂಸ್ಥೆಗಳ ಸಹಭಾಗಿತ್ವದಲ್ಲಿ ಅರಣ್ಯ ಇಲಾಖೆಯ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ವೇದಮೂರ್ತಿ ರಾಮಚಂದ್ರ ಭಟ್ಟ ಕಲ್ಲಾಳ ವೇದಗಳಲ್ಲಿ ಪಂಚವೃಕ್ಷಗಳ ಉಪಯೋಗದ ಉಲ್ಲೇಖಗಳಿರುವುದನ್ನು ಗುರುತಿಸಿ,ವಿವರಿಸಿದರು.
ಮಳೆ ನೀರು ಕೊಯ್ಲು ಮಾಡುವ ವಿಧಾನಗಳನ್ನು ಮಲೆನಾಡಿನ ಜನತೆ ಅನುಷ್ಠಾನಕ್ಕೆ ತರುವ ಉಪಾಯಗಳನ್ನು ಸೂಚಿಸಿದರು.
ಇದೇ ವೇದಿಕೆಯಲ್ಲಿ ಮಾತನಾಡಿದ ವೇದಮೂರ್ತಿ ಶೇಷಗಿರಿ ಭಟ್ ಗುಂಜಗೋಡು ಆಲ, ಅಶ್ವಥ, ಮಾವು ಸೇರಿದಂತೆ ಪಂಚವೃಕ್ಷಗಳ ಉಪಯೋಗ, ಮಹತ್ವಗಳನ್ನು ತಿಳಿಸಿದರು.
ಆಯುರ್ವೇದದಲ್ಲಿ ಪಂಚವೃಕ್ಷಗಳ ಬಳಕೆ ಚರ್ಮರೋಗ, ಮತ್ತು ಬಂಜೆತನ ಹೋಗಲಾಡಿಸುವ ಉಪಾಯಗಳನ್ನು ತಿಳಿಸಿದೆ, ಎಂದ ಡಾ.ರೂಪಾಭಟ್ ಗಣಪತಿ ಹೆಗಡೆ ವಡ್ಡಿನಗದ್ದೆ ಬಹುಮುಖಿ ವ್ಯಕ್ತಿಯಾಗಿದ್ದು, ಎಂ.ಬಿ.ನಾಯ್ಕ, ಗಣಪತಿ ಸೇರಿದಂತೆ ಇಲ್ಲಿ ಸ್ಥಳಿಯ ಅನೇಕರ ಜ್ಞಾನ ಪ್ರಚಾರ ಪಡೆಯದಿದ್ದುದು ಒಳ್ಳೆಯ ಲಕ್ಷಣವಲ್ಲ ಎಂದರು.
ಸಸ್ಯಪಾಲಕ ಸಂಪಗೋಡಿನ ಸುರೇಶ್ ನಾಯ್ಕರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಸುರೇಶ್ ನಾಯ್ಕ ತನಗೆ ಸಂದ ಗೌರವ ಇಲಾಖೆ ಮತ್ತು ಅಧಿಕಾರಿಗಳಿಗೆ ಸಮರ್ಪಣೆ ಎಂದರು.
ಸಭೆಯಲ್ಲಿ ಮಾತನಾಡಿದ ವಿಜಯ ಹೆಗಡೆ ದೊಡ್ಮನೆ ಮತ್ತು ವಲಯ ಅರಣ್ಯಾಧಿಕಾರಿ ಕಿರಣಕುಮಾರ ಸಿದ್ಧಾಪುರದ ವೈಶಿಷ್ಟ್ಯಗಳನ್ನು ಶ್ಲಾಘಿಸಿದರು.
ಸಭೆಯ ಮೊದಲು ಪಂಚವೃಕ್ಷಗಳ ಆರೋಪಣ ನಡೆಯಿತು. ಮುರಗೇಶ್, ಗಣಪತಿ ಹಿತ್ತಲಕೈ ಸೇರಿದಂತೆ ಅನೇಕರು ಕಾರ್ಯಕ್ರಮಕ್ಕೆ ಸಹಕರಿಸಿದರು. ಗಣಪತಿ ವಡ್ಡಿನಗದ್ದೆ ಕಾರ್ಯಕ್ರಮದ ಪ್ರಾಸ್ಥಾವಿಕ ನುಡಿಗಳನ್ನಾಡಿ ತನ್ನ ಸೇವೆಯ ಪರಿಚಯ ಮಾಡಿದರು.


_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
