ಆಲದ ಬೀಜ ಅಂಬಾರಕೆ ಕೈ ಚಾಚಿದೆ ಅಣು ಅಣುವಲು ಅರಳಿದ ಹೂಗಳ ಎದೆಯ ತುಂಬಾ ಹಾಸಿದೆ. ಅರೇ….ಖಾಸಗಿ,?

ವಿಷಾದದ ಒಡಲಲ್ಲಿ ಆಶಾವಾದದ
ಆಕಾಶ ವಿಷ್ಣುನಾಯ್ಕ
ಅಣುವಂತಿರುವ ಆಲದ ಬೀಜ ಅಂಬಾರಕೆ ಕೈ ಚಾಚಿದೆ
ಅಣು ಅಣುವಲು ಅರಳಿದ ಹೂಗಳ ಎದೆಯ ತುಂಬಾ ಹಾಸಿದೆ.
ಅರೇ….ಖಾಸಗಿ,?
ಎಂಬ ಉದ್ಗಾರ ಕೃತಿಯನ್ನೋದಲು ಪ್ರಾರಂಭಿಸಿದ ಕೂಡಲೇ ಹೊರಹೊಮ್ಮಿದರೆ ಅದು ಆ ಕೃತಿಯ ಸಾರ್ಥಕತೆ. ಖಾಸಗಿ ಅನುಭವಗಳು ಸರ್ವರನ್ನೂ ತಲುಪುವ ಸಾಮಥ್ರ್ಯವನ್ನು ಪಡೆದಾಗಲೇ ಸಾಹಿತ್ಯ ಗೆಲ್ಲುವುದು.
ಪ್ರತಿಯೊಂದು ಬದುಕೂ ಅಮೂಲ್ಯವೇ. ಶ್ರೀಮಂತ ಮಗುವೊಂದು ಕಣ್ಣು ಬಿಟ್ಟಕೂಡಲೇ ಕಾಣುವುದು ರಂಗು ರಂಗಿನ ತೊಟ್ಟಿಲು, ಬಣ್ಣ ಬಣ್ಣದ ಛಾವಣಿಯಾದರೆ, ಬಡ ಮಗು ಕಾಣುವುದು ಬೃಹದಾಕಾರದ ಆಕಾ±,À ಆವರಿಸಿರುವ ಕತ್ತಲೆ, ಮತ್ತು ಹೊಳೆ ಹೊಳೆಯುವ ಅಸಂಖ್ಯ ನಕ್ಷತ್ರಗಳನ್ನು. ಇಡೀ ಬ್ರಹ್ಮಾಂಡವನ್ನೇ ಪುಟ್ಟ ಮುಷ್ಟಿಯಲ್ಲಿ ಹಿಡಿದು ಆಡುವ ಯೋಗ ಶ್ರೀಮಂತ ಮಗುವಿಗೆಲ್ಲಿ.?
ನಮ್ಮದೂ ಒಂದು ವಿಚಿತ್ರ ದೇಶ.
ವೈವಿಧ್ಯಮಯ ಸಾವಿರಾರು ಜನಾಂಗ ಜಾತಿಗಳ ತೇಪೆಸೇರಿಸಿ ಹೊಲಿದ ಬಹುದೊಡ್ಡ ಕೌÀದಿಯಿದು.
ಒಂದೊಂದು ಜನಾಂಗವೂ ಸಂಸ್ಕøತಿಯ ದೃಷ್ಟಿಯಲ್ಲಿ ಒಂದೊಂದು ಪ್ರಪಂಚವೇ ಆಗಿದೆ. ಮೇಲು ಕೀಳು ಅಸ್ಪ್ರಶ್ಯತೆಯಂಥ ದೌರ್ಬಲ್ಯಗಳನ್ನು ತೊಡೆದುಕೊಂಡರೆ ಅವು ಸೃಷ್ಟಿಸಿಕೊಂಡ ತಮ್ಮದೇ ಆದ ಅಸ್ಮಿತೆ’’ಮೈ ನವಿರೇಳಿಸುತ್ತದೆ.
ಜಾತಿಯ ಬೇಲಿಯೊಳಗೇ ಅರಳಿಕೊಂಡು ಮಾನವೀಯ ಪರಿಮಳ ಬೀರುವ ಅದೆಷ್ಟೋ ಅಪರೂಪದ ಅನನ್ಯವಾದ ಸಂಗತಿಗಳು ಬೆರಗುಮೂಡಿಸುತ್ತವೆ. ಪಕ್ಕಕ್ಕೇ ಇದ್ದೂ ಸಂವಹನೆ ಸಾಧಿಸಲಾಗದ ನಮ್ಮ ನಿಸ್ಸಹಾಯಕತೆಗೆ ನಾಚಿಕೆ ತಗಲುತ್ತದೆ.
ಈ ಎಲ್ಲ ಹಳವಂಡಕ್ಕೆ ಕಾರಣ ನಮ್ಮ ನಡುವಣ ಕವಿ ಚಿಂತಕ
ಶ್ರೀ ವಿಷ್ಣು ನಾಯ್ಕ’’ ರ ಅತ್ಯಂತ ಪ್ರಮುಖವಾದ ಮºತ್ವಾಕಾಂಕ್ಷೀ ಕೃತಿ
ಅರೆ ಖಾಸಗಿ ಎಂದರೆ ಅತಿಶಯೋಕ್ತಿಯಲ್ಲ.
ತನ್ನ ಬದುಕನ್ನು ಕೇಂದ್ರವಾಗಿಸಿಕೊಂಡು ಸುತ್ತಲಿನ ಸಮುದಾಯವನ್ನೆಲ್ಲವನ್ನೂ ತೆಕ್ಕೆಗೆ ಸೆಳೆದುಕೊಳ್ಳುತ್ತ ಮನುಷ್ಯನ ಶಕ್ತಿ ಸಂಕಟ ನೋವು ತಲ್ಲಣ ಮತ್ತು ಸಂಬಂಧಗಳ ವಿಚಿತ್ರ ಬೆಸುಗೆಯ ಲೀಲೆಯನ್ನು ಬೆರಗುಗಣ್ಣಿಂದ ನೋಡಲು ಪ್ರಯತ್ನಿಸಿದ ಒಂದು ಅಪರೂಪದ ಯತ್ನ ಈ ಕೃತಿ. ಮೇಲ್ನೋಟಕ್ಕೆ ಒಂದು ಆತ್ಮಕಥನವೆಂದೆನ್ನಿಸ ಬಹುದಾದ ಈ ಪುಸ್ತಕ ಆತ್ಮಕಥಾ ಸಾಹಿತ್ಯಕ್ಕೆ ಹೊಚ್ಚಹೊಸದೊಂದು ಆಯಾಮವನ್ನೇ ನೀಡಿದೆ.
ಜಾತಿಕೋಟೆಯೊಳಗೇ ಅರಳಿಕೊಳ್ಳುವ ಅದೆಷ್ಟೋ ಸಾಂಸ್ಕøತಿಕ ಮಾನವೀಯ ಮಜಲುಗಳನ್ನು ಕೋಟೆಯಾಚೆಗಿನ ಅನುಭವ ಪ್ರಪಂಚಕ್ಕೆ ಪರಿಣಾಮಕಾರಿಯಾಗಿ ಪರಿಚಯಿಸುವ ಪ್ರಯತ್ನವನ್ನ ಇಲ್ಲಿ ಕಾಣಬಹುದಾಗಿದೆ.
ಸಾಹಿತ್ಯದಲ್ಲಿ ಆತ್ಮಕತೆಗಳ ಪರಂಪರೆಯೇ ಇದೆ. ಅದೊಂದು ಪ್ಯಾಶನ್ ಆಗಿಯೂ ಸಾಕಷ್ಟು ಬಳಕೆಯಾಗಿದೆ.
ಬದುಕಿನ ಧನಾತ್ಮಕ ಸತ್ಯವನ್ನೇ ಎಚ್ಚರಿಕೆಯಿಂದ ಆಯ್ದು ಅದಕ್ಕೇ ಬಣ್ಣದ ಬಟ್ಟೆಯನ್ನು ತೊಡಿಸಿ ವೈಭವೀಕರಿಸುವುದನ್ನು ನೋಡುತ್ತಲೇ ಬರುತ್ತಿದ್ದೇವೆ. ಮಹಾತ್ಮಾಗಾಂಧಿಯವರ “ನನ್ನ ಸತ್ಯಶೋಧನೆಯ ಕತೆ’’ ಯಂಥ ಕೃತಿಗಳು ಅಪರೂಪಕ್ಕೆ ಬಂದಿವೆ.
ಮನುಷ್ಯ ಸದಾ ಭೂತದಲ್ಲಿಯೇ ಬದುಕುತ್ತ ಭವಿಷ್ಯದ ಕನಸಲ್ಲಿ ಉಸಿರಾಡುತ್ತ ಅವೆರಡರ ಗೊಂದಲದಲ್ಲಿ ವರ್ತಮಾನವನ್ನೇ ಕಳೆದುಕೊಂಡುಬಿಡುತ್ತಾನೆ. ಪ್ರಜ್ಞಾವಂತ ವ್ಯಕ್ತಿಗೆ ದೊಡ್ಡ ಸವಾಲಿರುವುದು ಕಾಡುವ ಭೂತದಿಂದ ಬಿಡಿಸಿಕೊಳ್ಳುವುದು, ಮತ್ತು ಸುಂದರ ವರ್ತಮಾನವನ್ನು ಸೃಷ್ಟಿಸಿÀಕೊಳ್ಳುವುದು.
ವರ್ತಮಾನ ಎಂದರೆ ಸ್ವತಂತ್ರವಲ್ಲ. ಅದು ಭೂತದ ಮಗು ಭವಿಷ್ಯದ ತಂದೆ. ಭೂತ ಮತ್ತು ಭವಿಷ್ಯದ ಜೊತೆಗಿನ ಮುಖಾಮುಖಿಯೇ ನಿಜವಾದ ವರ್ತಮಾನ. ನಮ್ಮೆಲ್ಲಸೃಜನಶೀಲ ಕಥೆ ಕಾವ್ಯಗಳೆಲ್ಲ ಒಂದು ದೃಷ್ಟಿಯಲ್ಲಿ ಕಲ್ಪನೆ ಮತ್ತು ವಾಸ್ತವಗಳ ಸಂಗಮ.
ಆತ್ಮಕಥೆ ಯಂಥ ಪ್ರಕಾರ ನೀಡುವ ಸತ್ಯಕ್ಕೂ ಜೀವನ ದರ್ಶನಕ್ಕೂ ಸೃಜನಶೀಲ ಅಭಿವ್ಯಕ್ತಿ ಸೃಷ್ಟಿಸುವ ದರ್ಶನಕ್ಕೂ ಭಾರೀ ಅಂತರವಿದೆ. ಸತ್ಯ ಮತ್ತು ಋತ ದ ಉದಾಹರಣೆ ಇದಕ್ಕೆ ಸರಿಹೊಂದೀತೇನೋ. ಆತ್ಮಕತೆಗಳೂ ಸಾಹಿತ್ಯದ ಒಂದು ಪ್ರಕಾರವನ್ನಾಗಿ ಒಪ್ಪಿಕೊಳ್ಳುತ್ತಲೇ ಅವು ಕಟ್ಟಿಕೊಡುವ ಸತ್ಯದ ಬಗೆಗೆ ಒಂದು ಗುಮಾನಿಯೂ ನನ್ನಲ್ಲಿ ಏಕೋ ಮನೆಮಾಡಿಕೊಂಡಿದೆ.
ಸತ್ಯ ಎಂದೂ ಸುಂದರವಲ್ಲ. ಸುಂದರವಾದುದೆಲ್ಲ ಸತ್ಯವೂ ಆಗಿರಬೇಕಿಲ್ಲ.
ಸುಂದರಗೊಳಿಸುವ ಪ್ರಯತ್ನದಲ್ಲಿ ನಿಜವಾದ ಜೀವನ ತೆರೆದುಕೊಳ್ಳದೇ ಮಿಥ್ಯೆಯೇ ಮಿಂಚುವ ಘಟನೆಗಳನ್ನ ನಾವಿಂದು ಆತ್ಮಕಥೆಗಳ ಮೆರವಣಿಗೆಯಲ್ಲಿ ಕಾಣುತ್ತಿದ್ದೇವೆ.
ಏನೇ ಇರಲಿ ಇಡೀ ಭಾರತೀಯ ಭಾಷೆಗಳಲ್ಲಿ ಮರಾಠೀ ಭಾಷೆ ಆತ್ಮಕಥಾಸಾಹಿತ್ಯಕ್ಕೆ ಹೊಸ ಹರಿವು ಹೊಸ ನೋಟ ಹೊಚ್ಚಹೊಸ ಮಿಂಚನ್ನು ನೀಡಿದೆ ಎಂದರೆ ಅತಿಶಯೋಕ್ತಿಯಾಗದು. ಲಕ್ಷ್ಮಣರಾವ್ ಗಾಯಕವಾಡ ರ ಉಚಲ್ಯಾ ಅಕರಮಾಶಿ[ಲೇ-ಶರಣಕುಮಾರ ಲಿಂಬಾಳೆ] ಗಬಾಳ[ಮಲ್ಲಾರಿ ಮೋರೆ] ತಾಂಡಾ[ಆತ್ಮಾರಾಮ ರಾಥೋಡ] ಮುಂತಾದ ಆತ್ಮಕತೆಗಳು ಸಾಹಿತ್ಯಪ್ರಪಂಚದಲ್ಲಿ ಹೊಸ ಸಂಚಲನವನ್ನೇ ಮೂಡಿಸಿದ್ದು ಈಗ ಇತಿಹಾಸ. ಅವು ಮೂಡಿಸಿದ್ದು ಸುಂದರ ಸತ್ಯವನ್ನಲ್ಲ. ನಗ್ನಸತ್ಯವನ್ನು.
ಯಾವ ಶಿಷ್ಟಮನಸ್ಸು ಯಾರಲ್ಲೂ ಹೇಳಿಕೊಳ್ಳಲಾಗದ ಸತ್ಯವನ್ನು ಸದಾ ಮನಸ್ಸಿನ ಗೋದಾಮಿನಲ್ಲಿ ಹುಗಿದಿಡುತ್ತದೆಯೋ ಅಂಥ ಸತ್ಯದ ಅನಾವರಣವನ್ನು ಉಚಲ್ಯಾ ದಂಥ ಕೃತಿಗಳು ಮುಕ್ತವಾಗಿ ಮಾಡಿದವು. ಪ್ರತಿಯೊಬ್ಬನ ಬದುಕಿಗೂ ಒಂದೊಂದು ಕಪ್ಪು ಮುಖ ಇದ್ದೇ ಇರುತ್ತದೆ. ತಲ್ಲಣ ನೋವು ನಿಃಸಹಾಯಕತೆಯೊಂದಿಗೇ ಬದುಕು ಅರಳುತ್ತದೆ. ಹೇಳಿದ್ದಕ್ಕಿಂತ ಹೇಳದೇ ಬಚ್ಚಿಟ್ಟ ಅಸಂಖ್ಯ ಅನುಭವಗಳು ಕೃತಿಯ ಹೊರಗೇನೇ ಉಳಿದುಬಿಡುತ್ತದೆ. ತನ್ನ ಭೂತಕ್ಕೆ ತನ್ನ ಸ್ಮøತಿಗಳಿಗೆ ಪ್ರಾಮಾಣಿಕವಾಗಿ ಮುಖಾಮುಖಿಯಾಗಲು ದೃಢತೆ ಬೇಕು,
ಅಪ್ಪಟ ಪ್ರಾಮಾಣಿಕತೆ ಬೇಕು. ಕಟು ಸತ್ಯವನ್ನು ಎದುರಿಸುವ ಎದೆಗಾರಿಕೆ ಬೇಕು. ಈ ಎಲ್ಲ ಗುಣಗಳೂ ಮೇಳೈಸಿದ ಒಂದು ಅಪರೂಪದ ಕ್ಷಣವನ್ನ ಅರೆಖಾಸಗಿ ಕೃತಿಯ ಸಂದರ್ಭದಲ್ಲಿ ನಾವು ಕಾಣುತ್ತಿದ್ದೇವೆ.
ವಿಷ್ಣು ನಾಯಕ ಕಾಲಯಂತ್ರದಲ್ಲಿ ಕುಳಿತು ವಿಶಾಲವಾದ ಭೂತಕಾಲದ ಬದುಕನ್ನು ಪ್ರವೇಶಿಸುವ ಬಗೆಯೇ ಬೆರಗು ಮೂಡಿಸುತ್ತದೆ.
ಪುಟ್ಟ ಪುಟ್ಟ ಸ್ಮøತಿಚಿತ್ರಗಳುಳ್ಳ ಇಟ್ಟಿಗೆಯಿಂದ ನಿರ್ಮಿಸಿದ ಅಭೂತಪೂರ್ವ ಬದುಕಿನ ಗೋಪುರವಿದು. ಪ್ರತೀ ಲೇಖನ ಕೃತಿಕಾರರ ಬದುಕಿನ ಒಂದೊಂದು ಭಾಗವೇ ಆಗಿರುವುದರಿಂದ ಪ್ರತಿಪುಟದಲ್ಲಿ ಅವರ ಉಪಸ್ಥಿತಿಯಿರುವುದರಿಂದ ಮಾತ್ರ ಇದು ಖಾಸಗಿ ಎಂಬ ಶೀರ್ಷಿಕೆ ಪಡೆದಿದೆ ಅಷ್ಟೆ. ಆದರೆ ಇಲ್ಲಿಯ ಹತ್ತು ಹಲವು ಹಳ್ಳಿಯ ವ್ಯಕ್ತಿಗಳು ಕೃತಿಕಾರರ ಸ್ಮøತಿಸಂಪುಟದಿಂದ ಪುನರ್ಜೀವ ಪಡೆದು, ನಮ್ಮ ಅನುಭವದ ಶಾಶ್ವತ ಭಾಗವಾಗಿ ನೆಲೆಸಿಬಿಡುತ್ತಾರೆ.
“ಮೃತನನ್ನ ಮರೆಯುವುದು ಅಂದರೆ ಮತ್ತೊಮ್ಮೆ ಅವನನ್ನು ಕೊಂದಂತೆ’’ಎಂಬ ನಾಣ್ಣುಡಿಯಿದೆ.
ಆದರೆ ಇಲ್ಲಿ ಮೃತರಾದ ಹಳ್ಳಿಯ ಹತ್ತು ಸಮಸ್ತರು ಮತ್ತೆ ಜೀವಪಡೆದು ನಳನಳಿಸುತ್ತಾರೆ. ಮಳ್ಸುಬ್ರಾಯ, ಹಾಡುಹಕ್ಕಿ ಗುಬ್ಬಿ, ದಿಗಂಬರ ದೇಸಾಯಿ, ಭವಾನಿ, ಸಣ್ತಮ್ಮ, ಸಾವ್ಕಾರ, ಎಕ್ಟರ ಜೋಶಿ, ದೇವಿ, ಮುಂತಾದ ಅದೆಷ್ಟೋ ವ್ಯಕ್ತಿಗಳು ಸಾಲು ಸಾಲಾಗಿ ಬಂದು ನಮ್ಮನ್ನು ಮುತ್ತಿಕೊಳ್ಳುತ್ತವೆ. ಭಾಷೆಯಲ್ಲಿ ಸರಳತೆ ನೋಟದಲ್ಲಿ ಸೂಕ್ಷ್ಮತೆ ಅಭಿವ್ಯಕ್ತಿಯಲ್ಲಿ ಸಮಗ್ರತೆ ಇಲ್ಲಿಯ ಲೇಖನಗಳಿಗೆ ಒಂದು ಗಾಂಭೀರ್ಯವನ್ನು ನೀಡಿದೆ.
ಪ್ರಸ್ತುತ ಅರೆಖಾಸಗಿ-2 ನಮ್ಮನ್ನು ಒಳಹೊಕ್ಕು ಕಾಡುವುದು ಭೂತದ ಕಟುವಾಸ್ತವದ ನೈಜ ಚಿತ್ರಣದಲ್ಲಿ. ಸರಳ ಸುಂದರ ಭಾಷಾ ವೈಖರಿಯಲ್ಲಿ. ಒಬ್ಬ ಸೂಕ್ಷ್ಮ ಸಂವೇದನಾಶೀಲ ಕವಿ ಸಮರ್ಥ ಕತೆಗಾರ ಮತ್ತು ಒಬ್ಬ ಸಾಂಸ್ಕøತಿಕ ಸಂಘಟಕರೆಂಬ ಮೂವರ ವ್ಯಕ್ತಿತ್ವಗಳು ಇಲ್ಲಿ ಕೆಲಸಮಾಡಿವೆ.
ಪ್ರತೀ ಲೇಖನವೂ ತನ್ನ ನಾಟಕೀಯತೆ ಕಾವ್ಯಾತ್ಮಕತೆ ಮತ್ತು ಜೀವನಪ್ರೀತಿ ಯಂಥ ಗುಣಗಳಿಂದ ಸಮೃದ್ಧಗೊಂಡಿವೆ.
ಕೃತಿಯಲ್ಲಿ ಲೇಖಕರು ಕಳೆದ ಅರ್ಧಶತಮಾನದ ಹಿಂದಿನ ತಮ್ಮ ಸುತ್ತಲಿನ ಸಮಾಜದ ಜಾತಿಭೇದ ಆರ್ಥಿಕ ದುಸ್ಥಿತಿ ಮತ್ತು ಹಾಲಕ್ಕಿ ಹಳೇಪೈಕ ಸಮುದಾಯದ ಆಶಿಕ್ಷಿತ ಜನರ ಮುಗ್ಧತೆ, ಸಾಂಸ್ಕøತಿಕತೆ ಮತ್ತು ಮಾನವೀಯತೆಯನ್ನು ಆ ಜನಾಂಗದ ಆಡುನುಡಿಯ ಸೊಗಡಿನಲ್ಲಿವರ್ಣಿಸುವ ವೈಖರಿಯೇ ಮನಸೆಳೆಯುತ್ತದೆ. ಕಷ್ಟದ ದಿನಗಳ ತಲ್ಲಣಗಳನ್ನ ಮತ್ತೆ ಮತ್ತೆ ಮೆಲುಕಿಗೆ ತಂದುಕೊಳ್ಳುತ್ತ ಬರೆದ ಹಲವು ಸ್ಮøತಿಚಿತ್ರಗಳು ಕಣ್ಣು ಒದ್ದೆಯಾಗಿಸುತ್ತಲೇ ಇಷ್ಟವಾಗುತ್ತವೆ. ಅವರ “ಅವ್ವ ನಡೆದಳು ಮನೆಗೆ’’ ಲೇಖನವನ್ನ ಈ ಸಂದರ್ಭದಲ್ಲಿ ಉದಾಹರಿಸಲೇಬೇಕು.
“ಒನಕೆ ಹಿಡಿದು ಅಕ್ಕಿ ಮೆರೆಯುವುದಕ್ಕೆ, ಹೂ ಕೊಯ್ದು ಜಡೆ ಹಾಕುವುದಕ್ಕೆ ,ಮೀನು ಕೊಯ್ದು ಪಳದಿ ಮಾಡುವುದಕ್ಕೆ , ಹುಲ್ಲು ಕೊಯ್ದು ಹೊರೆ ಮಾರುವುದಕ್ಕೆ, ಹಟ್ಟಿಕೊಟ್ಟಿಗೆಯ ಸಗಣಿ ತೆಗೆಯುವುದಕ್ಕೆ , ಅನ್ನ ಬಾಗಿ, ಅಂಗಳ ಗುಡಿಸಿ ಮನೆ ನೋಡಿಕೊಳ್ಳುವುದಕ್ಕೆ ,
ಈಮಗನನ್ನು ಬಳಸಿಕೊಂಡಾಗಲೇ ದಿನಗೂಲಿ ಕೆಲಸಕ್ಕೆ ಹೋಗಲು ಅವ್ವನಿಗೆ ನಿರುಂಬಳ ಆಗುತ್ತಿದ್ದುದು.
ಅಕ್ಕನ ಮದುವೆಯಾಗಿ ಗಂಡನ ಮನೆ ಗೈತದಲ್ಲಿದ್ದಳು. ಅಣ್ಣ- ಅಪ್ಪನ ಬೆನ್ನಿಗೆ ಬಾರುಕೋಲು ಹೆಗಲಿಗೆ ಹಾಕಿ ಊರು ಸುತ್ತಲಾರಂಭಿಸಿದ್ದ. ತಮ್ಮಂದಿರು ಸ್ವತಂತ್ರ ದುಡಿತಕ್ಕೆ ಸರಿಯಲ್ಲದ ಚಿಕ್ಕ ವಯಸ್ಸಿನವರು. ಆ ಒಂದು ದಶಕದಲ್ಲಿ ನನ್ನ ಮತ್ತು ಅವ್ವನ ನಡುವಿನ ಹೊಂದಾಣಿಕೆಗಳು ಬದುಕನ್ನು ಎದುರಿಸುವಲ್ಲಿಯ – ನನ್ನ ಜೀವಿತಾವಧಿಯ ಅತ್ಯುತ್ತಮ ತಾಲೀಮೆಂದೇ ನನಗೀಗ ಅನಿಸಹತ್ತಿದೆ’’
ಎಂದು ತಾಯಿಯ ಜೀವನ ನಿಷ್ಠೆ ಕ್ರಿಯಾಶೀಲತೆ ಯಂಥ ಗುಣಗಳನ್ನು
ಚಿತ್ರಿಸುತ್ತ ತಾಯಿಯ ಜೊತೆಗಿನ ಸಂಬಂಧವನ್ನ ಬಡತನದ ಬಾಲ್ಯವೇ ಗಾಢವಾಗಿ ಬೆಸೆದ ಪರಿಯನ್ನು ಮನಮುಟ್ಟುವಂತೇ ಚಿತ್ರಿಸುತ್ತಾರೆ.
ಇದೇ ಲೇಖನದ ಇನ್ನೊಂದು ಪ್ಯಾರಾವನ್ನು ಇಲ್ಲಿ ಸ್ಮರಿಸಲೇ ಬೇಕು.
ಈ ಅಡ್ಡನೀರು’ಮೀಯಲೆಂದು ಬಗ್ಗಿ ನಿಲ್ಲುತ್ತಿದ್ದ ಅವ್ವನ ಬೆನ್ನಮೇಲೆ ಅಡಕಲಿನಿಂದ ನೀರು ಮೊಗೆ ಮೊಗೆದು ಹಾಕಿ, ಅಟ್ಲಕಾಯಿ ಮತ್ತು ಕಾಯಿ ಕತ್ತದಿಂದ ಬೆನ್ನು ತಿಕ್ಕಿ ಸ್ವಚ್ಛಮಾಡುವ ಕೆಲಸ ನನ್ನದಾಗಿತ್ತು.
ಎರಡು ಸೀರೆಗೆ ಗತಿಯಿಲ್ಲದ ಅವ್ವ ಪೂರ್ಣ ಸ್ನಾನ ಮಾಡುತ್ತಿದ್ದುದು ವಾರಕ್ಕೊಮ್ಮೆ ಮಾತ್ರ. ಅದೂ ರಾತ್ರಿಹೊತ್ತಿಗೇ ಹೆಚ್ಚು. ತುಂಡು ಬಟ್ಟೆ ಸುತ್ತಿಕೊಂಡುದು ಯಾರಿಗೂ ಕಾಣಬಾರದಲ್ಲ ! ಬೆಳಗಾಗುವ ವೇಳೆಗೆ
ಒಣಗಿದ ಸೀರೆ ಸುತ್ತಿಕೊಂಡು ಮತ್ತೆ ಕೃಷಿ ಕೂಲಿತನಕ್ಕೆ ರೆಡಿ.’’ ಇಂಥ ಕಟುವಾಸ್ತವದ ಸಂದರ್ಭ ಲೇಖಕರಿಗೆ ನೆನಪಾಗುವುದು ರೈಲಿನಲ್ಲಿ ದೂರ ಪ್ರವಾಸ ಮಾಡುತ್ತಿರುವಾಗ. ಆಗ ತಾಯಿಯ ಸಾವಿನ ಸುದ್ದಿ ಸಿಡಿಲಿನಂತೇ ಬಂದಪ್ಪಳಿಸಿದಾಗ. ತಾಯಿಯ ಅಗಲುವಿಕೆಯಿಂದ ಉದ್ಭವಿಸಿದ ತಲ್ಲಣ, ಒಂದು ಕನ್ನಡದ ಅತ್ಯುಚ್ಛ ಕಾವ್ಯದ ಸಾಲಿನಲ್ಲಿ ಗುರುತಿಸಿಕೊಳ್ಳುವಂಥ ಕವಿತೆಯೊಂದರ ಹುಟ್ಟಿಗೆ ಕಾರಣವಾಗುತ್ತದೆ.
“ ನಾ ಬೆಳೆದ ಹಾಗೆಲ್ಲ ನೀ ಇಳಿದೆಯಲ್ಲವ್ವ / ದಿನಹೋದ ಹಾಗೆಲ್ಲ ಒಣಗೋದಿ/
ಈ ನನ್ನ ಕೊಬ್ಬಿಗೂ ಆ ನಿನ್ನ ಸೊರಗಿಗೂ / ಏನಾರೆ ಸಂಬಂಧ ಇರಲೇಬೇಕು. !’’ [ ಕೊರಗು ಕವನದಿಂದ]
ಲೇಖಕರು ಕನ್ನಡದ ಪ್ರಮುಖ ಕವಿಯಾಗಿ ಅರಳಿದ್ದು ಆ ತಾಯಿ ಯೆಂಬ ಗಿಡದಿಂದ ಎಂಬುದನ್ನ ಕಾವ್ಯ ಪ್ರೇಮಿಗಳು ಸ್ಮರಿಸಲೇ ಬೇಕಿದೆ.
ಮೊದಲ ಸಾಲಿನ ಕೊನೆಯ ಶಬ್ಧ “ಇಳಿದೆ ಯೆಲ್ಲವ್ವ’’ ನೀನು ನನ್ನೊಳಗೆ ಪ್ರವೇಶಿಸಿದೆ ಎಂಬ ಅರ್ಥದ ಜೊತೆಗೆ ಜನಪದ ದೇವತೆ ಯಲ್ಲಮ್ಮ ನನ್ನು ಧ್ವನಿಸುತ್ತದೆ. ಹಾಗೆಯೇ ಎರಡನೇಯ ಸಾಲಿನ ಕೊನೆಯ ಶಬ್ಧ ಒಣಗೋದಿ’’ ನೀನು ಕೃಷವಾದೆ ಎನ್ನುವುದರ ಜೊತೆಗೆ ನನ್ನ ಸುಪುಷ್ಟ ಬೆಳವಣಿಗೆಗೆ ಪೌಷ್ಟಿಕ ಗೋದಿಯಾದೆ, ಎಂಬ ಆಸಕ್ತಿಪೂರ್ಣ ಅರ್ಥ ವಿಸ್ತಾರವನ್ನು ಈ ಸಾಲುಗಳು ಪಡೆದು ಬಿಡುತ್ತವೆ. ಅವಳೇ ಹೊಲದ ಕೆಲಸದಲ್ಲಿ ತಲ್ಲೀನಳಾಗಿ ಹಾಡಿಕೊಳ್ಳುತ್ತಿದ್ದ ಒಂದು ಜಾನಪದ ಹಾಡಿನ ತುಣುಕನ್ನೂ ಲೇಖಕರು ಇಲ್ಲಿ ಸ್ಮರಿಸುತ್ತಾರೆ.
ಸಾವಿರ ಸವರನ್ನ ಅಲ್ಲೀತೋ ನನರಾಜ/ ನಾ ನಡವೆ ನನ್ನ ತವರೀಗೆ/ ಸರದಾರ/ ಜೋಡೆತ್ತು ಸರಗಂಟೆ ಜೊತೆಯಾಗೋ !! “
ಹೀಗೆ ಪ್ರತಿಯೊಂದು ಅಕ್ಷರ ಚಿತ್ರಗಳೂ ನಿಜಜೀವನದ ಒಂದೊಂದು ಧಾರುಣ ಘಟನೆಯನ್ನು ನಡೆದುದನ್ನು ನಡೆದ ಹಾಗೇ ವಿವರಿಸುವಾಗ ಅವುಗಳು ಕೇವಲ ಯಾಂತ್ರಿಕ ವಿವರಗಳಾಗುವುದಿಲ್ಲ. ಅಂಥ ಘಟನೆಗಳ ನಡುವೆ ಸಂವೇದನಾಶೀಲ ಕವಿಯೊಬ್ಬನ ಆತ್ಮ ವಿಲವಿಲನೆ ತುಡಿಯುತ್ತಿರುತ್ತದೆ.
ಕಣ್ಣೆದುರೇ ಎಳೆಪ್ರಾಯದ ಹುಡುಗಿಯೊಬ್ಬಳನ್ನು ಮನೆಯೆದುರು ಕುಳ್ಳಿರಿಸಿ ಹಸಿರು ಮರದ ತೊಗಟೆ ಕೊಂಬೆಗಳನ್ನೆಲ್ಲ ಸವರಿದಂತೇ ಸಂಪ್ರದಾಯದ ಹೆಸರಲ್ಲಿ ಕುಂಕುಮ ಬಳೆ ಮಂಗಳಸೂತ್ರಗಳನ್ನೆಲ್ಲ ಕಿತ್ತುಕೊಂಡಾಗÀ ಲೇಖಕ ಹೈರಾಣುಗೊಳ್ಳುತ್ತಾನೆ. [ಹೀಗೊಂದು ಮರಣೋತ್ತರ ಆಶೆ ] ಸಂಪ್ರದಾಯದ ಹೆಸರಿನ ಈ ಅಮಾನವೀಯ ಅತ್ಯಾಚಾರದ ಸಂದರ್ಭದಲ್ಲಿ ಪ್ರತ್ಯಕ್ಷದರ್ಶಿಯಾಗಿ ನಿಂತ ಲೇಖಕರಿಗೆ ಪುಟ್ಟ ಹುಡುಗನೊಬ್ಬ ಪ್ರಶ್ನಿಸುತ್ತಾನೆ.
“ಹೋಡ ಮಾಮಾ ಗಂಡ ಸತ್ತಮೇಲೆ ಬಳೆ ಕುಂಕುಮ ಎಲ್ಲ ತೆಗೆದುಹಾಕುವ ಶಾಸ್ತ್ರ ಮಾಡಿದವರ್ಯಾರು…?’ ಎಂದು. ನನ್ನ ಬಳಿ ಸಿದ್ಧ ಉತ್ತರ ಇರಲಿಲ್ಲ. ಹುಡುಗನ ಮಾತು ಮುಂದುವರೆದಿತ್ತು. “ಗಂಡಕಟ್ಟಿದ ಮಂಗಳಸೂತ್ರ ಮಾತ್ರ ತೆಗೆಯಲಿ, ಮೊದಲಿದ್ದ ಹೂ ಬಳೆ ಕುಂಕುಮವನ್ನೇಕೆ ತೆಗೆಯಬೇಕು..?ಎಂದಾಗ “ನಿನ್ನಂಥ ಹುಡುಗರು ಈ ರೀತಿ ಪ್ರಶ್ನೆಗಳನ್ನು ಎತ್ತುವುದಕ್ಕೆ ಶುರು ಮಾಡಿದ್ದೀರಲ್ಲ,- ಅದೇ ಆಶಾಕಿರಣ, ’’ಎಂದೆ. ಎಂದು ಆ ದುರಂತದ ಘಟನೆಯನ್ನು ವಿವರಿಸುತ್ತ ಲೇಖಕರು ಒಂದು ಮಹತ್ವಪೂರ್ಣನಿರ್ಣಯಕ್ಕೆ ಬರುತ್ತಾರೆ. “ದಶಕದಷ್ಟು ಹಿಂದೆಯೇ ಈ ಸಂಬಂಧದ ನನ್ನ ಮರಣೋತ್ತರ ಆಶೆಯೊಂದನ್ನು ಕವಿತೆಯೊಂದರಲ್ಲಿ ಹಿಡಿದಿಟ್ಟು ನನ್ನ ಹೆಂಡತಿಗೆ ಓದಲು ಕೊಟ್ಟಿದ್ದೆ. ಓದಿದಳೋ ಇಲ್ಲವೋ ಗೊತ್ತಿಲ್ಲ.’’ಎನ್ನುತ್ತ ಆಕ್ಷಣದಲ್ಲಿ ಬರೆದ ಒಂದು ಕವಿತೆಯನ್ನು ಲೇಖನದಲ್ಲಿ ದಾಖಲಿಸುತ್ತಾರೆ.

             ಹಿಂಡು ಹಿಂಡು ಹದ್ದುಗಳು
             ಎರಗುತ್ತಾವೆ ನಿನ್ನ ಸಿರಿಮುಡಿಯ ಮೇಲೆ
             ಜರೆಯುತ್ತಾವೆ ಹಸಿರ ಬಳೆಗಳನ್ನೊತ್ತಿ
             ಹಿಚುಕುತ್ತವೆ ಕುತ್ತಿಗೆಗೆ  ಕೈಯಿಟ್ಟು
             ಕಸಿಯುತ್ತವೆ ಮಂಗಳ ಮಣಿ
             ಸಕತ್ತಾಗಿ ನೆಕ್ಕಿ ನಾಪತ್ತೆ ಮಾಡುತ್ತವೆ
             ಹಣೆ ಮುತ್ತಿನ  ತಿಲಕ.!
             .................................................
             ತುಂಬಿರಲಿ ಕಂಕಣವು ಒದ್ದು ಬಿಡು ಹದ್ದುಗಳ
             ನಗುತಿರಲಿ ಹಣೆತಿಲಕ.    [ಕವನ: ನಾನು ಸತ್ತಾಗ ]

ವಾರ ವಾರವೂ ತಮ್ಮದೇ ಆದ ಸಕಾಲಿಕ ಪತ್ರಿಕೆಯ ಅರೆಖಾಸಗಿ ಅಂಕಣದಲ್ಲಿ ಪ್ರಕಟಿಸಿದ ಈಎಲ್ಲ ನುಡಿಗುಚ್ಛಗಳು ಒಂದೊಂದೂ ವಿಶಿಷ್ಟ ವೈವಿಧ್ಯಪೂರ್ಣ ಅನುಭವಗಳ ರಸಘಟ್ಟಿಗಳಾಗಿವೆ. ಏಕತಾನತೆಯಿಲ್ಲದೇ ಆಸಕ್ತಿಯನ್ನು ಉದ್ದೀಪಿಸುತ್ತಲೇ ಸಾಗುವ ಈ ಎಲ್ಲ ಲೇಖನಗಳ ಹಿನ್ನೆಲೆಯಲ್ಲಿ ಲೇಖಕರೇ ಅನುಭವಿಸಿದ ಕಟು ವಾಸ್ತವದ ಜೀವನಾನುಭವ ಆರೋಗ್ಯಪೂರ್ಣ ಸಾಮಾಜಿಕ ಪ್ರಜ್ಞೆ ಮತ್ತು ಅಧ್ಯಯನ ಶೀಲತೆ ಎದ್ದು ತೋರುತ್ತದೆ.
ವಾಸ್ತವ ಸಂಗತಿಗಳನ್ನು ವರದಿಯ ನೆಲೆಯಿಂದ ಮೇಲಕ್ಕೆತ್ತಿ ಅದ್ಭುತವಾದ ಕಥನಕ್ಕೆ ಒಗ್ಗಿಸುವುದೇ ವಿಷ್ಣು ನಾಯ್ಕರ ಬರವಣಿಗೆ ನಮ್ಮನ್ನು ಆಕ್ರಮಿಸುವುದಕ್ಕೆ ಮುಖ್ಯ ಕಾರಣವೆಂದು ಭಾವಿಸುತ್ತೇನೆ. ಇಲ್ಲಿ ಕಾಣುವುದು ಒಂದು ಸಹಜವಾದ ಜೀವಸ್ಪಂದನ. ಅನುಕಂಪ ಅದರ ಜೀವಧಾರೆ. ವ್ಯಂಗ್ಯ ವಿಡಂಬನೆ ವಕ್ರತೆ ನಾನು ಎಲ್ಲ ಬಲ್ಲವ ಎಂದು ತೋರಿಸಿಕೊಳ್ಳುವ ಗುಟ್ಟಾದ ಆಸೆ ಯಾವುದೂ ಇಲ್ಲಿ ಕಾಣುವುದಿಲ್ಲ.ಅಸ್ಮಿತೆಯನ್ನು ಉಳಿಸಿಕೊಂಡೂ ಅನ್ಯರ ಬಗ್ಗೆ ಲೇಖಕರಿಗೆ ಇರುವ ಅಪಾರವಾದ ಆಸಕ್ತಿ ಈ ಬರವಣಿಗೆಯನ್ನು ರೂಪಿಸಿವೆ.’’
ಎಂಬ ಎಚ್.ಎಸ್.ವೆಂಕಟೇಶ ಮೂರ್ತಿಯವರ ಬೆನ್ನುಡಿಯ ಮಾತುಗಳು ಕೃತಿಯನ್ನು ಮತ್ತಷ್ಟು ಆಪ್ತವಾಗಿಸುತ್ತವೆ.
ಸಾಂಸ್ಕøತಿಕ ಸಂಘಟನೆಯಲ್ಲಿ ಸಾಹಿತ್ಯಸೃಷ್ಟಿಯಲ್ಲಿ ಸುವರ್ಣವೃಷ್ಟಿಗೈದ ನಮ್ಮೆಲ್ಲರ ಪ್ರೀತಿಯ ವಿಷ್ಣುಮಾಸ್ತರ, ಜಿಲ್ಲೆಯ ಅಪರೂಪದ ವಜ್ರವಾಗಿ, ರಾಜ್ಯದಲ್ಲಿ ಎಲ್ಲೆಡೆ ಹೊಳಪು ಮೂಡಿಸಿದ ಸಾಧನೆ ಅನನ್ಯ. ಎಪ್ಪತ್ತರಲ್ಲೂ ಇಪ್ಪತ್ತರ ಶಕ್ತಿ ಮತ್ತು ಸಾಮಥ್ರ್ಯವನ್ನುಳಿಸಿಕೊಂಡಿರುವ ಶ್ರೀಯುತರಲ್ಲಿÀ ಶತಮಾನಕಾಲವೂ ಸೃಜನಶೀಲ ತೊರೆ ಚಿಮ್ಮುತ್ತಲಿರಲಿ ಎಂದು ಹೃತ್ಪೂರ್ವಕವಾಗಿ ಹಾರೈಸುತ್ತಿದ್ದೇನೆ.
ಗೌರವಾದರಗಳೊಂದಿಗೆ
ಸುಬ್ರಾಯ ಮತ್ತೀಹಳ್ಳಿ. ಸಿದ್ಧಾಪುರ (ಉ.ಕ.)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

1 Comment

  1. ಗೂಡ್.. ವಿಷ್ಣು ನಾಯ್ಕರ ಸಾಹಿತ್ಯ ಕೃಷಿ ಅನನ್ಯ ವಾದುದು.

Leave a Reply

Your email address will not be published. Required fields are marked *