ವ್ಯಸನಗಳಿಗೆ ಬಲಿಯಾಗಲು ಮಾನಸಿಕ ದೌರ್ಬಲ್ಯಗಳು ಕಾರಣ

  • ಮಾನಸಿಕ ಸ್ಥಿರತೆ ಇಟ್ಟುಕೊಳ್ಳಿ * ಸಹಜ ಕುತೂಹಲ ದಾರಿ ತಪ್ಪಲು ಪ್ರೇರೇಪಿಸುತ್ತವೆ
  • ಚಟಕ್ಕೆ ಒಮ್ಮೆ ಸಿಲುಕಿದರೆ ಹೊರಗೆ ಬರುವುದು ಕಷ್ಟ
  • ವ್ಯಸನ ಅನೇಕ ರೋಗಗಳಿಗೂ ಕಾರಣ.
    ಮಾನಸಿಕ ದೌರ್ಬಲ್ಯಗಳು ವ್ಯಸನಗಳಿಗೆ ಬಲಿಯಾಗಲು ಕಾರಣ: ಸ್ವರ್ಣವಲ್ಲೀ ಶ್ರೀ ಮಾನಸಿಕ ದೌರ್ಬಲ್ಯಗಳು ವ್ಯಸನಗಳಿಗೆ ಬಲಿಯಾಗಲು ಮುಖ್ಯ ಕಾರಣ. ವಿದ್ಯಾರ್ಥಿಗಳಲ್ಲಿನ ಸಹಜ ಕುತೂಹಲವು ಅವರು ವ್ಯಸನಗಳಿಗೆ ಬಲಿಯಾಗುವಂತೆ ಮಾಡುತ್ತದೆ ಎಂದು ಸೋಂದಾ ಶ್ರೀಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಎಚ್ಚರಿಸಿದರು.
    ಬುಧವಾರ ಅವರು 29ನೇ ಚಾತುರ್ಮಾಸ್ಯ ಅಂಗವಾಗಿ ಸ್ವರ್ಣವಲ್ಲೀಯ ಸುಧರ್ಮಾ ಸಭಾಭವನದಲ್ಲಿ ಶ್ರೀದೇವಿ ಶಿಕ್ಷಣ ಸಂಸ್ಥೆ ಹಾಗೂ ಶ್ರೀನಿಕೇತನ ಶಾಲೆಯ ವಿದ್ಯಾರ್ಥಿಗಳಿಗೆ ವ್ಯಸನದಿಂದ ಮುಕ್ತ ಸಮಾಜ ನಿರ್ಮಾಣದ ಕುರಿತು ವಿಶೇಷ ಉಪನ್ಯಾಸ ನೀಡಿ ಮಾರ್ಗದರ್ಶನ ಮಾಡಿದರು.
    ಜಾಹೀರಾತು, ಹಿರಿಯರ ಅನುಕರಣೆ, ವ್ಯಸನಿಗಳ ಸಹವಾಸ, ಫ್ಯಾಶನ್ ಇತ್ಯಾದಿಗಳು ವ್ಯಸನಗಳಿಗೆ ಒಳಗಾಗಲು ಕಾರಣಗಳಾಗಿವೆ.
    ತಂಬಾಕು, ಮದ್ಯಪಾನ, ಗಾಂಜಾ, ಹೆರೋಯಿನ್‍ಗಳಂಥಹ ಮಾದಕ ದ್ರವ್ಯಗಳ ಸೇವನೆ, ಜೂಜು ಮುಂತಾದವುಗಳು ಜನರನ್ನು ಕಾಡುತ್ತಿರುವ ವ್ಯಸನಗಳಾಗಿವೆ. ಇತ್ತೀಚಿನ ಕಾಲದಲ್ಲಿ ಮೊಬೈಲ್ ಕೂಡ ದುವ್ರ್ಯಸನವಾಗಿ ಪರಿಣಿಮಿಸಿದೆ ಎಂದು ಆತಂಕಿಸಿದ ಸ್ವಾಮೀಜಿಗಳು, ಮೊಬೈಲನ್ನು ಸದುಪಯೋಗ ಮಾಡಿಕೊಳ್ಳುವ ಬದಲು ಗೇಮ್, ಅತಿಯಾದ ಅಂತರ್ಜಾಲಗಳ ಬಳಕೆಯಿಂದ ಸಮಾಜ ವ್ಯಸನಗಳಿಗೆ ಒಳಗಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸದಲ್ಲಿಯೂ ತೊಂದರೆಗಳುಂಟಾಗುತ್ತಿವೆ ಅನೇಕ ರೋಗಗಳಿಗೆ ಕೂಡ ಕಾರಣವಾಗಿದೆ. ವ್ಯಸನಗಳನ್ನು ರೂಢಿಸಿಕೊಂಡ ನಂತರ ಅದು ನಮ್ಮ ಪ್ರಾಣ ಇರುವವರೆಗೂ ಅದರಿಂದ ದೂರವಾಗಲು ಬಿಡುವುದಿಲ್ಲ. ದುವ್ರ್ಯಸನಗಳಿಂದ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಮಾನಸಿಕ ದೌರ್ಬಲ್ಯ, ನರಮಂಡಲಗಳಿಗೆ ಸಂಬಂಧಿಸಿದ ತೊಂದರೆಗಳು, ಮೂರ್ಛೆರೋಗಗಳು ಬರುತ್ತವೆ ಎಂದೂ ಕಳವಳ ವ್ಯಕ್ತಪಡಿಸಿದರು.
    ದುವ್ರ್ಯಸನಗಳಿಂದ ಅಪಘಾತಗಳು ಸಂಭವಿಸುತ್ತವೆ. ಮಾದಕ ದ್ರವ್ಯಗಳ ಸೇವನೆಯಿಂದ ಮನಸ್ಸು ಸ್ಥಿಮಿತ ಕಳೆದುಕೊಂಡು ಅಪರಾಧ ಪ್ರಕರಣಗಳು ಹೆಚ್ಚುತ್ತವೆ. ಶಾಸ್ತ್ರಕಾರರು ವ್ಯಸನಗಳನ್ನು ಮಾಡಬಾರದೆಂದು ತಿಳಿಸಿದ್ದಾರೆ. ಹಿರಿಯರ ಮಹಾತ್ಮರ ಮಾತನ್ನು ಮೀರಿ ವ್ಯಸನಗಳಿಗೆ ಒಳಗಾಗಿ ಕೊನೆಯಲ್ಲಿ ನಾಶ ಹೊಂದಿದ ಅನೇಕ ಉದಾಹರಣೆಗಳನ್ನು ಪುರಾಣ ಇತಿಹಾಸಗಳಲ್ಲಿ ಕಾಣಬಹುದು ಎಂದ ಸ್ವಾಮೀಜಿಗಳು, ಧ್ಯಾನ, ಜಪ, ಸ್ತೋತ್ರ, ಪೂಜೆ ಇವುಗಳನ್ನು ಮಾಡುವುದರಿಂದ ವ್ಯಸನಗಳಿಂದ ದೂರವಿರಬಹುದು. ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳುವುದು ಹಾಗೂ ಶೌಚಾದಿಗಳನ್ನು ಮುಗಿಸಿ ಪ್ರತಿನಿತ್ಯ ಧ್ಯಾನ, ಜಪ, ಸ್ತೋತ್ರ, ಪೂಜೆ ಇವುಗಳಲ್ಲಿ ಒಂದನ್ನಾದರು ಆಚರಿಸಬೇಕು.
    ಸಂಗೀತ, ಸಾಹಿತ್ಯ, ಕಲೆ, ಕ್ರೀಡೆಗಳಲ್ಲಿ ಭಾಗವಹಿಸಬೇಕು. ಸದ್ಗ್ರಂಥಗಳ ಅಧ್ಯಯನ ಮಾಡಬೇಕು. ಮಹಾತ್ಮರ ಜೀವನ ಚರಿತ್ರೆಯನ್ನು ಓದಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಿತವಾದ ಮಿತವಾದ ಆಹಾರವನ್ನು ಸೇವಿಸಬೇಕು. ಯೋಗಾಭ್ಯಾಸವನ್ನು ಪ್ರತಿನಿತ್ಯವೂ ಮಾಡಬೇಕು. ಸ್ತ್ರೀಯರನ್ನು ಮಾತೃಭಾವನೆಯಿಂದ ಕಾಣಬೇಕು ಎಂದರು.
    ಶ್ರೀದೇವಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಶಾಂತಾರಾಮ ಹೆಗಡೆ ಹೊಸ್ತೋಟಾ, ಸಂಘಟಕ ಅಶೋಕ ಭಟ್ಟ ಗೋಳಿಕೊಪ್ಪ ಪಾಲ್ಗೊಂಡರು. ಈ ಮೊದಲು ಶಾಲೆಗಳಲ್ಲಿ ಡಾ| ಕೃಷ್ಣಮೂರ್ತಿ ರಾಯ್ಸದ ಹಾಗೂ ಡಾ|ರವಿಕಿರಣ ಪಟವರ್ಧನ ಉಪನ್ಯಾಸ ನೀಡಿದ್ದರು. ಶ್ರೀದೇವಿ ಶಿಕ್ಷಣ ಸಂಸ್ಥೆ ಹಾಗೂ ಶ್ರೀನಿಕೇತನ ಶಾಲೆಯ 9 ಮತ್ತು 10 ನೇ ತರಗತಿಯ 250ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದರು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

ಸಮಾಜಮುಖಿ ಡಾಟ್‌ ನೆಟ್‌ ಬ್ರೇಕಿಂಗ್……‌ ಅವರಗುಪ್ಪಾದ ಮಹಿಳೆ ಸೊರಬಾದಲ್ಲಿ ಆತ್ಮಹತ್ಯೆ

ಸೊರಬಾದ ವಸತಿನಿಲಯದ ಮುಖ್ಯ ಅಡುಗೆ ಸಿಬ್ಬಂದಿ ಮಹಿಳೆ ವಸತಿ ನಿಲಯದಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಸಿದ್ಧಾಪುರದ ಅವರಗುಪ್ಪಾ ಮೂಲದ ನೇತ್ರಾವತಿ ನಾಯ್ಕ ಆತ್ಮಹತ್ಯೆಗೆ...

ಹೋರಾಟಗಳ ಮೂಲಕ ಸುಧಾರಣೆ ಇಂದಿನ ಅನಿವಾರ್ಯತೆ

ಬಹುಜನ ಚಳವಳಿಗಳಿಗೆ ನಾರಾಯಣ ಗುರುಗಳು ಮತ್ತು ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಚಿಂತನೆಗಳು ಪೂರಕ ಎಂದಿರುವ ಯುವ ಚಿಂತಕ ಲೋಹಿತ್‌ ನಾಯ್ಕ ಈಗಲೂ ಸೈದ್ಧಾಂತಿಕ...

ಅಕ್ರಮ ಮದ್ಯ ಮಾರಾಟ, ಮದ್ಯ ಸೇವಿಸಿ ವಾಹನ ಚಾಲನೆ ನಿಯಂತ್ರಣಕ್ಕೆ ಭೀಮಣ್ಣ ಆದೇಶ

ಶಿರಸಿ-ಸಿದ್ಧಾಪುರಗಳಲ್ಲಿ ಸಾಮಾಜಿಕ ಪಿಡುಗಾಗಿ ಜನರ ಜನಜೀವನಕ್ಕೆ ತೊಂದರೆ ಕೊಡುತ್ತಿರುವ ಅಕ್ರಮ ಮದ್ಯ ಮತ್ತು ಮದ್ಯ ಸೇವಿಸಿ ವಾಹನ ಚಲಾಯಿಸುವ ಬಗ್ಗೆ ಸ್ಥಳೀಯ ಶಾಸಕ ಭೀಮಣ್ಣ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *